ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻರೋಜಾ ಆಚರಿಸದ ಮೊಹಮ್ಮದ್‌ ಶಮಿ ಒಬ್ಬ ಕ್ರಿಮಿನಲ್‌ʼ ಎಂದ ಮೌಲಾನಾ ರಜ್ವಿ!

Maulana Razvi on Mohammed Shami: ಮುಸ್ಲಿಂರ ಪವಿತ್ರ ರಂಜಾನ್‌ ಪ್ರಯುಕ್ತ ರೋಜಾ ಆಚರಣೆಯನ್ನು ನಿರಾಕರಿಸಿರುವ ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರನ್ನು ಅಖಲಿ ಭಾರತೀಯ ಮುಸ್ಲಿಂ ಜಮಾತ್‌ನ ಅಧ್ಯಕ್ಷ ಮೌಲಾನಾ ರಜ್ವಿ ಕ್ರಿಮಿನಲ್‌ ಎಂದು ಟೀಕಿಸಿದ್ದಾರೆ. ಶಮಿ ಇತ್ತೀಚೆಗೆ ದಿನದ ಅವಧಿಯಲ್ಲಿ ತಂಪು ಪಾನೀಯ ಸೇವಿಸುತ್ತಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್‌ ಆಗಿತ್ತು.

ಉಪವಾಸ ಆಚರಿಸದ ಮೊಹಮ್ಮದ್‌ ಶಮಿ ಅಪರಾಧಿ ಎಂದ ಮೌಲಾನಾ!

ಮೊಹಮ್ಮದ್‌ ಶಮಿ ಅಪರಾಧಿ ಎಂದ ಮೌಲಾನಾ ರಜ್ವಿ.

Profile Ramesh Kote Mar 6, 2025 7:00 PM

ನವದೆಹಲಿ: ಮುಸ್ಲಿಂರ ಪವಿತ್ರ ಹಬ್ಬ ರಂಜಾನ್‌ ನಿಮಿತ್ತ ರೋಜಾ ಆಚರಣೆಯನ್ನು ಪಾಲಿಸದ ಭಾರತ ಕ್ರಿಕೆಟ್‌ ತಂಡದ ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರನ್ನು ಅಖಿಲ ಭಾರತೀಯ ಮುಸ್ಲಿಂ ಜಮಾತ್‌ನ ಅಧ್ಯಕ್ಷ ಮೌಲಾನಾ ಶಹಾಬುದ್ದಿನ್‌ ರಜ್ವಿ ಬರೆಲ್ವಿ ಟೀಕಿಸಿದ್ದಾರೆ. ರೋಜಾ ಆಚರಣೆಯನ್ನು ಅನುಸರಿಸದ ಮೊಹಮ್ಮದ್‌ ಶಮಿ ಒಬ್ಬ ಕ್ರಿಮಿನಲ್‌ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪವಿತ್ರ ರಂಜಾನ್ ತಿಂಗಳ ಉಪವಾಸ ನಡೆಯುತ್ತಿದೆ. ಎಲ್ಲಾ ಮುಸ್ಲಿಂ ಬಾಂದವರು ಉಪವಾಸ ಮಾಡುತ್ತಿದ್ದಾರೆ. ಈ ಒಂದು ತಿಂಗಳು ಪೂರ್ತಿ ಎಲ್ಲ ಮುಸ್ಲಿಮರು ಪ್ರವಾದಿ ಮೊಹಮ್ಮದರ ಆಶಯ ಹಾಗೂ ಇಸ್ಲಾಂ ಆಚರಣೆಯಂತೆ ಕಠಿಣ ವೃತ ಮಾಡುತ್ತಾರೆ. ಕಟ್ಟುನಿಟ್ಟಾಗಿ ಉಪವಾಸ ಮಾಡುತ್ತಾರೆ. ಹೀಗಿದ್ದರೂ ಮೊಹಮ್ಮದ್ ಶಮಿ ತಾವೊಬ್ಬ ಮುಸ್ಲಿಂ ಪ್ರಜೆಯಾಗಿ ಕಳೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಉಪವಾಸ ಮಾಡದೆ ಇದ್ದದ್ದು ಇದೀಗ ಬಾರಿ ಚರ್ಚೆಯಾಗುತ್ತಿದೆ.

ಕಳೆದ ಮಂಗಳವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸೆಮಿಫೈನಲ್ ಪಂದ್ಯ ನಡೆದಿತ್ತು. ಪಂದ್ಯದ ವೇಳೆ ಮೊಹಮ್ಮದ್ ಶಮಿ ಡ್ರಿಂಕ್ಸ್ ಬಾಟಲ್ ಹಿಡಿದುಕೊಂಡು ನೀರು ಕುಡಿಯುತ್ತಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕಾರಣವಿಷ್ಟೇ ಈ ತಿಂಗಳು ಮುಸ್ಲಿಮರಿಗೆ ರಂಜಾನ್ ಉಪವಾಸ ನಡೆಯುತ್ತಿದೆ. ಶಮಿ ಅವರ ಆ ಒಂದು ಫೋಟೋ ಸ್ಪಷ್ಟವಾಗಿ ಹೇಳುತ್ತಿತ್ತು ಶಮಿ ಉಪವಾಸ ಮಾಡುತ್ತಿಲ್ಲ ಎಂಬುದನ್ನು. ಶಮಿ ಅವರ ಈ ಒಂದು ಫೋಟೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶಮಿ ದೇಶಕ್ಕಾಗಿ ಉಪವಾಸ ಮುರಿದಿದ್ದಾರೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಹೊಗಳಿದ್ದರು.

