ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Blackmail Case: ಖಾಸಗಿ ವಿಡಿಯೊ ಲೀಕ್‌ ಮಾಡೋ ಬೆದರಿಕೆ- 3 ಕೋಟಿ ರೂ. ಕಳೆದುಕೊಂಡ CA ಸೂಸೈಡ್‌!

ಖಾಸಗಿ ವಿಡಿಯೊ (Private Video) ಲೀಕ್ ಆಗಿ ಸುಮಾರು 3 ಕೋಟಿ ರೂ. ಕಳೆದುಕೊಂಡ ಮುಂಬೈಯ ಸಿಎ ( Mumbai CA ) ಒಬ್ಬರು ಆತ್ಮಹತ್ಯೆಗೆ (self harming) ಶರಣಾದ ಘಟನೆ ನಡೆದಿದೆ. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ 32 ವರ್ಷದ ರಾಜ್ ಲೀಲಾ ಮೋರ್ ಮೃತರು ಎಂದು ಗುರುತಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿರುವ ವಕೋಲಾ ಪೊಲೀಸರಿಗೆ ತನಿಖೆಯ ಸಮಯದಲ್ಲಿ ರಾಜ್ ಅವರ ಮೂರು ಪುಟಗಳ ಪತ್ರ ಸಿಕ್ಕಿದೆ ಎನ್ನಲಾಗಿದೆ.

ಖಾಸಗಿ ವಿಡಿಯೊ ಲೀಕ್‌ ಆಗೋ ಭಯಕ್ಕೆ CA ಸೂಸೈಡ್‌!

ಮುಂಬೈ: ಖಾಸಗಿ ವಿಡಿಯೊ (Private Video) ಲೀಕ್ ಆಗಿ ಸುಮಾರು 3 ಕೋಟಿ ರೂ. ಕಳೆದುಕೊಂಡ ಮುಂಬೈಯ ಸಿಎ ( Mumbai CA ) ಒಬ್ಬರು ಆತ್ಮಹತ್ಯೆಗೆ (self harming) ಶರಣಾದ ಘಟನೆ ನಡೆದಿದೆ. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ 32 ವರ್ಷದ ರಾಜ್ ಲೀಲಾ ಮೋರ್ ಮೃತರು ಎಂದು ಗುರುತಿಸಲಾಗಿದೆ. ಖಾಸಗಿ ವಿಡಿಯೊ ಹೆಸರಿನಲ್ಲಿ ಅವರನ್ನು ಬ್ಲಾಕ್‌ಮೇಲ್ (Blackmail Case) ಮಾಡುತ್ತಿದ್ದ ರಾಹುಲ್ ಪರ್ವಾನಿ ಮತ್ತು ಸಬಾ ಖುರೇಷಿ ವಿರುದ್ಧ ಸುಲಿಗೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ವಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮುಂಬೈನ ಸಾಂತಾಕ್ರೂಜ್ ಪ್ರದೇಶದವರಾದ ರಾಜ್ ಅವರ ಖಾಸಗಿ ವಿಡಿಯೊ ಪ್ರಸಾರ ಮಾಡುವುದಾಗಿ ರಾಹುಲ್ ಪರ್ವಾನಿ ಮತ್ತು ಸಬಾ ಖುರೇಷಿ ಎಂಬವರು ಬ್ಲಾಕ್‌ಮೇಲ್ ಮಾಡಿದ್ದು, ಅವರಿಂದಾಗಿ ಸುಮಾರು 3 ಕೋಟಿ ರೂ. ಕಳೆದುಕೊಂಡ ಬಳಿಕ ರಾಜ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿರುವ ವಕೋಲಾ ಪೊಲೀಸರಿಗೆ ತನಿಖೆಯ ಸಮಯದಲ್ಲಿ ರಾಜ್ ಅವರ ಮೂರು ಪುಟಗಳ ಪತ್ರ ಸಿಕ್ಕಿದೆ ಎನ್ನಲಾಗಿದೆ.

