Viral News: ಬಾಡಿಗೆ ವಿಚಾರಕ್ಕೆ ಆಟೋ ಡ್ರೈವರ್ ಫುಲ್ ಕಿರಿಕ್! ಏನಿದು ವೈರಲ್ ಪೋಸ್ಟ್?
ಮಹಿಳೆಯೊಬ್ಬಳು ಇತ್ತೀಚೆಗೆ ಸುಮಾರು 2.6 ಕಿಲೋಮೀಟರ್ ಆಟೋ ಹಾಗೂ ಆನ್‍ಲೈನ್ ಬುಕ್ಕಿಂಗ್ ಆಟೋದಲ್ಲಿ ಪ್ರಯಾಣಿಸಿದ್ದು, ಆದರೆ ಆಟೋ ರನ್ನಿಂಗ್ ಮೀಟರ್ ಮತ್ತು ಆನ್‌ಲೈನ್ ಬುಕಿಂಗ್ ಅಪ್ಲಿಕೇಶನ್‌ನ ದರದ ನಡುವೆ ಭಾರೀ ವ್ಯತ್ಯಾಸವಿದೆ. ಅದನ್ನು ಆಕೆ ಪೋಟೊ ತೆಗೆದು ಹೋಲಿಕೆ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದೀಗ ವೈರಲ್(Viral Video) ಆಗಿದೆ.


ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ನಡುವೆ ಏರುತ್ತಿರುವ ಆಟೋ(Auto) ದರಗಳು ದೊಡ್ಡ ತಲೆನೋವಾಗಿವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸ್ಥಳೀಯ ಮಹಿಳಾ ಪ್ರಯಾಣಿಕಳೊಬ್ಬಳು ಆಟೋ ರನ್ನಿಂಗ್ ಮೀಟರ್ ಮತ್ತು ಆನ್‌ಲೈನ್ ಬುಕಿಂಗ್ ಅಪ್ಲಿಕೇಶನ್‌ನ ದರವನ್ನು ಹೋಲಿಸಿ ಪೋಸ್ಟ್ ಮಾಡಿದ್ದು, ಇದು ಎಲ್ಲರ ಗಮನಸೆಳೆದು ವೈರಲ್(Viral Video) ಆಗಿದೆ. ಈ ಎರಡು ದರಗಳ ನಡುವಿನ ವ್ಯತ್ಯಾಸವು ಈಗ ನೆಟ್ಟಿಗರಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಅದಿತಿ ಶ್ರೀವಾಸ್ತವ ಎಂಬ ಮಹಿಳೆ ಇತ್ತೀಚೆಗೆ ಎರಡು ಆಟೋದಲ್ಲಿ ಪ್ರಯಾಣಿಸಿದ್ದು, ಅದರ ಮಾಹಿತಿಗಳನ್ನು ತನ್ನ ಸೋಶಿಯಲ್ ಮೀಡಿಯಾ ಹ್ಯಾಂಡಲ್‍ನಲ್ಲಿ ಹಂಚಿಕೊಂಡಿದ್ದಾಳೆ. ಅವಳು ಸುಮಾರು 2.6 ಕಿಲೋಮೀಟರ್ ಆಟೋದಲ್ಲಿ ಪ್ರಯಾಣಿಸಿದ್ದಾಳೆ. ನಂತರ ಅವಳು ಎರಡು ಆಟೋ ಮೀಟರ್ ಫೋಟೊಗಳನ್ನು ಹಂಚಿಕೊಂಡಿದ್ದಾಳೆ. ಒಂದು ಫೋಟೊದಲ್ಲಿ ಅವಳ ಆಟೋ ಮೀಟರ್ ರೂ.39 ದರವನ್ನು ತೋರಿಸಿದೆ. ಇನ್ನೊಂದು ಫೋಟೊದಲ್ಲಿ ಅದೇ ದೂರದ ದರವನ್ನು ರೂ.172.45 ಎಂದು ತೋರಿಸಲಾಗಿದೆ.
ವಿಡಿಯೊ ಇಲ್ಲಿದೆ ನೋಡಿ...
The price on meter vs the price on uber
— Aditi Srivastava (@adviosa) July 6, 2025
If you don’t have your own vehicle in Bangalore, you’re screwed pic.twitter.com/2OYlhxuckq
ಈ ಬಗ್ಗೆ ತನ್ನ ಹತಾಶೆಯನ್ನು ವ್ಯಕ್ತಪಡಿಸಿ ಆಕೆ ಮೀಟರ್‌ನ ಬೆಲೆ ಮತ್ತು ಉಬರ್‌ನ ಬೆಲೆ ಬೇರೆ ಬೇರೆಯಾಗಿದೆ ಎಂದು ಬರೆದಿದ್ದಾಳೆ. ಈ ಪೋಸ್ಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅನೇಕರು ಆನ್‌ಲೈನ್ ಅಪ್ಲಿಕೇಶನ್‌ಗಳ ದರ ಹೆಚ್ಚಳವನ್ನು ಖಂಡಿಸಿದ್ದಾರೆ. ಒಬ್ಬರು "ಈ ಅಪ್ಲಿಕೇಶನ್‌ಗಳು ಜನರನ್ನು ಸಂಪೂರ್ಣ ಲೂಟಿ ಮಾಡುತ್ತಿದೆ" ಎಂದು ಬರೆದಿದ್ದಾರೆ. ಒಬ್ಬರು, "ಉಬರ್ ಬೆಲೆಗಳು ಪೂರೈಕೆ ಮತ್ತು ಬೇಡಿಕೆಯ ಮೇಲೆ ಆಧರಿಸಿವೆ. ಆದರೆ ಮೀಟರ್ ದರಗಳನ್ನು ಸರ್ಕಾರವು ನಿಗದಿಪಡಿಸುತ್ತದೆ " ಎಂದು ಬರೆದಿದ್ದಾರೆ.
ಬೆಂಗಳೂರಿನಲ್ಲಿ ಆಟೋ ದರ ಏರಿಕೆ ಬಗ್ಗೆ ದೂರುಗಳು ಹೆಚ್ಚಾಗುತ್ತಿದ್ದು, ಈ ಹಿಂದೆ ರೈಡ್-ಹೇಲಿಂಗ್ ಅಪ್ಲಿಕೇಶನ್‌ಗಳಲ್ಲಿನ ಟಿಪ್ಪಿಂಗ್ ವೈಶಿಷ್ಟ್ಯದ ಬಗ್ಗೆ ಮಹಿಳೆಯೊಬ್ಬಳು ಟೀಕೆ ಮಾಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿತ್ತು.
ಈ ಸುದ್ದಿಯನ್ನೂ ಓದಿ:Viral Video: ದೈತ್ಯ ಹೆಬ್ಬಾವನ್ನು ಬರಿಗೈಯಲ್ಲಿ ಹೊತ್ತೊಯ್ದ ಮಕ್ಕಳು! ಬೆಚ್ಚಿಬೀಳಿಸುವ ವಿಡಿಯೊ ವೈರಲ್
ವೈರಲ್ ಆದ ಪೋಸ್ಟ್‌ನಲ್ಲಿ, ದ್ವಿಜಾ ಎಂಬ ನೆಟ್ಟಿಗೊಬ್ಬಳು ಆಟೋ ಚಾಲಕರಿಗೆ ಟಿಪ್ ನೀಡುವ ಅಭ್ಯಾಸದ ಬಗ್ಗೆ ತನ್ನ ಹತಾಶೆಯನ್ನು ವ್ಯಕ್ತಪಡಿಸಿದ್ದಳು. ದ್ವಿಜಾ ಅವಳ ಪೋಸ್ಟ್ ಅನೇಕ ನೆಟ್ಟಿಗರ ಗಮನಸೆಳೆದು ವೈರಲ್ ಆಗಿತ್ತು. ಇದಕ್ಕೆ ಹಲವರು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದರು. ಆದರೆ ಕೆಲವರು ಹೆಚ್ಚಿನ ಬೇಡಿಕೆಯ ಮಾರುಕಟ್ಟೆಯಲ್ಲಿ ಪ್ರಾಯೋಗಿಕ ಪರಿಹಾರವಾಗಿ ಟಿಪ್ಪಿಂಗ್ ಕಾರ್ಯವಿಧಾನವನ್ನು ಸಮರ್ಥಿಸಿಕೊಂಡಿದ್ದರು.