Rangaswamy Mookanahalli Column: ಪಾಠ ಕಲಿಸಿದ ಎಲ್ಲರೂ ಗುರು ಸಮಾನರು
ಮೂರನೇ ತರಗತಿಗೆ ಬೆಂಗಳೂರು ಸಮೀಪದ ರೂಪ ಕಂಡ ನಮಗೆ ಅವರನ್ನ ನನ್ನದಲ್ಲದ ತಪ್ಪಿಗೆ ಅವರ ಫೇಮಸ್ ಬಿದಿರಿನ ಕಡ್ಡಿಯಿಂದ ಬಾರಿಸಿದ್ದು. ಅವರು ಮನೆಗೆ ಹೋಗುವ ದಾರಿಯಲ್ಲಿ ಒಂದು ಟೈಲರ್ ಅಂಗಡಿಯಿತ್ತು. ಅಲ್ಲಿನ ಮಹಡಿಯ ಮೇಲೆ ನಿಂತು ‘ಲೇ ದಾನಪ್ಪ, ನಾನು ನಿಮ್ಮಪ್ಪ’ ಅಂತ ಕೂಗಿದ್ದು ಇನ್ನೂ ನೆನಪಿದೆ.


ವಿಶ್ವರಂಗ
mookanahalli@gmail.com
ಸಿರಾ ತಾಲೂಕಿನ ಹೊಸೂರು ಅಮ್ಮನ ತವರು. ನನ್ನ ಹುಟ್ಟು ಮತ್ತು ಎರಡನೇ ತರಗತಿವರೆಗೆ ಕಲಿತದ್ದು ಅಲ್ಲಿ. ಶಾಲೆಯ ಬಗ್ಗೆ ಹೆಚ್ಚಿನ ನೆನಪಿಲ್ಲ. ನಮ್ಮ ಮನೆಯಿಂದ ಬಹಳ ಹತ್ತಿರದಲ್ಲಿತ್ತು ಎನ್ನುವ ಒಂದು ನೆನಪಿನ ಜತೆಗೆ ‘ಅ ಆ ಇ ಈ’ ತಿದ್ದಿಸುತ್ತಿದ್ದ ದಾನಪ್ಪ ಮೇಷ್ಟ್ರು ನೆನಪು ಕೂಡ ಹಸಿರಾಗಿದೆ. ದಾನಪ್ಪ ಮೇಷ್ಟ್ರು ನೆನಪು ಉಳಿಯಲು ಕಾರಣ ಅವರು ಕಲಿಸುತ್ತಿದ್ದ ರೀತಿ ಎಂದು ಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ಅವರ ಬಳಿ ಒಂದು ಸಣ್ಣ ಬಿದಿರಿನ ಕಡ್ಡಿಯಿತ್ತು. ತಪ್ಪಾದರೆ, ಗಲಾಟೆ ಮಾಡಿದರೆ ಮುಲಾಜಿಲ್ಲದೆ ಬೀಸುತ್ತಿದ್ದರು.
ಶಾಲೆಯಲ್ಲಿ ಅವರನ್ನ ಕಂಡರೆ ಸಾಕು ನಾವೆ ನಡುಗುತ್ತಿದ್ದೆವು. ಬೇರೆ ಶಿಕ್ಷಕರೂ ಮಕ್ಕಳ ಗಲಾಟೆ ಹೆಚ್ಚಾದರೆ ಸಾಕು ‘ದಾನಪ್ಪ ಮೇಷ್ಟ್ರನ್ನ ಕರೀತೀನಿ ನೋಡಿ’ ಎನ್ನುತ್ತಿದ್ದರು. ಮರು ಕ್ಷಣದಲ್ಲಿ ತರಗತಿ ಯಲ್ಲಿ ನಿಶ್ಶಬ್ದ! ಶಾಲೆಯಲ್ಲಿ ದಾನಪ್ಪ ಮೇಷ್ಟ್ರ ಈ ರೂಪ ಕಂಡ ನಮಗೆ ಅವರನ್ನ ದಾರಿಯಲ್ಲಿ ಕಂಡರೂ ಭಯವಾಗುತ್ತಿತ್ತು. ಈ ಕಾರಣಕ್ಕೆ ರಸ್ತೆಯಲ್ಲಿ ಅವರನ್ನ ಕಂಡರೆ ಬೇರೆ ಭಯೋತ್ಪಾದನೆ ಮಾಡಿದ್ದ ಈ ಮೇಷ್ಟ್ರ ಮೇಲೆ ನನಗೆ ದಾರಿಯಲ್ಲಿ ಕಂಡರೂ ಭಯವಾಗುತ್ತಿತ್ತು. ಈ ನಡುಗುತ್ತಿದ್ದೆವು. ಬೇರೆ ಶಿಕ್ಷಕರೂ ಮಕ್ಕಳ ಗಲಾಟೆ ಹೆಚ್ಚಾದರೆ ಸಾಕು ‘ದಾನಪ್ಪ ಮೇಷ್ಟ್ರನ್ನ ಕರೀತೀನಿ ನೋಡಿ’ ಎನ್ನುತ್ತಿದ್ದರು. ಮರು ಕ್ಷಣದಲ್ಲಿ ತರಗತಿಯಲ್ಲಿ ನಿಶ್ಶಬ್ದ!
