ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Champions Trophy: ಮ್ಯಾಚ್‌ ವಿನ್ನಿಂಗ್‌ ಶತಕದ ಮೂಲಕ ವಿಶೇಷ ದಾಖಲೆ ಬರೆದ ಶುಭಮನ್‌ ಗಿಲ್‌!

Shubman Gill Scored 8th Hundred: ಭಾರತ ತಂಡದ ಯುವ ಆರಂಭಿಕ ಶುಭಮನ್‌ ಗಿಲ್‌ ಬಾಂಗ್ಲಾದೇಶ ವಿರುದ್ಧ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಭಾರತ ತಂಡದ 6 ವಿಕೆಟ್‌ಗಳ ಗೆಲುವಿಗೆ ನೆರವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಮ್ಮ ಎಂಟನೇ ಒಡಿಐ ಶತಕದ ಮೂಲಕ ಗಿಲ್‌ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಬಾಂಗ್ಲಾ ಎದುರು 8ನೇ ಶತಕ ಸಿಡಿಸಿ ದಾಖಲೆ ಬರೆದ ಶುಭಮನ್‌ ಗಿಲ್‌!

ಶುಭಮನ್‌ ಗಿಲ್‌ ಶತಕ ಸಿಡಿಸಿ ಸಂಭ್ರಮಿಸಿದರು.

Profile Ramesh Kote Feb 21, 2025 12:26 AM

ದುಬೈ: ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಸೊಗಸಾಗಿ ಬ್ಯಾಟ್‌ ಮಾಡಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ ಶತಕ ಸಿಡಿಸಿದರು. ಆ ಮೂಲಕ ಭಾರತ ತಂಡ 6 ವಿಕೆಟ್‌ ಗೆಲುವಿಗೆ ನೆರವು ನೀಡುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜರಾದರು. ಇದು ಇವರ ಏಕದಿನ ಕ್ರಿಕೆಟ್‌ ವೃತ್ತಿ ಜೀವನದ 8ನೇ ಶತಕವಾಗಿದೆ. ಆ ಮೂಲಕ ಏಕದಿನ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ವೇಗವಾಗಿ ಎಂಟನೇ ಶತಕ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಬಾಂಗ್ಲಾದೇಶ ತಂಡ, ಒಂದು ಹಂತದಲ್ಲಿ 35 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ತೌಹಿದ್‌ ಹೃದಯ್‌ (100) ಶತಕ ಹಾಗೂ ಜಾಕಿರ್‌ ಅಲಿ (68) ಅವರ ಅರ್ಧಶತಕಗಳಿಂದ ಬಾಂಗ್ಲಾ 228 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಭಾರತಕ್ಕೆ 229 ರನ್‌ಗಳ ಗುರಿಯನ್ನು ನೀಡಿತ್ತು.

IND vs BAN: ಶುಭಮನ್‌ ಗಿಲ್‌ ಶತಕ, ಬಾಂಗ್ಲಾ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಭಾರತ!

ಗುರಿ ಹಿಂಬಾಲಿಸಿದ ಭಾರತ ತಂಡದ ಪರ ರೋಹಿತ್‌ ಶರ್ಮಾ ಆರಂಭದಲ್ಲಿ ಬೌಂಡರಿಗಳ ಮೂಲಕ ಅಬ್ಬರಿಸಿದ್ದರು. ಆದರೆ, ಮತ್ತೊಂದು ತುದಿಯಲ್ಲಿ ಶುಭಮನ್‌ ಗಿಲ್‌ ಸಮಯೋಜಿತ ಆಟವನ್ನು ಆಡುತ್ತಿದ್ದರು. 41 ರನ್‌ ಗಳಿಸಿ ರೋಹಿತ್‌ ಶರ್ಮಾ ವಿಕೆಟ್‌ ಒಪ್ಪಿಸಿದ ಬಳಿಕ, ವಿರಾಟ್‌ ಕೊಹ್ಲಿ ಜೊತೆ ಆಡುವಾಗ ಗಿಲ್‌, ತಮ್ಮ ಬ್ಯಾಟಿಂಗ್‌ ವೇಗವನ್ನು ಹೆಚ್ಚಿಸಿದ್ದರು. ಆದರೆ, ಕೊಹ್ಲಿ ಮತ್ತು ಶ್ರೇಯಸ್‌ ಅಯ್ಯರ್‌ ವಿಕೆಟ್‌ಗಳು ಉರುಳಿದ ಬಳಿಕ ಗಿಲ್‌, ನಿಧಾನಗತಿಯ ಆಟಕ್ಕೆ ಮೊರೆ ಹೋದರು. ಅವರು ತಮ್ಮ ಶತಕವನ್ನು ಪೂರ್ಣಗೊಳಿಸಲು ಬರೋಬ್ಬರಿ 125 ಎಸೆತಗಳನ್ನು ತೆಗೆದುಕೊಂಡರು.

