ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Benkiya Bale Preethiya Kole Movie: ಮೈಸೂರಿನ ಶಿವಾಜಿ ನಿರ್ಮಾಣ, ನಟನೆ, ನಿರ್ದೇಶನದ ʼಬೆಂಕಿಯ ಬಲೆ ಪ್ರೀತಿಯ ಕೊಲೆʼ ಚಿತ್ರ ಏ. 4ಕ್ಕೆ ರಿಲೀಸ್‌

Benkiya Bale Preethiya Kole Movie: ಮೈಸೂರಿನ ಶಿವಾಜಿ ನಿರ್ಮಿಸಿ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿ, ನಟಿಸಿರುವ ʼಬೆಂಕಿಯ ಬಲೆ ಪ್ರೀತಿಯ ಕೊಲೆʼ ಚಿತ್ರ ಇದೇ ಏಪ್ರಿಲ್ 4 ರಂದು ಬಿಡುಗಡೆಯಾಗಲಿದೆ. ಈ ಕುರಿತ ವಿವರ ಇಲ್ಲಿದೆ.

ʼಬೆಂಕಿಯ ಬಲೆ ಪ್ರೀತಿಯ ಕೊಲೆʼ ಚಿತ್ರ ಏ.4ಕ್ಕೆ ರಿಲೀಸ್‌

Profile Siddalinga Swamy Mar 29, 2025 5:55 PM

ಬೆಂಗಳೂರು: ʼಪರಚಂಡಿʼ, ʼಆಘಾತ್ ಹ್ಯಾಂಗರ್ʼ, ʼಕುಚುಕುʼ, ʼಅಲೆಕ್ಸಾʼ, ʼಕುಂಟೆಬಿಲ್ಲೆʼ, ʼಫಾದರ್ʼ ಮುಂತಾದ ಚಿತ್ರಗಳಲ್ಲಿ ನಟಿಸಿರುವ ನಟ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಮೈಸೂರಿನ ಶಿವಾಜಿ ನಿರ್ಮಿಸಿ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿ, ನಟಿಸಿರುವ ʼಬೆಂಕಿಯ ಬಲೆ ಪ್ರೀತಿಯ ಕೊಲೆʼ ಚಿತ್ರ (Benkiya Bale Preethiya Kole Movie) ಇದೇ ಏಪ್ರಿಲ್ 4 ರಂದು ಬಿಡುಗಡೆಯಾಗಲಿದೆ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಭಯಂಕರ ಕರೋನ ಲಾಕ್ ಡೌನ್ ನಂತರ ಬೆಂಗಳೂರಿನ ಕಲಾವಿದರ ಸಂಘದಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರವಿದು. ಅಷ್ಟೇ ಅಲ್ಲ, ರಾಷ್ಟ್ರದ ಹಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಹಾಗೂ ಕುಟುಂಬದವರು ಸಹ ಈ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿರುವುದು ವಿಶೇಷ. ಶಿವಾಜಿ‌ ಅವರು ಗುಜರಾತ್‌ನ ಮೋದಿ ಅವರ ನಿವಾಸಕ್ಕೆ ತೆರಳಿದಾಗ ಈ ಚಿತ್ರದ ಬಗ್ಗೆ ವಿವರಿಸಿದ್ದರು. ಚಿತ್ರದ ಬಗ್ಗೆ ತಿಳಿದ ಮೋದಿ ಅವರ ಕುಟುಂಬದ ಚಿತ್ರಕ್ಕೆ ಯಶಸ್ಸನ್ನು ಹಾರೈಸಿದ್ದರು.

ಹೀಗೆ ಹಲವು ವಿಶೇಷಗಳಿರುವ ಈ ಚಿತ್ರದ ತಾರಾಬಳಗದಲ್ಲಿ ಶಿವಾಜಿ, ಮಂಡ್ಯ ರಮೇಶ್. ಜಿ.ಬಿ. ಸಿದ್ದೇ ಗೌಡ್ರು, ಧೀರಜ, ಮಹಾದೇವಮೂರ್ತಿ, ಶಿವಲಿಂಗೇಗೌಡ. ಮಲ್ಲಿಕಾರ್ಜುನ್, ನಿರಂಜನ್ ದೇಶಪ್ರೇಮಿ. ಸಲ್ಮಾನ್ ಲೋಕೇಶ್. ಮಿರ್ಲೆ ಮಂಜು. ವರ್ಣ ಸಿದ್ದರಾಜು ಪ್ರೀತಿ ಎಶಿಕಾ ಪವಿತ್ರ, ಸುಮ ಮುಂತಾದವರಿದ್ದಾರೆ.

ಈ ಸುದ್ದಿಯನ್ನೂ ಓದಿ | Fishcut Lehenga Fashion: ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಂಡಿಯಾದ ಡಿಸೈನರ್‌ ಫಿಶ್‌ಕಟ್‌ ಲೆಹೆಂಗಾ

Thane Movie: ‘ಠಾಣೆ’ ಚಿತ್ರದ ಹಾಡಿಗೆ ಕರವೇ ನಾರಾಯಣ ಗೌಡ ಶ್ಲಾಘನೆ

ಬೆಂಗಳೂರು: ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ. ನಿರ್ಮಿಸಿರುವ, ಎಸ್. ಭಗತ್ ರಾಜ್ ನಿರ್ದೇಶನದ ಹಾಗೂ ಪ್ರವೀಣ್ ನಾಯಕನಾಗಿ ನಟಿಸಿರುವ ʼಠಾಣೆʼ ಚಿತ್ರಕ್ಕಾಗಿ (Thane Movie)‌ ಖ್ಯಾತ ಗಾಯಕಿ ಮಜಾ ಟಾಕೀಸ್ ಖ್ಯಾತಿಯ ರೆಮೊ ಅವರು ಬರೆದಿರುವ ʼಬಾಳಿನಲ್ಲಿ ಭರವಸೆಯ ಬೆಳಕುʼ ಎಂಬ ಅರ್ಥಗರ್ಭಿತ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಟ್ರೆಂಡಿಂಗ್‌ನಲ್ಲಿದೆ. ಮಾನಸ ಹೊಳ್ಳ ಸಂಗೀತ ಸಂಯೋಜಿಸಿ, ಜ್ಞಾನ, ಅನುಷ್ಕ, ಜನ್ಯ ಆದರ್ಶ್ ಹಾಗೂ ಮೌಲ್ಯ ಅಚಿಂತ್ಯ ಎಂಬ ಬಾಲ ಪ್ರತಿಭೆಗಳು ಹಾಡಿರುವ ಈ ಸುಂದರ ಹಾಡಿಗೆ ಕನ್ನಡ ಕಲಾಭಿಮಾನಿಗಳು ಫಿದಾ ಆಗಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರಿಗೂ ಸಹ ಈ ಹಾಡು ಅಚ್ಚುಮೆಚ್ಚಂತೆ. ಬಾಲ ಪ್ರತಿಭೆಗಳ ಗಾಯನದಲ್ಲಿ ಮೂಡಿಬಂದಿರುವ ಈ ಹಾಡನ್ನು ಮೆಚ್ಚಿಕೊಂಡ ನಾರಾಯಣ ಗೌಡ ಅವರು ಚಿತ್ರತಂಡದವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಅಭಿನಂದಿಸಿದರು.

ಬಾಲ ಪ್ರತಿಭೆಗಳು ಹಾಡಿರುವ ʼಠಾಣೆʼ ಚಿತ್ರದ ಅರ್ಥಗರ್ಭಿತ ಈ ಹಾಡನ್ನು ನಾನು ದಿನಕ್ಕೆ ನಾಲ್ಕೈದು ಬಾರಿ ಕೇಳುತ್ತಲೇ ಇರುತ್ತೇನೆ. ಅಷ್ಟು ಇಷ್ಟವಾಗಿದೆ ನನಗೆ ಈ ಹಾಡು. ಮಕ್ಕಳು ತುಂಬಾ ಚೆನ್ನಾಗಿ ಹಾಡಿದ್ದಾರೆ. ರೆಮೊ ಅವರ ಸಾಹಿತ್ಯ ಹಾಗೂ ಮಾನಸ ಹೊಳ್ಳ ಅವರ ಸಂಗೀತ ನಿರ್ದೇಶನ ಕೂಡ ಬಹಳ ಸುಂದರವಾಗಿದೆ. ಮಾನಸ ಹೊಳ್ಳ ಅವರು ನಮ್ಮ ಹಿರಿಯ ನಟ ಶಂಖನಾದ ಅರವಿಂದ್ ಅವರ ಪುತ್ರಿ. ಅವರ ತಂದೆ ಅದ್ಭುತ ಕಲಾವಿದರು. ಮಗಳು ಸಹ ಉತ್ತಮ‌ ಸಂಗೀತ ನಿರ್ದೇಶಕಿ. ಇಂತಹ ಮನಮುಟ್ಟುವ ಹಾಡನ್ನು ನೀಡಿದ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು. ನಿಮ್ಮ ತಂಡದ ಜತೆಗೆ ಸದಾ ನಾನು ಇರುತ್ತೇನೆ‌. ಹಾಡಿನಷ್ಟೇ ಚಿತ್ರ ಕೂಡ ಯಶಸ್ವಿಯಾಗಲಿ ಎಂದು ನಾರಾಯಣ ಗೌಡ ಅವರು ಹಾರೈಸಿದರು.

ಈ ಸುದ್ದಿಯನ್ನೂ ಓದಿ | Ugadi Jewel Fashion: ಯುಗಾದಿ ಹಬ್ಬದ ಸೀಸನ್‌ನಲ್ಲಿ ಟ್ರೆಡಿಷನಲ್‌ ಡಿಸೈನ್‌ನ ಆಭರಣಗಳಿಗೆ ಹೆಚ್ಚಾದ ಬೇಡಿಕೆ

ನಿರ್ದೇಶಕ ಎಸ್. ಭಗತ್ ರಾಜ್, ನಾಯಕ ಪ್ರವೀಣ್, ಸಂಗೀತ ನಿರ್ದೇಶಕಿ ಮಾನಸ ಹೊಳ್ಳ ಹಾಗೂ ಮುಂತಾದ ʼಠಾಣೆʼ ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ʼಠಾಣೆʼ ಚಿತ್ರಕ್ಕಾಗಿ ಖ್ಯಾತ ಗಾಯಕ ರಾಜೇಶ್ ಕೃಷ್ಣ ಅವರು ಹಾಡಿರುವ ಹಾಡೊಂದು ಸದ್ಯದಲ್ಲೇ ಲೇಖಾ ಆಡಿಯೋ ಮೂಲಕ ಬಿಡುಗಡೆಯಾಗಲಿದೆ.