ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hat-Tricks in IPL: ಇದುವರೆಗಿನ ಆವೃತ್ತಿಯ ಐಪಿಎಲ್‌ ಹ್ಯಾಟ್ರಿಕ್‌ ಸಾಧಕರ ಪಟ್ಟಿ ಹೀಗಿದೆ

IPL hat-tricks: ಒಟ್ಟಾರೆ ಐಪಿಎಲ್‌ನಲ್ಲಿ ಇದುವರೆಗೆ ದಾಖಲಾಗಿರುವ 22 ಹ್ಯಾಟ್ರಿಕ್‌ನಲ್ಲಿ ವಿದೇಶಿ ಕ್ರಿಕೆಟಿಗರಿಗಿಂತ ಭಾರತೀಯರ ಪಾರಮ್ಯವೇ ಹೆಚ್ಚು. ಲಕ್ಷೀಪತಿ ಬಾಲಾಜಿ ಐಪಿಎಲ್‌ನ ಮೊದಲ ಹ್ಯಾಟ್ರಿಕ್‌ ಪಡೆದ ಬೌಲರ್‌ ಆಗಿದ್ದಾರೆ. 2008ರ ಚೊಚ್ಚಲ ಆವೃತ್ತಿಯಲ್ಲಿ ಪಂಜಾಬ್‌ ತಂಡದ ವಿರುದ್ಧ ಅವರು ಈ ಸಾಧನೆ ಮಾಡಿದ್ದರು.

ಐಪಿಎಲ್‌ನಲ್ಲಿ ಮೊದಲ ಹ್ಯಾಟ್ರಿಕ್‌ ವಿಕೆಟ್‌ ಕಿತ್ತ ಬೌಲರ್‌ ಯಾರು?

Profile Abhilash BC Mar 17, 2025 4:59 PM

ಬೆಂಗಳೂರು: ಇನ್ನೇನು 5 ದಿನಗಳಲ್ಲಿ 18ನೇ ಆವೃತ್ತಿಯ ಐಪಿಎಲ್‌(IPL 2025) ಹಂಗಾಮ ಶುರುವಾಗಲಿದೆ. ಸರಿ ಸುಮಾರು ಮೂರು ತಿಂಗಳ ಕಾಲ ನಡೆಯುವ ಈ ಟೂರ್ನಿ ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣ ನೀಡಲಿದೆ. ಮಾರ್ಚ್‌ 22 ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೆಕೆಆರ್‌(RCB vs KKR) ಕಾದಾಟ ನಡೆಸುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಇದಕ್ಕೂ ಮುನ್ನ ಇದುವರೆಗಿನ 17 ಆವೃತ್ತಿಯ ಐಪಿಎಲ್‌ ಇತಿಹಾಸದಲ್ಲಿ ಯಾರೆಲ್ಲ ಹ್ಯಾಟ್ರಿಕ್‌(Hat-Tricks in IPL) ವಿಕೆಟ್‌ ಕಿತ್ತಿದ್ದಾರೆ?, ಈ ಸಾಧನೆ ಮಾಡಿದ ಮೊದಲ ಬೌಲರ್‌ ಯಾರು? ಎಂಬುದರ ಹಿನ್ನೋಟ ಇಲ್ಲಿದೆ.

ಒಟ್ಟಾರೆ ಐಪಿಎಲ್‌ನಲ್ಲಿ ಇದುವರೆಗೆ ದಾಖಲಾಗಿರುವ 22 ಹ್ಯಾಟ್ರಿಕ್‌ನಲ್ಲಿ ವಿದೇಶಿ ಕ್ರಿಕೆಟಿಗರಿಗಿಂತ ಭಾರತೀಯರ ಪಾರಮ್ಯವೇ ಹೆಚ್ಚು. ಲಕ್ಷೀಪತಿ ಬಾಲಾಜಿ ಐಪಿಎಲ್‌ನ ಮೊದಲ ಹ್ಯಾಟ್ರಿಕ್‌ ಪಡೆದ ಬೌಲರ್‌ ಆಗಿದ್ದಾರೆ. 2008ರ ಚೊಚ್ಚಲ ಆವೃತ್ತಿಯಲ್ಲಿ ಪಂಜಾಬ್‌ ತಂಡದ ವಿರುದ್ಧ ಅವರು ಈ ಸಾಧನೆ ಮಾಡಿದ್ದರು. ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬೌಲರ್‌ ಆಗಿದ್ದರು.

ಅಮಿತ್‌ ಮಿಶ್ರಾ (3 ಸಲ) ಅತಿ ಹೆಚ್ಚು ಸಲ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಮೊದಲ ಆಟಗಾರರಾದರೆ, ಯುವರಾಜ್‌ ಸಿಂಗ್‌ 2ನೇ ಸಲ ಹ್ಯಾಟ್ರಿಕ್‌ ಪಡೆದ 2ನೇ ಅತ್ಯಂತ ಯಶಸ್ವಿ ಬೌಲರ್‌, ರೋಹಿತ್‌ ಶರ್ಮ, ಪ್ರವೀಣ್‌ ಕುಮಾರ್‌, ಅಜಿತ್‌ ಚಾಂಡೀಲ, ಪ್ರವೀಣ್‌ ತಾಂಬೆ, ಅಕ್ಷರ್‌ ಪಟೇಲ್‌, ಜೈದೇವ್‌ ಉನಾದ್ಕತ್‌, ಶ್ರೇಯಸ್‌ ಗೋಪಾಲ್‌, ಹರ್ಷಲ್‌ ಪಟೇಲ್‌ ಮತ್ತು ಜಯುವೇಂದ್ರ ಚಹಲ್‌ ತಲಾ ಒಂದೊಂದು ಸಲ ಹ್ಯಾಟ್ರಿಕ್‌ ಸಾಧನೆಯನ್ನು ಮಾಡಿದ್ದಾರೆ.

