Ugadi Fashion: ಯುಗಾದಿ ಹಬ್ಬದಂದು ಟ್ರೆಡಿಷನಲ್ ಲುಕ್‌ಗೆ ಹಲೋ ಹೇಳಿ!
Ugadi Fashion: ನಾವೆಲ್ಲಾ ಯುಗಾದಿ ಹಬ್ಬದಂದು ಹೊಸ ವರ್ಷವೆಂದು ಸಂಭ್ರಮಿಸುತ್ತೇವೆ. ಈ ಹಬ್ಬದಂದು ಎಲ್ಲರೂ ಆದಷ್ಟೂ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ವೆಸ್ಟರ್ನ್ ಔಟ್‌ಫಿಟ್‌ಗೆ ತಾತ್ಕಾಲಿಕವಾಗಿ ಬೈ ಹೇಳಿ! ಸಾಂಪ್ರಾದಾಯಿಕ ಉಡುಗೆಗಳಿಗೆ ಹಲೋ ಹೇಳಿ, ಹೊಸ ವರ್ಷವನ್ನು ಉಲ್ಲಾಸದಿಂದ ಸ್ವಾಗತಿಸಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಚಿತ್ರಕೃಪೆ: ಆದ್ಯ ಡಿಸೈನ್ ಸ್ಟುಡಿಯೋ, ರೂಪದರ್ಶಿಯರು: ಪೂನಂ, ಸುಚಿತ್ರಾ, ಪ್ರತಿಭಾ, ಲಕ್ಷ್ಮಿ, ಅಕ್ಷತಾ & ಸುಷ್ಮಾ.

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಯುಗಾದಿಯಂದು ಎಲ್ಲರೂ ಟ್ರೆಡಿಷನಲ್ ಲುಕ್‌ಗೆ ಹಲೋ ಹೇಳಿ! ಸದ್ಯ ವೆಸ್ಟರ್ನ್ ಲುಕ್ ನೀಡುವ ಜೀನ್ಸ್, ಟೀ ಶರ್ಟ್, ಪ್ಯಾಂಟ್‌ಗಳಿಗೆ ಬೈ ಹೇಳಿ! ಪಕ್ಕಾ ಟ್ರೆಡಿಷನಲ್ ಲುಕ್ ನೀಡುವಂತಹ ಟಿಪಿಕಲ್ ರೇಷ್ಮೆ ಸೀರೆ, ಲೆಹೆಂಗಾ, ಲಂಗ-ದಾವಣಿ, ಸಲ್ವಾರ್, ಗಾಗ್ರಾಗಳಿಗೆ ಹಾಯ್ ಹೇಳಿ! ಹಾಗೆನ್ನುತ್ತಾರೆ ಫ್ಯಾಷನಿಸ್ಟಾಗಳು. ಹೌದು, ಹಬ್ಬದ (Ugadi Fashion) ದಿನಕ್ಕಾದ್ರೂ ಸರಿ, ಪಕ್ಕಾ ಕನ್ನಡತಿಯರಂತೆ ಸಿಂಗರಿಸಿಕೊಳ್ಳಿ. ಸಖತ್ ಆಗಿ ಕಾಣಿಸಿಕೊಳ್ಳಿ ಎನ್ನುತ್ತಾರೆ ಆದ್ಯಾ ಡಿಸೈನ್ ಸ್ಟುಡಿಯೋದ ಡಿಸೈನರ್ ಪೂನಂ ಅರುಣ್. ಅಂದಹಾಗೆ, ಅವರು ಹೇಳೋದ್ರಲ್ಲೂ ಸತ್ಯ ಇದೆ. ನಮ್ ಲೇಡಿಸ್-ಹುಡುಗಿಯರು ಎಷ್ಟು ಕ್ಯಾಶುವಲ್ಸ್ ಡ್ರೆಸ್‌ಗಳನ್ನು ಹಾಕಿದ್ರೂ, ಹಬ್ಬ-ಹರಿದಿನ, ಮದುವೆ ಸಮಾರಂಭಗಳಲ್ಲಿ ನೀಟಾಗಿ ಸೀರೆ ಉಟ್ಕೊಂಡ್ರೆ. ಇಲ್ಲವೇ ಸಖತ್ತಾಗಿ ಕಾಣಿಸೋ ಸಲ್ವಾರ್ ಹಾಕಿಕೊಂಡ್ರೆ ದೇವತೆಯರಂತೆ ಕಾಣಿಸುತ್ತಾರೆ. ಸಿನಿಮಾ ಸೆಲೆಬ್ರೆಟಿಗಳನ್ನು ಮೀರಿಸುತ್ತಾರೆ.

ರೇಷ್ಮೆ ಸೀರೆಯ ಗಮ್ಮತ್ತು
ಇನ್ನು, ಕುಂದನ್, ಕಲಾಂಕಾರಿ, ಶಿಫಾನ್, ಕ್ರೇಪ್, ಜಾರ್ಜೆಟ್, ಕಾಟನ್ ಹೀಗೆ ನೂರಾರು ಬಗೆಯ ಸೀರೆಗಳು ಮಾರುಕಟ್ಟೆಗೆ ಕಾಲಿಟ್ಟರೂ ಕೂಡ ಬಗೆಬಗೆಯ ರೇಷ್ಮೆ ಸೀರೆಗಿರುವ ಬೇಡಿಕೆ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ.
ಕಾಂಚೀವರಂ, ಮೈಸೂರ್ ಸಿಲ್ಕ್, ಧರ್ಮಾವರಂ, ಬನಾರಸ್ ಹೀಗೆ ಹಳೆಯ ಶೈಲಿಯ ರೇಷ್ಮೆ ಸೀರೆಗಳು ಹೊಸ ಬಗೆಯ ತೂಕವಿಲ್ಲದ ಸಿಲ್ಕ್ ಸೀರೆಗಳ ನಡುವೆಯೂ ಇಂದಿಗೂ ತಮ್ಮ ಎವರ್‌ಗ್ರೀನ್ ಪಟ್ಟವನ್ನು ಉಳಿಸಿಕೊಂಡಿವೆ ಎನ್ನುತ್ತಾರೆ ಮಾಡೆಲ್‌ಗಳಾದ ಅಕ್ಷತಾ, ಸುಷ್ಮಾ, ಪ್ರತಿಭಾ, ಲಕ್ಷ್ಮಿ ಹಾಗೂ ಸುಚಿತ್ರಾ.

ರೇಷ್ಮೆ ಸೀರೆಯ ಸೊಬಗು
ಹಬ್ಬ-ಹರಿದಿನ, ಮದುವೆಯಂತಹ ಅದ್ಧೂರಿ ಸಮಾರಂಭಗಳಿಗೆ ಕಳೆಗಟ್ಟುವುದೇ ಸೀರೆಗಳು. ಇವುಗಳನ್ನು ಉಡುವುದರಿಂದ ಹೆಣ್ಣಿನ ಸೌಂದರ್ಯ ದುಪ್ಪಟ್ಟಾಗುತ್ತದೆ. ಹಬ್ಬದಂದು ಮಾನಿನಿಯರು ಟ್ರೆಡಿಷನಲ್ ಲುಕ್‌ಗಾಗಿ ರೇಷ್ಮೆ ಸೀರೆಯನ್ನು ಉಡಬಹುದು. ಗ್ಲಾಮರಸ್ ಲುಕ್ ಬೇಕು ಎನ್ನುವವರು ಈ ಸೀರೆಗಳಿಗೆ ಸ್ಲಿವ್‌ಲೆಸ್ ಬ್ಲೌಸ್, ಹಾಲ್ಟರ್ ಬ್ಲೌಸ್ ಮ್ಯಾಚ್ ಮಾಡಬಹುದು. ಆಯಾ ಸೀರೆಗೆ ತಕ್ಕಂತೆ ಸ್ಟೈಲಿಂಗ್ ಮಾಡಿದಲ್ಲಿ, ನೋಡಲು ಆಕರ್ಷಕವಾಗಿ ಕಾಣಿಸಬಹುದು ಎನ್ನುತ್ತಾರೆ ಆದ್ಯಾ ಡಿಸೈನರ್ ಪೂನಂ ಅರುಣ್.

ಟ್ರೆಡಿಷನಲ್ ಸೀರೆಗೆ ಆಕರ್ಷಕ ಬ್ಲೌಸ್
ಟ್ರೆಡಿಷನಲ್ ಸೀರೆಗಳಿಗೆ ನಾನಾ ಬಗೆಯ ಬ್ಲೌಸ್‌ಗಳು ಆಕರ್ಷಕವಾಗಿ ಕಾಣಿಸುತ್ತವೆ. ಉದಾಹರಣೆಗೆ., ಪ್ರಿಂಟೆಡ್ ರೇಷ್ಮೆ ಸೀರೆಗೆ ಆದಷ್ಟೂ ಸಾದಾ ಅಥವಾ ಸ್ಲಿವ್‌ಲೆಸ್ ನೆಕ್ ಡಿಸೈನ್ ಇರುವಂತಹ ಬ್ಲೌಸ್ ಫ್ರಿಫರ್ ಮಾಡಿ. ಇನ್ನು, ಸಾದಾ ಸೀರೆಗೆ ಪ್ರಿಂಟೆಡ್ ಅಥವಾ ಹೆವಿ ಡಿಸೈನ್ ಬ್ಲೌಸ್ ಧರಿಸಿ. ಇಂಡೋ-ವೆಸ್ಟರ್ನ್ ಲುಕ್‌ಗೆ ಕ್ರಾಪ್ ಟಾಪ್ ಧರಿಸಿ ಎನ್ನುತ್ತಾರೆ ಡಿಸೈನರ್ ಪೂನಂ ಅರುಣ್.
ಈ ಸುದ್ದಿಯನ್ನೂ ಓದಿ | Ugadi Jewel Fashion: ಯುಗಾದಿ ಹಬ್ಬದ ಸೀಸನ್‌ನಲ್ಲಿ ಟ್ರೆಡಿಷನಲ್ ಡಿಸೈನ್‌ನ ಆಭರಣಗಳಿಗೆ ಹೆಚ್ಚಾದ ಬೇಡಿಕೆ
ಟ್ರೆಡಿಷನಲ್ ರೇಷ್ಮೆ ಸೀರೆ ಪ್ರಿಯರಿಗೆ ಸಿಂಪಲ್ 3 ಟಿಪ್ಸ್
- ಉಡುವ ಸೀರೆಯ ಬಣ್ಣ ನಿಮ್ಮ ಸ್ಕಿನ್‌ಟೋನ್‌ಗೆ ಹೊಂದುವಂತಿರಲಿ.
- ಮೇಕಪ್ ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡುವಂತಿರಲಿ.
- ರೇಷ್ಮೆ ಸೀರೆ ಆದಷ್ಟೂ ಲೈಟ್‌ವೈಟ್ ಆಗಿರಲಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)