ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wiaan Mulder: ಲಾರಾ ವಿಶ್ವ ದಾಖಲೆ ಮುರಿಯದಿರಲು ಕಾರಣ ತಿಳಿಸಿದ ವಿಯಾನ್ ಮಲ್ದರ್

ಮೊದಲ ಬಾರಿ ನಾಯಕತ್ವ ವಹಿಸಿರುವ 27 ವರ್ಷದ ವಿಯಾನ್ ಅವರು ಜಿಂಬಾಬ್ವೆಯ ದಾಳಿಯನ್ನು ಪುಡಿಗಟ್ಟಿ ವೇಗದ ತ್ರಿಶತಕ ದಾಖಲಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 297 ಎಸೆತಗಳಲ್ಲಿ 300ರ ಗಡಿ ದಾಟಿದರು. 2007–08ರಲ್ಲಿ ಭಾರತದ ವೀರೇಂದ್ರ ಸೆಹ್ವಾಗ್ ಅವರು ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ನಲ್ಲಿ 278 ಎಸೆತಗಳಲ್ಲಿ ತ್ರಿಶತಕ ಬಾರಿಸಿದ್ದರು.

ಲಾರಾ ವಿಶ್ವ ದಾಖಲೆ ಮುರಿಯದಿರಲು ಕಾರಣ ತಿಳಿಸಿದ ವಿಯಾನ್ ಮಲ್ದರ್

Profile Abhilash BC Jul 8, 2025 1:16 PM

ಬುಲವಾಯೊ: ಜಿಂಬಾಬ್ವೆ(RSA vs ZIM) ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಮತ್ತು ಬ್ಯಾಟರ್ ವಿಯಾನ್ ಮಲ್ದರ್(Wiaan Mulder) ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸುವ ಅವಕಾಶವಿದ್ದರೂ ಇದನ್ನು ತ್ಯಜಿಸಿದ್ದೇಕೆ ಎಂಬುದಕ್ಕೆ ಕಾರಣ ತಿಳಿಸಿದ್ದಾರೆ. ಅಜೇಯ 367 ರನ್‌ ಗಳಿಸಿದ ಅವರು ದಶಕಗಳ ಹಿಂದೆ ವೆಸ್ಟ್ ಇಂಡೀಸ್‌ನ ಬ್ರಿಯನ್ ಲಾರಾ(Brian Lara) ನಿರ್ಮಿಸಿದ್ದ 400 ರನ್ ದಾಖಲೆಯನ್ನು ಮುರಿಯಬಹುದಿತ್ತು. ಆದರೆ ಅವರು ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು.

ದಿನದಾಟದ ಮುಕ್ತಾಯದ ಬಳಿಕ ಮಾತನಾಡಿದ ಮಲ್ದರ್, 'ಲಾರಾ ಅವರು ದಿಗ್ಗಜ ಆಟಗಾರ. ಆ ಮಟ್ಟದ ಆಟಗಾರ ತಮ್ಮ ದಾಖಲೆಯನ್ನು ಕಾಯ್ದುಕೊಳ್ಳುವುದು ಸೂಕ್ತ ಎನಿಸಿತು. ಟೆಸ್ಟ್ ಪಂದ್ಯವೊಂದರಲ್ಲಿ 400 ರನ್​ಗಳ ದಾಖಲೆ ಅವರ ಹೆಸರಿನಲ್ಲಿಯೇ ಇರಲಿ ಎಂದು ಭಾವಿಸಿದೆ. ಹೀಗಾಗಿ ನನ್ನ ದಾಖಲೆಯನ್ನು ಪಕ್ಕಕ್ಕಿಟ್ಟು ಇನಿಂಗ್ಸ್ ಡಿಕ್ಲೇರ್ ಘೋಷಿಸಿದೆ' ಎಂದು ಮಲ್ದರ್ ಹೇಳಿದ್ದಾರೆ.

