Ramanand Sharma Column: ನಿಜಕ್ಕೂ ಕರಾಳವಾಗಿತ್ತೇ ತುರ್ತುಪರಿಸ್ಥಿತಿ ?
ದೇಶದಲ್ಲಿ ಏನಾಗುತ್ತಿದೆ ಎನ್ನುವುದರ ಬಗೆಗೆ ಒಂದು ರೀತಿಯ ಗೊಂದಲ ಏರ್ಪಟ್ಟಿತ್ತು, ಪ್ರಜಾ ಪ್ರಭುತ್ವವು ಸರ್ವಾಧಿಕಾರಕ್ಕೆ ದಾರಿಮಾಡಿಕೊಟ್ಟಿದೆಯೇ ಎನ್ನುವ ಸಂದೇಹ ಕಾಡತೊಡಗಿತ್ತು. ತಮ್ಮ ಆಡಳಿತವನ್ನು, ತಾವು ತೆಗೆದುಕೊಳ್ಳುವ ನಿರ್ಣಯಗಳನ್ನು ವಿರೋಧಿಸುವವರನ್ನು ಇಂದಿರಾ ಗಾಂಧಿಯವರು ದಯ-ದಾಕ್ಷಿಣ್ಯವಿಲ್ಲದೆ ಜೈಲಿಗಟ್ಟಿದ್ದರು. ‘ಆನೆ ನಡೆದಿದ್ದೇ ದಾರಿ’ ಎನ್ನುವ ರೀತಿಯಲ್ಲಿ ಆಡಳಿತವನ್ನು ನಡೆಸಿಕೊಂಡು ಹೋಗಿದ್ದರು.


ಭಿನ್ನಭಾವ
ರಮಾನಂದ ಶರ್ಮಾ
ದೇಶದಲ್ಲಿ ಏನಾಗುತ್ತಿದೆ ಎನ್ನುವುದರ ಬಗೆಗೆ ಒಂದು ರೀತಿಯ ಗೊಂದಲ ಏರ್ಪಟ್ಟಿತ್ತು, ಪ್ರಜಾ ಪ್ರಭುತ್ವವು ಸರ್ವಾಧಿಕಾರಕ್ಕೆ ದಾರಿ ಮಾಡಿಕೊಟ್ಟಿದೆಯೇ ಎನ್ನುವ ಸಂದೇಹ ಕಾಡತೊಡಗಿತ್ತು. ತಮ್ಮ ಆಡಳಿತವನ್ನು, ತಾವು ತೆಗೆದುಕೊಳ್ಳುವ ನಿರ್ಣಯಗಳನ್ನು ವಿರೋಧಿಸುವವರನ್ನು ಇಂದಿರಾ ಗಾಂಧಿಯವರು ದಯ-ದಾಕ್ಷಿಣ್ಯವಿಲ್ಲದೆ ಜೈಲಿಗಟ್ಟಿದ್ದರು. ‘ಆನೆ ನಡೆದಿದ್ದೇ ದಾರಿ’ ಎನ್ನುವ ರೀತಿಯಲ್ಲಿ ಆಡಳಿತವನ್ನು ನಡೆಸಿಕೊಂಡು ಹೋಗಿದ್ದರು. ವಕೀಲ ಮತ್ತು ಚತುರ ರಾಜಕಾರಣಿ ಸಿದ್ಧಾರ್ಥ ಶಂಕರ ರೇ ನೇಪಥ್ಯದಲ್ಲಿದ್ದು ಕಾನೂನಿನ ಸರಪಳಿಯನ್ನು ಸಡಿಲಗೊಳಿಸುತ್ತಿದ್ದರೆ, ಸಂಜಯ ಗಾಂಧಿ ಆಡಳಿತ ದಲ್ಲಿ ಇಂದಿರಾರ ಬಲಗೈ ಬಂಟರಾಗಿದ್ದರು.
