ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

ಮಾರ್ಚ್​ 17ಕ್ಕೆ ಆರ್​ಸಿಬಿ ಅನ್​ಬಾಕ್ಸ್​ ಕಾರ್ಯಕ್ರಮ; ಈ ಬಾರಿಯೂ ಅಭಿಮಾನಿಗಳಿಗೆ ಕಾದಿದೆ ಅಚ್ಚರಿ!

RCB IPL 2025 Unbox Event: ಕಳೆದ ಬಾರಿ ರಾಯಲ್‌ ಚಾಲೆಂಜರ್ ಬ್ಯಾಂಗಳೂರ್‌ ಹೆಸರನ್ನು ರಾಯಲ್‌ ಚಾಲೆಂಜರ್ ಬೆಂಗಳೂರು ಎಂದು ಬದಲಾಯಿಸಲಾಗಿತ್ತು. ಇದರ ಜತೆಗೆ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಚೊಚ್ಚಲ ಕಪ್‌ ಗೆದ್ದ ಆರ್‌ಸಿಬಿ ತಂಡವನ್ನು ಪುರುಷರ ತಂಡ ಗಾರ್ಡ್‌ ಆಫ್‌ ಆನರ್‌ ನೀಡಿ ಗೌರವಿಸಲಾಗಿತ್ತು. ಈ ಬಾರಿ ಅಭಿಮಾನಿಗಳಿಗೆ ಹಲವು ಅಚ್ಚರಿ ಕಾದಿದೆ ಎಂದು ಫ್ರಾಂಚೈಸಿ ತಿಳಿಸಿದೆ.

ಮಾರ್ಚ್​ 17ಕ್ಕೆ ಬೆಂಗಳೂರಿನಲ್ಲಿ ಆರ್​ಸಿಬಿ ಅನ್​ಬಾಕ್ಸ್​ ಕಾರ್ಯಕ್ರಮ

Profile Abhilash BC Mar 4, 2025 11:01 AM

ಬೆಂಗಳೂರು: ಐಪಿಎಲ್​ 18ನೇ(IPL 2025) ಆವೃತ್ತಿಗೆ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಆರ್​ಸಿಬಿ ತಂಡ ಈ ಸಲವೂ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿದೆ. ಕಳೆದ ಮೂರು ವರ್ಷಗಳಿಂದ ಆರ್​ಸಿಬಿ ಅನ್​ಬಾಕ್ಸ್(RCB IPL 2025 Unbox Event)​ ಹೆಸರಿನಲ್ಲಿ ನಡೆಯುತ್ತ ಬಂದಿರುವ ಕಾರ್ಯಕ್ರಮ ಈ ಬಾರಿ ಮಾರ್ಚ್​ 1‌7ರಂದು ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್​ಸಿಬಿ ಅನ್​ಬಾಕ್ಸ್​ನಲ್ಲಿ ತಂಡದ ಹೊಸ ಜೆರ್ಸಿಯನ್ನೂ ಅನಾವರಣಗೊಳಿಸಲಾಗುವುದು. ಜತೆಗೆ ಅಭಿಮಾನಿಗಳ ಎದುರು ಹಲವು ಅಚ್ಚರಿಯ ಮತ್ತು ವಿಶೇಷ ಘೋಷಣೆಗಳನ್ನು ಮಾಡುವುದು ಈ ಬಾರಿಯ ವಿಶೇಷತೆ ಎನ್ನಲಾಗಿದೆ.

ಕಳೆದ ಬಾರಿ ರಾಯಲ್‌ ಚಾಲೆಂಜರ್ ಬ್ಯಾಂಗಳೂರ್‌ ಹೆಸರನ್ನು ರಾಯಲ್‌ ಚಾಲೆಂಜರ್ ಬೆಂಗಳೂರು ಎಂದು ಬದಲಾಯಿಸಲಾಗಿತ್ತು. ಇದರ ಜತೆಗೆ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಚೊಚ್ಚಲ ಕಪ್‌ ಗೆದ್ದ ಆರ್‌ಸಿಬಿ ತಂಡವನ್ನು ಪುರುಷರ ತಂಡ ಗಾರ್ಡ್‌ ಆಫ್‌ ಆನರ್‌ ನೀಡಿ ಗೌರವಿಸಲಾಗಿತ್ತು.