'ಲಾರಾ ಅವರ ವಿಶ್ವ ದಾಖಲೆ ಮುರಿಯುವ ಅವಕಾಶ ಮತ್ತೊಮ್ಮೆ ಸಿಕ್ಕರೂ ಕೂಡ ನಾನು ಖಂಡಿತವಾಗಿಯೂ ಇದನ್ನು ಮಾಡಲಾರೆ. ಏಕೆಂದರೆ ಬ್ರಿಯಾನ್ ಲಾರಾ ಒಬ್ಬ ದಂತಕಥೆ. ಅವರು ಈ ದಾಖಲೆಯನ್ನು ಕಾಯ್ದುಕೊಳ್ಳಲು ಅರ್ಹರು. ಹೀಗಾಗಿ ನನಗೆ ಆ ವಿಶ್ವ ದಾಖಲೆಯನ್ನು ಮುರಿಯುವ ಯಾವುದೇ ಆಸೆಯಿಲ್ಲ' ಎಂದು ಹೇಳುವ ಮೂಲಕ ಮಲ್ದರ್ ದಿಗ್ಗಜ ಆಟಗಾರನಿಗೆ ಗೌರವ ಸೂಚಿಸಿದ್ದಾರೆ. ಮಲ್ದರ್ ಅವರ ಈ ತ್ಯಾಗದ ಮಾತು ಕೇಳಿ ಕ್ರಿಕೆಟ್‌ ಪ್ರೇಮಿಗಳು ಸಲಾಂ ಹೊಡೆದಿದ್ದಾರೆ.

ಇದನ್ನೂ ಓದಿ IND vs ENG: 3ನೇ ಪಂದ್ಯಕ್ಕೂ ಮುನ್ನ ಪಿಚ್ ಕ್ಯುರೇಟರ್​ಗೆ ವಿಶೇಷ ಮನವಿ ಮಾಡಿದ ಇಂಗ್ಲೆಂಡ್

ಮೊದಲ ಬಾರಿ ನಾಯಕತ್ವ ವಹಿಸಿರುವ 27 ವರ್ಷದ ವಿಯಾನ್ ಅವರು ಜಿಂಬಾಬ್ವೆಯ ದಾಳಿಯನ್ನು ಪುಡಿಗಟ್ಟಿ ವೇಗದ ತ್ರಿಶತಕ ದಾಖಲಿಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 297 ಎಸೆತಗಳಲ್ಲಿ 300ರ ಗಡಿ ದಾಟಿದರು. 2007–08ರಲ್ಲಿ ಭಾರತದ ವೀರೇಂದ್ರ ಸೆಹ್ವಾಗ್ ಅವರು ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ನಲ್ಲಿ 278 ಎಸೆತಗಳಲ್ಲಿ ತ್ರಿಶತಕ ಬಾರಿಸಿದ್ದರು.

ಬ್ಯಾಟಿಂಗ್‌ ಮಾತ್ರವಲ್ಲದೆ ಬೌಲಿಂಗ್‌ನಲ್ಲಿಯೂ ಮಿಂಚಿದ ಮಲ್ದರ್ ಎರಡು ವಿಕೆಟ್ ಉರುಳಿಸಿದ್ದಾರೆ. 626 ರನ್‌ ಬೆನ್ನಟ್ಟಿದ ಜಿಂಬಾಬ್ವೆ 43 ಓವರ್‌ಗಳಲ್ಲಿ 170 ರನ್ ಆಲೌಟ್‌ ಆಗಿ ಫಾಲೋ ಆನ್‌ ಎದುರಿಸಿದೆ. ಸದ್ಯ ಎರಡನೇ ದಿನದಾಟ ಮುಕ್ತಾಯಕ್ಕೆ 16 ಓವರ್‌ಗಳಲ್ಲಿ 1 ವಿಕೆಟ್‌ಗೆ 51 ರನ್ ಗಳಿಸಿದೆ.