Relationship: ವೈವಾಹಿಕ ಜೀವನ ಉತ್ತಮವಾಗಿರಲು ದಂಪತಿ ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಬೇಕು?
ಲೈಂಗಿಕತೆ ಎನ್ನುವುದು ಕೇವಲ ಮೋಜಿಗಾಗಿ ಮಾಡುವುದಲ್ಲ. ಇದರಿಂದ ದಂಪತಿಗೆ ಹಲವಾರು ಆರೋಗ್ಯ(Relationship) ಪ್ರಯೋಜನಗಳು ಕೂಡ ಇದೆ. ಹಾಗೇ ವೈವಾಹಿಕ ಜೀವನ ಉತ್ತಮವಾಗಿರಲು ದಂಪತಿಯ ನಡುವೆ ಉತ್ತಮ ಲೈಂಗಿಕತೆಯ ಅವಶ್ಯಕತೆ ಇದೆ. ಆದರೆ ಅದನ್ನು ಎಷ್ಟು ಬಾರಿ ನಡೆಸಬೇಕು? ಎಂಬುದು ತಿಳಿದಿರಬೇಕು. ಹಾಗಾಗಿ ಲೈಂಗಿಕತೆಯ ಬಗ್ಗೆ ಸರಿಯಾದ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.


ಲೈಂಗಿಕತೆ ಎಂಬುದು ಜೀವನದ ಒಂದು ಪ್ರಮುಖ ಅಂಶ. ವೈವಾಹಿಕ ಜೀವನ ಉತ್ತಮವಾಗಿರಲು ದಂಪತಿಯ ನಡುವಿನ ಲೈಂಗಿಕ ಜೀವನ ಉತ್ತಮವಾಗಿರಬೇಕಂತೆ. ಹಾಗೇ ಲೈಂಗಿಕತೆ ಎಂಬುದು ಕೇವಲ ಸಂತೋಷ ಅಥವಾ ಮೋಜಿಗಾಗಿ ಮಾಡುವುದಿಲ್ಲ. ಇದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ಪಡೆಯಬಹುದು. ಹಾಗಾಗಿ ವೈವಾಹಿಕ ಜೀವನ ಉತ್ತಮವಾಗಿರಲು ದಂಪತಿ ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಬೇಕು? ಎಂಬ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಸಂಶೋಧನೆಯ ಪ್ರಕಾರ, ನಿಯಮಿತ ಲೈಂಗಿಕ ಚಟುವಟಿಕೆಯು ದೇಹಕ್ಕೆ ಕೆಲವೊಂದು ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿನ ಜೀವನದ ಜಂಜಾಟದಲ್ಲಿ, ಕೆಲಸ, ಮನೆಕೆಲಸಗಳು ಮತ್ತು ಸೋಶಿಯಲ್ ಮಿಡಿಯಾಗಳಲ್ಲಿ ಹೆಚ್ಚು ಹೊತ್ತು ಸಮಯ ಕಳೆಯುವುದರಿಂದ ಕೆಲವು ದಂಪತಿಗಳ ನಡುವೆ ಅನ್ಯೋನ್ಯತೆ ಕಡಿಮೆಯಾಗಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಕೆಲವೊಬ್ಬರು ಅನ್ಯೋನ್ಯತೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅಂತವರಿಗೆ ಒಂದು ತಿಂಗಳು ಅಥವಾ ವಾರದಲ್ಲಿ ನೀವು ಎಷ್ಟು ಬಾರಿ ಬೇಕಾದರೂ ಲೈಂಗಿಕ ಕ್ರಿಯೆ ನಡೆಸಬಹುದು, ಇದಕ್ಕೆ ಯಾವುದೇ ಮಿತಿಯಿಲ್ಲ. ಇದು ನಿಮ್ಮ ಅಗತ್ಯಗಳನ್ನು ಅವಲಂಬಿಸಿರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೂ, ಕೆಲವು ವೈದ್ಯರು ಮತ್ತು ತಜ್ಞರು ವಾರಕ್ಕೊಮ್ಮೆಯಾದರೂ ಲೈಂಗಿಕ ಕ್ರಿಯೆ ನಡೆಸಲು ಶಿಫಾರಸು ಮಾಡುತ್ತಾರೆ. ಇದು ದಂಪತಿಯ ನಡುವಿನ ಬಂಧವನ್ನು ಬಲಪಡಿಸುತ್ತದೆ ಮತ್ತು ಅವರ ಸಂಬಂಧವನ್ನು ಸುಧಾರಿಸುತ್ತದೆ ಎಂದು ಹೇಳುತ್ತಾರೆ.

