ಪಾಕ್ ಟಿ20 ತಂಡದಿಂದ ಬಾಬರ್, ರಿಜ್ವಾನ್, ಶಾಹೀನ್ ಅಫ್ರಿದಿಗೆ ಕೊಕ್
Bangladesh T20I series: ಬಾಬರ್, ರಿಜ್ವಾನ್ ಮತ್ತು ಶಾಹೀನ್ ಅವರಂತಹ ಅನುಭವಿ ತ್ರಿವಳಿ ಆಟಗಾರರಿಗೆ ಹೊಸ ವೈಟ್-ಬಾಲ್ ಕೋಚ್ ಮೈಕ್ ಹೆಸ್ಸನ್ ಅವರು ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗಳಿಗೆ ಅವರ ಸೇವೆ ಅಗತ್ಯವಿಲ್ಲ ಎಂದು ತಿಳಿಸಿರುವುದಾಗಿ ಜೂನ್‌ನಲ್ಲಿ ವರದಿಯಾಗಿತ್ತು. ಬದಲಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ಪಂದ್ಯಗಳತ್ತ ಗಮನ ಹರಿಸಲು ಈ ಮೂವರನ್ನು ಕೇಳಲಾಗಿತ್ತು.


ಕರಾಚಿ: ಬಾಂಗ್ಲಾದೇಶ ವಿರುದ್ಧದ ಮುಂಬರುವ ಟಿ20 ಸರಣಿಗೆ(Bangladesh T20I series) ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಜುಲೈ 8 ರ ಮಂಗಳವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು ತಂಡದ ಹಿರಿಯ ಆಟಗಾರರಾದ ಬಾಬರ್ ಅಜಮ್(Babar Azam), ಮೊಹಮ್ಮದ್ ರಿಜ್ವಾನ್(Mohammad Rizwan) ಮತ್ತು ಶಾಹೀನ್ ಶಾ ಅಫ್ರಿದಿಗೆ(Shaheen Shah Afridi) ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಮೂರು ಪಂದ್ಯಗಳ ಸರಣಿಯಲ್ಲಿ ಸಲಾಮ್ ಅಲಿ ಆಘಾ(Salam Ali Agha ) ತಂಡವನ್ನು ಮುನ್ನಡೆಸಲಿದ್ದಾರೆ.
ಬಾಬರ್, ರಿಜ್ವಾನ್ ಮತ್ತು ಶಾಹೀನ್ ಅವರಂತಹ ಅನುಭವಿ ತ್ರಿವಳಿ ಆಟಗಾರರಿಗೆ ಹೊಸ ವೈಟ್-ಬಾಲ್ ಕೋಚ್ ಮೈಕ್ ಹೆಸ್ಸನ್ ಅವರು ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗಳಿಗೆ ಅವರ ಸೇವೆ ಅಗತ್ಯವಿಲ್ಲ ಎಂದು ತಿಳಿಸಿರುವುದಾಗಿ ಜೂನ್‌ನಲ್ಲಿ ವರದಿಯಾಗಿತ್ತು. ಬದಲಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ಪಂದ್ಯಗಳತ್ತ ಗಮನ ಹರಿಸಲು ಈ ಮೂವರನ್ನು ಕೇಳಲಾಗಿತ್ತು.
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಟಿ20ಐ ಸರಣಿಯು ಜುಲೈ 20 ರಿಂದ 24 ರವರೆಗೆ ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ವೈಟ್-ಬಾಲ್ ಸರಣಿಗೆ ತಂಡವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಪಿಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ IND vs ENG: 3ನೇ ಪಂದ್ಯಕ್ಕೂ ಮುನ್ನ ಪಿಚ್ ಕ್ಯುರೇಟರ್ಗೆ ವಿಶೇಷ ಮನವಿ ಮಾಡಿದ ಇಂಗ್ಲೆಂಡ್
ಬಾಬರ್, ರಿಜ್ವಾನ್ ಮತ್ತು ಶಾಹೀನ್ ಅವರಲ್ಲದೆ, ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹ್ಯಾರಿಸ್ ರೌಫ್ ಮತ್ತು ಶಾದಾಬ್ ಖಾನ್ ಅವರನ್ನು ಕೂಡ ತಂಡದಿಂದ ಕೈಬಿಡಲಾಗಿದೆ. ಮೊಹಮ್ಮದ್ ನವಾಜ್, ಸುಫ್ಯಾನ್ ಮೋಕಿಮ್ ಮತ್ತು ಯುವ ವೇಗಿ ಸಲ್ಮಾನ್ ಮಿರ್ಜಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ತಂಡದಲ್ಲಿ ಒಟ್ಟು ಮೂವರು ಕೀಪರ್‌ಗಳು ಕಾಣಿಸಿಕೊಂಡಿದ್ದಾರೆ.
ಪಾಕಿಸ್ತಾನ ತಂಡ
ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಅಹ್ಮದ್ ದನಿಯಾಲ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ನವಾಜ್, ಸಾಹಿಬ್ಜಾದಾ ಫರ್ಹಾನ್, ಮೊಹಮ್ಮದ್ ನವಾಜ್, ಸಾಹಿಬ್ಜಾದಾ ಸಲ್ಮಾನ್.