ಚಾಂಪಿಯನ್ಸ್ ಟ್ರೋಫಿಯಿಂದ ಪಾಕ್ ಕ್ರಿಕೆಟ್ ಮಂಡಳಿ ಬರ್ಬಾದ್
Pakistan Cricket Board: ಆಗಿರುವ ನಷ್ಟದಿಂದಾಗಿ ಪಾರಾಗಲು ಪಾಕ್ ಕ್ರಿಕೆಟ್ ಮಂಡಳಿ ಕ್ರಿಕೆಟ್ ಆಟಗಾರರ ವೇತನ ಕಡಿತಕ್ಕೆ ಮುಂದಾಗಿದೆ. ವರದಿಗಳ ಪ್ರಕಾರ ಮುಂಬರುವ ರಾಷ್ಟ್ರೀಯ ಟಿ 20 ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುವ ಕ್ರಿಕೆಟಿಗರ ಪಂದ್ಯದ ಶುಲ್ಕವನ್ನು ಪಿಸಿಬಿ ಪ್ರತಿ ಪಂದ್ಯಕ್ಕೆ 100,000 ಪಾಕಿಸ್ತಾನಿ ರೂಪಾಯಿಗಳಿಂದ 10,000ಕ್ಕೆ ಇಳಿಸಲಿದೆ ಎನ್ನಲಾಗಿದೆ.


ಕರಾಚಿ: ಬಿಸಿಸಿಐ ಮತ್ತು ಐಸಿಸಿ ಜತೆ ಹೋರಾಡಿ ಚಾಂಪಿಯನ್ಸ್ ಟ್ರೋಫಿಯ(Champions Trophy 2025) ಆತಿಥ್ಯದ ಹಕ್ಕು ಉಳಿಸಿಕೊಂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿ(pakistan cricket board) ಇದೀಗ ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಟೂರ್ನಿಯನ್ನು ಆಯೋಜಿಸುವ ಮೂಲಕ ಪಿಸಿಬಿ 85 ಮಿಲಿಯನ್ ಯುಎಸ್ ಡಾಲರ್ (INR 869 ಕೋಟಿ) ನಷ್ಟವನ್ನು ಅನುಭವಿಸಿದೆ ಎಂದು ತಿಳಿದುಬಂದಿದೆ. ಐಸಿಸಿ(ICC) ಟೂರ್ನಿಗೆ ಆತಿಥ್ಯ ನೀಡಬೇಕಿದ್ದರೆ ವಿಶ್ವ ದರ್ಜೆಯ ಕ್ರೀಡಾಂಗಣಗಳು ಬೇಕು ಎನ್ನುವುದನ್ನು ಅರಿತ ಪಿಸಿಬಿ ಲಾಹೋರ್, ರಾವಲ್ಪಿಂಡಿ ಹಾಗೂ ಕರಾಚಿ ಕ್ರೀಡಾಂಗಣಗಳ ನವೀಕರಣಕ್ಕೆ ಕೈಹಾಕಿತ್ತು. ದುಡ್ಡನ್ನು ನೀರಿನಂತೆ ಚೆಲ್ಲಿ ನವೀಕರಣ ಕಾರ್ಯ ಕೈಗೊಳ್ಳುತ್ತಿದ್ದಾಗ, ಟೂರ್ನಿ ಪಾಕಿಸ್ತಾನದ ಸ್ಥಳಾಂತರಗೊಳ್ಳಬಹುದು ಎನ್ನುವ ಸುದ್ದಿ ಪಿಸಿಬಿ ಅಧಿಕಾರಿಗಳ ನಿದ್ದೆಗೆಡಿಸಿತ್ತು. ಹೋರಾಟ ನಡೆಸಿ ಆತಿಥ್ಯ ಹಕ್ಕು ಉಳಿಸಿಕೊಂಡರೂ, ಕ್ರೀಡಾಂಗಣಗಳ ನವೀಕರಣಕ್ಕೆ ಭಾರೀ ವೆಚ್ಚ ಮಾಡಿತ್ತು.