ದೇಶದಲ್ಲಿ ಏನಾಗುತ್ತಿದೆ ಎನ್ನುವುದರ ಬಗೆಗೆ ಒಂದು ರೀತಿಯ ಗೊಂದಲ ಏರ್ಪಟ್ಟಿತ್ತು, ಪ್ರಜಾ ಪ್ರಭುತ್ವವು ಸರ್ವಾಧಿಕಾರಕ್ಕೆ ದಾರಿ ಮಾಡಿಕೊಟ್ಟಿದೆಯೇ ಎನ್ನುವ ಸಂದೇಹ ಕಾಡತೊಡಗಿತ್ತು. ತಮ್ಮ ಆಡಳಿತವನ್ನು, ತಾವು ತೆಗೆದುಕೊಳ್ಳುವ ನಿರ್ಣಯಗಳನ್ನು ವಿರೋಧಿಸುವವರನ್ನು ಇಂದಿರಾ ಗಾಂಧಿಯವರು ದಯ-ದಾಕ್ಷಿಣ್ಯವಿಲ್ಲದೆ ಜೈಲಿಗಟ್ಟಿದ್ದರು. ‘ಆನೆ ನಡೆದಿದ್ದೇ ದಾರಿ’ ಎನ್ನುವ ರೀತಿ ಯಲ್ಲಿ ಆಡಳಿತವನ್ನು ನಡೆಸಿಕೊಂಡು ಹೋಗಿದ್ದರು.
ಸಂಸತ್ತಿನಲ್ಲಿ ತಮಗಿದ್ದ ಆನೆಬಲದಿಂದ ಹಲವಾರು ಕಾನೂನುಗಳನ್ನು ರೂಪಿಸಿದರು ಮತ್ತು ತಮ್ಮ ಹಾದಿಗೆ ಮುಳ್ಳಾಗಿದ್ದ ಕೆಲವು ಕಾನೂನುಗಳಿಗೆ ತಮಗೆ ಬೇಕಿದ್ದಂತೆ ತಿದ್ದುಪಡಿ ಮಾಡಿಕೊಂಡರು. ‘ಇಂದಿರಾ ಗಾಂಧಿಯವರು ಹತಾಶೆ ಮತ್ತು ಅಧಿಕಾರ ಲಾಲಸೆಯಿಂದ ಸಂವಿಧಾನದ ಹತ್ಯೆಮಾಡಿ ತುರ್ತು ಪರಿಸ್ಥಿತಿ ಹೇರಿದ್ದಾರೆ’ ಎಂದು ಅವರ ರಾಜಕೀಯ ವಿರೋಧಿಗಳು, ಬುದ್ಧಿಜೀವಿಗಳು ಗಂಟಲು ಹರಿಯುವಂತೆ ಕೂಗಿದರು. ಆದರೆ ಈ ಕೂಗು ಅರಣ್ಯರೋದನವಾಯಿತು.
ಇದನ್ನೂ ಓದಿ: Ramanand Sharma Column: ಕನ್ನಡ ಅಸ್ಮಿತೆ ವೇದಿಕೆಗೆ ಮಾತ್ರ ಸೀಮಿತವೇ ?
