ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fit India: ಫಿಟ್ ಇಂಡಿಯಾ ಐಕಾನ್ ಆದ ಆಯುಷ್ಮಾನ್ ಖುರಾನಾ

ದೆಹಲಿಯಲ್ಲಿ ಭಾನುವಾರ ನಡೆದ ಫಿಟ್ ಇಂಡಿಯಾ ಆಂದೋಲನದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು ನಟ ಆಯುಷ್ಮಾನ್ ಖುರಾನಾ ಅವರನ್ನು ಅಧಿಕೃತ 'ಫಿಟ್ ಇಂಡಿಯಾ ಐಕಾನ್' ಎಂದು ಹೆಸರಿಸಿದ್ದಾರೆ. 40 ವರ್ಷದ ಆಯುಷ್ಮಾನ್ ಖುರಾನಾ ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಆಂದೋಲನಕ್ಕೆ ಸೇರಿಕೊಂಡಿದ್ದಾರೆ.

ಫಿಟ್ ಇಂಡಿಯಾ ಐಕಾನ್‌ಗೆ  ಆಯುಷ್ಮಾನ್ ಖುರಾನಾ ಆಯ್ಕೆ

ಆಯುಷ್ಮಾನ್ ಖುರಾನಾ

Profile Vishakha Bhat Mar 17, 2025 4:07 PM

ನವದೆಹಲಿ: ದೆಹಲಿಯಲ್ಲಿ ಭಾನುವಾರ ನಡೆದ ಫಿಟ್ ಇಂಡಿಯಾ (Fit India) ಆಂದೋಲನದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು ನಟ ಆಯುಷ್ಮಾನ್ ಖುರಾನಾ (Ayushmann Khurrana) ಅವರನ್ನು ಅಧಿಕೃತ 'ಫಿಟ್ ಇಂಡಿಯಾ ಐಕಾನ್' ಎಂದು ಹೆಸರಿಸಿದ್ದಾರೆ. 40 ವರ್ಷದ ಆಯುಷ್ಮಾನ್ ಖುರಾನಾ ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಆಂದೋಲನಕ್ಕೆ ಸೇರಿಕೊಂಡಿದ್ದಾರೆ, ಇದು "ಜನರು ತಮ್ಮ ಫಿಟ್ನೆಸ್ ಮತ್ತು ಯೋಗಕ್ಷೇಮದತ್ತ ಗಮನಹರಿಸಲು ಪ್ರೇರೇಪಿಸುವ" ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಫಿಟ್ ಇಂಡಿಯಾ ಆಂದೋಲನದ ಮುಖ್ಯ ಉದ್ದೇಶವೆಂದರೆ ದೈನಂದಿನ ದಿನಚರಿಗಳಲ್ಲಿ ದೈಹಿಕ ಚಟುವಟಿಕೆಯನ್ನು ಸೇರಿಸಿಕೊಳ್ಳುವ ಸರಳ ಮತ್ತು ಆನಂದದಾಯಕ ಮಾರ್ಗಗಳನ್ನು ಪ್ರದರ್ಶಿಸುವ ಮೂಲಕ ಫಿಟ್‌ನೆಸ್ ಅನ್ನು ಸುಲಭಗೊಳಿಸುವುದಾಗಿದೆ. ದೈಹಿಕ ಚಟುವಟಿಕೆ ಹೆಚ್ಚಿನ ಒತ್ತನ್ನು ಇಲ್ಲಿ ನೀಡಲಾಗುತ್ತದೆ. ಉತ್ತಮ ಆರೋಗ್ಯವು ನಮಗೆ ಏನು ಬೇಕಾದರೂ ಮಾಡಲು ಶಕ್ತಿ ನೀಡುತ್ತದೆ ಎಂದು ಆಯುಷ್ಮಾನ್ ಖುರಾನಾ ಹೇಳಿದ್ದಾರೆ.

ನಿಮ್ಮ ಆರೋಗ್ಯವು ಉತ್ತಮವಾಗಿದ್ದಾಗ, ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿನ ಸವಾಲುಗಳನ್ನು ನಿಭಾಯಿಸಬಹುದು. ಆದರೆ ನಿಮ್ಮ ಆರೋಗ್ಯವೇ ಸರಿ ಇಲ್ಲ ಎಂದರೆ ಯಾವುದೂ ಸಾಧ್ಯವಿಲ್ಲ. ಆರೋಗ್ಯವೇ ನಿಜಕ್ಕೂ ಸರ್ವಸ್ವ. ಆರೋಗ್ಯಕರ ರಾಷ್ಟ್ರವು ಶ್ರೀಮಂತ ರಾಷ್ಟ್ರ. ನಾವು ಆರೋಗ್ಯವಾಗಿದ್ದಾಗ, ನಾವು ಹೆಚ್ಚು ಉತ್ಪಾದಕರಾಗುತ್ತೇವೆ, ಹೆಚ್ಚು ಸಮೃದ್ಧರಾಗುತ್ತೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತೇವೆ" ಎಂದು ಅವರು ಹೇಳಿದರು.

ನಿಮ್ಮಂತಹ ಸೆಲೆಬ್ರಿಟಿಗಳು ಈ ವೇದಿಕೆಗೆ ಬಂದು ಫಿಟ್ ಇಂಡಿಯಾ ಬಗ್ಗೆ ಸಕಾರಾತ್ಮಕ ಸಂದೇಶ ನೀಡಿದಾಗ, ನಿಮ್ಮ ಮಾತುಗಳನ್ನು ಕೇಳಿದ ನಂತರ, ಅನೇಕ ಯುವಕರು ಸ್ಫೂರ್ತಿ ಪಡೆಯುತ್ತಾರೆ ಮತ್ತು ಫಿಟ್ ಇಂಡಿಯಾ ಆಂದೋಲನಕ್ಕೆ ಸೇರುತ್ತಾರೆ ಮತ್ತು ಫಿಟ್ ಆಗಿರುತ್ತಾರೆ" ಎಂದು ಮಾಂಡವಿಯಾ ಹೇಳಿದರು.

ಈ ಸುದ್ದಿಯನ್ನೂ ಓದಿ: Narendra Modi: ಬೊಜ್ಜಿನ ಸಮಸ್ಯೆಯ ವಿರುದ್ಧ ಮೋದಿ ಸಮರ; ವಿಶೇಷ ಟಾಸ್ಕ್‌ಗೆ ಸುಧಾ ಮೂರ್ತಿ ಸೇರಿದಂತೆ 10 ಗಣ್ಯರ ನೇಮಕ

ಸದ್ಯ ಆಯುಷ್ಮಾನ್ ಖುರಾನಾ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಮುಂದಿನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೊತೆ 'ಥಮಾ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ 2025 ರ ದೀಪಾವಳಿಯಂದು ಬಿಡುಗಡೆಯಾಗಲಿದೆ