ಎನ್‌ಟಿನಿ ಮೊದಲ ವಿದೇಶಿ ಬೌಲರ್‌

ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ವಿದೇಶಿ ಬೌಲರ್‌ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಬೌಲರ್‌ ಮಖಾಯ್‌ ಎನ್‌ಟಿನಿ ಮೊದಲ ಸ್ಥಾನದಲ್ಲಿದ್ದಾರೆ. 2008ರಲ್ಲಿ ಈ ಸಾಧನೆಯನ್ನು ಚೆನ್ನೈ ತಂಡದ ಪರ ಎನ್‌ಟನಿ ಮಾಡಿದ್ದರು. 2013ರಲ್ಲಿ ಕೆಕೆಆರ್‌ ತಂಡದ ಪರ ಸುನಿಲ್‌ ನಾರಾಯಣ್‌, 2014ರಲ್ಲಿ ರಾಜಸ್ಥಾನ್‌ ಪರ ಶೇನ್‌ ವಾಟ್ಸನ್‌, 2017ರಲ್ಲಿ ಆರ್‌ಸಿಬಿ ಪರ ಸ್ಯಾಮ್ಯುಯೆಲ್‌ ಬದ್ರಿ ಮತ್ತು ಪುಣೆ ಸೂಪರ್‌ಜೈಂಟ್ಸ್‌ ಪರ ಆ್ಯಂಡ್ರೊ ಟೈ, 2019ರಲ್ಲಿ ಪಂಜಾಬ್‌ ಪರ ಸ್ಯಾಮ್‌ ಕರನ್‌, 2023ರಲ್ಲಿ ರಶೀದ್‌ ಖಾನ್‌ ಗುಜರಾತ್‌ ಪರ ಹ್ಯಾಟ್ರಿಕ್‌ ಸಾಧನೆ ಗೈದಿದ್ದಾರೆ.

ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ಕಿತ್ತ ಅತಿ ಕಿರಿಯ ಬೌಲರ್‌ ಎಂಬ ದಾಖಲೆ ಸ್ಯಾಮ್‌ ಕರನ್‌ ಹೆಸರಿನಲ್ಲಿದೆ. 20 ವರ್ಷಕ್ಕೆ ಅವರು ಈ ಸಾಧನೆ ಮಾಡಿದ್ದರು. ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವ ಮುನ್ನವೇ ಅವರು ಈ ದಾಖಲೆ ನಿರ್ಮಿಸಿದ್ದರು.

ಇದನ್ನೂ ಓದಿ IPL 2025: ಎಂಎಸ್‌ ಧೋನಿ ಅಲ್ಲ! ತಮ್ಮ ನೆಚ್ಚಿನ ನಾಯಕನನ್ನು ಹೆಸರಿಸಿದ ಶಶಾಂಕ್‌ ಸಿಂಗ್‌!

ಐಪಿಎಲ್‌ ಹ್ಯಾಟ್ರಿಕ್‌ ಸಾಧಕರ ಪಟ್ಟಿ

2008: ಲಕ್ಷ್ಮೀಪತಿ ಬಾಲಾಜಿ

2008: ಅಮಿತ್‌ ಮಿಶ್ರಾ

2008: ಮಖಾಯ್‌ ಎನ್‌ಟನಿ

2009: ಯುವರಾಜ್‌ ಸಿಂಗ್‌

2009: ರೋಹಿತ್‌ ಶರ್ಮ

2009: ಯುವರಾಜ್‌ ಸಿಂಗ್‌

2010: ಪ್ರವೀಣ್‌ ಕುಮಾರ್‌

2011: ಅಮಿತ್‌ ಮಿಶ್ರಾ

2012: ಅಜಿತ್‌ ಚಾಂಡೇಲ

2013: ಸುನಿಲ್‌ ನಾರಾಯಣ್‌

2013: ಅಮಿತ್‌ ಮಿಶ್ರಾ

2014: ಪ್ರವೀಣ್‌ ತಾಂಬೆ

2014: ಶೇನ್‌ ವಾಟ್ಸನ್‌

2016: ಅಕ್ಷರ್‌ ಪಟೇಲ್‌

2017: ಸ್ಯಾಮ್ಯುಯೆಲ್‌ ಬದ್ರಿ

2017: ಆ್ಯಂಡ್ರೊ ಟೈ

2017: ಜೈದೇವ್‌ ಉನಾದ್ಕತ್‌

2019: ಸ್ಯಾಮ್‌ ಕರನ್‌

2019: ಶ್ರೇಯಸ್‌ ಗೋಪಾಲ್‌

2021:ಹರ್ಷಲ್‌ ಪಟೇಲ್

2022: ಯಜುವೇಂದ್ರ ಚಹಲ್‌

2023: ರಶೀದ್‌ ಖಾನ್‌