ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Saif Ali Khan: ಸೈಫ್‌ ಚಾಕು ಇರಿತ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್;‌ ನಟನ ರಕ್ತದ ಮಾದರಿ ಮತ್ತು ಬಟ್ಟೆ ಸಂಗ್ರಹಿಸಿದ ಪೊಲೀಸರು!

ಕಳೆದ ವಾರ ಮುಂಬೈನ ತಮ್ಮ ನಿವಾಸದಲ್ಲಿಯೇ ನಟ ಸೈಫ್ ಆಲಿ ಖಾನ್ ಚಾಕು ಇರಿತಕ್ಕೊಳಗಾದ ಘಟನೆ ಕುರಿತು ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ ಸೇರಿದಂತೆ ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಚಾಕು ಇರಿತ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ನಟ ಸೈಫ್ ಆಲಿ ಖಾನ್ ಅವರ ರಕ್ತದ ಮಾದರಿ ಮತ್ತು ಬಟ್ಟೆಗಳನ್ನು ಸಂಗ್ರಹಿಸಿದ್ದಾರೆ.

ಸೈಫ್‌ ಆಲಿ ಖಾನ್‌ ರಕ್ತದ ಮಾದರಿ ಮತ್ತು ಬಟ್ಟೆ ಸಂಗ್ರಹಿಸಿದ ಪೊಲೀಸರು!

Saif Ali Khan

Profile Deekshith Nair Jan 25, 2025 1:57 PM

ಮುಂಬೈ: ಕಳೆದ ವಾರ ಮುಂಬೈನ ತಮ್ಮ ನಿವಾಸದಲ್ಲಿ ಬಾಲಿವುಡ್ ನಟ ಸೈಫ್ ಆಲಿ ಖಾನ್(Saif Ali Khan) ಚಾಕು ಇರಿತಕ್ಕೊಳಗಾದ(Stabbing Case) ಘಟನೆ ಕುರಿತು ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ ಸೇರಿದಂತೆ ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಚಾಕು ಇರಿತ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ನಟ ಸೈಫ್ ಆಲಿ ಖಾನ್ ಅವರ ರಕ್ತದ ಮಾದರಿ(Blood Sample) ಮತ್ತು ಬಟ್ಟೆಗಳನ್ನು ಸಂಗ್ರಹಿಸಿದ್ದಾರೆ. ದಾಳಿಯ ವೇಳೆ ಸೈಫ್ ಆಲಿ ಖಾನ್ ಧರಿಸಿದ್ದ ಬಟ್ಟೆಗಳ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಘಟನೆ ನಡೆದ ರಾತ್ರಿ ಆರೋಪಿ ಶರೀಫುಲ್ ಇಸ್ಲಾಂ ಧರಿಸಿದ್ದ ಬಟ್ಟೆಯ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದು, ಇದಕ್ಕಾಗಿ ಸೈಫ್ ಆಲಿ ಖಾನ್ ಅವರ ರಕ್ತದ ಮಾದರಿಯನ್ನೂ ಸಂಗ್ರಹಿಸಲಾಗಿದೆ.



ನಟ ಸೈಫ್‌ ಆಲಿ ಖಾನ್ ರಕ್ತದ ಮಾದರಿ, ಬಟ್ಟೆಗಳು ಮತ್ತು ಹಲ್ಲೆ ನಡೆಸಿದ ವ್ಯಕ್ತಿಯ ಬಟ್ಟೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದ್ದು, ದಾಳಿಕೋರನ ಬಟ್ಟೆಯ ಮೇಲೆ ಅಂಟಿಕೊಂಡಿರುವ ರಕ್ತದ ಕಲೆಗಳು ನಟನದ್ದೇ ಎಂದು ಸಾಬೀತುಪಡಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪಿಯ ಪೊಲೀಸ್ ಕಸ್ಟಡಿಯನ್ನು ಜನವರಿ 29 ರವರೆಗೆ ವಿಸ್ತರಿಸಿದೆ. ಈ ವಿಷಯದಲ್ಲಿ ಸಾಕಷ್ಟು ಬೆಳವಣಿಗೆ ಕಂಡು ಬಂದಿದ್ದು, ಇತರ ಪರಿಣಾಮದ ಅಂಶಗಳ ತನಿಖೆ ಅಗತ್ಯ ಎಂದು ನ್ಯಾಯಾಲಯವು ಹೇಳಿದೆ. ಅಪರಾಧ ಗಂಭೀರವಾಗಿದ್ದು, ಸೆಷನ್ಸ್ ನ್ಯಾಯಾಲಯದಿಂದ ವಿಚಾರಣೆ ನಡೆಯುತ್ತಿದೆ.

ಈ ಸುದ್ದಿಯನ್ನೂ ಓದಿ:Saif Ali Khan: ಸೈಫ್‌ ಆಲಿ ಖಾನ್‌ ಶೀಘ್ರ ಚೇತರಿಕೆಗೆ ಕಾರಣವೇನು? ಡಾ.ದೀಪಕ್‌ ಕೃಷ್ಣಮೂರ್ತಿ ಬಿಚ್ಚಿಟ್ಟ ಮಾಹಿತಿ!

ಕಳೆದ ವಾರ ಸೈಫ್ ಆಲಿ ಖಾನ್ ಮನೆಗೆ ಏಕಾಏಕಿ ನುಗ್ಗಿದ್ದ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದ. ನಂತರ ಆತನನ್ನು ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದ್ದು, ಕಳ್ಳತನ ಮಾಡುವ ಉದ್ದೇಶದಿಂದ ಆತನ ಮನೆಗೆ ನುಗ್ಗಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಆರೋಪಿಯೊಂದಿಗಿನ ಗಲಾಟೆ ವೇಳೆ ಸೈಫ್ ಆಲಿ ಖಾನ್ ಅವರ ಎದೆ, ಬೆನ್ನುಮೂಳೆ ಮತ್ತು ದೇಹದ ಇತರ ಭಾಗಗಳಿಗೆ ಇರಿತದ ಗಾಯಗಳಾಗಿವೆ. ದಾಳಿಯ ನಂತರ ತಕ್ಷಣ ಚಿಕಿತ್ಸೆಗಾಗಿ ನಟನನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ನಟ ಎರಡು ಸರ್ಜರಿಗಳ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದು,ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.