ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Champions Trophy: ಹರಿಣಗಳನ್ನು ಕಟ್ಟಿ ಹಾಕೀತೇ ಆಸೀಸ್‌?

AUS vs SA: ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಇದುವರೆಗೂ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 110 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಆಸ್ಟ್ರೇಲಿಯಾ 55 ಪಂದ್ಯ ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 51 ಪಂದ್ಯ ಜಯಿಸಿದೆ. ಮೂರು ಪಂದ್ಯ ಟೈ ಆಗಿದ್ದರೆ, ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.

AUS vs SA: ಕಾಂಗರೂಗಳ ಸವಾಲಿಗೆ ಹರಿಣ ಪಡೆ ಸಜ್ಜು

Profile Abhilash BC Feb 24, 2025 3:03 PM

ರಾವಲ್ಪಿಂಡಿ: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮಂಗಳವಾರ ಬಲಿಷ್ಠ ತಂಡಗಳಾದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಮುಖಾಮುಖಿ ಆಗಲಿವೆ. ಉಭಯ ತಂಡಗಳು ಈಗಾಗಲೇ ಟೂರ್ನಿಯಲ್ಲಿ 300 ರನ್‌ಗಳ ಗಡಿ ದಾಟುವ ಮೂಲಕ ತಾನೆಷ್ಟು ಬಲಿಷ್ಠ ಎಂಬುದನ್ನು ತೋರಿಸಿ ಕೊಟ್ಟಿದೆ. ಹೀಗಾಗಿ ಈ ಪಂದ್ಯ ಕೂಡ ಹೈ ಸ್ಕೋರ್‌ ಪಂದ್ಯ ಎಂದು ನಿರೀಕ್ಷೆ ಮಾಡಬಹುದು. ಯಾರೇ ಗೆದ್ದರು, 'ಬಿ' ಗುಂಪಿನಿಂದ ಸೆಮಿಫೈನಲ್‌ ಟಿಕೆಟ್‌ ಒಂದನ್ನು ಬಹುತೇಕ ಖಾತ್ರಿಪಡಿಸಲಿದ್ದಾರೆ. ಈ ತಂಡ ಯಾವುದು ಎನ್ನುವುದು ಪಂದ್ಯದ ಕೌತುಕ.

ದಕ್ಷಿಣ ಆಫ್ರಿಕಾ ತನ್ನ ಮೊದಲ ಪಂದ್ಯವನ್ನು ಅಫಘಾನಿಸ್ತಾನ ವಿರುದ್ಧ ಆಡಿ 107 ರನ್‌ ಅಂತರದಿಂದ ಗೆದ್ದಿತ್ತು. ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ ನೀಡಿದ್ದ 350 ರನ್‌ಗಳನ್ನು ಯಾವುದೇ ಆತಂಕಕ್ಕೆ ಒಳಗಾಗದೆ ಚೇಸಿಂಗ್‌ ಮಾಡಿ 5 ವಿಕೆಟ್‌ ಗೆಲುವು ಸಾಧಿಸಿತ್ತು. ಹೀಗಾಗಿ ನಾಳಿನ ಪಂದ್ಯದಲ್ಲಿ ಇತ್ತಂಡಗಳು ತೀವ್ರ ಪೈಪೋಟಿ ನಡೆಸಬಹುದು. ಈ ಬಾರಿಯ ಮೊದಲ ಹೈವೋಲ್ಟೇಜ್‌ ಪಂದ್ಯ ಎಂದರೂ ತಪ್ಪಾಗಲಾರದು.

ಸಮರ್ಥ ಬ್ಯಾಟಿಂಗ್‌ ಲೈನ್‌ ಅಪ್‌

ಉಭಯ ತಂಡಗಳ ಬ್ಯಾಟಿಂಗ್‌ ಲೈನ್‌ ಅಪ್‌ ತುಂಬಾನೇ ಬಲಿಷ್ಠವಾಗಿ ಗೋಚರಿಸಿದೆ. ಇಂಗ್ಲೆಂಡ್‌ ವಿರುದ್ಧ ಶತಕ ಬಾರಿಸಿದ್ದ ಜೋಶ್‌ ಇಂಗ್ಲಿಸ್‌, ಅರ್ಧಶತಕ ಸಿಡಿಸಿದ್ದ ಮ್ಯಾಥ್ಯೂ ಶಾರ್ಟ್, ಅಲೆಕ್ಸ್‌ ಕ್ಯಾರಿ ಮತ್ತು ಅಂತಿಮ ಹಂತದಲ್ಲಿ ಅಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಇವರೆಲ್ಲ ಆಸೀಸ್‌ ಬ್ಯಾಟಿಂಗ್‌ ಬಲವಾದರೆ, ಅತ್ತ ಅಪ್ಘಾನ್‌ ವಿರುದ್ಧ ಶತಕ ಬಾರಿಸಿದ್ದ ವಿಕೆಟ್‌ ಕೀಪರ್‌ ರಿಯಾನ್‌ ರಿಕಲ್ಟನ್‌, ಅರ್ಧಶತಕ ಗಳಿಸಿದ್ದ ನಾಯಕ ಟೆಂಬ ಬವುಮಾ, ರಸ್ಸಿ ವಾನ್‌ ಡರ್‌ ಡುಸ್ಸೆನ್‌, ಐಡೆನ್‌ ಮಾರ್ಕ್ರಮ್‌ ಇವರೆಲ್ಲ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ಸ್ಟಾರ್‌ಗಳು. ಇವರೆಲ್ಲ ನಾಳಿನ ಪಂದ್ಯದಲ್ಲಿಯೂ ಸಿಡಿದು ನಿಂತರೆ ದೊಡ್ಡ ಮೊತ್ತಕೇನು ಕೊರತೆ ಇಲ್ಲ.

ಮುಖಾಮುಖಿ

ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಇದುವರೆಗೂ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 110 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಆಸ್ಟ್ರೇಲಿಯಾ 55 ಪಂದ್ಯ ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 51 ಪಂದ್ಯ ಜಯಿಸಿದೆ. ಮೂರು ಪಂದ್ಯ ಟೈ ಆಗಿದ್ದರೆ, ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.

ಇದನ್ನೂ ಓದಿ IND vs PAK: ಕೊಹ್ಲಿ ಶತಕ ವೈಭವ; ಪಾಕ್‌ ವಿರುದ್ಧ ಭಾರತಕ್ಕೆ 6 ವಿಕೆಟ್‌ ಜಯ

ಸಂಭಾವ್ಯ ತಂಡಗಳು

ದಕ್ಷಿಣ ಆಫ್ರಿಕಾ: ರಿಯಾನ್ ರಿಕೆಲ್ಟನ್ (ವಿ.ಕೀ), ಟೋನಿ ಡಿ ಜೋರ್ಜಿ, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ.

ಆಸ್ಟ್ರೇಲಿಯಾ: ಮ್ಯಾಥ್ಯೂ ಶಾರ್ಟ್, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲ್ಯಾಬುಶೇನ್‌, ಜೋಶ್ ಇಂಗ್ಲಿಸ್ (ವಿ.ಕೀ.), ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಆಡಮ್ ಝಂಪಾ, ಸ್ಪೆನ್ಸರ್ ಜಾನ್ಸನ್.