ಶುಭಮನ್‌ ಗಿಲ್‌ ಅವರ ಏಕದಿನ ಸ್ವರೂಪದಲ್ಲಿ ಅತ್ಯಂತ ನಿಧಾನಗತಿಯ ಶತಕ ಮತ್ತು 2010ರ ಬಳಿಕ ಭಾರತದ ಪರ ದಾಖಲಾದ ಅತ್ಯಂತ ಮೂರನೇ ನಿಧಾನಗತಿಯ ಶತಕ ಇದಾಗಿದೆ. 2012ರಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ 128 ಎಸೆತಗಳನ್ನು ಬಾಂಗ್ಲಾದೇಶ ಎದುರು ಶತಕವನ್ನು ಬಾರಿಸಿದ್ದರು. 2010ರ ಬಳಿಕ ಇದು ಅತ್ಯಂತ ನಿಧಾನಗತಿಯ ಶತಕವಾಗಿದೆ. 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ರೋಹಿತ್‌ ಶರ್ಮಾ ಗಳಿಸಿದ್ದ ಶತಕ ಎರಡನೇ ಅತ್ಯಂತ ನಿಧಾನಗತಿಯ ಶತಕವಾಗಿದೆ. ಮಾಜಿ ಬ್ಯಾಟ್ಸ್‌ಮನ್‌ ಮನೋಜ್‌ ತಿವಾರಿ ಶ್ರೀಲಂಕಾ ವಿರುದ್ದ ಸಿಡಿಸಿದ್ದ ಶತಕ ಮತ್ತು ಬಾಂಗ್ಲಾ ಎದುರು ಗಿಲ್‌ ಸಿಡಿಸಿದ ಶತಕ ಜಂಟಿ ಮೂರನೇ ನಿಧಾನಗತಿಯ ಶತಕವಾಗಿದೆ.



ಕಡಿಮೆ ಇನಿಂಗ್ಸ್‌ಗಳಲ್ಲಿ 8 ಶತಕ ಒಡಿಐ ಶತಕ ಸಿಡಿಸಿದ ಗಿಲ್‌

ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಇನಿಂಗ್ಸ್‌ಗಳಲ್ಲಿ ಎಂಟು ಶತಕಗಳನ್ನು ಪೂರ್ಣಗೊಳಿಸಿದ ಭಾರತದ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಶುಭಮನ್‌ ಗಿಲ್‌ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಎಂಟು ಶತಕಗಳನ್ನು ಸಿಡಿಸಲು ಗಿಲ್‌ ಒಟ್ಟು 51 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. 57 ಇನಿಂಗ್ಸ್‌ಗಳಿಂದ 8 ಶತಕಗಳನ್ನು ಬಾರಿಸಿದ್ದ ಶಿಖರ್‌ ಧವನ್‌ ಎರಡನೇ ಸ್ಥಾನದಲ್ಲಿದ್ದಾರೆ.

IND vs BAN: 11000 ಒಡಿಐ ರನ್‌ ಪೂರ್ಣಗೊಳಿಸಿ ಸಚಿನ್‌ ದಾಖಲೆ ಮುರಿದ ರೋಹಿತ್‌ ಶರ್ಮಾ!

ತಮ್ಮ ಶತಕದ ಮೂಲಕ ಶುಭಮನ್‌ ಗಿಲ್‌ ಹೇಳಿದ್ದೇನು?

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಶುಭಮನ್‌ ಗಿಲ್‌, "ಖಂಡಿತವಾಗಿಯೂ ನಾನು ಆಡಿದ ಅತ್ಯಂತ ತೃಪ್ತಿಕರ ಇನ್ನಿಂಗ್ಸ್‌ಗಳಲ್ಲಿ ಇದೂ ಒಂದು ಮತ್ತು ಐಸಿಸಿ ಈವೆಂಟ್‌ಗಳಲ್ಲಿ ನನ್ನ ಮೊದಲ ಶತಕ. ನಾನು ಪ್ರದರ್ಶನ ನೀಡಿದ ರೀತಿ ತುಂಬಾ ತೃಪ್ತಿಕರ ಮತ್ತು ತುಂಬಾ ಸಂತೋಷ ತಂದಿದೆ. ಗ್ರೌಂಡ್‌ನಲ್ಲಿ ಆಡುವುದು ಸುಲಭವಲ್ಲ, ಆದ್ದರಿಂದ ನಾವು ಸ್ಟ್ರೈಕ್ ರೊಟೇಟ್‌ ಮಾಡುತ್ತಲೇ ಇರುತ್ತೇವೆ. ಒಂದು ಹಂತದಲ್ಲಿ ನಮ್ಮ ಮೇಲೆ ಸ್ವಲ್ಪ ಒತ್ತಡವಿತ್ತು. ಕೊನೆಯವರೆಗೂ ಬ್ಯಾಟ್‌ ಮಾಡಲು ಪ್ರಯತ್ನಿಸಬೇಕು ಎಂಬ ಸಂದೇಶ ಹೊರಗಿನಿಂದ ಬಂದಿತ್ತು ಮತ್ತು ಅದನ್ನೇ ನಾನು ಮಾಡಲು ಪ್ರಯತ್ನಿಸಿದೆ," ಎಂದು ತಿಳಿಸಿದ್ದಾರೆ.