ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Yagati Raghu Naadig Column: ಐಟಂ ನಂಬರ್ರೇ ಬೆಸ್ಟು!

ರಜನಿಕಾಂತ್ ಅಭಿನಯದಲ್ಲಿ ಮೂಡಿ ಬರುತ್ತಿರುವ ‘ಕೂಲಿ’ ಎಂಬ ಚಲನಚಿತ್ರದಲ್ಲಿ ನಟಿ ಪೂಜಾ ಹೆಗ್ಡೆಯವರು ಕಾಣಿಸಿಕೊಳ್ಳುತ್ತಿದ್ದಾರಂತೆ. ಆದರೆ ಅವರು ಹೆಜ್ಜೆ ಹಾಕಲಿರುವುದು ಐಟಂ ಸಾಂಗಿಗೆ ಎಂಬುದು ಗಮನಿಸಬೇಕಾದ ಸಂಗತಿ. ಹಾಗಂತ ಇದು ‘ಗೌರವ ನಟಿ’, ‘ಅತಿಥಿ ಕಲಾ ವಿದೆ’ ವರ್ಗಕ್ಕೆ ಸೇರುವಂಥ ಪಾತ್ರವೇನೂ ಅಲ್ಲ; ಏಕೆಂದರೆ ಈ ಐಟಂ ಸಾಂಗಿ ನಲ್ಲಿ ಕುಣಿದು ಕುಪ್ಪಳಿಸಲು ಅವರು ಬರೋಬ್ಬರಿ ಐದು ಕೋಟಿ ರುಪಾಯಿ ಸಂಭಾವನೆಯನ್ನು ಪಡೆದಿದ್ದಾ ರಂತೆ

ಐಟಂ ನಂಬರ್ರೇ ಬೆಸ್ಟು!

ನಟಿ ಪೂಜಾ ಹೆಗ್ಡೆ

Profile Ashok Nayak Mar 4, 2025 10:41 AM

ನಾರದ ಸಂಚಾರ

ಕಲಹ ಪ್ರಿಯ

naadigru@gmail.com

ರಜನಿಕಾಂತ್ ಅಭಿನಯದಲ್ಲಿ ಮೂಡಿ ಬರುತ್ತಿರುವ ‘ಕೂಲಿ’ ಎಂಬ ಚಲನಚಿತ್ರದಲ್ಲಿ ನಟಿ ಪೂಜಾ ಹೆಗ್ಡೆಯವರು ಕಾಣಿಸಿಕೊಳ್ಳುತ್ತಿದ್ದಾರಂತೆ. ಆದರೆ ಅವರು ಹೆಜ್ಜೆ ಹಾಕಲಿರುವುದು ಐಟಂ ಸಾಂಗಿಗೆ ಎಂಬುದು ಗಮನಿಸಬೇಕಾದ ಸಂಗತಿ. ಹಾಗಂತ ಇದು ‘ಗೌರವ ನಟಿ’, ‘ಅತಿಥಿ ಕಲಾವಿದೆ’ ವರ್ಗಕ್ಕೆ ಸೇರುವಂಥ ಪಾತ್ರವೇನೂ ಅಲ್ಲ; ಏಕೆಂದರೆ ಈ ಐಟಂ ಸಾಂಗಿ ನಲ್ಲಿ ಕುಣಿದು ಕುಪ್ಪಳಿಸಲು ಅವರು ಬರೋಬ್ಬರಿ ಐದು ಕೋಟಿ ರುಪಾಯಿ ಸಂಭಾವನೆ ಯನ್ನು ಪಡೆದಿದ್ದಾರಂತೆ. ಇದಕ್ಕೂ ಮುನ್ನ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರ ದಲ್ಲೂ ‘ವಾನು ಕಾವಾಲಯ್ಯ’ ಎಂಬ ಐಟಂ ಸಾಂಗಿಗೆ ಕುಣಿದು ಕೈತುಂಬಾ ದುಡ್ಡು ಎಣಿಸಿಕೊಂಡಿದ್ದರು ನಟಿ ತಮನ್ನಾ ಭಾಟಿಯಾ.

ಇದನ್ನೂ ಓದಿ: Yagati Raghu Naadig Column: ಹೀಗೊಬ್ಬ ಮಹಾನ್‌ ಜ್ಞಾನಿ !