ವರದಿಗಳ ಪ್ರಕಾರ, ನವೀಕರಣ ಕಾರ್ಯಕ್ಕೆ ಪಿಸಿಬಿ 12.3 ಬಿಲಿಯನ್ ಪಾಕಿಸ್ತಾನಿ ರೂ. (ಅಂದಾಜು 383 ಕೋಟಿ) ಆಗಬಹುದು ಎಂದು ಅಂದಾಜಿಸಿತ್ತು. ಆದರೆ, 18 ಬಿಲಿಯನ್ ಪಾಕಿಸ್ತಾನಿ ರೂ (ಅಂದಾಜು 561 ಕೋಟಿ) ಖರ್ಚಾಗಿತ್ತು. ಇದು ಪಿಸಿಬಿ ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡಿದೆ.
ಇದನ್ನೂ ಓದಿ Corbin Bosch: ಐಪಿಎಲ್ ಆಡಲು ಬಂದ ದಕ್ಷಿಣ ಆಫ್ರಿಕಾ ಆಟಗಾರನಿಗೆ ನೋಟಿಸ್ ಜಾರಿ ಮಾಡಿದ ಪಾಕ್
ಭಾರತ ತಂಡ ಪಾಕಿಸ್ತಾನಕ್ಕೆ ಹೋಗಿದ್ದರೆ, ಪಿಸಿಬಿ ಮಾಡಿದ ವೆಚ್ಚ ಬಡ್ಡಿ ಸಮೇತ ವಸೂಲಿಯಾಗುತ್ತಿತ್ತು. ಆದರೆ, ತನ್ನ ತಂಡವನ್ನು ಬಿಸಿಸಿಐ ಕಳುಹಿಸದೆ ಭಾರತದ ಪಂದ್ಯವನ್ನು ದುಬೈನಲ್ಲಿ ಆಡಿಸಲಾಗಿತ್ತು. ಪಾಕಿಸ್ತಾನ ತವರಿನಲ್ಲಿ ಆಡಿದ್ದು ಕೇವಲ ಒಂದು ಪಂದ್ಯ ಮಾತ್ರ ಅಲ್ಲದೆ ಲೀಗ್‌ನಲ್ಲೇ ಪಾಕ್ ತಂಡ ಹೊರಬಿದ್ದ ಕಾರಣ ಉಳಿದ ದೇಶಗಳ ಪಂದ್ಯಗಳಿಗೆ ಪ್ರೇಕ್ಷಕರು ಕೂಡ ಸ್ಟೇಡಿಯಂಗೆ ಆಗಮಿಸಲಿಲ್ಲ. ಹೀಗಾಗಿ ಟಿಕೆಟ್ ಕಲೆಕ್ಷನ್‌ನಲ್ಲಿಯೂ ಹೊಡೆತ ಬಿತ್ತು.
ಆಗಿರುವ ನಷ್ಟದಿಂದಾಗಿ ಪಾರಾಗಲು ಪಾಕ್ ಕ್ರಿಕೆಟ್ ಮಂಡಳಿ ಕ್ರಿಕೆಟ್ ಆಟಗಾರರ ವೇತನ ಕಡಿತಕ್ಕೆ ಮುಂದಾಗಿದೆ. ವರದಿಗಳ ಪ್ರಕಾರ ಮುಂಬರುವ ರಾಷ್ಟ್ರೀಯ ಟಿ 20 ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುವ ಕ್ರಿಕೆಟಿಗರ ಪಂದ್ಯದ ಶುಲ್ಕವನ್ನು ಪಿಸಿಬಿ ಪ್ರತಿ ಪಂದ್ಯಕ್ಕೆ 100,000 ಪಾಕಿಸ್ತಾನಿ ರೂಪಾಯಿಗಳಿಂದ 10,000ಕ್ಕೆ ಇಳಿಸಲಿದೆ ಎನ್ನಲಾಗಿದೆ.