ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nayana Motamma: ನಯನಾ ಮೋಟಮ್ಮಗೆ ಮಾರ್ಗದರ್ಶನ ನೀಡುವ ಆಧ್ಯಾತ್ಮ ಗುರು ಯಾರು? ಯಾವ ದೇವರನ್ನು ಆರಾಧಿಸುತ್ತಾರೆ?

ವಿದೇಶದಲ್ಲಿ ಶಿಕ್ಷಣ ಪಡೆದ ನಯನಾ ಮೋಟಮ್ಮ ಕರ್ನಾಟಕದ ಹೈಕೋರ್ಟ್ ವಕೀಲ ವೃತ್ತಿಯಲ್ಲಿ ಇದ್ದರೂ ತಾಯಿಯಂತೆ ರಾಜಕೀಯ ಕ್ಷೇತ್ರಕ್ಕೆ ಆಗಮಿಸಿ ಜನರ ಬೇಕು ಬೇಡಗಳಿಗೆ ಧ್ವನಿಯಾಗಿದ್ದಾರೆ‌‌. ಚುರುಕಿನ ವಕ್ತಿತ್ವ, ಉತ್ತಮ ಮಾತುಗಾರಿಕೆ ಕಲೆ ಹೊಂದಿರುವ ನಯನಾ ಮೋಟಮ್ಮ ಇದೀಗ ವಿಶ್ವವಾಣಿ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ಇಂಟ್ರೆಸ್ಟಿಂಗ್‌ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಶೀಲಾ ಸಿ. ಶೆಟ್ಟಿ ಸಂದರ್ಶನದ ನಡೆಸಿದ್ದು, ಅದರ ಆಯ್ದ ಭಾಗ ಇಲ್ಲಿದೆ.

ನಯನಾ ಮೋಟಮ್ಮ ಅವರ ಆಧ್ಯಾತ್ಮಿಕ ಗುರು ಯಾರು?

ನಯನಾ ಮೋಟಮ್ಮ ಅವರೊಂದಿಗೆ ಸಂದರ್ಶಕಿ ಶೀಲಾ ಸಿ. ಶೆಟ್ಟಿ.

Profile Pushpa Kumari Mar 30, 2025 12:58 PM

ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕಿ ಹಾಗೂ ಮಾಜಿ ಸಚಿವೆ ಮೋಟಮ್ಮ (Motamma) ಅವರ ಪುತ್ರಿ ನಯನಾ ಮೋಟಮ್ಮ (Nayana Motamma) ಪ್ರಸ್ತುತ ಮೂಡಿಗೆರೆಯ ಶಾಸಕಿಯಾಗಿ ರಾಜ ಕೀಯ ಸವಾಲುಗಳನ್ನು ಸದೃಢವಾಗಿ ಎದುರಿಸುತ್ತಿದ್ದಾರೆ. 43 ವರ್ಷದ ನಯನಾ ಮೋಟಮ್ಮ ಪ್ರಸ್ತುತ ಕರ್ನಾಟಕ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಕಿರಿಯ ಶಾಸಕಿ ಎನಿಸಿಕೊಂಡಿದ್ದಾರೆ. ಇವರ ತಾಯಿ ಮೋಟಮ್ಮ ಅವರು ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕಿಯಾಗಿದ್ದು, ರಾಜ್ಯ ವಿಧಾನ ಪರಿಷತ್ತಿನಲ್ಲಿ ಮೊಟ್ಟ ಮೊದಲ ವಿರೋಧ ಪಕ್ಷದ ನಾಯಕಿ ಎಂಬ ಕೀರ್ತಿ ಇವರಿಗಿದೆ. ಇದೀಗ ಅವರ ಪುತ್ರಿ ಕೂಡ ರಾಜಕೀಯ ಕ್ಷೇತ್ರದಲ್ಲಿ ಬಹಳ ಸಕ್ರಿಯವಾಗಿದ್ದಾರೆ.

ವಿದೇಶದಲ್ಲಿ ಶಿಕ್ಷನ ಪೂರೈಸಿದ ನಯನಾ ಮೋಟಮ್ಮ ಕರ್ನಾಟಕದ ಹೈಕೋರ್ಟ್ ವಕೀಲ ವೃತ್ತಿಯಲ್ಲಿ ಇದ್ದರೂ ತಾಯಿಯಂತೆ ರಾಜಕೀಯ ಕ್ಷೇತ್ರಕ್ಕೆ ಆಗಮಿಸಿ ಜನರ ಬೇಕು-ಬೇಡಗಳಿಗೆ ಧ್ವನಿಯಾಗಿದ್ದಾರೆ‌‌. ಚುರುಕಿನ ವಕ್ತಿತ್ವ, ಉತ್ತಮ ಮಾತುಗಾರಿಕೆ ಕಲೆ ಹೊಂದಿರುವ ನಯನಾ ಮೋಟಮ್ಮ ಇದೀಗ ವಿಶ್ವವಾಣಿ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ಕುತೂಹಲಕರ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಅದರಲ್ಲೂ ಇವಿಗೆ ಮಾರ್ಗದರ್ಶನ ನೀಡುವ ಆಧ್ಯಾತ್ಮ ಗುರು ಯಾರು? ಯಾವ ದೇವರನ್ನು ಹೆಚ್ಚಾಗಿ ಆರಾಧಿಸುತ್ತಾರೆ ಎನ್ನುವ ವಿಚಾರವನ್ನು ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.



ದೇವಿಯನ್ನು ಹೆಚ್ಚು ಆರಾಧಿಸುವ ನಯನಾ ಮೋಟಮ್ಮ ತಮ್ಮ ಆಧ್ಮಾತ್ಮಿಕ ಗುರುವಿನ ಬಗ್ಗೆ ಮಾತನಾಡಿದ್ದಾರೆ. ರಾಜಕೀಯಕ್ಕೆ ಬಂದ ಮೇಲೆ ವಿನಯ್ ಗುರೂಜಿ ಪರಿಚಯವಾಗಿದ್ದು, ಅವರು ಹಲವು ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರಂತೆ. ಅವರಿಂದ ಪ್ರಭಾವಿತರಾಗಿದ್ದ ನಯನಾ ಮೋಟಮ್ಮ ಅವರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಕೂಡ ದೊರೆತಿದೆಯಂತೆ. ವಿನಯ್ ಗುರೂಜಿ ಅವರನ್ನು ತನ್ನ ಆಧ್ಮಾತ್ಮಿಕ ಗುರು ಎಂದು ನಯನಾ ಮೋಟಮ್ಮ ಹೇಳಿಕೊಂಡಿದ್ದು ಕಷ್ಟದ ಸಮಯದಲ್ಲೆಲ್ಲ ತಾನು ಅವರ ಬಳಿ ಸಲಹೆ ಕೇಳಿ ಪಡೆದಿದ್ದೇನೆ. ಗುರೂಜಿ ಅವರ ಉಪದೇಶಗಳು ತನಗೆ ಹೆಚ್ಚಿನ ಆತ್ಮ ಸ್ಥೈರ್ಯ ನೀಡಿದೆ. ರಾಜಕೀಯ ಹಾಗೂ ವೈಯಕ್ತಿಕ ಜೀವನದಲ್ಲೂ ಬದುಕಿಗೆ ಬೇಕಾದ ತಾಳ್ಮೆ, ಏಕಾಗ್ರತೆಯ ಪಾಠ ಅವರಿಂದ ಅರಿವಾಗಿದ್ದಾಗಿ ನಯನಾ ಮೋಟಮ್ಮ ತಿಳಿಸಿದ್ದಾರೆ.

ಅನೇಕ ಸಮಸ್ಯೆಯನ್ನು ನಯನಾ ಮೋಟಮ್ಮ ಅವರು ವಿನಯ್ ಗುರೂಜಿ ಅವರ ಬಳಿ ಹೇಳಿಕೊಳ್ಳುವ ಮುನ್ನವೆ ಅದಕ್ಕೆ ಪರಿಹಾರ ಕೂಡ ಸೂಚಿಸುತ್ತಿದ್ದರಂತೆ. ಆಧ್ಯಾತ್ಮಿಕ ಆಚಾರ ಪದ್ಧತಿಗಳ ಬಗ್ಗೆ ಕೂಲಂಕುಷವಾಗಿ ವಿನಯ್ ಗುರೂಜಿ ಅವರು ತಿಳಿಸಿದ್ದಾರೆ. ಅನೇಕ ಸಂದರ್ಭಗಳಲ್ಲಿ ಯಾವ ಸೂಚನೆ ನೀಡದೆಯೆ ಮುಂಬೈಯಲ್ಲಿರುವ ಗುರುಗಳ ಸಾನಿಧ್ಯಕ್ಕೆ ನಯನಾ ಮೋಟಮ್ಮ ಭೇಟಿ ನೀಡಿದಾಗಲೆಲ್ಲ ವಿನಯ್ ಗುರೂಜಿ ಕರೆ ಮಾಡಿ ತಲುಪಿದ್ದೀರಾ ಎಂದು ಕೇಳುತ್ತಿದ್ದರಂತೆ. ಹೀಗಾಗಿ ವಿನಯ್ ಗುರೂಜಿ ಅವರ ಮಾತು, ಉಪದೇಶ ತನಗೆ ಮಾರ್ಗದರ್ಶನ ವಿದ್ದಂತೆ ಎಂದು ನಯನಾ ಈ ಬಗ್ಗೆ ವಿವರಿಸಿದ್ದಾರೆ.

ಇದನ್ನು ಓದಿ: Internal reservation: ನ್ಯಾ. ನಾಗಮೋಹನದಾಸ್‌ ಆಯೋಗದಿಂದ ಇನ್ನೊಂದು ಒಳಮೀಸಲು ಸಮೀಕ್ಷೆಗೆ ಆದೇಶ

ನಯನಾ ಗರ್ಭಿಣಿ ಆಗಿದ್ದಾಗ ಸಾಕಷ್ಟು ಸಂದಿಗ್ಧ ಪರಿಸ್ಥಿತಿಯನ್ನು ದಾಟಿ ಹೊರಬರಲು ಇದೇ ಆಧ್ಯಾತ್ಮಿಕ ಮಾರ್ಗದರ್ಶನ ಪ್ರೇರಣೆ ಎಂದು ಹೇಳಿಕೊಂಡಿದ್ದಾರೆ. ಸುಮಾರು 8 ವರ್ಷದ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿಯೇ ಅನೇಕ ಪುಣ್ಯ ಕ್ಷೇತ್ರವಾದ ಉಜ್ಜೈನಿ, ತಿರುಪತಿ, ರಾಮೇಶ್ವರ, ಕೇದಾರನಾಥ ಕ್ಷೇತ್ರ ದರ್ಶನ ಮಾಡಿದ್ದಾಗಿ ನಯನಾ ಮೋಟಮ್ಮ ಅವರು ಆಧ್ಯಾತ್ಮ ಆಸಕ್ತಿಯ ಬಗ್ಗೆ ಹೇಳಿಕೊಂಡಿದ್ದಾರೆ.