ಮೂರನೇ ತರಗತಿಗೆ ಬೆಂಗಳೂರು ಸಮೀಪದ ರೂಪ ಕಂಡ ನಮಗೆ ಅವರನ್ನ ನನ್ನದಲ್ಲದ ತಪ್ಪಿಗೆ ಅವರ ಫೇಮಸ್ ಬಿದಿರಿನ ಕಡ್ಡಿಯಿಂದ ಬಾರಿಸಿದ್ದು. ಅವರು ಮನೆಗೆ ಹೋಗುವ ದಾರಿಯಲ್ಲಿ ಒಂದು ಟೈಲರ್ ಅಂಗಡಿಯಿತ್ತು. ಅಲ್ಲಿನ ಮಹಡಿಯ ಮೇಲೆ ನಿಂತು ‘ಲೇ ದಾನಪ್ಪ, ನಾನು ನಿಮ್ಮಪ್ಪ’ ಅಂತ ಕೂಗಿದ್ದು ಇನ್ನೂ ನೆನಪಿದೆ. ದಾನಪ್ಪ ಮೇಷ್ಟ್ರಿಗೆ ಹೀಗೆ ಕೂಗಿದ್ದು ಯಾರೆಂದು ಗೊತ್ತಾಗದೆ ಇದ್ದಾಗ ಅದ ಆನಂದವನ್ನ ವರ್ಣಿಸುವುದು ಹೇಗೆ? ಅಂದಿಗೆ ಇದು ತಪ್ಪು ಎನ್ನುವ ಕಲ್ಪನೆ ಕೂಡ ಇರಲಿಲ್ಲ. ಅದೇನೋ ಮೇಷ್ಟ್ರ ಮೇಲೆ ರಿವೆಂಜ್ ತೆಗೆದುಕೊಂಡೆ ಎನ್ನುವ ಹುಚ್ಚು ಕಲ್ಪನೆ.
ಮೂರನೇ ತರಗತಿಗೆ ಬೆಂಗಳೂರು ಸಮೀಪದ ‘ವಿಜಯಪುರ’ದ ಸರಕಾರಿ ಪಾಠಶಾಲೆಗೆ ಸೇರಿಸಿದರು. ಅದು ನನ್ನ ಎರಡನೇ ಶಾಲೆ. ಇಲ್ಲಿ ಸಿಕ್ಕವರು ಕಮಲಮ್ಮ ಟೀಚರ್. ಅವರೊಬ್ಬರು ವಿಧವೆಯಾಗಿದ್ದರು ಎನ್ನುವುದು ಇಂದಿಗೆ ಗೊತ್ತಾಗಿದೆ. ಅಂದಿಗೆ ಮೂರನೇ ತರಗತಿಗೆ ಬೆಂಗಳೂರು ಸಮೀಪದ ‘ವಿಜಪುರ’ದ ಸರಕಾರಿ ಪಾಠಶಾಲೆಗೆ ಸೇರಿಸಿದರು. ಅದು ನನ್ನ ಎರಡನೇ ಶಾಲೆ. ಇಲ್ಲಿ ಸಿಕ್ಕವರು ಮನೆಯಿಂದ ಸ್ವಲ್ಪ ದೂರದಲ್ಲಿ ಇದ್ದಾರೆ ಎನ್ನುವುದು ಕೆಲವೇ ದಿನಗಳಲ್ಲಿ ಅಂದಿಗೆ ನನ್ನ ಅರಿವಿಗೆ ಬಂದದ್ದು.
