IPL 2025: ಇಂದು ಐಪಿಎಲ್‌ನಲ್ಲಿ ಡಬಲ್ ಹೆಡರ್ ಪಂದ್ಯ
ಗುವಾಹಟಿ ಟ್ರ್ಯಾಕ್ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವ ಕಾರಣ ಚೆನ್ನೈಗೆ ಹೆಚ್ಚಿನ ಲಾಭ ಸಿಗಲಿದೆ. ಏಕೆಂದರೆ ತಂಡದಲ್ಲಿ ನೂರ್ ಅಹ್ಮದ್, ಅಶ್ವಿನ್, ಜಡೇಜ ಅವರಂಥ ಘಾತಕ ಸ್ಪಿನ್ನರ್‌ಗಳನ್ನು ಹೊಂದಿದೆ. ಆದರೆ ಕ್ವಾಲಿಟಿ ಸ್ಪಿನ್ನರ್‌ಗಳನ್ನು ಹೊಂದಿಲ್ಲದ ರಾಜಸ್ಥಾನಕ್ಕೆ ಇದೊಂದು ಹಿನ್ನಡೆಯಾಗಿ ಪರಿಣಮಿಸಬಹುದು.


ವಿಶಾಖಪಟ್ಟಣ: ಐಪಿಎಲ್‌ನಲ್ಲಿ(IPL 2025) ಇಂದು ಎರಡು ಪಂದ್ಯಗಳು ನಡೆಯಲಿವೆ. ದಿನದ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್(DC vs SRH) ಸೆಣಸಾಟ ನಡೆಸಿದರೆ, ದಿನದ ಮತ್ತೊಂದು ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್(RR vs CSK) ಮುಖಾಮುಖಿಯಾಗುತ್ತಿದೆ. ತಂದೆಯಾದ ಬಳಿಕ ಕನ್ನಡಿಗ ರಾಹುಲ್ ಆಡುತ್ತಿರುವ ಈ ಬಾರಿಯ ಮೊದಲ ಐಪಿಎಲ್ ಪಂದ್ಯ ಇದಾಗಿದೆ.
ಕಳೆದ ಪಂದ್ಯದಲ್ಲಿ ಲಕ್ನೋ ವಿರುದ್ಧ 200 ಪ್ಲಸ್ ಮೊತ್ತವನ್ನು ಲೀಲಾಜಾಲವಾಗಿ ಬೆನ್ನಟ್ಟಿ ಗೆದ್ದು ಬೀಗಿದ್ದ ಡೆಲ್ಲಿ ಇದೇ ಜೋಶ್‌ನಲ್ಲಿ ಹೈದರಾಬಾದ್ ವಿರುದ್ಧವೂ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ಹೈದರಾಬಾದ್ ಬ್ಯಾಟಿಂಗ್ ಕೂಡ ಬಲಿಷ್ಠವಾಗಿರುವ ಕಾರಣ ಈ ಪಂದ್ಯದಲ್ಲಿ ರನ್ ಹೊಳೆಯೇ ಹರಿಯುವ ನಿರೀಕ್ಷೆ ಇದೆ. ಬಿಗ್ ಹಿಟ್ಟರ್ ಅಶುತೋಷ್ ಶರ್ಮ ಪಂದ್ಯದ ಪ್ರಮುಖ ಹೈಲೆಟ್ಸ್.
You're loved. You're ours. You're home. 🥹
— Delhi Capitals (@DelhiCapitals) March 29, 2025
Welcome to Dilli, KLR 💙❤️ pic.twitter.com/qUBPHAYUyU
ಗೆಲುವಿನ ಖಾತೆ ತೆರೆಯಲು ರಾಜಸ್ಥಾನ್ ಕಾತರ
ಆಡಿದ ಸತತ ಎರಡೂ ಪಂದ್ಯಗಳಲ್ಲಿಯೂ ಸೋಲು ಕಂಡಿರುವ ರಾಜಸ್ಥಾನ್ ರಾಯಲ್ಸ್ ಇಂದು ಗೆಲುವಿನ ಖಾತೆ ತೆರೆಯುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ. ಬೌಲಿಂಗ್ ಸುಧಾರಣೆ ಕಾಣದ ಹೊರತು ಗೆಲುವು ಅಷ್ಟು ಸುಲಭವಲ್ಲ. ಇನ್ನೊಂದಡೆ ಆರ್‌ಸಿಬಿಯ ಹೊಡೆತಕ್ಕೆ ನಲುಗಿರುವ ಚೆನ್ನೈ ಸೂಪರ್ ಕಿಂಗ್ಸ್, ಸೋಲಿನ ಆಘಾತದಿಂದ ಹೊರಬರುವ ಮೊದಲೇ ಮತ್ತೊಂದು ಕಠಿಣ ಸವಾಲು ಎದುರಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಇದನ್ನೂ ಓದಿ IPL 2025: ಆರ್‌ಸಿಬಿ ತಂಡ ಹಳೆಯ ಆವೃತ್ತಿಗಳಿಗಿಂತ 10 ಪಟ್ಟು ಉತ್ತಮವಾಗಿದೆ ಎಂದ ಎಬಿ ಡಿ ವಿಲಿಯರ್ಸ್!
ರಾಜಸ್ಥಾನಕ್ಕೆ ವಿದೇಶಿ ಬ್ಯಾಟರ್‌ಗಳ ಕೊರತೆ ಇದ್ದು, ತನ್ನ ಭಾರತೀಯ ಸ್ಟಾರ್ಸ್ ಮೇಲೆಯೇ ಹೆಚ್ಚು ಅವಲಂಬಿತಗೊಂಡಿದೆ. ಈ ಪಂದ್ಯದಲ್ಲೂ ರಿಯಾನ್ ಪರಾಗ್ ರಾಯಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. 4ನೇ ಪಂದ್ಯದಿಂದ ಸಂಜು ಸ್ಯಾಮ್ಸನ್ ಈ ಜವಾಬ್ದಾರಿ ವಹಿಸಲಿದ್ದಾರೆ.
ಗುವಾಹಟಿ ಟ್ರ್ಯಾಕ್ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವ ಕಾರಣ ಚೆನ್ನೈಗೆ ಹೆಚ್ಚಿನ ಲಾಭ ಸಿಗಲಿದೆ. ಏಕೆಂದರೆ ತಂಡದಲ್ಲಿ ನೂರ್ ಅಹ್ಮದ್, ಅಶ್ವಿನ್, ಜಡೇಜ ಅವರಂಥ ಘಾತಕ ಸ್ಪಿನ್ನರ್‌ಗಳನ್ನು ಹೊಂದಿದೆ. ಆದರೆ ಕ್ವಾಲಿಟಿ ಸ್ಪಿನ್ನರ್‌ಗಳನ್ನು ಹೊಂದಿಲ್ಲದ ರಾಜಸ್ಥಾನಕ್ಕೆ ಇದೊಂದು ಹಿನ್ನಡೆಯಾಗಿ ಪರಿಣಮಿಸಬಹುದು.