ORRA Jewellery: ಓರಾದೊಂದಿಗೆ ಈ ಯುಗಾದಿಯನ್ನು ಹಿಂದೆಂದಿಗಿಂತಲೂ ಉತ್ತಮವಾಗಿ ಆಚರಿಸಿ
Ugadi 2025: ಯುಗಾದಿ ಎಂದರೆ ಅದು ಹೊಸ ವರ್ಷದ ಪ್ರಾರಂಭ ಮಾತ್ರವಲ್ಲ. ಅದಕ್ಕಿಂತಲೂ ಹೆಚ್ಚಿನದ್ದು. ಅದು ಹೊಸ ಪ್ರಾರಂಭ, ನವೀಕರಿಸಿದ ಆಕಾಂಕ್ಷೆ ಮತ್ತು ಸಂಪತ್ತಿನ ಭರವಸೆಯ ಸಂಭ್ರಮಾಚರಣೆ ಎನಿಸಿಕೊಂಡಿದೆ. ಈ ಹಬ್ಬವು ಸೊಗಸು ಮತ್ತು ಅದೃಷ್ಟ ಹೊಂದಿದ್ದು ಸಮಯರಹಿತ ಸಂಪತ್ತುಗಳಲ್ಲಿ ತೊಡಗಿಕೊಂಡಿರುವ ಇದನ್ನು ವಜ್ರಗಳ ಶ್ರೇಷ್ಠತೆಯೊಂದಿಗೆ ನಿಮ್ಮನ್ನು ಅಲಂಕರಿಸಿಕೊಳ್ಳಲು ಪರಿಪೂರ್ಣ ಸಮಯ.

ಓರಾ ಜುವೆಲ್ಲರಿಯ ಇನ್‌ಸ್ಟಾಗ್ರಾಂ ಚಿತ್ರ.

ಬೆಂಗಳೂರು: ಯುಗಾದಿ (Ugadi 2025) ಎಂದರೆ ಅದು ಹೊಸ ವರ್ಷದ ಪ್ರಾರಂಭ ಮಾತ್ರವಲ್ಲ. ಅದಕ್ಕಿಂತಲೂ ಹೆಚ್ಚಿನದ್ದು. ಅದು ಹೊಸ ಪ್ರಾರಂಭ, ನವೀಕರಿಸಿದ ಆಕಾಂಕ್ಷೆ ಮತ್ತು ಸಂಪತ್ತಿನ ಭರವಸೆಯ ಸಂಭ್ರಮಾಚರಣೆ ಎನಿಸಿಕೊಂಡಿದೆ. ಈ ಹಬ್ಬವು ಸೊಗಸು ಮತ್ತು ಅದೃಷ್ಟ ಹೊಂದಿದ್ದು ಸಮಯರಹಿತ ಸಂಪತ್ತುಗಳಲ್ಲಿ ತೊಡಗಿಕೊಂಡಿರುವ ಇದನ್ನು ವಜ್ರಗಳ ಶ್ರೇಷ್ಠತೆಯೊಂದಿಗೆ ನಿಮ್ಮನ್ನು ಅಲಂಕರಿಸಿಕೊಳ್ಳಲು ಪರಿಪೂರ್ಣ ಸಮಯ. ಭಾರತದ ಅತ್ಯುತ್ತಮ ವಜ್ರದ ಡೆಸ್ಟಿನೇಷನ್ ಬ್ರ್ಯಾಂಡ್ ಆಗಿರುವ ಓರಾ ಜುವೆಲ್ಲರಿ (ORRA Fine Jewellery) ಪರಿಷ್ಕರಿಸಿದ ಕರಕುಶಲತೆ ಮತ್ತು ಸಮಕಾಲೀನ ಐಷಾರಾಮದ ಹೆಗ್ಗುರುತಾಗಿ ಮುಂದುವರಿದಿದೆ. ಯುಗಾದಿಯ ಗೌರವವಾಗಿ ಓರಾ ಬ್ರ್ಯಾಂಡ್ ಹೊಸ ಮತ್ತು ವಿಶೇಷವಾಗಿ ರೂಪಿಸಿದ ವಿಶಿಷ್ಟ ವಿನ್ಯಾಸಗಳನ್ನು ತಂದಿದ್ದು, ಅದು ದಕ್ಷಿಣ ಭಾರತದ ಸಂಪದ್ಭರಿತ ಪರಂಪರೆ ಮತ್ತು ಸಾಂಸ್ಕೃತಿಕ ಅದ್ಧೂರಿತನದಿಂದ ಸ್ಫೂರ್ತಿ ಪಡೆದಿದೆ.
ಈ ಸಂಗ್ರಹದ ಪ್ರಮುಖ ಆಕರ್ಷಣೆ ಸಾಂಪ್ರದಾಯಿಕ ಹಾರ. ಅದನ್ನು ಸೂಕ್ಷ್ಮವಾಗಿ ಹೊಳೆಯುವ ವಜ್ರಗಳಿಂದ ಮತ್ತು ಉಜ್ಬಲ ಹರಳುಗಳಿಂದ ವಿನ್ಯಾಸಗೊಳಿಸಲಾಗಿದೆ. ಜತೆಗೆ ಸೂಕ್ಷ್ಮವಾಗಿ ವಿನ್ಯಾಸಗೊಳಿಸಿದ ಇಯರ್ ರಿಂಗ್‌ಗಳೊಂದಿಗೆ ಧರಿಸಿದರೆ ಮೋಹಕವಾಗಿ ಕಾಣುತ್ತದೆ. ಗ್ರಾಹಕರು ಅವರ ಹಬ್ಬದ ನೋಟವನ್ನು ಬಹು ಪದರಗಳ ವಜ್ರದ ಸೆಟ್ ಮೂಲಕ ಉನ್ನತೀಕರಿಸಬಹುದು. ಸೂಕ್ಷ್ಮವಾಗಿ ಬಣ್ಣದ ಹರಳುಗಳನ್ನು ಹೊಂದಿದ್ದು, ಇದು ಕಾಂಜೀವರಂ ಸೀರೆಯೊಂದಿಗೆ ಸಮಯರಹಿತ ಸೊಗಸನ್ನು ಬಿಂಬಿಸುತ್ತದೆ.
ಓರಾ ಜುವೆಲ್ಲರಿಯ ಪೋಸ್ಟ್:
ಈ ಸುದ್ದಿಯನ್ನೂ ಓದಿ: Birla Opus Paints: ಕರ್ನಾಟಕದಲ್ಲಿ ಒಂದೇ ದಿನ 17 ಹೊಸ ಫ್ರಾಂಚೈಸಿ ಮಳಿಗೆ ತೆರೆದ ಬಿರ್ಲಾ ಒಪಸ್ ಪೇಂಟ್ಸ್
ಓರಾ ಫೈನ್ ಜುವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕ ದೀಪು ಮೆಹ್ತಾ ಮಾತನಾಡಿ, “ಓರಾದಲ್ಲಿ ನಾವು ಪ್ರತಿ ಸಂಭ್ರಮಾಚರಣೆಗೂ ವಜ್ರದ ಶ್ರೇಷ್ಠತೆ ಅಗತ್ಯ ಎಂದು ನಂಬುತ್ತೇವೆ. ಯುಗಾದಿ ಅದಕ್ಕೆ ಹೊರತಾಗಿಲ್ಲ. ಯುಗಾದಿಗೆ ನಾವು ವಿಶೇಷವಾಗಿ ವಿನ್ಯಾಸಗೊಳಿಸಿದ ಆಭರಣ ವಿನ್ಯಾಸಗಳು ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಗೌರವವಾಗಿದ್ದು, ಅದು ಕಲಾತ್ಮಕತೆಯನ್ನು ಸಮಕಾಲೀನ ಸೊಗಸಿನೊಂದಿಗೆ ಸಂಯೋಜಿಸುತ್ತದೆ. ನಾವು ಗ್ರಾಹಕರನ್ನು ಈ ಹಬ್ಬದ ಸ್ಫೂರ್ತಿಯನ್ನು ಓರಾದ ವಿಶೇಷ ಕ್ರಿಯೇಷನ್‌ಗಳೊಂದಿಗೆ ಸಂಭ್ರಮಿಸಲು ಮತ್ತು ಪ್ರತಿ ಕ್ಷಣವನ್ನೂ ನಿಜಕ್ಕೂ ಅವಿಸ್ಮರಣೀಯವಾಗಿಸಲು ಆಹ್ವಾನಿಸುತ್ತೇವೆ” ಎಂದಿದ್ದಾರೆ.
ನಮ್ಮ ಹಬ್ಬದ ಕೊಡುಗೆಗಳ ಆಚೆಗೂ ಓರಾ ಗ್ರಾಹಕರಿಗೆ ಅವರ ವಜ್ರಗಳು ಮತ್ತು ಆಯ್ಕೆಗಳಿಗೆ ಪೂರಕವಾಗಿ ಆಸ್ಟ್ರಾ ಮತ್ತು ಕ್ರೌನ್ ಸ್ಟಾರ್ ಸಾಲಿಟೇರ್ ಸಂಗ್ರಹದೊಂದಿಗೆ ವಿವಾಹದ ಸಂಗ್ರಹ - ಏಕ್ತಾ ಪೂರೈಸುತ್ತಿದೆ. ಶ್ರೇಷ್ಠತೆಗೆ ಸರಿಸಾಟಿ ಇರದ ಬದ್ಧತೆಯೊಂದಿಗೆ ಓರಾ ಆಕರ್ಷಕ ಸ್ಟೇಟ್‌ಮೆಂಟ್ ಆಭರಣಗಳನ್ನು ತಂದಿದ್ದು ಅದರಲ್ಲಿ ಬಣ್ಣದ ಕಲ್ಲುಗಳಿಂದ ಕೂಡಿದ ಆಕರ್ಷಕ ವಜ್ರದ ನೆಕ್ಲೇಸ್ ಗಳಿಂದ ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾದ ಆಭರಣದ ಬಾಕ್ಸ್ ಸೆಟ್‌ಗಳಿವೆ. ಪ್ರತಿಯೊಂದನ್ನೂ ಈ ಹಬ್ಬದ ಋತುವಿನಲ್ಲಿ ಪ್ರತಿ ಕ್ಷಣವೂ ಅವಿಸ್ಮರಣೀಯವಾಗಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಈ ಯುಗಾದಿಯನ್ನು ಓರಾದ ಶ್ರೇಷ್ಠತೆಯೊಂದಿಗೆ ಸಂಭ್ರಮಿಸಿ. ಮಳಿಗೆಗೆ ಭೇಟಿ ನೀಡಿ ನಮ್ಮ ಸಂಗ್ರಹಗಳನ್ನು ಪರಿಶೀಲಿಸಿ ಎಂದು ದೀಪು ಮೆಹ್ತಾ ಕರೆ ನೀಡಿದ್ದಾರೆ. ಕೆಲವು ವಿಶೇಷ ಕೊಡುಗೆಗಳು ಹೀಗಿವೆ:
- ವಜ್ರದ ಮೌಲ್ಯದಲ್ಲಿ ಶೇ. 25ರಷ್ಟು ಕಡಿತ
- ಇಎಂಐ ಸೌಲಭ್ಯಗಳ ಮೇಲೆ ಶೇ. 0 ಬಡ್ಡಿ
- ಹಳೆಯ ಚಿನ್ನದ ಆಭರಣದ ಮೇಲೆ ಶೇ. 100 ವಿನಿಮಯ ಮೌಲ್ಯ