ಈ ಶಾಲೆಯಲ್ಲಿ ಮಧ್ಯಾಹ್ನ ಗೋಧಿ ಉಪ್ಪಿಟ್ಟು ಕೊಡುತ್ತಿದ್ದರು. ನನ್ನ ಸಹಪಾಠಿ ನೀಲಕುಮಾರ ಕಡುಬಡವ. ಅವನ ಪೂರ್ತಿ ಫ್ಯಾಮಿಲಿ ಅಂದರೆ ಅಪ್ಪ, ಅಮ್ಮ, ಮತ್ತಿಬ್ಬರು ಮಕ್ಕಳು ಮಧ್ಯಾಹ್ನ ಶಾಲೆಯ ಬಳಿ ಬಂದಿರುತ್ತಿದ್ದರು. ನೀಲಕುಮಾರನಿಗೆ ಸಿಗುತ್ತಿದ್ದ ಉಪ್ಪಿಟ್ಟು ಐದಾರು ಪಾಲಾಗುತ್ತಿತ್ತು. ನಂತರದ ದಿನಗಳಲ್ಲಿ ನಾನು ಸಾಲಿನಲ್ಲಿ ನಿಂತು ಉಪ್ಪಿಟ್ಟು ಪಡೆದು ಅವನಿಗೆ ಕೊಡುತ್ತಿದ್ದೆ.
ಇದನ್ನೂ ಓದಿ: Rangaswamy Mookanahalli Column: ನಮ್ಮ ಉದ್ಯಮಿಗಳಿಗೂ ಬೇಕು ಹೆಚ್ಚಿನ ಸವಲತ್ತು !
ಒಂದು ದಿನ ಕಮಲಮ್ಮ ಟೀಚರ್ ಇದನ್ನ ನೋಡಿದರು. ‘ನೀನು ತಿನ್ನುವುದಾದರೆ ಮಾತ್ರ ಕೊಡುತ್ತೇವೆ, ಇಲ್ಲದಿದ್ದರೆ ಇಲ್ಲ’ ಎಂದು ಹೇಳಿದರು. ಏಕೆ ಹೀಗೆ ಮಾಡಿದರು ಎನ್ನುವುದು ಇವತ್ತಿಗೂ ಪ್ರಶ್ನೆಯಾಗೇ ಉಳಿದಿದೆ. ಆಮೇಲೆ ಐದನೇ ತರಗತಿಗೆ ಪೀಣ್ಯದ ಸರಕಾರಿ ಮಾದರಿ ಶಾಲೆಗೆ ಸೇರಿಸಿದರು. ಇಲ್ಲಿಂದ ನೆನಪುಗಳು ಹೆಚ್ಚು ಸ್ಪಷ್ಟವಾಗಿವೆ.
ತರಗತಿಯಲ್ಲಿ ಪಾಠ ಮಾಡುತ್ತಾ ಒಂದೆರಡು ನಿಮಿಷ ಹೊರಗೆ ಹೋಗಿ ಬೀಡಿ ಸೇದುತ್ತಿದ್ದವರು ಹನುಮಂತಪ್ಪ ಮೇಷ್ಟ್ರು. ತಮ್ಮ ಬಳಿಯಿದ್ದ ರೂಲರ್ ದೊಣ್ಣೆಯಿಂದ ಅಕಾರಣ ಮಕ್ಕಳಿಗೆ ಬಡಿಯುತಿದ್ದ ಅವರನ್ನ ಮರೆಯುವುದಾದರೂ ಹೇಗೆ? ಇದ್ದುದರಲ್ಲಿ ವಿಜ್ಞಾನ ತೆಗೆದುಕೊಳ್ಳುತ್ತಿದ್ದ ರಾಮಸ್ವಾಮಿ ಮೇಷ್ಟ್ರು ಓಕೆ, ಒಂದಷ್ಟು ಸಂಯಮದಿಂದ ವರ್ತಿಸುತ್ತಿದ್ದರು.
ಇನ್ನು ಕನ್ನಡ ಮೇಷ್ಟು ಬೊಮ್ಮಣ್ಣ ಅವರು ಸದಾ ಕಣ್ಣಲ್ಲಿ ಬೆಂಕಿಯನ್ನ ಉಗುಳುತ್ತಿದ್ದರು. ಪೀಣ್ಯದಲ್ಲಿ ಯಾವುದೇ ಕಾರ್ಯಕ್ರಮ ನಡೆದರೆ ಸಾಕು ಬೊಮ್ಮಣ್ಣ ಮೇಷ್ಟ್ರನ್ನ ಮಾತನಾಡಲು ಕರೆಯುತ್ತಿದ್ದರು. ಅವರ ಮಾತು ಅಂದರೆ ಅದು ನಿಲ್ಲದ ಜಡಿ ಮಳೆಯಂತೆ. ಆ ನಂತರದ ದಿನಗಳಲ್ಲಿ ಗೊತ್ತಾಗಿದ್ದು ಏನೆಂದರೆ ಅವರು ಕುಡಿದು ಶಾಲೆಗೆ ಬರುತ್ತಾರೆ ಎನ್ನುವುದು. ಈ ‘ಕುಡಿದು’ ಎಂದರೇನು? ಏನನ್ನ ಕುಡಿದು ಬರುತ್ತಾರೆ? ಎನ್ನುವುದು ನನಗೆ ಅಂದಿನ ದಿನದಲ್ಲಿ ಕೊನೆಗೂ ತಿಳಿಯಲೇ ಇಲ್ಲ. ಇನ್ನು ಹೆಡ್ ಮೇಷ್ಟ್ರು ಮಹದೇವಪ್ಪ ಅವರದು ವಿಚಿತ್ರ ಬುದ್ಧಿ.
ಶಾಲೆಯಲ್ಲಿ ಪ್ರತಿದಿನ ಸುಭಾಷಿತ ಓದಿಸುತ್ತಿದ್ದರು, ಜತೆಗೆ ಸುದ್ದಿ ಮುಖ್ಯಾಂಶ ಕೂಡ ಓದಿಸುತ್ತಿದ್ದರು. ಎಲ್ಲಕ್ಕೂ ಪರ್ಮನೆಂಟ್ ಅವರ ಮಗ ಉದಯರವಿ ಫಿಕ್ಸ್ ಆಗಿದ್ದ. ಏಳನೇ ತರಗತಿಯಲ್ಲಿ ಇಲ್ಲದ ಧೈರ್ಯ ಹೊಂದಿಸಿಕೊಂಡು ಮಹದೇವಪ್ಪ ಅವರನ್ನ ‘ಯಾಕೆ ಸರ್, ಯಾವಾಗಲು ನಿಮ್ಮ ಮಗನೆ ಓದಬೇಕು?’ ಅಂತ ಕೇಳಿದೆ.
‘ಸ್ಟೇಜ್ ಮೇಲೆ ನಿಂತು ನಡುಗದೆ ಓದಕ್ಕೆ ಬರುತ್ತೇನೋ ಮುಂಡೇದೆ?’ ಎಂದು ಕೇಳಿದ್ದರು. ಬರುತ್ತೆ ಅಂತ ಮುಗುಮ್ಮಾಗಿ ಉತ್ತರಿಸಿದ್ದೆ. ನಂತರ ಒಂದು ವರ್ಷ ಸುಭಾಷಿತಕ್ಕೆ ನಾನು,ಮುಖ್ಯಾಂಶಕ್ಕೆ ಉದಯರವಿ ಕಾಯಂ ಆದೆವು. ಸರೋಜಮ್ಮ ಟೀಚರ್ ಅಮ್ಮನ ಪ್ರೀತಿ ಕೊಟ್ಟವರು. ತಿಂಗಳಿಗೊಮ್ಮೆ ಚೆಕ್ ಕೊಟ್ಟು ಕ್ಯಾಶ್ ತರಲು ಹೇಳುತ್ತಿದ್ದರು. ಹೀಗಾಗಿ ೬-೭ ತರಗತಿಯಿಂದಲೇ ಬ್ಯಾಂಕಿಗೆ ಹೋಗಿಬರುವುದು ಅಭ್ಯಾಸವಾಯ್ತು.