ಕೆನಡಾದ ಯಾರ್ಕ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ದಂಪತಿಗಳು ಒಬ್ಬರನೊಬ್ಬರು ತೃಪ್ತಿಪಡಿಸಲು ವಾರಕ್ಕೊಮ್ಮೆ ಲೈಂಗಿಕ ಕ್ರಿಯೆ ನಡೆಸಿದರೂ ಸಾಕು ಎಂದು ಸಂಶೋಧನೆಯಲ್ಲಿ ತಿಳಿಸಿದೆ. ಲೈಂಗಿಕ ಚಟುವಟಿಕೆಯು ವಯಸ್ಸಿಗೆ ತಕ್ಕಂತೆ ಬದಲಾಗುತ್ತಿರುತ್ತದೆ ಎಂದು ಇತ್ತೀಚಿನ ಡೇಟಾ ತೋರಿಸುತ್ತದೆ. 20ರ ಹರೆಯದ ಜನರು ವರ್ಷಕ್ಕೆ ಸರಾಸರಿ 80ಕ್ಕೂ ಹೆಚ್ಚು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರೆ, 30ರಿಂದ 39ರ ಹರೆಯದವರು ವಾರ್ಷಿಕವಾಗಿ ಸರಾಸರಿ 86 ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರಂತೆ. ಈ ಸಂಖ್ಯೆಗಳ ಹೊರತಾಗಿಯೂ, 34% ಪುರುಷರು ತಮ್ಮ ಲೈಂಗಿಕ ಜೀವನದ ಬಗ್ಗೆ ಅತೃಪ್ತಿ ಹೊಂದಿದ್ದಾರೆ ಎಂದು ಅಧ್ಯಯನವು ಕಂಡುಹಿಡಿದಿದೆ.
ಸಾಮಾನ್ಯವಾಗಿ, ವಯಸ್ಕರು ವರ್ಷಕ್ಕೆ ಸರಿಸುಮಾರು 54 ಬಾರಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗುತ್ತಾರೆ. ವಾರಕ್ಕೆ ಹಲವಾರು ಬಾರಿ ಲೈಂಗಿಕ ಕ್ರಿಯೆ ನಡೆಸುವುದರಿಂದ ನಿಮ್ಮ ಸಂಬಂಧ ಉತ್ತಮವಾಗಿ ಮತ್ತು ಹೆಚ್ಚು ತೃಪ್ತಿಯನ್ನುಂಟುಮಾಡುತ್ತದೆ. ಆದರೆ ವಾರಕ್ಕೊಮ್ಮೆ ಮಾತ್ರ ಮಾಡುವ ದಂಪತಿಗಳಿಗಿಂತ ನೀವು ಹೆಚ್ಚು ಸಂತೋಷವಾಗಿರುತ್ತೀರಿ ಎಂದು ಇದು ಖಾತರಿ ನೀಡುವುದಿಲ್ಲ.
ಈ ಸುದ್ದಿಯನ್ನೂ ಓದಿ:Health Benfit: ಸೆಕ್ಸ್ ಮಾಡೋದರಿಂದ ಮಹಿಳೆಯರಿಗೆ ಸಿಗುವ ಆರೋಗ್ಯ ಲಾಭಗಳೇನು?
ಸಂಕ್ಷಿಪ್ತವಾಗಿ ಹೇಳುವುದಾದರೆ, ಅತಿಯಾದ ಲೈಂಗಿಕತೆಯು ಹಾನಿಕಾರಕವಾಗಬಹುದು. ಲೈಂಗಿಕತೆಯಿಂದ ಒತ್ತಡ ಕಡಿಮೆಯಾಗಬಹುದಾದರೂ, ಅದು ಕೆಲವೊಮ್ಮೆ ಒತ್ತಡವನ್ನು ಮತ್ತಷ್ಟು ಹೆಚ್ಚಿಸಬಹುದು. ಹೀಗಾಗಿ, ನಿಮಗೆ ಮತ್ತು ನಿಮ್ಮ ಸಂಗಾತಿಗೆ ಸರಿಹೊಂದುವ ರೀತಿಯಲ್ಲಿ ಅದನ್ನು ನಿಗದಿಪಡಿಸಬೇಕಾಗುತ್ತದೆ. ಆಗ ನೀವು ಅದನ್ನು ಎಷ್ಟು ಬಾರಿ ಮಾಡುತ್ತೀರಿ ಎಂಬುದು ಮುಖ್ಯವಾಗುವುದಿಲ್ಲ.