ಇಂದಿರಾ ಇದಕ್ಕೆಲ್ಲ ಜಾಣಕಿವುಡುತನ ತೋರಿದರು. ಉಕ್ಕಿನ ಮಹಿಳೆಯಾಗಿದ್ದ ಅವರು ಯಾವುದೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಒತ್ತಡಗಳಿಗೆ, ಸಲಹೆಗಳಿಗೆ ಮಣಿಯಲಿಲ್ಲ. ಪ್ರಜಾಪ್ರಭುತ್ವದ ಉಡುಗೆಯಲ್ಲಿದ್ದ ಅವರ ಕರಾಳ ಸರ್ವಾಧಿಕಾರವು ೨೧ ತಿಂಗಳು ಅಡೆತಡೆಯಿಲ್ಲದೆ ನಡೆಯಿತು. ಆದರೆ ಅಚ್ಚರಿಯೆಂದರೆ, ೧೯೭೭ರ ಮಾರ್ಚ್ ೨೧ರಂದು ತುರ್ತುಪರಿಸ್ಥಿತಿಯನ್ನು ತೆಗೆದಾಗ, ‘ಇದನ್ನು ಇನ್ನೂ ಕೆಲಕಾಲ ಮುಂದುವರಿಸಬಾರದಿತ್ತೇ?’ ಎಂದು ಕೆಲವರು ಗೊಣಗಿದ್ದುಂಟು; ಈ ಆಡಳಿತ ವೈಖರಿಯನ್ನು ಮೊದಲು ವಿರೋಧಿಸಿದ್ದ ಹಲವರು ಕೊನೆಗೆ ಅವರನ್ನು ಅಪರಾಧಿಯನ್ನಾಗಿ ನೋಡುವುದನ್ನು ಬಿಟ್ಟಿದ್ದರು.
ಒಟ್ಟಾರೆಯಾಗಿ ಹೇಳುವುದಾದರೆ, ಮುಷ್ಕರ, ಹರತಾಳ, ಬಂದ್, ಪ್ರತಿಭಟನೆ, ಪಾದಯಾತ್ರೆ, ರಾಜಕೀಯ ಪಕ್ಷಗಳ ರ‍್ಯಾಲಿಗಳು ಮಾಯವಾಗಿದ್ದವು. ಜನಸಾಮಾನ್ಯರ ದಿನಬಳಕೆಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿತ್ತು ಮತ್ತು ಅವರ ಜೀವನ ಅಷ್ಟರಮಟ್ಟಿಗೆ ಸುಗಮವಾಗಿತ್ತು. ತುರ್ತು ಪರಿಸ್ಥಿತಿಯ ವೇಳೆ ಬದುಕು ದುಸ್ತರವಾಗಿದ್ದು ವಿಪಕ್ಷಗಳಿಗೆ, ಅಧಿಕಾರವಿಲ್ಲದೇ ಚಡಪಡಿಸುತ್ತಿದ್ದ ರಾಜಕಾರಣಿ ಗಳಿಗೆ, ಗಲಭೆಕೋರರಿಗೆ, ಕಪ್ಪುಹಣದಲ್ಲಿ ‘ಡೀಲ್’ ಮಾಡುವವರಿಗೆ, ಕರ್ತವ್ಯವನ್ನು ಮರೆತು ಹಕ್ಕುಗಳನ್ನು ಮಾತ್ರ ಪ್ರತಿಪಾದಿಸುವವರಿಗೆ, ದೇಶದ ಕಾನೂನನ್ನು ಉಲ್ಲಂಘಿಸುವವರಿಗೆ. ಭ್ರಷ್ಟಾ ಚಾರಿಗಳು ಮತ್ತು ಕ್ರಿಮಿನಲ್‌ಗಳ ಸದ್ದಡಗಿತ್ತು, ನ್ಯಾಯ-ನೀತಿ-ಧರ್ಮ-ಕಾನೂನಿನ ಚೌಕಟ್ಟಿನೊಳಗೆ ಬದುಕುವವರಿಗೆ ಬದುಕಿನಲ್ಲಿ ಆಶಾಭಾವನೆ ಮೂಡಿತ್ತು.
