ಬಿಸಿಸಿ ವತಿಯಿಂದ ಯುಗಾದಿ ಕ್ರಿಕೆಟ್ ಟ್ರೋಫಿ ಪಂದ್ಯಾವಳಿಗಳು
೨೦೦೨ರಲ್ಲಿ ಶ್ರೀಲಂಕಾದೊಂದಿಗೆ ಜಂಟಿಯಾಗಿ ಪ್ರಶಸ್ತಿ ಹಂಚಿಕೊಂಡಿತ್ತು. ಇತ್ತೀಚಿಗೆ ನಡೆದ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ೨೫೨ ರನ್ ಗುರಿ ಬೆನ್ನಟ್ಟಿದ ಭಾರತ ೪೯ ಓವರ್ ಗಳಲ್ಲಿ ೬ ವಿಕೆಟ್ ಕಳೆದು ಕೊಂಡು ೪ ವಿಕೆಟ್ ಜಯದೊಂದಿಗೆ ೨೫೪ ರನ್ ಗಳೊಂದಿಗೆ ರೋಚಕ ಜಯದ ಪ್ರಶಸ್ತಿ ಪಡೆದು ಕೊಂಡಿದೆ

ನಗರದ ಆಚಾರ್ಯ ಕೃಷಿ ಮೈದಾನದಲ್ಲಿ ಇಂದು ಗೌರಿಬಿದನೂರಿನ ಕ್ರಿಕೆಟ್ ಕ್ರೀಡಾ ಪ್ರೇಮಿಗಳು ಇದೇ ತಿಂಗಳ ಮಾರ್ಚ್ ೯ ನಡೆದ ಐಸಿಸಿ ಚಾಂಪಿಯನ್ ಟ್ರೋಫಿ ಪಂದ್ಯಾವಳಿಗಳಲ್ಲಿ ವಿಜೇತರಾದ ಭಾರತ ತಂಡದ ರೋಹಿತ್ ಶರ್ಮಾ ಪಡೆಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಗೌರಿಬಿದನೂರು : ನಗರದ ಆಚಾರ್ಯ ಕೃಷಿ ಮೈದಾನದಲ್ಲಿ ಇಂದು ಗೌರಿಬಿದನೂರಿನ ಕ್ರಿಕೆಟ್ ಕ್ರೀಡಾ ಪ್ರೇಮಿಗಳು ಇದೇ ತಿಂಗಳ ಮಾರ್ಚ್ ೯ ನಡೆದ ಐಸಿಸಿ ಚಾಂಪಿಯನ್ ಟ್ರೋಫಿ ಪಂದ್ಯಾ ವಳಿಗಳಲ್ಲಿ ವಿಜೇತರಾದ ಭಾರತ ತಂಡದ ರೋಹಿತ್ ಶರ್ಮಾ ಪಡೆಗೆ ಅಭಿನಂದನೆಗಳನ್ನು ಸಲ್ಲಿಸಿ ದರು. ಕ್ರೀಡಾ ಪ್ರೇಮಿ ಮತ್ತು ತೀರ್ಥ ಶಾಲೆಯ ಅಧ್ಯಕ್ಷರಾದ ಡಾ.ಕೆ.ವಿ.ಪ್ರಕಾಶ್ ಮಾತನಾಡಿ, ೧೨ ವರ್ಷಗಳ ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಮಗೆ ಒಲಿದಿದೆ. ಇದರೊಂದಿಗೆ ಈ ಟೂರ್ನಿ ಇತಿಹಾಸದಲ್ಲಿ ಭಾರತವು ಮೂರನೇ ಬಾರಿ ಪ್ರಶಸ್ತಿ ಗೆದ್ದಿತು. ೨೦೦೨ರಲ್ಲಿ ಶ್ರೀಲಂಕಾದೊಂದಿಗೆ ಜಂಟಿಯಾಗಿ ಪ್ರಶಸ್ತಿ ಹಂಚಿಕೊAಡಿತ್ತು. ಇತ್ತೀಚಿಗೆ ನಡೆದ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ೨೫೨ ರನ್ ಗುರಿ ಬೆನ್ನಟ್ಟಿದ ಭಾರತ ೪೯ ಓವರ್ ಗಳಲ್ಲಿ ೬ ವಿಕೆಟ್ ಕಳೆದುಕೊಂಡು ೪ ವಿಕೆಟ್ ಜಯದೊಂದಿಗೆ ೨೫೪ ರನ್ ಗಳೊಂದಿಗೆ ರೋಚಕ ಜಯದ ಪ್ರಶಸ್ತಿ ಪಡೆದುಕೊಂಡಿದೆ ಎಂದು ಹರ್ಷವನ್ನು ವ್ಯಕ್ತಪಡಿಸಿ ದರು.
ಇದನ್ನೂ ಓದಿ: Sports: ಶಿಕ್ಷಣದ ಜೊತೆಗೆ ಸದೃಢ ದೇಹ ಹೊಂದಲು ಕ್ರೀಡೆ ಅತ್ಯವಶ್ಯ
ಬಿಸಿಸಿ ಸಂಚಾಲಕರಾದ ಮತ್ತು ಯೂನಿಯನ್ ಬ್ಯಾಂಕ್ ಪ್ರಬಂಧಕರಾದ ಎಂ. ಚಂದ್ರಶೇಖರ್ ಮಾತನಾಡಿ, ಪ್ರತಿ ದಿನ ಪ್ರಾತಃಕಾಲದಲ್ಲಿ ಕ್ರಿಕೆಟ್ ತಂಡಗಳ ಅಭ್ಯಾಸ ನಡೆಯುತ್ತಿದ್ದು, ವಾರಾಂತ್ಯದ ಬಿಡುವು ಭಾನುವಾರದಂದು ಕ್ರೀಡಾ ಸ್ಪರ್ಧಾ ಮನೋಭಾವದೊಂದಿಗೆ ಟೂರ್ನಿಗಳನ್ನು ನಡೆಸು ತ್ತಿದ್ದು, ಈ ತಿಂಗಳ ಕೊನೆಯ ವಾರದಲ್ಲಿ ಯುಗಾದಿ ಕ್ರಿಕೆಟ್ ಟ್ರೋಪಿ ಪಂದ್ಯಾವಳಿಗಳನ್ನು ಆಯೋ ಜಿಸಲಾಗುವುದು ಇದರಲ್ಲಿ ಆಸಕ್ತ ಕ್ರಿಕೆಟ್ ಕ್ರೀಡಾ ಪ್ರೇಮಿಗಳು ಮುಂಚಿತವಾಗಿಹೆಸರನ್ನು ನೋಂದಾ ಯಿಸಿಕೊಳ್ಳಬೇಕು. ಕ್ರೀಡೆಗಳ ಜೊತೆಗೆ ಸೈಕ್ಲಿಂಗ್, ಚಾರಣ, ವನವಿಹಾರ ಮುಂತಾದ ಚಟುವಟಿಕೆ ಗಳನ್ನು ನಡೆಸಲಾಗುವುದೆಂದು ತಿಳಿಸಿದರು.
ಟಿಸಿಸಿ ತಂಡದ ಉಪನಾಯಕ ಬಾಬಾ ಜಾನ್ ಮಾತನಾಡಿ, ಆಸಕ್ತ ಕ್ರಿಕೆಟ್ ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ ಕ್ರೀಡಾ ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ಕೊಟ್ಟರು.
ಕ್ರಿಕೆಟ್ ಟೂರ್ನಿಯಲ್ಲಿ ಟಿಸಿಸಿ ತಂಡದ ನಾಯಕರಾದ ಕೃಷ್ಣ, ಉಪನಾಯಕರಾದ ಬಾಬಾಜಾನ್, ಅನಂತರಾಜು, ಚಂದ್ರಶೇಖರ್, ಪ್ರತಾಪ್, ಮಂಜುನಾಥ್, ಶ್ರೀಧರ್, ಶ್ರೀನಿವಾಸ್, ಉಮೇಶ್, ಶಿವಪ್ರ ಸಾದ್ ಹಾಗೂ ಸಿಂಹಾದ್ರಿ ಮತ್ತು ಬಿಸಿಸಿ ತಂಡದ ಸದಸ್ಯರಾದ ಚಂದ್ರಶೇಖರ್, ನಾಗರಾಜ್, ಶ್ರೀನಿ ವಾಸ್, ಶ್ರೀಕಾಂತ್, ರಘು, ಗೌತಮ್ ಮೋದಿ, ಅಶೋಕ್, ಕಮಲ್, ಪವನ್,ವಿನೋದ್, ಲಾಲಿಂಗ್, ಶ್ರೀನಿವಾಸಲು ಮತ್ತಿತರ ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.