ಈ ಎರಡೂ ಸುದ್ದಿಗಳನ್ನು ಓದಿದ ಮಿಕ್ಕ ಕೆಲ ನಟೀಮಣಿಯರು, ತಿಂಗಳಾನುಗಟ್ಟಲೆ ಕಾಲ್‌ಶೀಟ್ ಕೊಟ್ಟು ಅಲ್ಪಸ್ವಲ್ಪ ಮೊತ್ತದ ಸಂಭಾವನೆ ಪಡೆಯುವುದಕ್ಕಿಂತ, ಕ್ಯಾಬರೆ ಸಾಂಗೋ ಐಟಂ ಸಾಂಗೋ ಅಂತ ನೋಡದೆ ಕುಣಿದು ದುಡ್ಡು ಎಣಿಸಿಕೊಳ್ಳೋದೇ ಬೆಟರ್ರು ಎಂಬ ತೀರ್ಮಾನಕ್ಕೆ ಬಂದಿದ್ದಾರಂತೆ. ಹಾಗೆ ನೋಡಿದರೆ, ತ್ರಿಲೋಕ ಸಂಚಾರಿ ಯೂ, ಕಲಹಪ್ರಿಯರೂ ಆಗಿರುವ ನಾರದರು ಇಂಥ ‘ಐಟಂ ಸಾಂಗ್’ ಕುರಿತಾದ ಸುದ್ದಿಯ ಕುರಿತು ಕಣ್ಣು ಹಾಯಿ ಸುವುದು ಕಮ್ಮಿಯೇ; ಆದರೆ ಕುತೂಹಲ ಕೆರಳಿಸುವ ವಿಷಯ ವಿದ್ದಲ್ಲಿ ಮತ್ತು ಅದು ಸುದ್ದಿಗೂ, ಗಾಳಿಸುದ್ದಿಗೂ ಕಾರಣವಾಗುವುದಾದಲ್ಲಿ ಯಾಕೆ ‘ಒಂದ್ ದಪಾ’ ಟ್ರೈ ಮಾಡ ಬಾರದು ಎಂಬ ಎಣಿಕೆಯಲ್ಲಿ ಹೀಗೊಂದು ವಿಶ್ಲೇಷಣೆಯನ್ನು ನೀಡಿದ್ದಾರೆ. ನೀವು ಮಾತ್ರ, ‘ಗೋಲ್‌ಮಾಲ್ ರಾಧಾಕೃಷ್ಣ’ ಚಿತ್ರದ ಸೀತಾಪತಿಯವರು ಹೇಳುವಂತೆ ‘ಅಪಾರ್ಥ ಮಾಡ್ಕೋಬೇಡಿ...’!

ಮುಳುಗಿದರೂ ತೇಲಿದರೂ ಕಷ್ಟ!

ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರರು ಇತ್ತೀಚೆಗೆ ಶಾನೇ ಸುದ್ದಿಯಲ್ಲಿದ್ದಾರೆ; ಅದು ‘ಮುಖ್ಯಮಂತ್ರಿ’ ಪಟ್ಟವನ್ನು ಪಡೆಯುವುದಕ್ಕೆ ಸಂಬಂಧಿಸಿದ್ದಲ್ಲ, ಅದಕ್ಕೆ ಹೊರ ತಾದ ಎರಡು ಕಾರಣಗಳಿಗೆ. ಆದರೆ ಅವೆರಡೂ ‘ಧಾರ್ಮಿಕ’ ನೆಲೆಯವಾಗಿದ್ದು ಕ್ರಮೇಣ ರಾಜಕೀಯದ ಲೇಪಕ್ಕೂ ಒಳಗಾದವು ಅಥವಾ ‘ರಾಜಕೀಯದ ಕನ್ನಡಕ’ದೊಳಗಿಂದ ಅವನ್ನು ನೋಡಲಾಯಿತು ಎಂಬುದು ಗಮನಿಸಬೇಕಾದ ಸಂಗತಿ.

ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಡಿಕೆಶಿ ಪಾಲ್ಗೊಂಡು, ಅಲ್ಲಿನ ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದು ಪುಣ್ಯಸ್ನಾನ ಮಾಡಿದ್ದು ಈ ಪೈಕಿ ಒಂದಾದರೆ, ಮತ್ತೊಂದು ಮೊನ್ನೆ ಸದ್ಗುರು ಜಗ್ಗಿ ವಾಸುದೇವ್ ಅವರ ಈಶಾ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ಶಿವರಾತ್ರಿ ಆಚರಣೆಯ ಸಂದರ್ಭದಲ್ಲಿ ಶಿವನಾಮ ಸ್ಮರಣೆಯಲ್ಲಿ ಅವರು ತೇಲಿದ್ದು. ಈ ಸಂದರ್ಭದಲ್ಲಿ ಬಿಜೆಪಿಯ ಚಾಣಕ್ಯ ಅಮಿತ್ ಶಾ ಅವರೂ ಇದ್ದರು ಎಂಬುದು ಅನೇಕ ಕಾಂಗ್ರೆಸ್ಸಿಗರ ಕಣ್ಣನ್ನು ಕೆಂಪಾಗಿಸಿದೆಯಂತೆ.

ಈ ಸುದ್ದಿಯನ್ನು ಅವರಿವರಿಂದ ಕೇಳಿ ತಿಳಿದುಕೊಂಡು ಡಿಕೆಶಿ ಅಭಿಮಾನಿಗಳು, “ಹಂಗಾದ್ರೆ ನಮ್ ಗುರು ತ್ರಿವೇಣಿ ಸಂಗಮದಲ್ಲಿ ಮುಳುಗಿದ್ರೂ ತಪ್ಪು, ಶಿವರಾತ್ರಿಯಂದು ಶಿವನಾಮ ಸ್ಮರಣೆಯ ಅಲೆಯಲ್ಲಿ ತೇಲಿದ್ರೂ ತಪ್ಪು ಅನ್ಕೋಬೇಕಾ ಗುರುವೇ?" ಅಂತ ಪ್ರಶ್ನಿಸಿ ಶಾನೇ ಬೇಜಾರು ಮಾಡಿಕೊಂಡಿದ್ದಾರಂತೆ!