ಆತ್ಮಹತ್ಯೆ ಪತ್ರದಲ್ಲಿ ರಾಜ್ ಅವರು ತಮ್ಮ ಸಾವಿಗೆ ರಾಹುಲ್ ಪರ್ವಾನಿ ಮತ್ತು ಸಬಾ ಖುರೇಷಿ ಕಾರಣ ಎಂದು ಹೇಳಿದ್ದಾರೆ. ಇವರಿಬ್ಬರು ತಮ್ಮ ಕಂಪೆನಿಯ ಖಾತೆಗಳಿಂದ ಹಣವನ್ನು ಕದಿಯಲು ಮತ್ತು ತಮ್ಮ ಸ್ವಂತ ಉಳಿತಾಯ ಹಣವನ್ನು ಕೊಡಲು ಒತ್ತಡ ಹೇರಿದ್ದಾರೆ ಎಂದು ರಾಜ್ ದೂರಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ರಾಜ್ ಹೊಂದಿರುವ ಬೃಹತ್ ಹೂಡಿಕೆ ಮತ್ತು ಅವರ ಹೆಚ್ಚಿನ ಸಂಬಳದ ಬಗ್ಗೆ ತಿಳಿದಿದ್ದ ಆರೋಪಿಗಳು ಅವರ ಖಾಸಗಿ ವಿಡಿಯೊವನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ರಾಜ್ ಅವರ ಸಂಸ್ಥೆಯ ಖಾತೆಯಿಂದ ಹಣವನ್ನು ತಮ್ಮ ವೈಯಕ್ತಿಕ ಖಾತೆಗಳಿಗೆ ವರ್ಗಾಯಿಸುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೇ ರಾಜ್‌ ಅವರಿಂದ ಬಲವಂತವಾಗಿ ಐಷಾರಾಮಿ ಕಾರನ್ನು ಸಹ ಪಡೆದಿದ್ದರು ಎನ್ನಲಾಗಿದೆ.

ಆತ್ಮಹತ್ಯೆ ಪತ್ರದಲ್ಲಿ ಏನಿದೆ?

ರಾಜ್ ಅವರು ಆತ್ಮಹತ್ಯೆ ಪತ್ರದಲ್ಲಿ ಹೀಗೆ ಬರೆದಿದ್ದಾರೆ. ನನ್ನ ಪ್ರಿಯರೇ ಕ್ಷಮಿಸಿ. ತಾಯಿ ನಾನು ನಿಮ್ಮ ಒಳ್ಳೆಯ ಮಗನಾಗಲು ಸಾಧ್ಯವಾಗಲಿಲ್ಲ, ನೀವು ನನ್ನಿಂದ ನಿರೀಕ್ಷೆಗಳನ್ನು ಹೊಂದಿದ್ದೀರಿ. ಆದರೆ ನಾನು ನಿಮ್ಮನ್ನು ಒಂಟಿಯಾಗಿ ಬಿಟ್ಟು ಹೋಗುತ್ತಿದ್ದೇನೆ. ದೇವರು ಮುಂದಿನ ಜನ್ಮದಲ್ಲಿ ನನ್ನಂತಹ ಮಗನನ್ನು ನಿಮಗೆ ಎಂದಿಗೂ ನೀಡದಿರಲಿ. ನಾನು ತುಂಬಾ ಕೆಟ್ಟವನಾಗಿದ್ದೇನೆ, ಪೂನಂ ಆಂಟಿ ದಯವಿಟ್ಟು ನನ್ನ ತಾಯಿಯನ್ನು ನೋಡಿಕೊಳ್ಳಿ. ನನಗೆ ವಿವಿಧ ಖಾತೆಗಳಲ್ಲಿ ಪಾಲಿಸಿ ಇದೆ. ಆ ಹಣವನ್ನು ತೆಗೆದುಕೊಂಡು ನನ್ನ ತಾಯಿಗೆ ಕೊಡಿ.

ನಾನು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದೇನೆ. ನನ್ನ ಆತ್ಮಹತ್ಯೆಗೆ ರಾಹುಲ್ ಪರ್ವಾನಿ ಕಾರಣ. ಅವರು ನನಗೆ ಅನೇಕ ತಿಂಗಳುಗಳಿಂದ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ನನ್ನ ಉಳಿತಾಯದ ಹಣ ಕೊಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಕಂಪೆನಿ ಖಾತೆಯಿಂದ ಹಣವನ್ನು ಕದ್ದಿದ್ದಾರೆ. ರಾಹುಲ್ ಪರ್ವಾನಿ ಮತ್ತು ಸಬಾ ಖುರೇಷಿ ನನ್ನ ಸಾವಿಗೆ ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ: Ramanand Sharma Column: ನಿಜಕ್ಕೂ ಕರಾಳವಾಗಿತ್ತೇ ತುರ್ತುಪರಿಸ್ಥಿತಿ ?

ಸುಮಾರು 18 ತಿಂಗಳುಗಳಿಂದ ಆರೋಪಿಗಳಿಬ್ಬರು ರಾಜ್ ಗೆ ಬೆದರಿಕೆ ಹಾಕಿ 3 ಕೋಟಿ ರೂ.ಗೂ ಹೆಚ್ಚು ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ ಅವರ ಕುಟುಂಬದ ಹೇಳಿಕೆಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.