IND vs NZ final: ಫೈನಲ್‌ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ

ಶಮಿ ಸದ್ಯ ಭಾರತ ತಂಡದಲ್ಲಿ ಪ್ರಮುಖ ಬೌಲರ್. ಹಾಗಾಗಿ ಸೆಮಿಫೈನಲ್ ಪಂದ್ಯದಲ್ಲಿ ಬೇರೆ, ಅದರಲ್ಲೂ ಎದುರಾಳಿಯಾಗಿ ಇರೋದು ಬಲಿಷ್ಟ ಆಸೀಸ್. ಹಾಗಾಗಿ ತಂದಕ್ಕೋಸ್ಕರ ಶಮಿ ಉಪವಾಸ ಮಾಡದೇ ತಂಡದ ಪ್ರಮುಖ ಬೌಲರ್ ಆಗಿ ಕಾಣಿಸಿಕೊಳ್ಳಬೇಕಾಗಿತ್ತು. ಯಾಕೇಂದ್ರ ಉಪವಾಸ ಇದ್ದುಬೌಲಿಂಗ್ ಮಾಡುವುದು ಕಷ್ಟ. ಹಾಗಾಗಿ ಶಮಿ ಉಪವಾಸ ಮಾಡದೇ ಆ ಒಂದು ಮ್ಯಾಚ್ ಅಲ್ಲಿ ಉತ್ತಮ ಬೌಲಿಂಗ್ ಮಾಡಿದರು. ಆದರೆ ಇದೀಗ ಹೊರಗಡೆ ಶಮಿ ನಿರ್ಧಾರಕ್ಕೆ ಕೆಲ ಮುಸ್ಲಿಂ ಧಾರ್ಮಿಕ ಗುರುಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.



ಮೊಹಮ್ಮದ್‌ ಶಮಿ ಅಪರಾಧಿ ಎಂದ ಮೌಲಾನಾ

ಆದರೆ, ಕೆಲ ಮುಸ್ಲಿಂ ನಾಯಕರು ಮೊಹಮ್ಮದ್‌ ಶಮಿ ಅವರ ಧಾರ್ಮಿಕ ನಡೆಯನ್ನು ವ್ಯಾಪಕವಾಗಿ ಖಂಡಿಸಿದ್ದಾರೆ. ಅದರಂತೆ ಭಾರತೀಯ ಮುಸ್ಲಿಂ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದಿನ್‌ ರಜ್ವಿ ಖಂಡಿಸಿದ್ದಾರೆ. ಈ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ ಅವರು, "ಮೊಹಮ್ಮದ್‌ ಶಮಿ ʻರೋಜಾʼವನ್ನು ಆಚರಿಸಿಲ್ಲವಾದರೆ, ಅವರು ಕ್ರಿಮಿನಲ್‌ ಎಂದರ್ಥ. ಶರಿಯತ್ ದೃಷ್ಟಿಯಲ್ಲಿ ಅವರು ಅಪರಾಧಿ. ಅವರೇ ಸ್ವತಃ ದೇವರಿಗೆ ಉತ್ತರವನ್ನು ನೀಡಬೇಕಾಗುತ್ತದೆ," ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

IND vs NZ: ಫೈನಲ್‌ನಲ್ಲಿ ಭಾರತಕ್ಕೆ ಅಪಾಯವಿದೆ, ಒಮ್ಮೆ ಮುಖಾಮುಖಿ ದಾಖಲೆ ನೋಡಿ!

"ಉಪವಾಸ ಆಚರಿಸುವುದು ಕಡ್ಡಾಯವಾಗಿ ಪಾಲಿಸಬೇಕಾದ ಜವಾಬ್ದಾರಿಯಾಗಿದೆ. ಒಂದು ವೇಳೆ ಆರೋಗ್ಯವಂತ ಪುರುಷ ಅಥವಾ ಮಹಿಳೆಯರು ಉಪಹಾಸವನ್ನು ಪಾಲಿಸಿಲ್ಲವಾದರೆ ಅವರು ದೊಡ್ಡ ಅಪರಾಧಿಗಳಾಗುತ್ತಾರೆ. ಭಾರತದ ಪ್ರಖ್ಯಾತ ಕ್ರಿಕೆಟಿಗ ಮೊಹಮ್ಮದ್‌ ಶಮಿ ಅವರು ಪಂದ್ಯದ ಸಮಯದಲ್ಲಿ ನೀರು ಅಥವಾ ತಂಪಾದ ಪಾನೀಯವನ್ನು ಸೇವಿಸಿದ್ದರು. ಜನರು ಅವರನ್ನು ನೋಡಿದ್ದರು. ಅವರು ಆಡುತ್ತಿದ್ದಾರೆಂದರೆ, ಅವರು ಆರೋಗ್ಯವಾಗಿದ್ದಾರೆಂದು ಅರ್ಥ. ಇಂಥಾ ಸಂದರ್ಭದಲ್ಲಿ ಅವರು ರೋಜಾವನ್ನು ಆಚರಿಸದೆ, ನೀರು ಕುಡಿದಿದ್ದಾರೆ. ಇದು ಜನರಿಗೆ ಕೆಟ್ಟ ಸಂದೇಶವನ್ನು ರವಾನಿಸುತ್ತದೆ," ಎಂದು ಮೌಲಾನಾ ಆರೋಪ ಮಾಡಿದ್ದಾರೆ.