ನನಗೆ ಅಪೆಂಡಿಕ್ಸ್ ಆಪರೇಷನ್ ಆದಾಗ ದಿನಾ ಬಂದು ನೋಡಿಕೊಂಡು ಹೋಗುತ್ತಿದ್ದರು. ಇನ್ನು ಲೀಲಾ ಟೀಚರ್ ಅಂತ ಒಬ್ಬರಿದ್ದರು. ಅವರ ಮಗಳು ಕ್ವೀನಿ ಕಾನ್ವೆಂಟ್‌ನಲ್ಲಿ ಓದುತ್ತಿದ್ದಳು. ಆಗಾಗ ನಮ್ಮ ಶಾಲೆಗೆ ಬಂದು ಅವಳೇ ಪಾಠ ಮಾಡುತ್ತಿದ್ದಳು. ಲೀಲಾ ಟೀಚರ್ ಯಾವುದೋ ಮ್ಯಾಗಜಿನ್ ಓದುತ್ತಾ ಕುಳಿತಿರುತ್ತಿದ್ದರು. ಹೇಳಿಕೇಳಿ ನಮ್ಮದು ಸರಕಾರಿ ಶಾಲೆ. ಕನ್ನಡ ಮಾಧ್ಯಮ ಬೇರೆ! ಅಂದಿಗೆ ಲೀಲಾ ಟೀಚರ್ ಮಗಳು ನನ್ನ ಕಣ್ಣಿಗೆ ಮಹಾಮೇಧಾವಿಯಂತೆ ಕಾಣುತ್ತಿದ್ದಳು. ಮಾತಿನ ಮಧ್ಯೆ ಇಂಗ್ಲಿಷ್ ಬೆರೆಸುತ್ತಿದ್ದಳು ನೋಡಿ!
ಹೈಸ್ಕೂಲ್‌ನಲ್ಲಿ ಸಿಕ್ಕ ‘ಎಸ್.ಎಸ್ ಮೇಷ್ಟ್ರು’ ( ಹೆಸರು ನೆನಪಿಲ್ಲ- ‘ಎಸ್.ಎಸ್’ ಎಂದೇ ನೆನಪು) ಭೌತಶಾಸ್ತ್ರ ಪಾಠ ಮಾಡುವಾಗ ಪ್ರಥಮ ಬಾರಿಗೆ ಮನಸ್ಸು ಅಥವಾ ನನ್ನ ಆತ್ಮ ದೇಹದಿಂದ ಬೇರ್ಪಟ್ಟ ಭಾವನೆ ಉಂಟಾಯಿತು. ನನ್ನ ತರಗತಿಯಲ್ಲಿ ನಾನು ನನ್ನ ಸಹಪಾಠಿಗಳು ಕುಳಿತಿದ್ದೇವೆ, ಎಸ್.ಎಸ್ ಮೇಷ್ಟ್ರು ಪಾಠ ಮಾಡುತ್ತಾ ಇದ್ದಾರೆ, ಅವರನ್ನ ನಾನು ಬೇರೆ ದೂರದಲ್ಲಿ ನಿಂತು ನೋಡಿದ ಅನುಭವವಾಯ್ತು. ಅದೊಂದು ಅಲೌಕಿಕ ಅನುಭವ. ೯ನೇ ತರಗತಿಯಲ್ಲಿ ಮಿಡ್-ಟರ್ಮ್ ಪರೀಕ್ಷೆಯಲ್ಲಿ ಆರು ವಿಷಯದಲ್ಲಿ ಐದರಲ್ಲಿ ನಪಾಸಾಗಿದ್ದೆ.
