ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಹೆಬ್ಬಾವಿನ ಹೊಟ್ಟೆ ಸೀಳಿದ್ರೆ ರೈತನ ದೇಹ ಪತ್ತೆ! ಬೆಚ್ಚಿಬೀಳಿಸುವ ವಿಡಿಯೊ ವೈರಲ್!

ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿನ ಮಜಾಪಾಹಿತ್ ಗ್ರಾಮದಲ್ಲಿ 26 ಅಡಿ ಉದ್ದದ ಹೆಬ್ಬಾವಿನ ಹೊಟ್ಟೆಯನ್ನು ಸೀಳಿದಾಗ ಅದರಲ್ಲಿ 63 ವರ್ಷದ ರೈತನ ಶವ ಪತ್ತೆಯಾಗಿದೆ. ಇದನ್ನು ಕಂಡು ಗ್ರಾಮಸ್ಥರು ಶಾಕ್‌ ಆಗಿದ್ದಾರೆ. ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral News) ಆಗಿದೆ.

ಹೆಬ್ಬಾವಿನ ಹೊಟ್ಟೆಯೊಳಗೆ ವೃದ್ಧ! ಏನಿದು ವೈರಲ್‌ ಸ್ಟೋರಿ?

Profile pavithra Jul 8, 2025 3:17 PM

ಜಕಾರ್ತಾ: ಇತ್ತೀಚೆಗೆ ನದಿಯ ದಡದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬನ ಮೇಲೆ ಸಡನ್ನಾಗಿ ಹಾವೊಂದು ಡೆಡ್ಲಿ ಆಟ್ಯಾಕ್‌ ಮಾಡಿದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.ಇದೀಗ ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿನ ಮಜಾಪಾಹಿತ್ ಗ್ರಾಮದಲ್ಲಿ 63 ವರ್ಷದ ರೈತನ ಶವ 26 ಅಡಿ ಉದ್ದದ ಹೆಬ್ಬಾವಿನ(Paython) ಹೊಟ್ಟೆಯೊಳಗೆ ಪತ್ತೆಯಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಸಾಮಾನ್ಯವಾಗಿ ಊದಿಕೊಂಡ ಹೆಬ್ಬಾವುವಿನ ಹೊಟ್ಟೆಯನ್ನು ನೋಡಿ ಅನುಮಾನಗೊಂದ ಗ್ರಾಮಸ್ಥರು ಹಾವಿನ ಹೊಟ್ಟೆಯನ್ನು ಸೀಳಿದ್ದಾರೆ. ಆಗ ಅದರೊಳಗೆ ರೈತನ ದೇಹವನ್ನು ಇರುವುದನ್ನು ನೋಡಿ ಅವರು ಶಾಕ್ ಆಗಿದ್ದಾರೆ. ಈ ಸುದ್ದಿ ಈಗ ವೈರಲ್‌(Viral News) ಆಗಿದೆ.

ಬೆಳಿಗ್ಗೆ ರೈತ ತನ್ನ ಜಮೀನಿನ ಕೆಲಸಕ್ಕೆ ಹೋಗಿದ್ದ. ಆದರೆ ರಾತ್ರಿಯಾದರೂ ಮನೆಗೆ ಮರಳದಿದ್ದಾಗ ಆತ ಕಾಣೆಯಾಗಿದ್ದಾನೆ ಎಂದು ಅವನ ಕುಟುಂಬದವರು ಹುಡುಕಲು ಶುರುಮಾಡಿದ್ದಾರೆ. ಹುಡುಕಾಟದ ಸಮಯದಲ್ಲಿ, ರೈತನ ಬೈಕ್‍ ಹೊಲದ ಬಳಿ ನಿಂತಿರುವುದು ಕಂಡುಬಂದಿತು. ಹಾಗೂ ದೊಡ್ಡ ಹೆಬ್ಬಾವು ಅಲ್ಲಿರುವುದನ್ನು ಗ್ರಾಮಸ್ಥರು ನೋಡಿದ್ದಾರೆ. ಆದರೆ ಆಶ್ಚರ್ಯವೆನೆಂದರೆ ಹೆಬ್ಬಾವಿನ ಹೊಟ್ಟೆ ಊದಿಕೊಂಡಿತ್ತು. ಆಗ ಅನುಮಾನಗೊಂಡ ಗ್ರಾಮಸ್ಥರು ಅದರ ಹೊಟ್ಟೆಯನ್ನು ಸೀಳಿದಾಗ, ರೈತನ ನಿರ್ಜೀವ ದೇಹ ಹಾವಿನ ಹೊಟ್ಟೆಯೊಳಗೆ ಪತ್ತೆಯಾಗಿದೆ.