ಅದರ ಸತ್ಯಾಸತ್ಯತೆ ಬೇರೆ ಮಾತು. ಆ ಕರಾಳ ಅವಧಿಯಲ್ಲಿ ಪತ್ರಿಕಾ ಸ್ವಾತಂತ್ರ್ಯದ ಹರಣ ವಾಗಿದ್ದನ್ನು ಪ್ರತಿಭಟಿಸಿ ತಮ್ಮ ಅಂದಿನ ಸಂಚಿಕೆಯಲ್ಲಿ ಸಂಪಾದಕೀಯ ಬರಹದ ವಿಭಾಗವನ್ನು ಖಾಲಿ ಇರಿಸಿದ್ದನ್ನು ಕೆಲವು ಪತ್ರಿಕೆಗಳು ತಮ್ಮ ಹಳೆಯ ಕಡತಗಳಿಂದ ಹೆಕ್ಕಿ ತೆಗೆದು, ಇಂದಿನ ಜನಾಂಗದ ಮುಂದೆ ಹರವಿಟ್ಟಿವೆ.
ಆದರೆ ತುರ್ತು ಪರಿಸ್ಥಿತಿಯ ಕರಾಳಮುಖವನ್ನು ಹೀಗೆ ತೋರಿಸುವ ಧಾವಂತದಲ್ಲಿ ಕೆಲವರು, ಇಂಥದೊಂದು ಸ್ಥಿತಿಗೆ ಕಾಂಗ್ರೆಸ್ ಪಕ್ಷದ ಹೊರತಾಗಿ ಜನಸಾಮಾನ್ಯರ ವರ್ಗದಿಂದಲೂ ಸಾಕಷ್ಟು ‘ಚಂದಾದಾರರಿದ್ದರು’ ಎಂಬ ಸತ್ಯವನ್ನು ತೋರಿಸಲಿಲ್ಲ. ತುರ್ತುಸ್ಥಿತಿಯ ಆರಂಭದ ದಿನಗಳಲ್ಲಿ ಗೊಂದಲ, ನಿರಾಶೆ, ಭ್ರಮನಿರಸನ ಮತ್ತು ಇಂದಿರಾ ಗಾಂಧಿಯವರ ಆಡಳಿತ ವೈಖರಿ ಬಗೆಗೆ ಭಾರಿ ಆಕ್ರೋಶ ವ್ಯಕ್ತವಾದರೂ, ಜನಸಾಮಾನ್ಯರ ಬದುಕು ಎಂದಿನಂತೆ ಇತ್ತು.
ಯಾರಿಗೂ ಯಾವ ವ್ಯತ್ಯಾಸ ಅಥವಾ ಬದಲಾವಣೆ ಕಾಣಲಿಲ್ಲ. ವಾಸ್ತವದಲ್ಲಿ ಅದು ಎಂದಿನ ಇನ್ನೊಂದು ದಿನವಾಗಿತ್ತು. ಅಚ್ಚರಿಯೆಂಬಂತೆ ರೈಲುಗಳು, ಬಸ್ಸುಗಳು ಮತ್ತು ವಿಮಾನಗಳು ಸಮಯಕ್ಕೆ ಸರಿಯಾಗಿ ಓಡತೊಡಗಿದ್ದವು. ಅವುಗಳ ನಿಲ್ದಾಣಗಳಲ್ಲಿ ಸ್ವಚ್ಛತೆ ಅನಾವರಣಗೊಳ್ಳ ತೊಡಗಿತ್ತು. ಕಚೇರಿಗಳಿಗೆ ನೌಕರರು ಸಮಯಕ್ಕೆ ಸರಿಯಾಗಿ ಬರತೊಡಗಿದ್ದರು, ಅವರ ಸಂಪೂರ್ಣ ಹಾಜರಾತಿಯನ್ನು ಅಲ್ಲಿ ಕಾಣಬಹುದಿತ್ತು.