ಮುಂದಿನ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರೆ ನೂರು ರುಪಾಯಿ ಕೊಡುವುದಾಗಿ ಅಣ್ಣ ಹೇಳಿದ್ದರು. ಮುಂದಿನ ಪರೀಕ್ಷೆಯಲ್ಲಿ ಮೂರನೇ ರಾಂಕ್ ಪಡೆದಿದ್ದೆ. ವಿಜ್ಞಾನ ನೂರಕ್ಕೆ ನೂರು ತೆಗೆದಿದ್ದು ಸ್ಮೃತಿಪಟಲದಲ್ಲಿ ಹಸಿರಾಗಿದೆ. 10ನೇ ತರಗತಿಯಲ್ಲಿ ಕ್ಲಾಸ್ ಟೀಚರ್ ವಿಜಯಲಕ್ಷ್ಮಿಯವರು, ಜಿ.ಪಿ. ರಾಜರತ್ನಂ ಅವರ ಮೊಮ್ಮಗಳು. ‘ನೀನು ಎಸೆಸ್ಸೆಲ್ಸಿ ಪಾಸಾಗಲು ಸಾಧ್ಯವೇ ಇಲ್ಲ’ ಎಂದು ನನ್ನ ಬಗ್ಗೆ ಷರಾ ಹೊರಡಿಸಿದ್ದರು.
ನನ್ನದು. ಗೆ ಹೇಳಲು ಕಾರಣವೂ ಇತ್ತು. ಅವರ ಮಾತನ್ನು ಸುಳ್ಳು ಮಾಡಿದ ಸಣ್ಣ ಹೆಮ್ಮೆ ನನ್ನದು. ನಂತರ ಪಿಯುಸಿಯಲ್ಲಿ ಸಿಕ್ಕವರು ವೆಂಕಟೇಶ್ ಸರ್ (ಐಎಎಸ್ ಪಾಸಾಗಿ ಒಂದೆರಡು ವರ್ಷ ಕೆಲಸ ಮಾಡಿ ನಂತರ ಬೇಡ ಎಂದು ರಾಜೀನಾಮೆ ನೀಡಿ ಮತ್ತೆ ಶಿಕ್ಷಣ ಕ್ಷೇತ್ರಕ್ಕೆ ಬಂದವರು. ಸದ್ಯಕ್ಕೆ ಆಚಾರ್ಯ ಬೆಂಗಳೂರು ಬಿಸಿನೆಸ್ ಸ್ಕೂಲ್‌ನ ನಿರ್ದೇಶಕರು) ಮತ್ತು ಪ್ರಸಾದ್ ಸರ್ (ಪ್ರಸಾದ್‌ರವರು ಐಪಿಎಸ್ ಪಾಸು ಮಾಡಿದ್ದಾರೆ, ಸದ್ಯಕ್ಕೆ ‘ಇಂಟರ್ನಲ್ ಸಕ್ಯುರಿಟಿ ಕರ್ನಾಟಕ’ದಲ್ಲಿ ಕೆಲಸ ಮಾಡುತ್ತಿದ್ದಾರೆ) ಇವರಿಬ್ಬರ ಗರಡಿಯಲ್ಲಿ ಕಲಿತದ್ದು ಇಂದಿಗೂ ಕಾಯುತ್ತಿದೆ.
ಇದು ಬದುಕಿನಲ್ಲಿ ಸಿಕ್ಕ ಮೊದಲ ಟರ್ನಿಂಗ್ ಪಾಯಿಂಟ್. ಇಲ್ಲಿಯವರೆಗೆ ಸಿಕ್ಕ ಗುರುಗಳು ಕೆಟ್ಟವರು ಅಂತಲ್ಲ. ಆದರೆ ಯಾರೂ ಬದುಕನ್ನ ಬದಲಿಸುವ ಮಟ್ಟಿಗೆ ಪ್ರೇರಣೆ ನೀಡಿರಲಿಲ್ಲ ಅಷ್ಟೇ. ಪದವಿಯಲ್ಲಿ ಸಿಕ್ಕವರು ಭಾಸ್ಕರ್ ಮತ್ತು ರಾಮಪ್ಪ ಸರ್. ಬದುಕಿಗೆ ಇವರ ಕೊಡುಗೆಯೂ ಇದೆ. ಬಿಕಾಂ ಫೈನಲ್ ಪರೀಕ್ಷೆ ಮುಗಿಸಿ ಎರಡು ದಿನವಾಗಿತ್ತು ಅಷ್ಟೇ. ಆದರೆ ನನಗೆ ಮನೆಯಲ್ಲಿ ಕುಳಿತು ಅಭ್ಯಾಸವಿಲ್ಲ! ಆಗ ಸಿಕ್ಕವರು ಮಾಧವಮೂರ್ತಿ ಸರ್.
