ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವೇಗವಾಗಿ ಚಲಿಸುತ್ತಿದ್ದ ಸ್ಕೂಲ್‌ ಬಸ್‌ನಿಂದ ರಸ್ತೆಗೆ ಬಿದ್ದ ಮಕ್ಕಳು! ಶಾಕಿಂಗ್‌ ದೃಶ್ಯ ಇಲ್ಲಿದೆ ನೋಡಿ

ಮಹಾರಾಷ್ಟ್ರದ ಥಾಣೆಯ ಅಂಬರ್ನಾಥ್ ನಗರದಲ್ಲಿ ವೇಗವಾಗಿ ಚಲಿಸುತ್ತಿದ್ದ ಶಾಲಾ ವ್ಯಾನ್‌ನಿಂದ ಮೂವರು ಮಕ್ಕಳು ಕೆಳಗೆ ಬಿದ್ದಿದ್ದು, ಇದರ ಸಂಪೂರ್ಣ ದೃಶ್ಯಾವಳಿಯು ಸ್ಥಳೀಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ. ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಓರ್ವ ವಿದ್ಯಾರ್ಥಿಯ ತಲೆಗೆ ಗಂಭೀರ ಗಾಯವಾಗಿದೆ.

ಸ್ಕೂಲ್‌ ಬಸ್‌ನಿಂದ ರಸ್ತೆಗೆ ಬಿದ್ದ ಮಕ್ಕಳು! ಶಾಕಿಂಗ್‌ ದೃಶ್ಯ ವೈರಲ್‌

ಥಾಣೆ: ಶಾಲಾ ವ್ಯಾನ್ (School Van) ನಿಂದ ಮೂವರು ಮಕ್ಕಳು ಕೆಳಗೆ ಬಿದ್ದಿರುವ (Accident) ಆಘಾತಕಾರಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral Video) ಆಗಿದೆ. ಈ ಘಟನೆ ಮಹಾರಾಷ್ಟ್ರದ (Maharastra) ಥಾಣೆಯ (Thane) ಅಂಬರ್ನಾಥ್‌ನಲ್ಲಿ (Ambarnath city) ನಡೆದಿದೆ. ವೇಗವಾಗಿ ಚಲಿಸುತ್ತಿದ್ದ ಶಾಲಾ ವ್ಯಾನ್‌ನಿಂದ ಮೂವರು ವಿದ್ಯಾರ್ಥಿಗಳು ಕೆಳಗೆ ಬಿದ್ದಿದ್ದು, ಗಾಯಗೊಂಡ ವಿದ್ಯಾರ್ಥಿಗಳನ್ನು ತಕ್ಷಣವೇ ಅಂಬರ್ನಾಥ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಓರ್ವ ವಿದ್ಯಾರ್ಥಿಯ ತಲೆಗೆ ಗಂಭೀರ ಗಾಯವಾಗಿದೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಬಿಡುಗಡೆ ಮಾಡಲಾಗಿದೆ.

ಮಹಾರಾಷ್ಟ್ರದ ಥಾಣೆಯ ಅಂಬರ್ನಾಥ್ ನಗರದಲ್ಲಿ ವೇಗವಾಗಿ ಚಲಿಸುತ್ತಿದ್ದ ಶಾಲಾ ವ್ಯಾನ್‌ನಿಂದ ಮೂವರು ಮಕ್ಕಳು ಕೆಳಗೆ ಬಿದ್ದಿದ್ದು, ಇದರ ಸಂಪೂರ್ಣ ದೃಶ್ಯಾವಳಿಯು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಓರ್ವ ವಿದ್ಯಾರ್ಥಿಯ ತಲೆಗೆ ಗಂಭೀರ ಗಾಯವಾಗಿದೆ.

ಶಾಲಾ ವ್ಯಾನ್‌ನ ಹಿಂದಿನ ಬಾಗಿಲು ಇದ್ದಕ್ಕಿದ್ದಂತೆ ತೆರೆದು ಮೂವರು ವಿದ್ಯಾರ್ಥಿಗಳು ಹೊರಗೆ ಬಿದ್ದಿರುವ ಆಘಾತಕಾರಿ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೂ ಶಾಲಾ ವ್ಯಾನ್ ಚಾಲಕ ನಿಲ್ಲಿಸದೆ ವಾಹನ ಚಲಾಯಿಸಿಕೊಂಡು ಮುಂದೆ ಹೋಗಿದ್ದಾನೆ. ಘಟನೆಯ ಬಗ್ಗೆ ಆತನಿಗೆ ತಿಳಿಯಲಿಲ್ಲ ಎನ್ನಲಾಗುತ್ತಿದೆ. ವ್ಯಾನ್ ನಿಂದ ಕೆಳಗೆ ಬಿದ್ದ ಮಕ್ಕಳಿಗೆ ಸಹಾಯ ಮಾಡಲು ಸ್ಥಳೀಯರು ಧಾವಿಸುತ್ತಿರುವುದು ಕೂಡ ಸಿಸಿಟಿವಿ ದೃಶ್ಯವಾಳಿಯಲ್ಲಿ ಕಾಣಬಹುದು. ಗಾಯಾಳು ವಿದ್ಯಾರ್ಥಿಗಳನ್ನು ತಕ್ಷಣವೇ ಅಂಬರ್ನಾಥ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ.



ಶಾಲಾ ವ್ಯಾನ್ ಚಾಲಕ ಮತ್ತು ಇಬ್ಬರು ಮಕ್ಕಳ ಆರೈಕೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಚಾಲಕನನ್ನು ಬಂಧಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಮೋಟಾರ್ ವಾಹನ (ಎಂವಿ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ‌Viral Video: ದೈತ್ಯ ಹೆಬ್ಬಾವನ್ನು ಬರಿಗೈಯಲ್ಲಿ ಹೊತ್ತೊಯ್ದ ಮಕ್ಕಳು! ಬೆಚ್ಚಿಬೀಳಿಸುವ ವಿಡಿಯೊ ವೈರಲ್

ಈ ಕುರಿತು ಮಾಹಿತಿ ನೀಡಿರುವ ಕಲ್ಯಾಣ್‌ನಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ದಾಖಲೆಗಳನ್ನು ಪರಿಶೀಲಿಸಿ ಶಾಲಾ ವ್ಯಾನ್ ವಿರುದ್ಧ ಶಾಲಾ ಬಸ್ ನಿಯಮಗಳು, 2011 ಮತ್ತು ಮೋಟಾರ್ ವಾಹನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಾಲಾ ಬಸ್ ಮಾಲೀಕರ ಸಂಘದ ನಾಯಕ ಅನಿಲ್ ಗರ್ಗ್, ವಿದ್ಯಾರ್ಥಿಗಳ ಸಾಗಣೆಗೆ ಬಳಸುವ ವಾಹನಗಳು ಸುರಕ್ಷತಾ ಮಾನದಂಡ ಮತ್ತು ನಿಯಮಗಳನ್ನು ಪಾಲಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಗೆ ಇದೆ ಎಂದು ಹೇಳಿದ್ದಾರೆ.