Mysuru Bike Accident: ಡೆಲಿವರಿ ಬಾಯ್ ಬೈಕ್‌ಗೆ ಹಯಾಬುಸಾ ಸೂಪರ್ ಬೈಕ್ ಡಿಕ್ಕಿಯಾಗಿ ಇಬ್ಬರ ದುರ್ಮರಣ; ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!
Mysuru Bike Accident: ಮೈಸೂರಿನ ಎನ್.ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಡೆಲಿವರಿ ಬಾಯ್ ಬೈಕ್‌ಗೆ ಹಿಂಬದಿಯಿಂದ ವೇಗವಾಗಿ ಬಂದು ಹಯಾಬುಸಾ ಬೈಕ್ ಡಿಕ್ಕಿಯಾಗಿದ್ದರಿಂದ ದುರಂತ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.


ಮೈಸೂರು: ಮೈಸೂರಿನಲ್ಲಿ ಭೀಕರ ಅಪಘಾತ (Mysuru Bike Accident) ಸಂಭವಿಸಿದೆ. ಜೋಮ್ಯಾಟೋ ಫುಡ್ ಡೆಲಿವರಿ ಬಾಯ್ ಬೈಕ್‌ಗೆ ವೇಗವಾಗಿ ಬಂದ ಹಯಾಬುಸಾ ಸೂಪರ್ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ದುರ್ಮರಣ ಹೊಂದಿದ್ದಾರೆ. ಜುಲೈ 6ರಂದು ರಾತ್ರಿ ನಡೆದಿದ್ದ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಡೆಲಿವರಿ ಬಾಯ್ ಕಾರ್ತಿಕ್, ಹಯಾಬುಸಾ ಬೈಕ್ ಸವಾರ ಸೈಯದ್ ಸರೂನ್ ಮೃತರು. ಎನ್.ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೈಸೂರಿನಲ್ಲಿ ಎರಡು ಬೈಕ್ ಗಳ ಮಧ್ಯ ಈ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಜೊಮ್ಯಾಟೋ ಫುಲ್ ಡೆಲಿವರಿ ಬಾಯ್ ಸೇರಿದಂತೆ ಇಬ್ಬರ ಸಾವಾಗಿದೆ. ಡೆಲಿವರಿ ಬಾಯ್ ಬೈಕ್‌ಗೆ ಹಿಂಬದಿಯಿಂದ ವೇಗವಾಗಿ ಬಂದು ಹಯಾಬುಸಾ ಬೈಕ್ ಡಿಕ್ಕಿಯಾಗಿದ್ದರಿಂದ ದುರಂತ ಸಂಭವಿಸಿದೆ. ಅಪಘಾತದ ವೇಳೆ ಇಬ್ಬರು ನೆಲಕ್ಕೆ ಬಿದ್ದು, ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ರಸ್ತೆಗೆ ಬಿದ್ದ ತಕ್ಷಣ ಹಯಾಬುಸಾ ಬೈಕ್ ಸ್ಕಿಡ್ ಆಗಿ ಬಹು ದೂರ ಹೋಗಿ ಬಿದ್ದಿದ್ದು, ಈ ವೇಳೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಈ ಕುರಿತು ಎನ್. ಆರ್. ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.