ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aamir Khan: ಆಮೀರ್‌ ಖಾನ್‌ ಜತೆ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ? ಸೀಕ್ರೆಟ್‌ ರಿವೀಲ್‌ ಮಾಡಿದ ಗೌರಿ ಸ್ಪ್ರಾಟ್‌

Gauri Spratt-Aamir Khan: ಇತ್ತೀಚೆಗೆ ಬಾಲಿವುಡ್‌ ಸೂಪರ್‌ ಸ್ಟಾರ್‌ ಆಮೀರ್‌ ಖಾನ್‌ ತಮ್ಮ ಪ್ರೇಯಸಿ ಗೌರಿ ಸ್ಟ್ರಾಟ್‌ ಅವರನ್ನು ಪರಿಚಯಿಸಿದ್ದಾರೆ. ಅದಾದ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಗೌರಿ ತಾವು ಆಮೀರ್‌ ಖಾನ್‌ನನ್ನು ಯಾಕಾಗಿ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡೆ ಎನ್ನುವುದನ್ನು ವಿವರಿಸಿದ್ದಾರೆ.

ಆಮೀರ್‌ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ? ಮುಕ್ತವಾಗಿ ಪ್ರತಿಕ್ರಿಯಿಸಿದ ಗೌರಿ

ಗೌರಿ ಸ್ಟ್ರಾಟ್‌ ಮತ್ತು ಆಮೀರ್‌ ಖಾನ್‌.

Profile Ramesh B Mar 17, 2025 6:38 PM

ಮುಂಬೈ: ಈಗಾಗಲೇ 2 ಬಾರಿ ಡಿವೋರ್ಸ್‌ ಪಡೆದುಕೊಂಡಿರುವ ಬಾಲಿವುಡ್‌ ಸೂಪರ್‌ ಸ್ಟಾರ್‌ ಆಮೀರ್‌ ಖಾನ್‌ (Aamir Khan) ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿರುವುದಾಗಿ ಘೋಷಿಸುವ ಮೂಲಕ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡ ಆಮೀರ್‌ ಖಾನ್‌ ಈ ವೇಳೆ ತಮ್ಮ ಹೊಸ ಪ್ರೇಯಸಿ ಗೌರಿ ಸ್ಟ್ರಾಟ್‌ (Gauri Spratt) ಅವರನ್ನು ಪರಿಚಯಿಸಿದ್ದಾರೆ. ಬೆಂಗಳೂರು ಮೂಲದ ಗೌರಿ ಮತ್ತು ಆಮೀರ್‌ ಖಾನ್‌ ಕಳೆದ ಒಂದೂವರೆ ವರ್ಷಗಳಿಂದ ಡೇಟಿಂಗ್‌ ನಡೆಸುತ್ತಿದ್ದಾರೆ. ಆಮೀರ್‌ ಖಾನ್‌ ಅವರ ಪ್ರೊಡಕ್ಷನ್‌ ಹೌಸ್‌ನಲ್ಲಿ ಕೆಲಸ ಮಾಡುತ್ತಿರುವ ಗೌರಿ ತಾವು ಹೇಗೆ ಬಾಲಿವುಡ್‌ ಮಿಸ್ಟರ್‌ ಪರ್ಫೆಕ್ಷನಿಸ್ಟ್ ಪ್ರೀತಿಯಲ್ಲಿ ಬಿದ್ದೆ ಎನ್ನುವುದನ್ನು ವಿವರಿಸಿದ್ದಾರೆ.

ಅಮೀರ್‌ ಖಾನ್‌ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಗೌರಿ ಈ ವೇಳೆ ಮುಕ್ತವಾಗಿ ಮಾತನಾಡಿದ್ದಾರೆ. ಸಂಗಾತಿಯನ್ನಾಗಿ ಆಮೀರ್‌ ಖಾನ್‌ ಅವರನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ಮಾಧ್ಯಮದ ಮುಂದೆ ಕಾಣಿಸಿಕೊಂಡ ಗೌರಿ ಸ್ಟ್ರಾಟ್‌. ವೈರಲ್‌ ಪೋಸ್ಟ್‌ ನೋಡಿ:

ಗೌರಿ ಹೇಳಿದ್ದೇನು?

