ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Viral News: ಪರೀಕ್ಷೆ ಬರೆಯಲು ಬಂದ ತುಂಬು ಗರ್ಭಿಣಿ- ಎಕ್ಸಾಂ ಹಾಲ್‌ನಿಂದ ನೇರವಾಗಿ ಹೆರಿಗೆ ಕೋಣೆಗೆ! ಹೆಣ್ಣು ಮಗುವಿಗೆ ಜನ್ಮ

ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ಆರ್‌ಇಇಟಿ ಪರೀಕ್ಷೆಗೆ ಹಾಜರಾಗಿದ್ದ ಗರ್ಭಿಣಿ ಪ್ರಿಯಾಂಕಳಿಗೆ ಪರೀಕ್ಷೆಯ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವಳನ್ನು ಸಾದತ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಈ ಸುದ್ದಿ ವೈರಲ್‌(Viral News) ಆಗಿದೆ.

ಎಕ್ಸಾಂ ಬರೆಯೋಕೆ ಬಂದ ತುಂಬು ಗರ್ಭಿಣಿ! ಆಮೇಲೆ ಏನಾಯ್ತು ಗೊತ್ತಾ?

Profile pavithra Mar 4, 2025 2:01 PM

ಜೈಪುರ: ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ಆರ್‌ಇಇಟಿ (ರಾಜಸ್ಥಾನ್ ಎಲಿಜಿಬಿಲಿಟಿ ಎಕ್ಸಾಮಿನೇಷನ್ ಫಾರ್ ಟೀಚರ್ಸ್) ಪರೀಕ್ಷೆಗೆ ಹಾಜರಾಗಿದ್ದ ಗರ್ಭಿಣಿಯೊಬ್ಬಳಿಗೆ ಪರೀಕ್ಷೆಯ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸ್ವಲ್ಪ ಸಮಯದ ನಂತರ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಫೆಬ್ರವರಿ 27 ರಂದು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪರೀಕ್ಷೆ ಪ್ರಾರಂಭವಾದ ಕೂಡಲೇ ಬಾಗ್ಡಿ ಗ್ರಾಮದ ನಿವಾಸಿ ಪ್ರಿಯಾಂಕಾ ಚೌಧರಿಗೆ ಹೆರಿಗೆ ನೋವು ಶುರುವಾಗಿದೆ. ಪರೀಕ್ಷಾ ಅಧೀಕ್ಷಕರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ತಕ್ಷಣ ಪ್ರಿಯಾಂಕಾ ಅವಳನ್ನು ಸಾದತ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಆಕೆ ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಈ ಸುದ್ದಿ ಈಗ ವೈರಲ್‌(Viral News) ಆಗಿದೆ.

ಪ್ರಿಯಾಂಕಾ ಪತಿ ಜೀತ್ರಮ್ ಚೌಧರಿ ಈ ಅನಿರೀಕ್ಷಿತ ಘಟನೆಗಳ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿ, "ಪರೀಕ್ಷೆಯ ಸಮಯದಲ್ಲಿ ಲಕ್ಷ್ಮಿ ನಮ್ಮ ಮನೆಗೆ ಬಂದಿರುವುದು ನಮಗೆ ಅದೃಷ್ಟದ ವಿಷಯ" ಎಂದು ಆತ ಸಂತೋಷವನ್ನು ಹಂಚಿಕೊಂಡಿದ್ದಾನೆ. ಆದರೆ ಹಠಾತ್ ಹೆರಿಗೆ ನೋವಿನಿಂದಾಗಿ ತನ್ನ ಪರೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದಕ್ಕೆ ಪ್ರಿಯಾಂಕಾ ಸ್ವಲ್ಪ ನಿರಾಶೆಗೊಂಡಿದ್ದಾಳೆ ಎಂದು ಜೀತ್ರಮ್ ತಿಳಿಸಿದ್ದಾನೆ.

ಆಸ್ಪತ್ರೆಯ ಆಡಳಿತದ ಪ್ರಕಾರ, ನವಜಾತ ಶಿಶು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಮತ್ತು ಪ್ರಸ್ತುತ ತಾಯಿ ಆಸ್ಪತ್ರೆಯ ಹೆರಿಗೆ ವಾರ್ಡ್‍ನಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂಬುದಾಗಿ ತಿಳಿಸಿದ್ದಾರೆ.ಆರ್‌ಇಇಟಿ ಪರೀಕ್ಷೆಗೆ ರಾಜ್ಯಾದ್ಯಂತ 14 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾವಣೆ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಒಡಿಶಾದ ಮಲ್ಕನ್ಗಿರಿ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯ ಹಾಸ್ಟೆಲ್‍ನಲ್ಲಿ 10 ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ್ದಳು. ಈ ಘಟನೆ ನಡೆದ ನಂತರ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೋರ್ಡ್ ಪರೀಕ್ಷೆಯಲ್ಲಿ ಹಾಜರಾದ ನಂತರ ಹಾಸ್ಟೆಲ್‍ಗೆ ಮರಳಿದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ:Viral Video: ಪರೀಕ್ಷೆ ಬರೆಯುವ ಬದಲು ಪ್ರೀತಿಸಿದ ಯುವಕನನ್ನು ವರಿಸಿದ ಯುವತಿ!

ಪರೀಕ್ಷೆ ಬರೆಯಲು ಹೋದವಳು ಮದ್ವೆಯಾಗಿ ಬಂದ್ಳು

ಬಿಹಾರ ಮೂಲದ ಯುವತಿಯೊಬ್ಬಳು ಪರೀಕ್ಷೆಗೆಂದು ತೆರಳಿ ತಾನು ಪ್ರೀತಿಸಿದ್ದ ಯುವಕನ ಜತೆ ಮದುವೆಯಾಗಿದ್ದಾಳಂತೆ. ವಿದ್ಯಾರ್ಥಿನಿಯ ಈ ನಿರ್ಧಾರ ಕಂಡು ಆಕೆಯ ಪೋಷಕರೇ ಶಾಕ್ ಆಗಿದ್ದಾರೆ‌. ವಿದ್ಯಾರ್ಥಿನಿ ಪರೀಕ್ಷೆ ಬರೆಯುದನ್ನು ಬಿಟ್ಟು ದಾರಿ ಮಧ್ಯೆಯೇ ಪ್ರೀತಿಸಿದ ಯುವಕನ ಭೇಟಿ ಮಾಡಿದ್ದು ಆತ ಆಕೆಗೆ ಸಿಂಧೂರ ಇಡುತ್ತಿರುವ ದೃಶ್ಯ ವೈರಲ್‌ ಆಗಿದೆ.ಪೂರ್ವ ಸಿದ್ಧತೆಯಿಲ್ಲದ ಈ ಸಿಂಧೂರ ಸಮಾರಂಭದ ದೃಶ್ಯವನ್ನು ಆಕೆಯ ಪ್ರಿಯಕರ ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ.