GGTW vs DCW: ಗುಜರಾತ್ ಜಯಂಟ್ಸ್ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ 6 ವಿಕೆಟ್ ಜಯ!
GGTW vs DCW Match Highlights: ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, 2025ರ ಮಹಿಳಾ ಪ್ರೀಮಿಯರ್ ಲೀಗ್ (WPL 2025) ಟೂರ್ನಿಯ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ವಿರುದ್ಧ 6 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.

ಗುಜರಾತ್ ಜಯಂಟ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್‌ಗೆ 6 ವಿಕೆಟ್ ಜಯ.

ಬೆಂಗಳೂರು: ಸಂಘಟಿತ ಪ್ರದರ್ಶನ ತೋರಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 2025ರ ಮಹಿಳಾ ಪ್ರೀಮಿಯರ್ ಲೀಗ್ (WPL 2025) ಟೂರ್ನಿಯ 10ನೇ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ವಿರುದ್ಧ 6 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ ಜೆಸ್ ಜೋನಾಥನ್ ಅರ್ಧಶತಕ ಸಿಡಿಸಿ ಡೆಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ಕೆಲ ದಿನಗಳಿಂದ ಹೈಸ್ಕೋರಿಂಗ್ ಪಂದ್ಯಗಳನ್ನು ಕಣ್ತುಂಬಿಸಿಕೊಂಡಿದ್ದ ಅಭಿಮಾನಿಗಳು, ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜಯಂಟ್ಸ್ ನಡುವಣ ಲೋ ಸ್ಕೋರಿಂಗ್ ಪಂದ್ಯವನ್ನು ನೋಡಬೇಕಾಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಗುಜರಾತ್ ಜಯಂಟ್ಸ್ ತಂಡ, ಡೆಲ್ಲಿಯ ಶಿಸ್ತುಬದ್ದ ಬೌಲಿಂಗ್ ದಾಳಿಯ ಎದುರು ನೆಲ ಕಚ್ಚಿತು. ಇದರ ಪರಿಣಾಮವಾಗಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 127 ರನ್‌ಗಳಿಗೆ ಸೀಮಿತವಾಯಿತು.
WPL 2025: ಮೊಟ್ಟ ಮೊದಲ ಸೂಪರ್ ಓವರ್‌ನಲ್ಲಿ ಯುಪಿ ವಾರಿಯರ್ಸ್ ಎದುರು ಸೋತ ಆರ್‌ಸಿಬಿ!
ಬಳಿಕ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಜೆಸ್ ಜೊನಾಸೆನ್ (61 ರನ್) ಹಾಗೂ ಶಫಾಲಿ ವರ್ಮಾ (44 ರನ್) ಅವರ ಬ್ಯಾಟಿಂಗ್ ಬಲದಿಂದ 15.1 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 131 ರನ್‌ಗಳನ್ನು ಗಳಿಸಿ 6 ವಿಕೆಟ್‌ಗಳ ಗೆಲುವನ್ನು ತನ್ನದಾಗಿಸಿಕೊಂಡಿತು. ಈ ಗೆಲುವಿನ ಮೂಲಕ ಮೆಗ್ ಲ್ಯಾನಿಂಗ್ ನಾಯಕತ್ವದ ಡೆಲ್ಲಿ ತಂಡ ಒಟ್ಟು ಆರು ಅಂಕಗಳ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತು.
Clinical with the bat 🤝 Effective with the ball
— Women's Premier League (WPL) (@wplt20) February 25, 2025
Jess Jonassen is the Player of the Match for her superb all-round show! 🫡
Scorecard ▶️ https://t.co/lb33BTx583#TATAWPL | #DCvGG | @DelhiCapitals | @JJonassen21 pic.twitter.com/x1z1b32YWr
ಗುಜರಾತ್ ಜಯಂಟ್ಸ್ ಬ್ಯಾಟಿಂಗ್ ವೈಫಲ್ಯ
ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಜಯಂಟ್ಸ್ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಡೆಲ್ಲಿಯ ಪರಿಣಾಮಕಾರಿ ಬೌಲಿಂಗ್‌ಗೆ ನಲುಗಿದ ಗುಜರಾತ್‌ನ ಪ್ರಮುಖ ಬ್ಯಾಟರ್‌ಗಳು ನೆಲ ಕಚ್ಚಿದರು. ಗುಜರಾತ್ ತಂಡ ಕೇವಲ 20 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತವನ್ನು ಅನುಭವಿಸಿತ್ತು. ನಂತರ 60 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆ ಮೂಲಕ ಗುಜರಾತ್ 100 ರನ್ ಗಳಿಸುವುದು ಕೂಡ ಅನುಮಾನ ಎಂದು ಹೇಳಲಾಗಿತ್ತು. ಆದರೆ, ಭಾರ್ತಿ ಫುಲ್ಮಾಲಿ 29 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿ ತಂಡದ ಮೊತ್ತವನ್ನು 120ರ ಗಡಿಯನ್ನು ದಾಟಿಸಿದರು. ಬೆಥ್ ಮೂನಿ 10, ದೇವೆಂದ್ರ ಡಾಟಿನ್ 26 ಮತ್ತು ತನುಜಾ ಕಾನ್ಮರ್ 16 ರನ್ ಗಳಿಸಿದರು. ಆದರೆ, ಇನ್ನುಳಿದವರು ಎರಡಂಕಿ ಮೊತ್ತವನ್ನೂ ಕಲೆ ಹಾಕಲಿಲ್ಲ. ಡೆಲ್ಲಿ ಪರ ಶಿಖಾ ಪಾಂಡೆ, ಮಾರಿಝಾನ್ನೆ ಕಾಪ್ ಹಾಗೂ ಅನ್ನಾಬೆಲ್ ಸೌಥರ್ಲೆಂಡ್ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.
Wrapping up a table-topping win! 🔝😎#DC seal the chase in style and become the first team with 3️⃣ wins this season! 👌
— Women's Premier League (WPL) (@wplt20) February 25, 2025
Scorecard ▶️ https://t.co/lb33BTx583#TATAWPL | #DCvGG | @DelhiCapitals pic.twitter.com/Lk67T0hTJG
ಜೆಸ್ ಜೋನಾಸೆನ್ ಸ್ಪೋಟಕ ಅರ್ಧಶತಕ
ಕೇವಲ128 ರನ್‌ಗಳ ಸಾಧಾರಣ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕಿ ಮೆಗ್ ಲ್ಯಾನಿಂಗ್ (3) ಬೇಗ ವಿಕೆಟ್ ಒಪ್ಪಿಸಿದರು. ಆದರೆ, ಶಫಾಲಿ ವರ್ಮಾ (44 ರನ್) ಹಾಗೂ ಜೆಸ್ ಜೋನಾಸೆನ್ 74 ರನ್‌ಗಳ ಜೊತೆಯಾಟವನ್ನು ಆಡಿದರು ಹಾಗೂ ತಂಡದ ಗೆಲುವಿನಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದರು. ಅದರಲ್ಲಿಯೂ ವಿಶೇಷವಾಗಿ ಜೆಸ್ ಜೋನಾಸೆನ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. ಅವರು ಆಡಿದ 32 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 61 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬಹುಬೇಗ ಗೆಲುವಿನ ದಡ ಸೇರಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದರು.