ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Samantha Ruth Prabhu: ಸಿಡ್ನಿ ಪ್ರವಾಸದ ಫೋಟೊ ಹಂಚಿಕೊಂಡ ಸಮಂತಾ; ಯಾರು ತೆಗೆದಿದ್ದು ಎಂದು ಪ್ರಶ್ನಿಸಿದ ಫ್ಯಾನ್ಸ್‌

Samantha Ruth Prabhu: ನಟಿ ಸಮಂತಾ ರುತ್ ಪ್ರಭು ಅವರ ಸಿಡ್ನಿ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಫೋಟೊ ನೋಡಿ ಅಭಿಮಾನಿಗಳು ಈ ಕುರಿತು ಸೌಥ್ ಬ್ಯೂಟಿಗೆ ಒಂದು ಪ್ರಶ್ನೆ ಕೇಳಿದ್ದಾರೆ. ಹಾಗಾದ್ರೆ ಆ ಪ್ರಶ್ನೆ ಯಾವುದು? ಅದಕ್ಕೆ ಸ್ಯಾಮ್ ಕೊಟ್ಟ ಉತ್ತರ ಏನು? ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ರಾಜ್ ನಿಡಿಮೋರು ಜತೆ ವಿದೇಶಿ ಪ್ರವಾಸಕ್ಕೆ ಹೋದ್ರ ಸಮಂತಾ?

ಸಮಂತಾ ಹಂಚಿಕೊಂಡ ಚಿತ್ರ

Profile Sushmitha Jain Mar 29, 2025 3:32 PM

ಹೈದರಾಬಾದ್‌: ಬಹುಭಾಷಾ ನಟಿ ಸಮಂತಾ (Samantha Ruth Prabhu) ಅವರಿಗೆ ಸ್ಟಾರ್ ಹೀರೋಗಳಿಗಿಂತ ಜಾಸ್ತಿ ಸ್ಟಾರ್‌ಡಮ್ ಸಿಕ್ಕಿದೆ. ತೆಲುಗಿ(Tollywood)ನಲ್ಲಿ ಬಹುತೇಕ ಎಲ್ಲ ಸ್ಟಾರ್‌ಗಳ ಜತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಾಗ ಚೈತನ್ಯ ಜತೆ ಮದುವೆ ಆದಮೇಲೆ ಸಿನಿಮಾಗಳ ಆಯ್ಕೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡ ಸಮಂತಾ, ವಿಚ್ಚೇದನದ ನಂತರ ಮತ್ತೆ ಯುಟರ್ನ್ ಹೊಡೆದಿದ್ದಾರೆ. ಅಲ್ಲದೇ ವೈಯಕ್ತಿಕವಾಗಿಯೂ ಸಮಂತಾ ಪ್ರತಿಯೊಂದು ವಿಷಯದಲ್ಲೂ ಸುದ್ದಿಯಲ್ಲಿದ್ದು, ಅವರ ಮೇಲೆ ಪಾಪಾರಾಜಿಗಳು ಫುಲ್ ಫೋಕಸ್ ಮಾಡಿದ್ದಾರೆ. ಸ್ವಲ್ಪ ದಿನಗಳಿಂದಯಷ್ಟೇ ಅವರು ಸೀಕ್ರೆಟ್ ಆಗಿ ಎಂಗೇಜ್‌ಮೆಂಟ್ ಮಾಡ್ಕೊಂಡಿದ್ದಾರೆ ಅನ್ನೋ ಸುದ್ದಿ ಹಾಟ್ ಟಾಪಿಕ್ ಆಗಿತ ಎಲ್ಲೆಡೆ ಭಾರೀ ಸದ್ದು ಮಾಡಿತ್ತು.

ನಾಗಚೈತನ್ಯ ಜತೆ ಮದುವೆ, ಡಿವೋರ್ಸ್ ನಂತರ ಕಾನ್ಫಿಡೆನ್ಸ್‌ನಿಂದ ಮುಂದೆ ಹೋಗುತ್ತ ಸಿನಿಮಾಗಳನ್ನ ಮಾಡ್ತಿರುವ ಸ್ಯಾಮ್ ಹೆಸರು ಅವರು ಈ ಹಿಂದೆ ʼದಿ ಫ್ಯಾಮಿಲಿ ಮ್ಯಾನ್ 2ʼ, ʼಸಿಟಾಡೆಲ್: ಹನಿ ಬನ್ನಿʼ ತರಹದ ಸೀರಿಸ್‌ಗಳ ರಾಜ್ & ಡಿಕೆ ಜೋಡಿಯಲ್ಲೊಬ್ಬರಾದ ರಾಜ್ ನಿಡಿಮೋರು (Raj Nidimoru) ಜತೆ ಥಳುಕು ಹಾಕಿಕೊಂಡಿತ್ತು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಚೆಂದದ ಸೀರೆಯುಟ್ಟು ಭಾಗಿಯಾಗಿದ್ದ ಸಮಂತಾ ನಿರ್ಮಾಪಕ ರಾಜ್ ನಿಡಿಮೋರು ಅವರೊಂದಿಗೆ ಕಾಣಿಸಿಕೊಂಡಿದ್ದರು. ಇಬ್ಬರು ಜತೆಯಾಗಿ ಕಾರ್ಯಕ್ರಮಕ್ಕೆ ಬಂದಿರುವ ಫೋಟೋ ಆಗ ವೈರಲ್ ಆಗಿತ್ತು. ಇಬ್ಬರ ಡೇಟಿಂಗ್ ವದಂತಿಗೆ ಪುಷ್ಠಿ ಸಿಕ್ಕಂತಾಗಿತ್ತು.