‘ಇಂದಲ್ಲ, ನಾಳೆ ಬನ್ನಿ’ ಎಂಬ ಮಾತುಗಳು ಅಲ್ಲಿ ಕಡಿಮೆಯಾಗಿದ್ದವು. ಆಡಳಿತಯಂತ್ರ ಚುರುಕಾಗಿತ್ತು ಮತ್ತು ಶಿಸ್ತು ಗೋಚರಿಸತೊಡಗಿತ್ತು. ಕೆಂಪುಬಾವುಟ ಹಿಡಿದು, ಮುಷ್ಟಿಯನ್ನು ಮೇಲಕ್ಕೆತ್ತಿ ‘ಮುರ್ದಾಬಾದ್ ಮುರ್ದಾಬಾದ್, ಹಮಾರಿ ಮಾಂಗ್ ಪೂರಿ ಕರೋ, ನಹೀ ತೋ ಕುರ್ಸೀ ಖಾಲಿ ಕರೋ’ ಮುಂತಾದ, ಕಾರ್ಮಿಕ ವರ್ಗ ದವರ ಘೋಷಣೆಗಳು ದಿಢೀರ್ ಎಂದು ನಿಂತಿದ್ದವು.
ಒಟ್ಟಾರೆಯಾಗಿ ಹೇಳುವುದಾದರೆ, ಮುಷ್ಕರ, ಹರತಾಳ, ಬಂದ್, ಪ್ರತಿಭಟನೆ, ಪಾದಯಾತ್ರೆ, ರಾಜಕೀಯ ಪಕ್ಷಗಳ ರ‍್ಯಾಲಿಗಳು ಮಾಯವಾಗಿದ್ದವು. ಜನಸಾಮಾನ್ಯರ ದಿನಬಳಕೆಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿತ್ತು ಮತ್ತು ಅವರ ಜೀವನ ಅಷ್ಟರಮಟ್ಟಿಗೆ ಸುಗಮವಾಗಿತ್ತು. ತುರ್ತು ಪರಿಸ್ಥಿತಿಯ ವೇಳೆ ಬದುಕು ದುಸ್ತರವಾಗಿದ್ದು ವಿಪಕ್ಷಗಳಿಗೆ, ಅಧಿಕಾರವಿಲ್ಲದೇ ಚಡಪಡಿಸುತ್ತಿದ್ದ ರಾಜಕಾರಣಿಗಳಿಗೆ, ಗಲಭೆಕೋರರಿಗೆ, ಕಪ್ಪುಹಣದಲ್ಲಿ ‘ಡೀಲ್’ ಮಾಡುವವರಿಗೆ, ಕರ್ತವ್ಯವನ್ನು ಮರೆತು ಹಕ್ಕುಗಳನ್ನು ಮಾತ್ರ ಪ್ರತಿಪಾದಿಸುವವರಿಗೆ, ದೇಶದ ಕಾನೂನನ್ನು ಉಲ್ಲಂಘಿಸುವವರಿಗೆ. ಭ್ರಷ್ಟಾಚಾರಿಗಳು ಮತ್ತು ಕ್ರಿಮಿನಲ್‌ಗಳ ಸದ್ದಡಗಿತ್ತು, ನ್ಯಾಯ-ನೀತಿ-ಧರ್ಮ-ಕಾನೂನಿನ ಚೌಕಟ್ಟಿನೊಳಗೆ ಬದುಕುವವರಿಗೆ ಬದುಕಿನಲ್ಲಿ ಆಶಾಭಾವನೆ ಮೂಡಿತ್ತು.
ಆದರೆ, ಬಹುತೇಕರು ಆರೋಪಿಸುವಂತೆ ಅದು ಅಷ್ಟು ಕರಾಳವಾಗಿರಲಿಲ್ಲ. ದೇಶವನ್ನು ಲೂಟಿ ಮಾಡಿ ಹೋದರೂ ಕೆಲವರು ಇಂಗ್ಲಿಷರ ಆಡಳಿತವನ್ನು ನೆನಪಿಸಿಕೊಂಡು ಶ್ಲಾಘಿಸುವಂತೆ, ಕೆಲವು ಖಂಡನೀಯ ಕ್ರಮಗಳ (ಉದಾಹರಣೆಗೆ ಬಲವಂತವಾಗಿ ಸಂತಾನಶಕ್ತಿಯ ಹರಣಕ್ಕೆ ಮುಂದಾಗಿದ್ದು) ಹೊರತಾಗಿಯೂ ತುರ್ತು ಪರಿಸ್ಥಿತಿ ಅವಧಿಯಲ್ಲಿನ ಆಡಳಿತವು ಹಲವರ ಮೆಚ್ಚುಗೆ ಗಳಿಸಿತ್ತು.
