Betting Addiction: ಬೆಟ್ಟಿಂಗ್ ಚಟ ಹತ್ತಿಸಿಕೊಂಡು ಮನೆಕಳ್ಳತನ ಮಾಡುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಸೆರೆ
Betting Addiction: ಬೆಟ್ಟಿಂಗ್ ಚಟಕ್ಕೆ ಅಂಟಿಕೊಂಡ ಆರೋಪಿ ಅಪಾರ ದುಡ್ಡು ಕಳೆದುಕೊಂಡಿದ್ದಲ್ಲದೆ ಸಾಲಗಾರನಾಗಿದ್ದ. ಬೆಟ್ಟಿಂಗ್ ಆಡಲು ತಂದೆಯ ಹೆಸರಿನಲ್ಲಿದ್ದ ಆಸ್ತಿಯನ್ನು ಕೂಡ ಮಾರಾಟ ಮಾಡಿದ್ದ. ದುಡಿದು ತಿನ್ನೋಣ ಅಂತ ಕುಟುಂಬಸ್ಥರು ಬೆಂಗಳೂರಿಗೆ ಬಂದಿದ್ದರು. ಅಲ್ಲಿ ಆತ ಮನೆಕಳವು ಶುರುಮಾಡಿದ್ದ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾಫ್ಟ್‌ವೇರ್ ಇಂಜಿನಿಯರ್ (Software Engineer) ಕೆಲಸ ಸಿಕ್ಕಿದರೆ ಸಾಕು ಎಂದು ಎಷ್ಟೋ ನಿರುದ್ಯೋಗಿಗಳು ಕಾಯುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಧೂರ್ತ, ಸಿಕ್ಕ ಸಾಫ್ಟ್‌ವೇರ್ ಇಂಜಿನಿಯರ್ ಕೆಲಸವನ್ನೂ ಸರಿಯಾಗಿ ಮಾಡದೆ, ಬೆಟ್ಟಿಂಗ್ ಚಟವನ್ನೂ (Betting Addiction) ಹತ್ತಿಸಿಕೊಂಡು ಹಣ ಕಳೆದುಕೊಂಡು, ಅದರಿಂದ ಮನೆಕಳ್ಳತನಕ್ಕೂ (Burglary) ಇಳಿದಿದ್ದಾನೆ. ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡ ಕಳ್ಳತನಕ್ಕೆ ಇಳಿದಿದ್ದ ಈ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈತ ಸಾಫ್ಟ್ವೇರ್ ಇಂಜಿನಿಯರ್ ಎಂದು ತಿಳಿದು ಪೊಲೀಸರೇ ಶಾಕ್ ಆಗಿದ್ದಾರೆ.
ಕೆ.ಎ ಮೂರ್ತಿ ಎಂಬ ಸಾಫ್ಟ್‌ವೇರ್ ಇಂಜಿನಿಯರ್ ಬಂಧಿತ ಆರೋಪಿ. ಬೆಂಗಳೂರಿನ ಮಾಗಡಿ ರೋಡ್ ಠಾಣೆ ಪೋಲೀಸರು ಈತನನ್ನು ಆರೆಸ್ಟ್ ಮಾಡಿದ್ದಾರೆ. ಬೆಟ್ಟಿಂಗ್ ಚಟಕ್ಕೆ ಅಂಟಿಕೊಂಡು ಕೆ.ಎ ಮೂರ್ತಿ ಅಪಾರ ದುಡ್ಡು ಕಳೆದುಕೊಂಡಿದ್ದ. ಬೆಟ್ಟಿಂಗ್ ಆಡಲು ತಂದೆಯ ಹೆಸರಿನಲ್ಲಿದ್ದ ಆಸ್ತಿಯನ್ನು ಕೂಡ ಮಾರಾಟ ಮಾಡಿದ್ದ. ದುಡಿದು ತಿನ್ನೋಣ ಅಂತ ಕುಟುಂಬಸ್ಥರು ಬೆಂಗಳೂರಿಗೆ ಬಂದಿದ್ದಾರೆ. ವಿಪರೀತ ಬೆಟ್ಟಿಂಗ್ ಚಟ ಮೈಗಂಟಿಸಿಕೊಂಡಿದ್ದ ಮೂರ್ತಿ ಸಾಲಗಾರನಾಗಿದ್ದ. ಪುತ್ರನ ಸಾಲ ತೀರಿಸಲು ತಂದೆ ಅಣ್ಣಪ್ಪ ಆಸ್ತಿ ಮಾರಾಟ ಮಾಡಿದ್ದಾರೆ.
ಸಾಫ್ಟ್ವೇರ್ ಇಂಜಿನಿಯರ್ ಆಗಿ ಆರೋಪಿ ಮೂರ್ತಿ ಕೆಲಸ ಮಾಡುತ್ತಿದ್ದ. ಬೆಟ್ಟಿಂಗ್ ಆಡಲು ಮನೆಗಳ್ಳತನ ಮಾಡುತ್ತಿದ್ದ. ಅಂಗಳ ಪರಮೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಆರೋಪಿಯನ್ನು ಬಂಧಿಸಿ ಕರೆತಂದಾಗ ಈತ ಎಸಗಿದ ಹಲವು ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಕೋಣನಕುಂಟೆ, ಸದ್ದುಗುಂಟೆಪಾಳ್ಯ ಹಾಗು ಅವಲಹಳ್ಳಿ ವ್ಯಾಪ್ತಿಯಲ್ಲಿ ಕಳ್ಳತನ ಎಸಗಿದ್ದ ಬಂಧಿತನಿಂದ ಒಟ್ಟು 17 ಲಕ್ಷ ರೂಪಾಯಿ ಮೌಲ್ಯದ 245 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Priyank Kharge: ರಾಜ್ಯದಲ್ಲಿ ಆನ್‌ಲೈನ್ ಬೆಟ್ಟಿಂಗ್ ಕಡಿವಾಣಕ್ಕೆ ನೂತನ ಕಾನೂನು: ಪ್ರಿಯಾಂಕ್ ಖರ್ಗೆ