ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಹಿಳೆ ಹಾಡು ಹಾಡ್ತಿದ್ರೆ ಈ ಆನೆಗಳ ತುಂಟಾಟವನ್ನೊಮ್ಮೆ ನೋಡಿ- ಕ್ಯೂಟ್‌ ವಿಡಿಯೊ ಎಲ್ಲೆಡೆ ವೈರಲ್‌

ಥೈಲ್ಯಾಂಡ್‌ನ ಸೇವ್ ಎಲಿಫೆಂಟ್ ಫೌಂಡೇಶನ್‌ನ ಸಂಸ್ಥಾಪಕಿ ಲೆಕ್ ಚೈಲರ್ಟ್ ತನ್ನ ಎರಡು ಆನೆಗಳ ಜೊತೆ ಕಳೆದ ಹೃದಯಸ್ಪರ್ಶಿ ಕ್ಷಣವನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಇದು ಎಲ್ಲರ ಮನಗೆದ್ದು ಸಿಕ್ಕಾಪಟ್ಟೆ ವೈರಲ್ (Viral Video)ಆಗಿದೆ.

ಮಹಿಳೆ ಹಾಡು ಹಾಡ್ತಿದ್ರೆ  ಈ ಆನೆಗಳ ತುಂಟಾಟ- ವಿಡಿಯೊ ನೋಡಿ

Profile pavithra Jul 8, 2025 12:18 PM

ಮಾನವರು ಮತ್ತು ಪ್ರಾಣಿಗಳ ನಡುವಿನ ಭಾವನಾತ್ಮಕ ಸಂಬಂಧವನ್ನು ಸೆರೆಹಿಡಿಯುವ ಹೃದಯಸ್ಪರ್ಶಿ ವಿಡಿಯೊಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ನೆಟ್ಟಿಗರ ಹೃದಯಗಳನ್ನು ಗೆಲ್ಲುತ್ತಿರುತ್ತವೆ. ಇದೀಗ ಥೈಲ್ಯಾಂಡ್‌ನ ಸೇವ್ ಎಲಿಫೆಂಟ್ ಫೌಂಡೇಶನ್‌ನ ಸಂಸ್ಥಾಪಕಿ ಲೆಕ್ ಚೈಲರ್ಟ್ ಅಂತಹದೊಂದು ವಿಡಿಯೊವನ್ನು ಹಂಚಿಕೊಂಡಿದ್ದು, ಇದರಲ್ಲಿ ಎರಡು ಆನೆಗಳು(Elephant)ಮತ್ತು ಆನೆಯ ಕೇರ್‌ಟೇಕರ್‌(Care Taker)ಗಳ ನಡುವಿನ ಹೃದಯಸ್ಪರ್ಶಿ ಕ್ಷಣವನ್ನು ಸೆರೆಹಿಡಿಯಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.

ವೈರಲ್ ಆದ ವಿಡಿಯೊದಲ್ಲಿ, ಮಣ್ಣಿನ ದಿಬ್ಬದ ಮೇಲೆ ಕುಳಿತ ಚೈಲರ್ಟ್ ಮತ್ತು ಅವಳ ಪಕ್ಕ ನಿಂತ ಎರಡು ಆನೆಗಳು ಸೆರೆಯಾಗಿವೆ. ಒಂದು ಆನೆ ತನ್ನ ಸೊಂಡಿಲನ್ನು ಚಾಚಿ ಅವಳ ಪಾದಗಳನ್ನು ಮೃದುವಾಗಿ ಸವರಿದೆ.ಹಾಗೇ ಚೈಲರ್ಟ್ ಹಾಡಲು ಶುರುಮಾಡಿದಾಗ, ಆನೆಗಳು ಅದಕ್ಕೆ ಪ್ರತಿಕ್ರಿಯಿಸಿದ್ದಾವೆ. ಈ ಹೃದಯಸ್ಪರ್ಶಿ ವಿಡಿಯೊ ನೋಡಿ ನೆಟ್ಟಿಗರು ಫುಲ್‌ ಫಿದ ಆಗಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...

ವಿಡಿಯೊ ಜೊತೆಗೆ ಚೈಲರ್ಟ್ ಆನೆಗಳ ಜೊತೆಗಿನ ತನ್ನ ಸಂಬಂಧ ಇಷ್ಟು ಅನ್ಯೋನ್ಯವಾಗಿರಲು ಕಾರಣವೇನು ಎಂಬುದನ್ನು ತಿಳಿಸಿದ್ದಾಳೆ. ಪ್ರಾಣಿಗಳ ಮೂಲಭೂತ ಅಗತ್ಯಗಳು ನಮ್ಮದಕ್ಕಿಂತ ಭಿನ್ನವಾಗಿಲ್ಲ. ನಮ್ಮಂತೆ ಅವು ಕೂಡ ಸುರಕ್ಷಿತವಾಗಿ ಬದುಕಲು, ಚೆನ್ನಾಗಿ ತಿನ್ನಲು ಮತ್ತು ಸಂತೋಷವಾಗಿರಲು ಬಯಸುತ್ತವೆ. ಆದರೆ ಮನುಷ್ಯರು ಅವುಗಳ ಜೊತೆ ಕ್ರೂರವಾಗಿ ವರ್ತಿಸುವ ಬದಲು ಅವುಗಳನ್ನು ಪ್ರೀತಿಯಿಂದ ನೋಡಿಕೊಂಡರೆ ಅವು ನಮ್ಮ ಜೊತೆ ಪ್ರೀತಿಯಿಂದ ಇರುತ್ತವೆ ಎಂಬುದಾಗಿ ತಿಳಿಸಿದ್ದಾಳೆ.

ಈ ವಿಡಿಯೊ ನೆಟ್ಟಿಗರ ಹೃದಯವನ್ನು ಗೆದ್ದು, ಲಕ್ಷಾಂತರ ವ್ಯೂವ್ಸ್ ಮತ್ತು ನೂರಾರು ಕಾಮೆಂಟ್‌ಗಳನ್ನು ಗಳಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬರು, "ಇದು ನೋಡಲು ತುಂಬಾ ಅದ್ಭುತವಾಗಿದೆ ಮತ್ತು ಅವಳು ಅವುಗಳನ್ನು ತನ್ನ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಾಳೆ" ಎಂದು ಕಾಮೆಂಟ್ ಮಾಡಿದ್ದಾರೆ.

ವಿಡಿಯೊ ನೋಡಿದ ನೆಟ್ಟಿಗರಲ್ಲಿ ಒಬ್ಬರು ಭಾವುಕರಾಗಿ, "ಈ ವಿಡಿಯೊ ನೋಡಿ ನನಗೆ ಅಳುಬಂದಿದೆ. ಈ ಪ್ರೀತಿ ನಿಜವಾದದ್ದು" ಎಂದು ಹೇಳಿದ್ದಾರೆ. ಮಹಿಳೆ ಮತ್ತು ಆನೆಯ ನಡುವಿನ ಹೃದಯಸ್ಪರ್ಶಿ ಬಾಂಧವ್ಯವನ್ನು ನೋಡಿ ಕೆಲವರು ಖುಷಿಪಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ನದಿ ದಡದಲ್ಲಿ ಕುಳಿತು ಎಂಜಾಯ್‌ ಮಾಡ್ತಿದ್ದವನ ಮೇಲೆ ಹಾವು ಡೆಡ್ಲಿ ಅಟ್ಯಾಕ್‌!

ಪ್ರಾಣ ಉಳಿಸಿದವನು ಎದುರಿಗೆ ಬಂದಾಗ ಈ ಚಿಂಪಾಂಜಿ ಮಾಡಿದ್ದೇನು?

ಚಿಂಪಾಂಜಿಯೊಂದು ಹಲವಾರು ವರ್ಷಗಳ ಹಿಂದೆ ತನ್ನನ್ನು ರಕ್ಷಿಸಿದವನನ್ನು ತನ್ನ ತೋಳುಗಳಿಂದ ಅಪ್ಪಿಕೊಂಡ ವಿಡಿಯೊವೊಂದು ವೈರಲ್‌ ಆಗಿದೆ. ಈ ಹೃದಯಸ್ಪರ್ಶಿ ವಿಡಿಯೊ ಕಂಡು ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ. ಈ ವಿಡಿಯೊ ಸಾಕಷ್ಟು ವ್ಯೂವ್ಸ್‌ ಗಳಿಸಿದ್ದು, ನೆಟ್ಟಿಗರು ಖುಷಿಯಿಂದ ಕಾಮೆಂಟ್‌ ಮಾಡಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಚಿಂಪಾಂಜಿ ಮತ್ತು ಅದರ ರಕ್ಷಕನ ಪುನರ್ಮಿಲನವನ್ನು ತೋರಿಸಲಾಗಿದೆ. ಆತ ವರ್ಷಗಳ ಹಿಂದೆ ಆ ಚಿಂಪಾಂಜಿಯನ್ನು ರಕ್ಷಿಸಿದ್ದನು. ಈಗ ಕೈಯಲ್ಲೊಂದಿಷ್ಟು ಹಣ್ಣುಗಳನ್ನು ಹಿಡಿದುಕೊಂಡು ಅದನ್ನು ಭೇಟಿ ಮಾಡಲು ಬಂದಾಗ ಚಿಂಪಾಂಜಿಯು ದೊಡ್ಡ ನಗುವಿನೊಂದಿಗೆ ಆ ವ್ಯಕ್ತಿಯನ್ನು ತನ್ನ ತೋಳುಗಳಿಂದ ಅಪ್ಪಿಕೊಂಡಿತ್ತು.