ಆದರೆ, ಬಹುತೇಕರು ಆರೋಪಿಸುವಂತೆ ಅದು ಅಷ್ಟು ಕರಾಳವಾಗಿರಲಿಲ್ಲ. ದೇಶವನ್ನು ಲೂಟಿಮಾಡಿ ಹೋದರೂ ಕೆಲವರು ಇಂಗ್ಲಿಷರ ಆಡಳಿತವನ್ನು ನೆನಪಿಸಿಕೊಂಡು ಶ್ಲಾಘಿಸುವಂತೆ, ಕೆಲವು ಖಂಡನೀಯ ಕ್ರಮಗಳ (ಉದಾಹರಣೆಗೆ ಬಲವಂತವಾಗಿ ಸಂತಾನಶಕ್ತಿಯ ಹರಣಕ್ಕೆ ಮುಂದಾಗಿದ್ದು) ಹೊರತಾಗಿಯೂ ತುರ್ತು ಪರಿಸ್ಥಿತಿ ಅವಧಿಯಲ್ಲಿನ ಆಡಳಿತವು ಹಲವರ ಮೆಚ್ಚುಗೆ ಗಳಿಸಿತ್ತು.
ದೇಶವು ತ್ವರಿತವಾಗಿ ಅಭಿವೃದ್ಧಿ ಹೊಂದಬೇಕಾದರೆ ಇಂಥದೊಂದು ಕ್ರಮ ಅನಿವಾರ್ಯ ಎಂಬ ಹೊಸ ವಿಶ್ಲೇಷಣೆಗೆ ಅದು ನಾಂದಿ ಹಾಡಿತ್ತು. ಸಂವಿಧಾನವು ಜನರಿಗೆ ಹಕ್ಕುಗಳೊಂದಿಗೆ ಕರ್ತವ್ಯ ವನ್ನು ಕೂಡ ಕೊಟ್ಟಿದೆ ಎಂಬುದನ್ನು ಇಂದಿರಾ ಗಾಂಧಿಯವರು ಜನರಿಗೆ ನೆನಪಿಸಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಧಿಕಾರ ದುರುಪಯೋಗವಾಗಿತ್ತು, ದಮನಕಾರಿಯಾಗಿತ್ತು ಎನ್ನು ವುದು ಸತ್ಯವಾದರೂ, ಪೊಲೀಸರಿಂದ ಅಮಾಯಕರಿಗೆ ತೊಂದರೆಯೇನೂ ಆಗಿರಲಿಲ್ಲ (ಆಗ ದೆಹಲಿ ಯಲ್ಲಿದ್ದ ನಾನು ಪೊಲೀಸರ ಕಾರ್ಯಾಚರಣೆಯನ್ನು ಪ್ರತ್ಯಕ್ಷ ಕಂಡಿದ್ದುಂಟು).
ತುರ್ತು ಪರಿಸ್ಥಿತಿ ಕಾಲಘಟ್ಟದ ಆಡಳಿತವನ್ನು ಖಂಡಿಸುವ ಧಾವಂತದಲ್ಲಿ ಮೇಲೆ ಉಲ್ಲೇಖಿಸಿದ ಒಂದಷ್ಟು ಸಕಾರಾತ್ಮಕ ಅಂಶಗಳು ಹೊರಬರದಿರುವುದು ಆಶ್ಚರ್ಯ.
(ಲೇಖಕರು , ರಾಜಕೀಯ ವಿಶ್ಲೇಷಕರು)