ನಿಷೇಧ ಶಿಕ್ಷೆ ಮುಗಿಸಿ ಬಂದ ಮರು ಪಂದ್ಯದಲ್ಲೇ ಪಾಂಡ್ಯಗೆ 12 ಲಕ್ಷ ದಂಡ
Hardik Pandya: ಶನಿವಾರ ಅಹಮದಾಬಾದ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 36 ರನ್ ಅಂತರದ ಸೋಲು ಕಂಡಿತ್ತು. ಸೋಲಿನ ಆಘಾತದಲ್ಲೇ ನಾಯಕ ಪಾಂಡ್ಯಗೆ ದಂಡದ ಬಿಸಿ ಕೂಡ ತಟ್ಟಿದೆ.


ಅಹಮದಾಬಾದ್: ಕಳೆದ ಆವೃತ್ತಿ ಐಪಿಎಲ್‌ನಲ್ಲಿ(IPL 2025) ನಿಧಾನಗತಿ ಓವರ್ ರೇಟ್ ತಪ್ಪಿಗಾಗಿ ಈ ಬಾರಿಯ 2025ನೇ ಋತುವಿನ ಮೊದಲ ಐಪಿಎಲ್ ಪಂದ್ಯದಲ್ಲೇ ನಿಷೇಧಕ್ಕೊಳಗಾಗಿದ್ದ ಹಾರ್ದಿಕ್ ಪಾಂಡ್ಯ(Hardik Pandya) ಈ ತಪ್ಪಿನಿಂದ ಬುದ್ದಿ ಕಲಿತಂತೆ ಕಾಣುತ್ತಿಲ್ಲ. ನಿಷೇಧ ಶಿಕ್ಷೆ ಮುಗಿಸಿ ಆಡಿದ ಮರು ಪಂದ್ಯದಲ್ಲೇ ಮತ್ತೆ ನಿಧಾನಗತಿ ಓವರ್ ರೇಟ್ ತಪ್ಪು ಮಾಡಿ 12 ಲಕ್ಷ ರೂ. ದಂಡಕ್ಕೆ ಗುರಿಯಾಗಿದ್ದಾರೆ.
ಶನಿವಾರ ಅಹಮದಾಬಾದ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 36 ರನ್ ಅಂತರದ ಸೋಲು ಕಂಡಿತ್ತು. ಸೋಲಿನ ಆಘಾತದಲ್ಲೇ ನಾಯಕ ಪಾಂಡ್ಯಗೆ ದಂಡದ ಬಿಸಿ ಕೂಡ ತಟ್ಟಿದೆ.
ಪಂದ್ಯದಲ್ಲಿ ಮುಂಬೈ ತಂಡವು ಸ್ಪೋ ಓವರ್ ರೇಟ್ ಕಾಯ್ದುಕೊಂಡ ಕಾರಣದಿಂದ ನಾಯಕ ಪಾಂಡ್ಯಗೆ ದಂಡ ವಿಧಿಸಲಾಗಿದೆ. ಈ ಆವೃತ್ತಿಯಲ್ಲಿ ಇದು ಮುಂಬೈ ತಂಡದ ಮೊದಲ ತಪ್ಪಾಗಿದೆ.
Hardik Pandya has been fined INR 12 lac after Mumbai Indians maintained a slow over rate during the match against Gujarat Titans. #IPL2025 pic.twitter.com/O004vN2A9I
— Cricbuzz (@cricbuzz) March 30, 2025
ತಂಡವೊಂದು 3 ಪಂದ್ಯಗಳಲ್ಲಿ ನಿಧಾನಗತಿ ಬೌಲಿಂಗ್ ಮಾಡಿದರೆ ನಾಯಕರಿಗೆ ಒಂದು ಪಂದ್ಯ ನಿಷೇಧ ಹೇರುವ ನಿಯಮವನ್ನು ಈ ಬಾರಿ ಬಿಸಿಸಿಐ ಬದಲಾಯಿತ್ತು. ಇನ್ನು ಮುಂದೆ ಒಂದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ತಂಡ ನಿಗದಿತ ಅವಧಿಯಲ್ಲಿ ಬೌಲಿಂಗ್ ಮುಗಿಸದಿದ್ದರೆ, ನಾಯಕರಿಗೆ ದಂಡ ವಿಧಿಸಿ, 1 ಡಿಮೆರಿಟ್ ಅಂಕ ನೀಡಲಾಗುತ್ತದೆ. ಡಿಮೆರಿಟ್ ಅಂಕದ ಅವಧಿ 3 ವರ್ಷ ಇರಲಿದ್ದು, ಈ ಅವಧಿಯಲ್ಲಿ 4 ಡಿಮೆರಿಟ್ ಅಂಕ ಪಡೆದರೆ ನಾಯಕನಿಗೆ ಪಂದ್ಯದ ಸಂಭಾವನೆಯ ಶೇ.100ರಷ್ಟು ದಂಡ ವಿಧಿಸಲಾಗುತ್ತದೆ.
ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಟೈಟಾನ್ಸ್ 197 ರನ್ ಬಾರಿಸಿದರೆ, ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 6 ವಿಕೆಟ್‌ಗಳ ನಷ್ಟಕ್ಕೆ 160 ರನ್‌ಗಳಿಗೆ ಸೀಮಿತವಾಗಿ ಸೋಲೊಪ್ಪಿಕೊಂಡಿತು.