ರಜತ್‌ ಪಾಟಿದಾರ್‌ ಅವರು ಆರ್‌ಸಿಬಿ ತಂಡದ ನೂತನ ನಾಯಕನಾಗಿದ್ದಾರೆ. 2022ರಿಂದ 2024ರವರೆಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್‌ ಡು ಪ್ಲೆಸಿಸ್‌ ಮುನ್ನಡೆಸಿದ್ದರು. ಇವರ ನಾಯಕತ್ವದಲ್ಲಿ ಆರ್‌ಸಿಬಿ ಎರಡು ಬಾರಿ ಪ್ಲೇಆಫ್ಸ್‌ಗೆ ಲಗ್ಗೆ ಇಟ್ಟಿತ್ತು. ಆದರೆ, ಫಾಫ್‌ ನಾಯಕತ್ವದಲ್ಲಿ ಆರ್‌ಸಿಬಿ ಚೊಚ್ಚಲ ಕಪ್‌ ಗೆಲ್ಲಲು ಸಾಧ್ಯವಾಗಲಿಲ್ಲ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆರ್‌ಸಿಬಿ ಟೀಮ್‌ ಮ್ಯಾನೇಜ್‌ಮೆಂಟ್‌ ಇಂದೋರ್‌ ಮೂಲದ ರಜತ್‌ ಪಾಟಿದಾರ್‌ಗೆ ನಾಯಕತ್ವದ ಹೊಣೆಯನ್ನು ನೀಡಿದೆ.

ಈ ಬಾರಿಯ ಉದ್ಘಾಟನ ಪಂದ್ಯದಲ್ಲೇ ಆರ್‌ಸಿಬಿ ಕಣಕ್ಕಿಳಿಯಲಿದೆ. 2024ರ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್‌ (KKR) ತಂಡದ ವಿರುದ್ಧ ಸೆಣಸಾಡಲಿದೆ. ಮಾ. 22ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಈ ಹೈವೋಲ್ಟೇಜ್‌ ಪಂದ್ಯ ನಡೆಯಲಿದೆ.

ಇದನ್ನೂ ಓದಿ IPL 2025: ಕೋಲ್ಕತಾ ನೈಟ್‌ ರೈಡರ್ಸ್‌ಗೆ ಅಜಿಂಕ್ಯ ರಹಾನೆ ನಾಯಕ, ವೆಂಕಟೇಶ್‌ ಅಯ್ಯರ್‌ ಉಪ ನಾಯಕ!

ಆರ್‌ಸಿಬಿ ತಂಡ

ವಿರಾಟ್‌ ಕೊಹ್ಲಿ,ರಜತ್‌ ಪಾಟೀದಾರ್‌, ಯಶ್‌ ದಯಾಳ್‌,ಜೋಶ್​ ಹ್ಯಾಸಲ್​ವುಡ್,​ ಫಿಲ್​ ಸಾಲ್ಟ್​, ಜಿತೇಶ್​ ಶರ್ಮ, ಲಿಯಾಮ್​ ಲಿವಿಂಗ್​ಸ್ಟೋನ್​, ರಸಿಕ್​ ಸಲಾಂ, ಸುಯಶ್​ ಶರ್ಮ, ಭುವನೇಶ್ವರ್​ ಕುಮಾರ್,ಕೃನಾಲ್​ ಪಾಂಡ್ಯ, ಟಿಮ್​ ಡೇವಿಡ್, ಜೇಕಬ್​ ಬೆಥೆಲ್, ದೇವದತ್​ ಪಡಿಕ್ಕಲ್​, ನುವಾನ್​ ತುಷಾರ, ರೊಮಾರಿಯೊ ಶೆರ್ಡ್​, ಸ್ವಪ್ನಿಲ್​ ಸಿಂಗ್​, ಮನೋಜ್​ ಭಾಂಡಗೆ, ಸ್ವಸ್ತಿಕ್​ ಚಿಕರ, ಮೋಹಿತ್​ ರಾಥೀ, ಅಭಿನಂದನ್​ ಸಿಂಗ್​, ಲುಂಗಿ ಎನ್​ಗಿಡಿ.