ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Champions Trophy: ನಾಕ್‌ಔಟ್‌ ಹಂತದಲ್ಲಿ ಭಾರತಕ್ಕೆ ಅಕ್ಷರ್‌ ಪಟೇಲ್‌ ಟ್ರಂಪ್‌ ಕಾರ್ಡ್‌!

Axar Patel is india's Trump Card: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯು ನಿರ್ಣಾಯಕ ಹಂತಕ್ಕೆ ತಲುಪಿದೆ. ಇದೀಗ ಭಾರತ ಹಾಗೂ ಮೊದಲನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಕಾದಾಟ ನಡೆಸುತ್ತಿದೆ. ಟೂರ್ನಿಯ ನಾಕ್‌ಔಟ್‌ ಹಂತದಲ್ಲಿ ಭಾರತ ತಂಡಕ್ಕೆ ಸ್ಪಿನ್‌ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಟ್ರಂಪ್‌ ಕಾರ್ಡ್‌ ಆಗಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅಕ್ಷರ್‌ ಪಟೇಲ್‌ ಭಾರತಕ್ಕೆ ಟ್ರಂಪ್‌ ಕಾರ್ಡ್‌!

ಅಕ್ಷರ್‌ ಪಟೇಲ್‌

Profile Ramesh Kote Mar 4, 2025 3:48 PM

ದುಬೈ: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಪ್ರಭಾವ ಬೀರಬಲ್ಲ ಸ್ಪಿನ್‌ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಭಾರತ ವೈಟ್‌ಬಾಲ್‌ ತಂಡಕ್ಕೆ ಟ್ರಂಪ್‌ ಕಾರ್ಡ್‌ ಆಗಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅವರು ಎರಡೂ ವಿಭಾಗಗಳಲ್ಲಿ ಭಾರತ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ. ಅದರಂತೆ ಟೂರ್ನಿಯ ನಾಕ್‌ಔಟ್‌ ಪಂದ್ಯಗಳಿಗೆ ಅವರು ನಿರ್ಣಾಯಕವಾಗಲಿದ್ದಾರೆ. ಇದಕ್ಕೂ ಮುನ್ನ ಅವರು ನ್ಯೂಜಿಲೆಂಡ್‌ ಕೊನೆಯ ಲೀಗ್‌ ಪಂದ್ಯದಲ್ಲಿ ಅವರು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನವನ್ನು ತೋರಿದ್ದರು.

ಪಂದ್ಯದ ಒತ್ತಡ ಸನ್ನಿವೇಶದಲ್ಲಿ ಪ್ರದರ್ಶನ ತೋರುವ ಮೂಲಕ ಅಕ್ಷರ್‌ ಪಟೇಲ್‌ ಭಾರತ ತಂಡಕ್ಕೆ ದೊಡ್ಡ ಅಸ್ತ್ರವಾಗಿದ್ದಾರೆ. ಲೀಗ್‌ ಹಂತದ ಆರಂಭಿಕ ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ ಅವರು ಸತತ ಎರಡು ವಿಕೆಟ್‌ಗಳನ್ನು ಕಿತ್ತಿದ್ದರು. ಆದರೆ, ರೋಹಿತ್‌ ಶರ್ಮಾ ಕ್ಯಾಚ್‌ ಡ್ರಾಪ್‌ ಮಾಡಿದ್ದರಿಂದ ಅಕ್ಷರ್‌ ಪಟೇಲ್‌ ಹ್ರಾಟಿಕ್‌ ವಿಕೆಟ್‌ ಪಡೆಯುವ ಅವಕಾಶದಿಂದ ವಂಚಿತರಾಗಿದ್ದರು. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ ವಿರುದ್ದದ ಟಿ20ಐ ಸರಣಿಯಲ್ಲಿ ಅವರು ಉಪ ನಾಯಕನಾಗಿ ಆಡಿದ್ದರು.

IND vs AUS: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ

ಅಕ್ಷರ್‌ ಪಟೇಲ್‌ ಇತ್ತೀಚೆಗೆ ಮಾತ್ರ ಉತ್ತಮ ಪ್ರದರ್ಶನ ತೋರಿಲ್ಲ, ಅವರು ಹಲವು ಪಂದ್ಯಗಳಲ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ಅಕ್ಷರ್‌ ಪಟೇಲ್‌ ಅವರು 31 ಎಸೆತಗಳಲ್ಲಿ 47 ರನ್‌ಗಳನ್ನು ಕಲೆ ಹಾಕಿದ್ದರು. ಅದರಲ್ಲಿಯೂ ಅವರು ಒತ್ತಡದ ಸನ್ನಿವೇಶದಲ್ಲಿ ರನ್‌ಗಳನ್ನು ಕಲೆ ಹಾಕಿದ್ದರು. ನ್ಯೂಜಿಲೆಂಡ್‌ ವಿರುದ್ಧ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಜೊತೆ ಅಕ್ಷರ್‌ ಪಟೇಲ್‌ ನಿರ್ಣಾಯಕ 98 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಕೇವಲ 30 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಟೀಮ್‌ ಇಂಡಿಯಾವನ್ನು ಮೇಲೆತ್ತಿದ್ದರು. ಆ ಮೂಲಕ ಅಕ್ಷರ್‌ ಪಟೇಲ್‌ ಅವರ ಬ್ಯಾಟಿಂಗ್‌ ಸಾಮರ್ಥ್ಯ ಮತ್ತೊಮ್ಮೆ ಅನಾವರಣಗೊಂಡಿತ್ತು.

ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಹೊಂದಿಕೊಳ್ಳುವ ಸಾಮರ್ಥ್ಯವೇ ಅಕ್ಷರ್ ಪಟೇಲ್ ಅವರನ್ನು ಅತ್ಯಂತ ಮೌಲ್ಯಯುವ ಆಸ್ತಿಯನ್ನಾಗಿ ಮಾಡಿದೆ. ಆಸ್ಟ್ರೇಲಿಯಾ ವಿರುದ್ದದ ಸೆಮಿಫೈನಲ್‌ ಪಂದ್ಯದಲ್ಲಿಯೂ ಅಕ್ಷರ್‌ ಪಟೇಲ್‌ ಅವರು ಭಾರತ ತಂಡಕ್ಕೆ ಕೀ ಆಟಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಅಕ್ಷರ್‌ ಪಟೇಲ್‌ ಕೆಳ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬರುತ್ತಿದ್ದರು. ಆದರೆ, ಇದೀಗ ಅವರು ಐದನೇ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ. ಇದರಿಂದ ಅವರ ಮೇಲೆ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ.

IND vs AUS: ಸೆಮಿ ಪಂದ್ಯಕ್ಕೂ ಮುನ್ನ ಭಾರತಕ್ಕೆ ತಲೆನೋವಾದ ಟ್ರಾವಿಸ್‌ ಹೆಡ್‌

ಭಾರತ ತಂಡಕ್ಕೆ ಅಕ್ಷರ್‌ ಪಟೇಲ್‌ ಟ್ರಂಪ್‌ ಕಾರ್ಡ್‌

ಭಾರತ ತಂಡದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಿಗೆ ಅಕ್ಷರ್‌ ಪಟೇಲ್‌ ಡೆಪ್ತ್‌ ತಂದುಕೊಡಲಿದ್ದಾರೆ. ಚೆಂಡಿನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ತೋರುವ ಅಕ್ಷರ್‌ ಪಟೇಲ್‌, ಬ್ಯಾಟಿಂಗ್‌ನಲ್ಲಿಯೂ ವಿಶ್ವಾಸದಲ್ಲಿ ಕಾಣುತ್ತಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಅತ್ಯಂತ ಕಠಿಣ ಸನ್ನಿವೇಶಗಳಲ್ಲಿ ಬ್ಯಾಟ್‌ ಮಾಡಿ ರನ್‌ ಗಳಿಸುವ ಸಾಮರ್ಥ್ಯವನ್ನು ಕರಗತ ಮಾಡಿಕೊಂಡಿರುವ ಭಾರತ ತಂಡಕ್ಕೆ ನಾಕ್‌ಔಟ್‌ ಹಂತದಲ್ಲಿ ಟ್ರಂಪ್‌ ಕಾರ್ಡ್‌ ಆಗಿದ್ದಾರೆ.

IND vs AUS: ಭಾರತ-ಆಸೀಸ್‌ ಐಸಿಸಿ ನಾಕೌಟ್‌ ಮುಖಾಮುಖಿಯ ದಾಖಲೆ ಹೇಗಿದೆ?

ಬೌಲಿಂಗ್‌ನಲ್ಲಿಯೂ ಅವರು ಕೀ ಆಟಗಾರ

ಬ್ಯಾಟಿಂಗ್‌ನಲ್ಲಿ ಅವರದು ಎರಡನೇ ಆಧ್ಯತೆಯಾದರೆ, ಅವರ ಪ್ರಥಮ ಆಧ್ಯತೆ ಬೌಲಿಂಗ್‌ ಆಗಿದೆ. ಸ್ಪಿನ್‌ ಸ್ನೇಹಿ ವಿಕೆಟ್‌ ಆದ ದುಬೈನಲ್ಲಿ ಭಾರತಕ್ಕೆ ಕೀ ಬೌಲರ್‌ ಆಗಿದ್ದಾರೆ. ಅದರಂರೆ ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಅವರು ಕ್ಯಾಚ್‌ ಡ್ರಾಪ್‌ನಿಂದಾಗಿ ಅಕ್ಷರ್‌ ಪಟೇಲ್‌ ಹ್ಯಾಟ್ರಿಕ್‌ ವಿಕೆಟ್‌ ಪಡೆಯಬಲ್ಲ ಅವಕಾಶವನ್ನು ಕಳೆದುಕೊಂಡಿದ್ದರು. ಈ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಿಂದ 4 ವಿಕೆಟ್‌ಗಳನ್ನು ಕಬಳಿಸಿದ್ದಾರೆ.