ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Manipal Hospital: ಸಾವಿನಲ್ಲೂ ಸಾರ್ಥಕತೆ ಮೆರೆದ ಜೀವ- ಮಗಳ ಅಂಗಾಂಗ ದಾನ ಮಾಡಿದ ಹೆತ್ತಕರುಳು

Organ Donation: ತೀವ್ರವಾದ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಮತಿ ನಿತ್ಯ ಅವರ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅವರ ಅಂಗಾಂಗಗಳನ್ನು ದಾನ ಮಾಡಲು ಅವರ ತಾಯಿ ನಿರ್ಧಾರ ಮಾಡಿದ್ದು, ಈ ಮೂಲಕ ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಅಂಗಾಂಗ ದಾನದ ಮೂಲಕ ಇತರರಲ್ಲಿ ಮಗಳನ್ನು ಕಾಣುವೆ ಎಂದ ತಾಯಿ

Profile Sushmitha Jain Mar 28, 2025 4:58 PM

ಬೆಂಗಳೂರು: ಅಂಗಾಂಗ ದಾನ (Organ Donation) ಮಾಡುವ ಮೂಲಕ ಮಗಳ ಸಾವಿನ ನೋವಿನಲ್ಲೂ ತಾಯಿ ಸಾರ್ಥಕತೆ ಮರೆದು ಮತ್ತೊಂದು ಜೀವಕ್ಕೆ ಬೆಳಕಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬೆಂಗಳೂರು ನಿವಾಸಿ 39 ವರ್ಷದ ಶ್ರೀಮತಿ ನಿತ್ಯಾ ಅವರು ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರುನಿರಂತರವಾಗಿ ಚಿಕಿತ್ಸೆ ನೀಡಿದರೂ . ದಿನ ಕಳೆದಂತೆ ಅವರ ಆರೋಗ್ಯ ಹದಗೆಡುತ್ತಲ್ಲೇ ಇತ್ತು. ದುರಾದೃಷ್ಟವಶಾತ್ ಅವರಿಗೆ ಹೃದಯಘಾತವೂ ಆಗಿದ್ದು, ಚಿಕಿತ್ಸೆಗೆ ಸ್ಪಂದಿಸದ ಕಾರಣ ಅವರು ಮೆದುಳು ನಿಷ್ಕ್ರಿಯಗೊಂಡಿತ್ತು. ಕೂಡಲೇಓಲ್ಡ್ ಏರ್‌ಪೋರ್ಟ್‌ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ(Manipal Hospital) ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿತ್ಯಾ ಅವರು ಸಾವನಪ್ಪಿದ್ದಾರೆ.

ಮಗಳ ಸಾವಿನ ಸುದ್ದಿ ಕೇಳಿದ ಹೆತ್ತ ತಾಯಿಗೆ ಬರಸಿಡಿಲು ಬಡಿದಿತ್ತು. ಎದೆ ಎತ್ತರಕ್ಕೆ ಬೆಳದು ಸುಮಂಗಲಿಯಾಗಿ ಬಾಳ ಬೇಕಿದ್ದ ಮುದ್ದಿನ ಮಗಳು ಹೀಗೆ ಹೆಣವಾಗಿ ಮಲಗಿರೋದು ಹೆತ್ತಡೊಲನ್ನ ಚಿವುಟಿತ್ತು. ಈ ಎಲ್ಲಾ ನೋವಿನ ಮಧ್ಯೆಯೂ ಮಗಳ ದೇಹವನ್ನು ಮಣ್ಣಿಗೆ ಹಾಕಲು ತಾಯಿಗೆ ಇಷ್ಟ ಇರ್ಲಿಲ್ಲ. ಹೀಗಾಗಿ ಇಡೀ ದೇಹವನ್ನು ದಾನ ಮಾಡಲು ಮುಂದಾಗಿದ್ರು.

nithya

ಅದರಂತೆ ಸಾವನ್ನಪ್ಪಿದ ಮಗಳ ಅಂಗಾಂಗ ದಾನ ಮಾಡಿ ನಿತ್ಯಾ ಅವರ ತಾಯಿ ಮಾದರಿಯಾಗಿದ್ದಾರೆ. ಆ ಹೆತ್ತಕರುಳಿನ ದಿಟ್ಟ ನಿರ್ಧಾರಕ್ಕೆ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ಗೌರವ ಸಲ್ಲಿಸಿದ್ದಾರೆ. ನಿತ್ಯ ಅವರ ಹೃದಯ, ಶ್ವಾಸಕೋಶ, ಮೂತ್ರಪಿಂಡಗಳು ಮತ್ತು ಯಕೃತ್ತು ಸೇರಿದಂತೆ ಅಂಗಾಂಗವನ್ನು ಯಶಸ್ವಿಯಾಗಿ ದಾನ ಮಾಡಿ ಕಸಿ ಮಾಡಲಾಯಿಗಿದೆ. ಆ ಮೂಲಕ ತುರ್ತಾಗಿ ಅಗತ್ಯವಿರುವ ರೋಗಿಗಳ ಬಾಳಿಗೆ ಹೊಸ ಭರವಸೆ ನೀಡಿದಂತಾಗಿದೆ.

ಇನ್ನು ನಿತ್ಯಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಾಗಿರುವ ಡಾ. ಸುನಿಲ್ ಕಾರಂತ್ ಈ ಕುರಿತು ಮಾತಾನಾಡಿದ್ದು,“ಭಾರತದಲ್ಲಿ, ವಿಶೇಷವಾಗಿ ಸಾಂಪ್ರದಾಯಿಕ ಸಮಾಜದಲ್ಲಿ, ಅಂಗಾಂಗ ದಾನದ ಬಗ್ಗೆ ವಿವಾಹಿತ ಮಗಳ ತಾಯಿಯೊಬ್ಬರು ಇಷ್ಟೊಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ತುಂಬಾ ಅಪರೂಪ. ಸಾಮಾಜಿಕ ಮತ್ತು ಸಾಂಸ್ಕೃತಿಕ ಅಡೆತಡೆಗಳನ್ನು ನಿವಾರಿಸುವ ಮೂಲಕ, ಇತರರಿಗೆ ಇನ್ನೊಂದು ಜೀವನ ಅವಕಾಶ ನೀಡುವಲ್ಲಿ ಅವರ ಧೈರ್ಯ ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ.” ಎಂದಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ಬೆಡ್‍ರೂಂಗೇ ನುಗ್ಗಿದ ಹಸು ಮತ್ತು ಗೂಳಿ- ವಿಡಿಯೊ ಫುಲ್‌ ವೈರಲ್‌

ಅಲ್ಲದೇ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಿತ್ಯಾ ಅವರ ತಾಯಿ ಈ ನಿರ್ಧಾರ ಮಾಡಿದ್ದು, ಇದರ ಜೊತೆಗೆ ಅಂಗ ದಾನದ ಮೂಲಕವಾದರೂ ತಮ್ಮ ಮಗಳನ್ನು ಜೀವಂತವಾಗಿಡುವ ಪ್ರಯತ್ನ ಮಾಡಿದ್ದಾರೆ.