ಸದ್ಯ ವಿದೇಶ ಪ್ರವಾಸದಲ್ಲಿರುವ ಸಮಂತಾ ತಮ್ಮ ಇನ್‌ಸ್ಟಾಗ್ರಾಮ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಮತ್ತದೆ ಸದ್ದು ಮಾಡಿದ್ದು, ಅ ಫೋಟೋವನ್ನು ತೆಗಿದಿದ್ದು ಯಾರು ಎಂಬ ಪ್ರಶ್ನೆಯನ್ನು ಹಲವರು ಮುಂದಿಟ್ಟಿದ್ದಾರೆ.

ಹೌದು, ಟ್ರಾವೆಲ್ ಲವರ್ ಆಗಿರುವ ಸಮಂತಾ ಬಿಡುವಿನ ಸಮಯದಲ್ಲಿ ಟ್ರಿಪ್ ಹೋಗುತ್ತಲೇ ಇರುತ್ತಾರೆ. ಈಗಲೂ ಆಸ್ಟ್ರೇಲಿಯದ ಸಿಡ್ನಿ ಪ್ರವಾಸದಲ್ಲಿದ್ದು, ಅಲ್ಲಿನ ವನ್ಯಜೀವಿ ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ. ಪ್ರಕೃತಿಯ ಮಡಿಲಿನಲ್ಲಿ ಅಲ್ಲಿನ ಪ್ರಾಣಿ - ಪಕ್ಷಿಗಳೊಂದಿಗೆ ಖುಷಿಯಿಂದ ಕಾಲ ಕಳೆದಿದ್ದಾರೆ. ಜತೆಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದು, ‘ಪ್ರಕೃತಿ, ಪ್ರಾಣಿಗಳು ಮತ್ತು ಗುಡ್ ವೈಬ್ಸ್’ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಇನ್ನೂ ಸಮಂತಾ ಈ ಫೋಟೋಗಳನ್ನು ಹಂಚಿಕೊಳ್ಳುತ್ತಿಂದಂತೆ ನೆಟ್ಟಿಗರು ನಿಮ್ಮ ಫೋಟೋ ಕ್ಲಿಕ್ಕಿಸಿದ್ದು ಯಾರು ಎಂಬ ಪ್ರಶ್ನೆಯನ್ನು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸಮಂತಾ,
ತಮ್ಮ ಫೋಟೊವನ್ನು 'ನವೋಮಿ' ತೆಗಿದಿರುವುದು ಎಂದು ಹೇಳಿದ್ದಾರೆ. ಅವರು ನನ್ನ ಪ್ರವಾಸದ ಸಮಯದಲ್ಲಿ ಮಾರ್ಗದರ್ಶಿಯಾಗಿದ್ದರು ಎಂದು ತಿಳಿಸಿದ್ದಾರೆ. ಆ ಮೂಲಕ ಅಭಿಮಾನಿಗಳಲ್ಲಿ ಇದ್ದ ಅನುಮಾನಕ್ಕೆ ತೆರೆ ಎಳೆದಿದ್ದು, ಸಮಂತಾ ರುತ್ ಪ್ರಭು ನಿರ್ದೇಶಕ ರಾಜ್ ನಿಡಿಮೋರು ಒಟ್ಟಿಗೆ ಪ್ರಯಾಣಿಸಿದ್ದಾರೆ ಎಂಬ ಗೊಂದಲವನ್ನು ಪರಿಹಾರಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral News: ಪಾರ್ಕ್‌ನಲ್ಲಿ ಜಾಗಿಂಗ್‌ ಮಾಡ್ತಿದ್ದ ವ್ಯಕ್ತಿಯ ಮೇಲೆ ರಾಬರ್ಸ್‌ ಡೆಡ್ಲಿ ಅಟ್ಯಾಕ್‌!

ಇನ್ನೂ ವಿಶ್ವ ಪಿಕಲ್‌ಬಾಲ್ ಲೀಗ್ ಪಂದ್ಯದ ವೇಳೆ ನಿರ್ದೇಶಕ ರಾಜ್ ನಿಡಿಮೋರು ಒಟ್ಟಿಗೆ ಇದ್ದ ಹಲವಾರು ಫೋಟೊಗಳನ್ನು ಸಮಂತಾ ಹಂಚಿಕೊಂಡಿದ್ದರು. ಆಗ ಸಮಂತಾ ಮತ್ತು ರಾಜ್ ನಿಡಿಮೋರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಪ್ರಾರಂಭವಾದವು. ಸಮಂತಾ ಪಿಕಲ್‌ಬಾಲ್ ತಂಡ ಚೆನ್ನೈ ಸೂಪರ್ ಚಾಂಪಿಯನ್ಸ್‌ನ ಮಾಲೀಕರಾಗಿದ್ದಾರೆ.

ಸಮಂತಾ ಮತ್ತು ನಾಗ ಚೈತನ್ಯ ಅವರ ದಾಂಪತ್ಯ ಜೀವನ 2021ರಲ್ಲಿ ಮುರಿದು ಬಿದ್ದಿತ್ತು. ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಕಳೆದ ವರ್ಷ ಡಿ. 4ರಂದು ವಿವಾಹವಾಗಿದ್ದಾರೆ. ಸಮಂತಾ ರುತ್ ಪ್ರಭು ಕೊನೆಯ ಬಾರಿಗೆ ಅಮೆಜಾನ್ ಪ್ರೈಮ್ ಒರಿಜಿನಲ್ ʼಸಿಟಾಡೆಲ್: ಹನಿ ಬನ್ನಿʼ ಸೀರಿಸ್‌ನಲ್ಲಿ ವರುಣ್ ಧವನ್ ಜತೆಗೆ ಕಾಣಿಸಿಕೊಂಡಿದ್ದಾರೆ.