Road Accident: ಕಿಲ್ಲರ್ ಬಿಎಂಟಿಸಿ ಡಿಕ್ಕಿ, ಬೈಕ್ ಸವಾರ, ಪಾದಚಾರಿ ಬಲಿ
ಬೆಂಗಳೂರಿನಲ್ಲಿ ನಿಯಂತ್ರಣ ಕಳೆದುಕೊಂಡ ಬಿಎಂಟಿಸಿ ಬಸ್ಸುಗಳು ಬೈಕ್ ಸವಾರರ ಹಾಗೂ ಪಾದಚಾರಿಗಳ ಪ್ರಾಣ ತೆಗೆಯುವ ಘಟನೆಗಳು ಹೆಚ್ಚಾಗುತ್ತಿವೆ. ಮುರುಗೇಶ್ ಪಾಳ್ಯದಲ್ಲಿ ಬುಧವಾರ ಒಂದು ಬಿಎಂಟಿಸಿ ಬಸ್ಸು ಒಬ್ಬ ಬೈಕ್ ಸವಾರ ಹಾಗೂ ಪಾದಚಾರಿಯೊಬ್ಬರ ಜೀವವನ್ನು ಕಸಿದುಕೊಂಡಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನಲ್ಲಿ (Bengaluru news) ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಬಿಎಂಟಿಸಿ (BMTC Bus accident) ಬಸ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರಿನ ಹಳೆ ಏರ್ ಪೋರ್ಟ್ ರಸ್ತೆಯ ಮುರುಗೇಶ್ ಪಾಳ್ಯ ಸಿಗ್ನಲ್ ಬಳಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಹಾಗೂ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮುರುಗೇಶ್ ಪಾಳ್ಯ ಸಿಗ್ನಲ್‌ನಲ್ಲಿ ಬೈಕ್ ಸವಾರ ಯೂಟರ್ನ್ ತೆಗೆದುಕೊಳ್ಳುವಾಗ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನೆಲಕ್ಕಪ್ಪಳಿಸಿತು. ಸವಾರ ಹಾಗೂ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟವರ ವಿವರ ತಿಳಿದುಬರಬೇಕಿದೆ.
ಧಾರವಾಡದಲ್ಲಿ ಫ್ಯಾಕ್ಟರಿ ಗೋಡೆ ಕುಸಿದು ಇಬ್ಬರು ಸಾವು
ಧಾರವಾಡ : ಧಾರವಾಡ (Dharawada news) ಜಿಲ್ಲೆಯಲ್ಲಿ ಘೋರ ದುರಂತವೊಂದು (Tragedy) ಸಂಭವಿಸಿದೆ. ಕಾರ್ಖಾನೆಯ ನಿರ್ಮಾಣ ಹಂತದ ಗೋಡೆ ಗಾಳಿ ಮಳೆಗೆ ಕುಸಿದು (Building Collapse) ಇಬ್ಬರು ಕೂಲಿ (Coolie) ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಾಡನಕೊಪ್ಪ ಗ್ರಾಮದಲ್ಲಿ ನಿರ್ಮಾಣ ಹಂತದ ಕಾರ್ಖಾನೆ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಮೃತ ಕಾರ್ಮಿಕರನ್ನು ಹಳೇಹುಬ್ಬಳ್ಳಿಯ ಧಾರವಾಡ ಫ್ಲಾಟ್ ನ ನಿವಾಸಿ ದಾವೂದ್ ಸವಣೂರು (32) ಹಾಗೂ ಹಳೇಹುಬ್ಬಳ್ಳಿ ನೂರಾನಿ ಫ್ಲಾಟ್ ನಿವಾಸಿ ರಫಿಕ್ ಸಾಬ್ ಚನ್ನಾಪುರ (50) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ನಿರ್ಮಿಸಲಾಗುತ್ತಿರುವ ಫ್ಯಾಕ್ಟರಿಯ ದಾಖಲೆಗಳನ್ನು ಹಾಗೂ ಅನುಮತಿಗಳನ್ನು ಪರಿಶೀಲಿಸಲಾಗುತ್ತಿದ್ದು, ಮಾಲೀಕರನ್ನು ಹಾಗೂ ಸ್ಥಳದಲ್ಲಿದ್ದ ಇತರ ಕೂಲಿ ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ: Drowned: ಚಿಕ್ಕಮಗಳೂರು ರೆಸಾರ್ಟ್‌ನಲ್ಲಿ ಈಜುಕೊಳ ದುರಂತ, ಒಬ್ಬ ಸಾವು