ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

ಸತತ 11ನೇ ಬಾರಿ ಟಾಸ್‌ ಸೋತ ರೋಹಿತ್‌; ನೆಟ್ಟಿಗರಿಂದ ಟ್ರೋಲ್‌ಗಳ ಸುರಿಮಳೆ

Rohit Sharma: ಆಸ್ಟ್ರೇಲಿಯಾ(IND vs AUS) ವಿರುದ್ಧದ ಸೆಮಿ ಫೈನಲ್‌ ಪಂದ್ಯದಲ್ಲಿ ಟಾಸ್‌ ಸೋಲುವ ಮೂಲಕ ಸತತವಾಗಿ ಅತ್ಯಧಿಕ ಬಾರಿ ಟಾಸ್‌ ಸೋತ ನಾಯಕರ ಪಟ್ಟಿಯಲ್ಲಿ ರೋಹಿತ್‌, ಮಾಜಿ ಆಟಗಾರ ಪೀಟರ್ ಬೊರೆನ್(11) ಜತೆ ಜಂಟಿ ದ್ವಿತೀಯ ಸ್ಥಾನ ಪಡೆದರು.

ಸತತ 11ನೇ ಬಾರಿ ಟಾಸ್‌ ಸೋತ ರೋಹಿತ್‌; ನೆಟ್ಟಿಗರಿಂದ ಟ್ರೋಲ್‌ಗಳ ಸುರಿಮಳೆ

Profile Abhilash BC Mar 4, 2025 3:38 PM

ದುಬೈ: ಭಾರತ ತಂಡದ ನಾಯಕ ರೋಹಿತ್‌ ಶರ್ಮ(Rohit Sharma) ಸತತ 11 ಪಂದ್ಯದಲ್ಲಿ ಟಾಸ್‌ ಸೋಲುವ ಮೂಲಕ ನೆಟ್ಟಿಗರಿಂದ ಭಾರೀ ಟ್ರೋಲ್‌ಗೆ ಒಳಗಾಗಿದ್ದಾರೆ. ರೋಹಿತ್‌ ಅವರ ಹಾಸ್ಯಮಯ ಮೀಮ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಆಸ್ಟ್ರೇಲಿಯಾ(IND vs AUS) ವಿರುದ್ಧದ ಸೆಮಿ ಫೈನಲ್‌ ಪಂದ್ಯದಲ್ಲಿ ಟಾಸ್‌ ಸೋಲುವ ಮೂಲಕ ಸತತವಾಗಿ ಅತ್ಯಧಿಕ ಬಾರಿ ಟಾಸ್‌ ಸೋತ ನಾಯಕರ ಪಟ್ಟಿಯಲ್ಲಿ ರೋಹಿತ್‌, ಮಾಜಿ ಆಟಗಾರ ಪೀಟರ್ ಬೊರೆನ್(11) ಜತೆ ಜಂಟಿ ದ್ವಿತೀಯ ಸ್ಥಾನ ಪಡೆದರು. ವೆಸ್ಟ್‌ ಇಂಡೀಸ್‌ನ ಮಾಜಿ ನಾಯಕ ಬ್ರಿಯಾನ್‌ ಲಾರಾ(12) ಅಗ್ರಸ್ಥಾನದಲ್ಲಿದ್ದಾರೆ.

ಭಾರತ ಈ ಪಂದ್ಯಕ್ಕೆ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಕಳೆದ ನ್ಯೂಜಿಲ್ಯಾಂಡ್‌ ವಿರುದ್ಧದ ಅಂತಿಮ ಲೀಗ್‌ ಪಂದ್ಯದಲ್ಲಿ ಆಡಲಿಳಿಸಿದ್ದ ತಂಡವನ್ನೇ ಈ ಪಂದ್ಯಕ್ಕೂ ಮುಂದುವರಿಸಿತು. ಟಾಸ್‌ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ ಆಯ್ದುಕೊಂಡು ಬ್ಯಾಟಿಂಗ್‌ ನಡೆಸುತ್ತಿದೆ.



ಟಾಸ್‌ ಸೋತ ಬಳಿಕ ಮಾತನಾಡಿದ ರೋಹಿತ್‌, ಈ ಹಿಂದಿನ ಮೂರು ಪಂದ್ಯಗಳಲ್ಲಿ ಇಲ್ಲಿ ನಾವು ಟಾಸ್‌ ಸೋತಿದ್ದೇವೆ. ಹೀಗಾಗಿ ನಾಲ್ಕನೇ ಪಂದ್ಯದಲ್ಲಿಯೂ ಟಾಸ್‌ ಸೋತಿರುವ ಬಗ್ಗೆ ಯಾವುದೇ ಬೇಸರವಿಲ್ಲ. ಟಾಸ್‌ ಯಾರು ಗೆದ್ದರೂ, ಯಾರು ಸೋತರು? ಎಂಬುದು ಮುಖ್ಯವಲ್ಲ. ಪಂದ್ಯದ ಕೊನೆಯಲ್ಲಿ ಫಲಿತಾಂಶ ಏನು ಬಂತು ಎಂಬುದಷ್ಟೇ ಮುಖ್ಯ ಎಂದರು.



ರೋಹಿತ್‌ ಈ ಪಂದ್ಯದಲ್ಲಿ 53 ರನ್‌ ಬಾರಿಸಿದರೆ, ಏಕದಿನದಲ್ಲಿ ಅತ್ಯಧಿಕ ರನ್‌ ಗಳಿಸಿದ ಭಾರತೀಯ ನಾಯಕರ ಪಟ್ಟಿಯಲ್ಲಿ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಲಿದ್ದಾರೆ. ಸಚಿನ್‌ 73 ಪಂದ್ಯಗಲ್ಲಿ ನಾಯಕನಾಗಿ 37.75 ಸರಾಸರಿಯಲ್ಲಿ ಆರು ಶತಕಗಳು ಮತ್ತು 12 ಅರ್ಧಶತಕಗಳೊಂದಿಗೆ 2454 ರನ್ ಗಳಿಸಿದ್ದಾರೆ. ರೋಹಿತ್‌ ಸದ್ಯ 53 ಪಂದ್ಯಗಳಲ್ಲಿ ನಾಯಕನಾಗಿ 2387* ರನ್‌ ಬಾರಿಸಿದ್ದಾರೆ.



ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯಲ್ಲಿ ರೋಹಿತ್‌ ಆಡಿದ ಮೂರು ಪಂದ್ಯಗಳಲ್ಲಿ ದೊಡ್ಡ ಮೊತ್ತ ಪೇರಿಸಿಲ್ಲ. ಬಾಂಗ್ಲಾ ವಿರುದ್ಧ 41 ಮತ್ತು ಪಾಕಿಸ್ತಾನ ವಿರುದ್ಧ 20 ರನ್‌, ಕಳೆದ ನ್ಯೂಜಿಲ್ಯಾಂಡ್‌ ವಿರುದ್ಧ 15 ರನ್‌ ಬಾರಿಸಿದ್ದರು. ಹೀಗಾಗಿ ಮಹತ್ವದ ಸೆಮಿ ಪಂದ್ಯದಲ್ಲಿ ಅವರು ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ತೋರಲೇ ಬೇಕಾದ ಅನಿವಾರ್ಯತೆ ಅವರ ಮುಂದಿದೆ.