Viral News: ಅಬ್ಬಾ...! ಫ್ಲೈಟ್‌ನಲ್ಲಿ ಆಹಾರ ಸೇವಿಸಿದ್ರೆ ದೇವರೇ ಗತಿ- ಏನಿದು ಘಟನೆ?
ಅಬುಧಾಬಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಕ್ಯಾಮರೂನ್ ಕ್ಯಾಲಘನ್ ಎಂಬಾತ ವಿಮಾನದಲ್ಲಿ ನೀಡಿದ ಚಿಕನ್ ಪಾಸ್ತಾ ತಿಂದ ನಂತರ ಆರು ಗಂಟೆಗಳ ಪ್ರಯಾಣದಲ್ಲಿ 30 ಬಾರಿ ವಾಂತಿ ಭೇದಿ ಮಾಡಿದ್ದಾನೆ. ತನ್ನ ಈ ಸ್ಥಿತಿಗೆ ವಿಮಾನದಲ್ಲಿ ನೀಡಿದ ಊಟವೇ ಕಾರಣವೆಂದು ಆತ ದೂಷಿಸಿದ್ದಾನೆ. ಆ ಊಟದಲ್ಲಿ ಕೆಟ್ಟ ವಾಸನೆ ಬರುತ್ತಿತ್ತು ಎಂದು ಆತ ಆರೋಪಿಸಿದ್ದಾನೆ. ಆದರೆ ವಿಮಾನ ಸಂಸ್ಥೆ ಅವನ ಆರೋಪವನ್ನು ತಳ್ಳಿಹಾಕಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News)ಆಗಿದೆ.


ಅಬುಧಾಬಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಪ್ರಯಾಣದ ಸಮಯದಲ್ಲಿ ವಿಮಾನದಲ್ಲಿ ಆಹಾರ ಸೇವಿಸಿದ್ದು ಅದರಿಂದ ಫುಡ್ ಪಾಯಿಸನ್ ಆಗಿದೆ ಎಂದು ವರದಿ ಮಾಡಿದ್ದಾನೆ. ಮ್ಯಾಂಚೆಸ್ಟರ್‌ನಿಂದ ಅಬುಧಾಬಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಕ್ಯಾಮರೂನ್ ಕ್ಯಾಲಘನ್ ಎಂಬಾತ ವಿಮಾನದಲ್ಲಿ ಊಟ ಸೇವಿಸಿದ ನಂತರ ಬಹಳ ತೊಂದರೆ ಅನುಭವಿಸಿದ್ದಾನಂತೆ. ವಿಮಾನದಲ್ಲಿ ತಿಂದ ಚಿಕನ್ ಪಾಸ್ತಾದಿಂದಾಗಿ ಹೀಗಾಗಿದೆ. ವಿಮಾನ ಸಿಬ್ಬಂದಿಗಳು ನೀಡಿದ್ದ ಊಟದಲ್ಲಿ ಕೆಟ್ಟ ವಾಸನೆ ಬರುತ್ತಿತ್ತು ಎಂದು ಆತ ಆರೋಪಿಸಿದ್ದಾನೆ. ಈ ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.
ಥೈಲ್ಯಾಂಡ್ ರಜೆಗೆ ತೆರಳುತ್ತಿದ್ದ ಬ್ರಿಟಿಷ್ ವ್ಯಕ್ತಿ ಕ್ಯಾಮರೂನ್ ಕ್ಯಾಲಘನ್ ವಿಮಾನದಲ್ಲಿ ನೀಡಿದ ಟೊಮೆಟೊ, ಚೀಸ್ ಚಿಕನ್ ಪಾಸ್ತಾ ಸೇವಿಸಿದ ನಂತರ ಪ್ರಯಾಣದ ಸಮಯದಲ್ಲಿ ಆತ ಹೊಟ್ಟೆನೋವಿನಿಂದ ಬಳಲಿದ್ದು ಅಲ್ಲದೇ, 30 ಬಾರಿ ಮೂತ್ರ ವಿಸರ್ಜನೆ, ಹಾಗೂ ಭೇದಿ ಕೂಡ ಆಗಿದೆಯಂತೆ. ಯುಎಇ ಮೂಲಕ ಬ್ಯಾಂಕಾಕ್‍ಗೆ ತೆರಳುತ್ತಿದ್ದ ಕಾಲಘನ್, ಊಟದಲ್ಲಿ ವಿಚಿತ್ರ ವಾಸನೆ ಬರುತ್ತಿದ್ದರೂ ಹಸಿದಿದ್ದರಿಂದ ಅದನ್ನು ಸೇವಿಸಿದ್ದಾನೆ. ಆದರೆ ಊಟ ಮಾಡಿದ ಕೆಲವೇ ನಿಮಿಷಗಳಲ್ಲಿ, ಆತನ ಆರೋಗ್ಯ ಸ್ಥಿತಿ ಹದಗೆಟ್ಟಿತು. ಪದೇ ಪದೆ ಭೇದಿ ಕೂಡ ಆಗಿದೆಯಂತೆ. ಹಾಗೇ ಹೊಟ್ಟೆ ನೋವಿನ ಬಗ್ಗೆ ಕ್ಯಾಬಿನ್ ಸಿಬ್ಬಂದಿಗೆ ದೂರು ನೀಡಿದ್ದಾನೆ ಎನ್ನಲಾಗಿದೆ. ತನ್ನ ಈ ಸ್ಥಿತಿಗೆ ವಿಮಾನದಲ್ಲಿ ನೀಡಿದ ಆಹಾರವೇ ಕಾರಣ ಎಂದು ಆತ ದೂಷಿಸಿದ್ದಾನೆ.ಈ ಪರಿಸ್ಥಿತಿಯಿಂದಾಗಿ , ಕ್ಯಾಲಘನ್‍ಗೆ ಅನುಕೂಲವಾಗುವಂತೆ ವಿಮಾನದ ಅವಧಿಯುದ್ದಕ್ಕೂ ಶೌಚಾಲಯವನ್ನು ಖಾಲಿ ಇಡಲಾಗಿದೆಯಂತೆ.
ವಿಮಾನ ಸಂಸ್ಥೆಯವರು ಅವನ ಅನಾರೋಗ್ಯ ಕೆಡುವುದಕ್ಕೆ ಕಾರಣ ವಿಮಾನದಲ್ಲಿ ನೀಡಲಾದ ಊಟ ಕಾರಣವಲ್ಲ ಎಂದು ಅವನ ಆರೋಪವನ್ನು ತಳ್ಳಿಹಾಕಿದ್ದಾರೆ. ಹಾಗೇ ಈ ಊಟ ಸೇವಿಸಿದ ಇತರ ಪ್ರಯಾಣಿಕರಲ್ಲಿ ಈ ಸಮಸ್ಯೆ ಕಂಡುಬಂದಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ವಿಮಾನದಲ್ಲಿ ಹೋಳಿ ಡ್ಯಾನ್ಸ್ ಮಾಡಿದ ಸ್ಪೈಸ್ ಜೆಟ್ ಕ್ಯಾಬಿನ್ ಸಿಬ್ಬಂದಿ; ವಿಡಿಯೊ ವೈರಲ್
ಆಹಾರ ವಿತರಣೆ ಕೇಂದ್ರಗಳ ಮೇಲೆ ದಾಳಿ
ಇತ್ತೀಚೆಗಷ್ಟೇ ಇಂಡಿಗೋ ಏರ್‌ಲೈನ್ಸ್‌ಗೆ ಪೂರೈಕೆ ಮಾಡುವ ಹೈದರಾಬಾದ್‌ನ ಐಡಿಎ ಇನ್ ಸ್ಟಾ ಹಟ್ ಆಹಾರ ಪೂರೈಕೆ ನಿಗಮಕ್ಕೆ ತೆಲಂಗಾಣದ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದು, ಅನೇಕ ನೈರ್ಮಲ್ಯ ಉಲ್ಲಂಘನೆಗಳನ್ನು ಬಹಿರಂಗಪಡಿಸಿದ್ದಾರೆ. ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯು ಹೈದರಾಬಾದ್‌ನ ಪತಂಚೆರುವಿನ ಆಹಾರ ವಿತರಣೆ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದು ಆಹಾರ ಪೂರೈಕೆಯಲ್ಲಿ ಹಲವು ನಿಯಮಗಳು ಉಲ್ಲಂಘನೆಯಾಗಿವೆ ಎಂದು ತಿಳಿಸಿವೆ. ಆಹಾರ ಸುರಕ್ಷತಾ ಅಧಿಕಾರಿಗಳು ಇತರ ಹಲವು ನೈರ್ಮಲ್ಯ ಸಮಸ್ಯೆಗಳನ್ನು ಬಹಿರಂಗ ಪಡಿಸಿದ್ದಾರೆ. ಕೆಲವು ತರಕಾರಿಗಳು ಹಾಳಾಗಿ ಕೊಳೆತು ಹೋಗಿದ್ದು ಅಸಮರ್ಪಕ ವಾಗಿ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ತುಕ್ಕು ಹಿಡಿದ ಚರಣಿ ಬಳಕೆ, ನೆಲದ ಮೇಲೆ ಸಂಗ್ರಹಿಸಲಾದ ಕೆಲವು ವಸ್ತು, ಡಸ್ಟ್‌ಬಿನ್‌ಗಳನ್ನು ನಿರ್ವಹಣೆ ಮಾಡದಿರುವುದು, ಪ್ಯಾಕಿಂಗ್ ಸಾಮಗ್ರಿಗಳ ಪರೀಕ್ಷಾ ದಾಖಲೆಗಳು ಇಲ್ಲದಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದಾರೆ.