Monsoon Fashion 2025: ಮಳೆಗಾಲಕ್ಕೆ ಲಗ್ಗೆ ಇಟ್ಟ ಕಲರ್ಫುಲ್ ರೈನ್ಕೋಟ್ಸ್
Monsoon Fashion 2025: ಮಳೆಗಾಲದ ರಂಗೇರಿಸಲು ನಾನಾ ವರ್ಣದ ಬಣ್ಣ ಬಣ್ಣದ ರೈನ್ಕೋಟ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಯಾವ್ಯಾವ ವರ್ಣದವು ಬೇಡಿಕೆ ಹೆಚ್ಚಿಸಿಕೊಂಡಿವೆ.? ಯಾರಿಗೆ ಯಾವುದು ಬೆಸ್ಟ್? ಎಂಬುದರ ಬಗ್ಗೆ ಸ್ಟೈಲಿಸ್ಟ್ಗಳು ಒಂದಿಷ್ಟು ವಿವರ ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್


ಈ ಮಳೆಗಾಲದ ರಂಗೇರಿಸಲು ಬಣ್ಣಬಣ್ಣದ ರೈನ್ಕೋಟ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೌದು, ಔಟ್ಫಿಟ್ ಮೇಲೆ ಧರಿಸಿದರೂ ಟೈಟ್ ಆಗದ ಫಿಟ್ಟಿಂಗ್ ರೈನ್ಕೋಟ್ಸ್, ಟ್ರಾನ್ಸಪರೆಂಟ್ ರೈನ್ಕೋಟ್ಸ್, ಚಿಣ್ಣರ ಫಂಕಿ ಡಬ್ಬಲ್ ಕವರ್ಡ್ ರೈನ್ಕೋಟ್ಗಳು ಎಂಟ್ರಿ ನೀಡಿವೆ. ಅಂದಹಾಗೆ, ಬಹುತೇಕ ಎಲ್ಲಾ ಶೈಲಿಯ ರೈನ್ಕೋಟ್ಗಳು ವಾಟರ್ ಪ್ರೂಫ್ ರೈನ್ಕೋಟ್ಗಳಾಗಿರುತ್ತವೆ. ಲಾಂಗ್, ಶಾರ್ಟ್, ಜಾಕೆಟ್ ಶೈಲಿಯಲ್ಲೂ ದೊರೆಯುತ್ತವೆ. ಇದೀಗ ವೈಬ್ರೆಂಟ್ ಬಣ್ಣಗಳಾದ ಹಳದಿ, ಕೇಸರಿ, ರೆಡ್, ಪಿಸ್ತಾ, ನಿಯಾನ್ ವರ್ಣದ ಕಲರ್ಫುಲ್ ರೈನ್ಕೋಟ್ಗಳು ಈ ಸೀಸನ್ನಲ್ಲಿ ಬಂದಿವೆ.

ಟೂ ವಿಲ್ಹರ್ ಸವಾರರ ರಕ್ಷಾ ಕವಚ
ಮಾನ್ಸೂನ್ನಲ್ಲಿ ಟೂ ವಿಲ್ಹರ್ ಚಾಲನೆ ಮಾಡುವವರಿಗೆಂದೇ ಫುಲ್ ಲೆಂಥ್ ರೈನ್ಕೋಟ್ಗಳು ಬಂದಿವೆ. ಆರಾಂವಾಗಿ ಗಾಡಿಯನ್ನು ಚಾಲನೆ ಮಾಡುವಂತಹ ವಿನ್ಯಾಸದಲ್ಲಿ ಆಗಮಿಸಿವೆ.

ಯಾರಿಗೆ ಯಾವುದು ಬೆಸ್ಟ್?
ನೀವು ರೈನ್ಕೋಟ್ ಕೊಳ್ಳಬೇಕಾದಲ್ಲಿಆದಷ್ಟೂ ಲಾಂಗ್ ಲೆಂಥ್ ಇರುವಂತಹ ರೈನ್ಕೋಟ್ಗಳನ್ನೇ ಪ್ರಿಫರ್ ಮಾಡಿ. ಅದಷ್ಟು ರೆಕ್ಸಿನ್ ಇಲ್ಲವೇ ನೀರು ಜಾರಿ ಹೋಗುವಂತಹ ರೈನ್ಕೋಟ್ ಅನ್ನು ಸೆಲೆಕ್ಟ್ ಮಾಡಿ. ಕಾಲೇಜು ತೆರಳುವ ಹುಡುಗಿಯರಾದಲ್ಲಿ ಟ್ರೆಂಚ್ ಕೋಟ್ ಶೈಲಿಯಲ್ಲಿಇರುವಂತದ್ದನ್ನು ಆಯ್ದುಕೊಳ್ಳಿ. ಸೀರೆ ಧರಿಸುವ ಮಹಿಳೆಯರಾದಲ್ಲಿಆದಷ್ಟು ಸೆಂಟರ್ ಸ್ಲಿಟ್ಸ್ ಇರುವ ರೈನ್ಕೋಟ್ ಅನ್ನು ಧರಿಸುವುದು ಉತ್ತಮ. ಯಾಕೆಂದರೆ ಇದು ವಾಕ್ ಮಾಡಲು ಸಹಕಾರಿ ಎನ್ನುತ್ತಾರೆ ಡಿಸೈನರ್ ಧನ್ಯಾ.

ಮೆನ್ಸ್ ರೈನ್ಕೋಟ್
ಪುರುಷರಿಗೆ ಆದಷ್ಟು ಬ್ಲಾಕ್ ಇಲ್ಲವೇ ಬ್ರೌನ್ ವರ್ಣದ ರೈನ್ಕೋಟ್ ಉತ್ತಮ ಆಯ್ಕೆ. ಕಾಲೇಜು ಹೈದರಿಗೆ ಕೊಂಚ ಫನ್ನಿ ಲುಕ್ ಅಥವಾ ಫಂಕಿ ಲುಕ್ ನೀಡುವ ಕ್ವಿರ್ಕ್ ಕಾನ್ಸೆಪ್ಟ್ನದ್ದು ಓಕೆ. ಕಲರ್ನದ್ದು ಟ್ರೈ ಮಾಡಬಹುದು. ಎನ್ನುತ್ತಾರೆ ಡಿಸೈನರ್ ಜಾನ್. ಇನ್ನು ಶಾಲಾ ಮಕ್ಕಳಿಗೆ ಕಲರ್ಫುಲ್ ಕಾಮಿಕ್ಸ್ ಪ್ರಿಂಟ್ ಹಾಗೂ ಚೋಟಾ ಭೀಮ್ ಇರುವಂತಹ ಕ್ಯಾಪ್ ರೈನ್ಕೋಟ್ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.

ರೈನ್ಕೋಟ್ ಬಳಕೆದಾರರೇ ಗಮನಿಸಿ
- ದಪ್ಪ ಮೆಟೀರಿಯಲ್ನ ರೈನ್ಕೋಟ್ ಬೇಡ.
- ನೀರು ಹೀರದಂತಿರುವ ಮೆಟೀರಿಯಲ್ನದ್ದು ಕೊಳ್ಳಿ.
- ರೈನ್ಕೋಟ್ ಧರಿಸಿದಾಗ ಹೆಚ್ಚು ಆಕ್ಸೆಸರೀಸ್ ಧರಿಸಬೇಡಿ.