ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Child Marriage: ಬಾಲ್ಯವಿವಾಹದ ಜೊತೆಗೆ ಈಗ ‘ನಿಶ್ಚಿತಾರ್ಥ’ವೂ ಅಪರಾಧ, 2 ವರ್ಷ ಜೈಲು ಖಚಿತ

Child Marriage: ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ವಿಧೇಯಕ- 2025ರ ಅನುಸಾರ ಬಾಲ್ಯ ವಿವಾಹ ಮಾಡೋದಕ್ಕೆ ಯತ್ನಿಸುವುದು ಅಪರಾಧ. ಅಲ್ಲದೇ ಅದಕ್ಕೆ ಸಿದ್ಧತೆ ಅಥವಾ ಚಿಕ್ಕ ವಯಸ್ಸಿನ ಹುಡುಗ-ಹುಡುಗಿಗೆ ನಿಶ್ಚಿತಾರ್ಥ ಮಾಡುವವರ ವಿರುದ್ಧ 2 ವರ್ಷಗಳವರೆಗೆ ವಿಸ್ತರಿಸಬಹುದಾದಂತ ಕಠಿಣ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

ಬಾಲ್ಯವಿವಾಹದ ಜೊತೆಗೆ ಈಗ ‘ನಿಶ್ಚಿತಾರ್ಥ’ವೂ ಅಪರಾಧ, 2 ವರ್ಷ ಜೈಲು ಖಚಿತ

ಹರೀಶ್‌ ಕೇರ ಹರೀಶ್‌ ಕೇರ Jul 8, 2025 7:47 AM

ಬೆಂಗಳೂರು: ರಾಜ್ಯ ಸರ್ಕಾರವು (Karnataka Government) ಬಾಲ್ಯ ವಿವಾಹ ನಿಷೇಧ ಕಾಯಿದೆ- 2006ಕ್ಕೆ (child marriage prohibition bill) ಕಾನೂನು ಬಲ ನೀಡಲು ಮುಂದಾಗಿದೆ. ಒಂದು ವೇಳೆ ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ವಿಧೇಯಕ -2025ಕ್ಕೆ ವಿಧಾನ ಮಂಡಲದಲ್ಲಿ ಮಂಡನೆಗೊಂಡು, ಒಪ್ಪಿಗೆ ಪಡೆದರೆ, ಬಾಲಕ-ಬಾಲಕಿಯರ ನಿಶ್ಚಿತಾರ್ಥವೂ (Engagement) ಅಪರಾಧವಾಗಲಿದೆ.

ಬಾಲ್ಯ ವಿವಾಹಗಳನ್ನು ಮಾಡಲು ಯತ್ನಿಸುವುದು, ಸಿದ್ಧತೆ ನಡೆಸುವ ಅಥವಾ ಚಿಕ್ಕ ವಯಸ್ಸಿನ ಬಾಲಕ-ಬಾಲಕಿಯರನ್ನು ಮದುವೆ ಉದ್ದೇಶದಿಂದ ನಿಶ್ಚಿತಾರ್ಥ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಬಾಲ್ಯ ವಿವಾಹ ನಿಷೇಧ ( ಕರ್ನಾಟಕ ತಿದ್ದುಪಡಿ) ವಿಧೇಯಕ- 2025 ಅನ್ನು ಮುಂಬರುವ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದೆ. ಈ ಮಸೂದೆಗೆ ಉಭಯ ಸದನಗಳಲ್ಲಿ ಒಪ್ಪಿಗೆ ದೊರೆತರೆ ನಿಶ್ಚಿತಾರ್ಥವೂ ಅಪರಾಧವಾಗಲಿದೆ.

ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ವಿಧೇಯಕ- 2025ರ ಅನುಸಾರ ಬಾಲ್ಯ ವಿವಾಹ ಮಾಡೋದಕ್ಕೆ ಯತ್ನಿಸುವುದು ಅಪರಾಧ. ಅಲ್ಲದೇ ಅದಕ್ಕೆ ಸಿದ್ಧತೆ ಅಥವಾ ಚಿಕ್ಕ ವಯಸ್ಸಿನ ಹುಡುಗ-ಹುಡುಗಿಗೆ ನಿಶ್ಚಿತಾರ್ಥ ಮಾಡುವವರ ವಿರುದ್ಧ 2 ವರ್ಷಗಳವರೆಗೆ ವಿಸ್ತರಿಸಬಹುದಾದಂತ ಕಠಿಣ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಇದಲ್ಲದೇ 1 ಲಕ್ಷದವರೆಗೆ ದಂಡವನ್ನು ವಿಧಿಸಬಹುದಾಗಿದೆ.

ರಾಜ್ಯದಲ್ಲಿ ಹಠಾತ್‌ ಸಾವಿಗೆ ಇನ್ನು ಮರಣೋತ್ತರ ಪರೀಕ್ಷೆ ಕಡ್ಡಾಯ

ಬೆಂಗಳೂರು: ರಾಜ್ಯ ಸರ್ಕಾರ ಹಠಾತ್ ಸಾವುಗಳನ್ನು 'ಅಧಿಸೂಚಿತ ಕಾಯಿಲೆ' ಎಂದು ಸೋಮವಾರ ಘೋಷಿಸಿದ್ದು, ಅಂತಹ ಪ್ರಕರಣಗಳಲ್ಲಿ (Heart attacks) ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಿದೆ. ರಾಜ್ಯದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಜನರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸರಣಿ ಸಾವು ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.

ಹಠಾತ್ ಸಾವುಗಳನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲು ನಾವು ನಿರ್ಧರಿಸಿದ್ದೇವೆ. ಆಸ್ಪತ್ರೆಗಳ ಹೊರಗೆ ಹಠಾತ್ ಸಾವು ಸಂಭವಿಸಿದರೆ, ಅದನ್ನು ಸರ್ಕಾರಕ್ಕೆ ತಿಳಿಸಬೇಕು. ಹುಟ್ಟಿನಿಂದಲೇ ರೋಗಗಳನ್ನು ಹೊಂದಿರುವ ಜನ ಇರುವುದರಿಂದ, ಸುಮಾರು 15 ವರ್ಷ ವಯಸ್ಸಿನ ಮಕ್ಕಳು ಸೇರಿದಂತೆ ಹೆಚ್ಚಿನ ಜನರನ್ನು ವರ್ಷಕ್ಕೊಮ್ಮೆಯಾದರೂ ತಪಾಸಣೆ ಮಾಡುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು.

ಹೃದಯಾಘಾತ ಮತ್ತು ಹಠಾತ್ ಸಾವುಗಳಿಗೆ ಕಾರಣವಾಗುವ ರೋಗಗಳ ಕುರಿತು ಪಠ್ಯಪುಸ್ತಕಗಳಲ್ಲಿ ಪ್ರತ್ಯೇಕ ಪಠ್ಯ ಅಳವಡಿಸಲು ಶಿಕ್ಷಣ ಇಲಾಖೆಗೆ ಸೂಚಿಸಲಾಗುವುದು ಎಂದ ಸಚಿವರು, ಸಿಪಿಆರ್ ಕುರಿತು ಜನರಿಗೆ ತರಬೇತಿ ನೀಡಲು ಸಹ ನಿರ್ಧರಿಸಲಾಗಿದೆ. ಇದಲ್ಲದೆ, ರಾಜ್ಯದ 86 ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಈ ವರ್ಷ ತಾಲೂಕು ಮಟ್ಟದ ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ: Madhu Bangarappa: ಈ ವರ್ಷ 1008 ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ: ಮಧು ಬಂಗಾರಪ್ಪ