"ನನಗೆ ಸಂಭಾವಿತ ಮತ್ತು ಕಾಳಜಿ ವಹಿಸುವ ವ್ಯಕ್ತಿಯ ಅಗತ್ಯವಿತ್ತು" ಎಂದು ಅವರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಮೀರ್, "ಇಷ್ಟೆಲ್ಲ ಆದ ಮೇಲೆ ನೀವು ನನ್ನನ್ನು ಕಂಡುಕೊಂಡಿದ್ದೀರಾ?" ಎಂದು ಕೇಳಿದ್ದಾರೆ. 25 ವರ್ಷಗಳ ಹಿಂದೆಯೇ ಪರಿಚಿತರಾಗಿದ್ದ ಆಮೀರ್‌ ಮತ್ತು ಗೌರಿ ಬಳಿಕ ಯಾವುದೇ ಸಂಪರ್ಕದಲ್ಲಿರಲಿಲ್ಲ. 2 ವರ್ಷಗಳ ಬಳಿಕ ಮತ್ತೆ ಭೇಟಿಯಾಗಿದ್ದ ಇವರ ಮಧ್ಯೆ ಪ್ರೀತಿ ಚಿಗುರೊಡೆದಿತ್ತು. ʼʼನನಗಾಗಿ ಸಮಯ ಮೀಸಲಿಡುವ ಸಂಗಾತಿಗಾಗಿ ನಾನು ಹುಡುಕಾಡುತ್ತಿದ್ದೆ. ಗೌರಿ ಸಿಕ್ಕದರು. ಇವರು ನನ್ನ ಮನಸ್ಥಿತಿಗೆ ಹೊಂದಾಣಿಕೆಯಾಗುತ್ತಾರೆ ಎನಿಸಿತು. ಹೀಗೆ ನಮ್ಮ ನಡುವೆ ಉತ್ತಮ ಬಾಂಧವ್ಯ ಮೂಡಿತುʼʼ ಎಂದು ಆಮೀರ್‌ ಖಾನ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Amir Khan: ಬೆಂಗಳೂರಿನ ಮೂಲದ ಗೌರಿ ಸ್ಪ್ರಾಟ್ ಜೊತೆ ಆಮೀರ್‌ ಖಾನ್‌ ರಿಲೇಷನಶಿಪ್‌; ಯಾರೀಕೆ? ಹಿನ್ನೆಲೆಯೇನು?

ಆಮೀರ್‌ ಖಾನ್‌ನ ಎರಡೇ ಸಿನಿಮಾ ನೋಡಿರುವ ಗೌರಿ

ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರೂ ಗೌರಿ ಸಿನಿಮಾ ವೀಕ್ಷಿಸುವುದು ಕಡಿಮೆಯಂತೆ. ಇದುವರೆಗೆ ಅವರು ಆಮೀರ್‌ ಖಾನ್‌ ಅವರ ಎರಡೇ ಚಿತ್ರ ವೀಕ್ಷಿಸಿದ್ದಾಗಿ ತಿಳಿಸಿದ್ದಾರೆ. ʼʼಗೌರಿ ಅವರು ಹಿಂದಿ ಚಿತ್ರಗಳನ್ನು ವೀಕ್ಷಿಸುವುದು ಬಹಳ ಕಡಿಮೆ. ಅವರು ಇದುವರೆಗೆ ನನ್ನ ʼದಿಲ್‌ ಚಾಹ್ತಾ ಹೆʼ ಮತ್ತು ʼಲಗಾನ್‌ʼ ಸಿನಿಮಾಗಳನ್ನು ಮಾತ್ರ ನೋಡಿದ್ದಾರೆ. ಅವರು ʼತಾರೆ ಝಮೀನ್‌ ಪರ್‌ʼ ಚಿತ್ರ ನೋಡಬೇಕು ಎಂಬುದು ನನ್ನ ಆಸೆʼʼ ಎಂದು ಆಮೀರ್‌ ಖಾನ್‌ ಹೇಳಿದ್ದಾರೆ.

ʼʼಗೌರಿ ನನ್ನನ್ನು ಸೂಪರ್‌ ಸ್ಟಾರ್‌ ಆಗಿ ನೋಡುತ್ತಿಲ್ಲ. ನಟನ ಬದಲು ಅವರಿಗೆ ನನ್ನಲ್ಲಿ ಉತ್ತಮ ಸಂಗಾತಿ ಕಾಣಿಸುತ್ತಿದ್ದಾನೆʼʼ ಎಂದು ಆಮೀರ್‌ ಖಾನ್‌ ವಿವರಿಸಿದ್ದಾರೆ. ಗೌರಿ ಅವರಿಗೆ 6 ವರ್ಷದ ಮಗನಿದ್ದಾನೆ. ಗೌರಿ 2004ರಲ್ಲಿ ಲಂಡನ್‌ನ ಕಲಾ ವಿಶ್ವವಿದ್ಯಾಲಯದಿಂದ ಎಫ್‌ಡಿಎ ಸ್ಟೈಲಿಂಗ್ ಮತ್ತು ಛಾಯಾಗ್ರಹಣ ಎಂಬ ಫ್ಯಾಷನ್ ಕೋರ್ಸ್ ಮಾಡಿದ್ದಾರೆ. ಸದ್ಯ ಅವರು ಮುಂಬೈನಲ್ಲಿ ಬಿಬ್ಲಂಟ್ ಸಲೂನ್ ಹೊಂದಿದ್ದಾರೆ.