ವರದಿ ಪ್ರಕಾರ, ಈ ಪ್ರದೇಶದಲ್ಲಿ ವಿಶೇಷವಾಗಿ ಮಳೆಗಾಲದಲ್ಲಿ, ಜಾನುವಾರುಗಳ ಮೇಲೆ ಹೆಬ್ಬಾವು ದಾಳಿ ಮಾಡಿದ ಪ್ರಕರಣ ನಡೆದಿತ್ತಂತೆ. ಆದರೆ ನಿವಾಸಿಯೊಬ್ಬರನ್ನು ಹೆಬ್ಬಾವು ನುಂಗಿದ ಘಟನೆ ಇದೇ ಮೊದಲ ಬಾರಿಗೆ ನಡೆದಿದ್ದು ಎನ್ನಲಾಗಿದೆ. ಗ್ರಾಮದ ಭದ್ರತಾ ಅಧಿಕಾರಿ ಸೆರ್ಟು ಡರ್ಮನ್ ಈ ಘಟನೆ ದೃಢೀಕರಿಸಿದ್ದರು. ನಂತರ ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳ ಸಹಾಯದಿಂದ ಶವವನ್ನು ತಕ್ಷಣ ರೈತನ ಮನೆಗೆ ತೆಗೆದುಕೊಂಡು ಹೋಗಲಾಗಿದೆ. ಈ ಘಟನೆ ನಂತರ ಅಲ್ಲಿನ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.

ಈ ಸುದ್ದಿಯನ್ನೂ ಓದಿ:‌Viral Video: ಕಲಿಯುಗದ ಶ್ರವಣಕುಮಾರ! ಹೆತ್ತವರ ಮುಖದಲ್ಲಿ ನಗು ಮೂಡಿಸಲು ಈ ಟೆಕ್ಕಿ ಮಾಡಿದ್ದೇನು ಗೊತ್ತಾ?

2017ರಲ್ಲಿ ಸುಲಾಬಿರೋ ಹಳ್ಳಿಯಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಅಲ್ಲಿನ ನಿವಾಸಿ 25 ವರ್ಷದ ವ್ಯಕ್ತಿ ಅಕ್ಬರ್ ಎಂಬಾತ 23 ಅಡಿ ಉದ್ದದ ಹೆಬ್ಬಾವಿನ ಹೊಟ್ಟೆಯೊಳಗೆ ಪತ್ತೆಯಾದ ಪ್ರಕರಣವೊಂದು ನಡೆದಿತ್ತು. ಎರಡೂ ಪ್ರಕರಣಗಳಲ್ಲಿ, ಹಾವಿನ ಹೊಟ್ಟೆಯನ್ನು ಸೀಳಿ ನಂತರ ಅವುಗಳನ್ನು ಕೊಲ್ಲಲಾಯಿತು.ಇಂಡೋನೇಷಿಯಾ ಮತ್ತು ಸುಲಾವೆಸಿ ದ್ವೀಪಗಳಲ್ಲಿ ಹೆಬ್ಬಾವುಗಳು ಸಾಮಾನ್ಯವಾಗಿ 20 ಅಡಿ ಉದ್ದವನ್ನು ಮೀರಿಸುತ್ತವೆ. ಇವು ಸಾಮಾನ್ಯವಾಗಿ ಚಿಕ್ಕ ಪ್ರಾಣಿಗಳನ್ನು ತಿನ್ನುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯರ ಮೇಲೂ ದಾಳಿ ನಡೆಸುತ್ತಿವೆಯಂತೆ.