ಪರೀಕ್ಷೆ ಫಲಿತಾಂಶ ಬರುವುದಕ್ಕೆ ಮುಂಚೆಯೇ ಇವರಲ್ಲಿ ಸೇರಿದೆ. ಆ ದಿನಗಳಲ್ಲಿ ಕಾಲಿಗೆ ಇದ್ದದ್ದು ಹವಾಯ್ ಚಪ್ಪಲಿ. ‘ರಂಗೂ, ಬಾಪ್ಪಾ ಇಲ್ಲಿ’ ಎಂದು ಕರೆದು ನೂರರ ಎರಡು ನೋಟು ನೀಡಿ, ‘ಹೋಗು ಒಳ್ಳೆ ಚಪ್ಪಲಿ ಖರೀದಿ ಮಾಡು, ಕ್ಲೈಂಟ್ ಜಾಗಕ್ಕೆ ಹೀಗೆ ಹೋಗಬಾರದು’ ಎಂದರು. ಆ ನಂತರ ಕೂಡ ಸಮಯ ಸಮಯಕ್ಕೆ ಅವರು ಜೇಬಿಗೆ ಇಡುತ್ತಿದ್ದ ಐವತ್ತು, ನೂರು ರುಪಾಯಿ ಮರೆಯುವುದಾದರೂ ಹೇಗೆ? ಇವತ್ತಿನ ಈ ದಿನ ಕಾಣಲು ಅವರ ಕೊಡುಗೆ ಕೂಡ ದೊಡ್ಡದು. ಸೈಕಲ್ ಹೊಡೆಯಲು ಕಲಿಸಿದ ಸೈಕಲ್ ಶಾಪಿನ ಸತ್ತಿ, ಆಡಿಟ್ ಟಿಕ್ ಹೊಡೆಯುವುದು ಕಲಿಸಿದ ಶ್ರೀಧರ ಮೂರ್ತಿ, ಊರಿನ ಕಾಲುವೆಯಲ್ಲಿ ಸೊರೆ ಬುರುಡೆ ಕಟ್ಟಿ ನೀರಿಗಿಳಿಸಿ ಈಜಾಡಲು ಕಲಿಸಿದ ನಿಂಗಯ್ಯ, ಓಲಾ ಎನ್ನಲು ಬಾರದ ನನಗೆ ಸ್ಪ್ಯಾನಿಷ್ ಕಲಿಸಿದ ಸಹೋದ್ಯೋಗಿ/ಸಹೋದರಿ ಇವಾ, ಇನ್ನೊಬ್ಬ ಸ್ಪ್ಯಾನಿಷ್ ಗುರು ಸಾಲ್ವದೂರ್, ಮೊದಲ ಬಾರಿ ವಿಮಾನ ಏರಿದಾಗ ಸೀಟ್ ಬೆಲ್ಟ್ ಹಾಕಿದ ಕ್ಯಾಥೆ ಪೆಸಿಫಿಕ್‌ನ ಏರ್ ಹೋಸ್ಟೆಸ್... ಓಹ್ ಪಟ್ಟಿ ಬಹಳ ದೊಡ್ಡದು.
ಗೊತ್ತಿಲ್ಲದ ವಿಷಯಗಳನ್ನ ಕಲಿಸಿದವರೆ ಗುರುಗಳೇ. ಇದೇ ತಿಂಗಳು ಅಂದರೆ ಜುಲೈ 10ರಂದು ಗುರು ಪೂರ್ಣಿಮೆ. ಈ ಶುಭ ಸಂದರ್ಭದಲ್ಲಿ, ಹೀಗೆ ತೆರೆಮರೆಯಲ್ಲಿ ನಿಂತು ಕಲಿಸುತ್ತಿರುವ ಗುರುಗಳಿಗೂ, ಮುಖ್ಯವಾಹಿನಿಯಲ್ಲಿ ನಿಂತು ಕಲಿಸಿದ, ಕಲಿಸುತ್ತಿರುವ ಎಲ್ಲಾ ಗುರುಗಳಿಗೂ, ಹಾಗೇ ಮನಸ್ಸಿನ ದ್ರೋಣಾಚಾರ್ಯರಂತೆ ನಿಂತು ಕಲಿಸಿದ ಗುರುಗಳಿಗೂ ಗುರು ಪೂರ್ಣಿಮೆಯ ಶುಭಾಶಯಗಳು.