ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

ಐಪಿಒ ಮೂಲಕ 392 ಕೋಟಿ ರು ಸಂಗ್ರಹಿಸಲು ಪ್ರಣವ್‌ ಕನ್ಸಟ್ರಕ್ಷನ್‌ ಸಜ್ಜು

ಐಪಿಒ ಪೂರ್ವದಲ್ಲಿ 78.40 ಕೋಟಿ ಮೌಲ್ಯದ ಷೇರುಗಳನ್ನು ಖಾಸಗಿ ನಿಯೋಜನೆ ಮೂಲ ಕ ಮಾರಾಟ ಮಾಡುವ ಉದ್ದೇಶ ಹೊಂದಿದೆ. ಬಿಡುಗಡೆಯಾಗುತ್ತಿರುವ ಹೊಸ ಷೇರುಗಳಲ್ಲಿ ಶೇ.75ರಷ್ಟು ಅರ್ಹ ಸಾಂಸ್ಥಿಕ ಖರೀದಿದಾರರಿಗೆ, ಶೇ.15ರಷ್ಟು ನಾನ್‌ ಇನ್‌ಸ್ಟಿಕ್ಯೂ ಶನಲ್‌ ಹೂಡಿಕೆದಾರರರಿಗೆ (ಎನ್‌ಐಐ) ಹಾಗೂ ಶೇ.10ರಷ್ಟು ರಿಟೇಲ್‌ ಹೂಡಿಕೆದಾರರಿಗೆ ಮೀಸಲಿಡ ಲಾಗಿದೆ

ಇಕ್ವಿಟಿ ಷೇರುಗಳು ಬಿಎಸ್‌ಇ ಮತ್ತು ಎನ್‌ಎಸ್‌ಇಲಿ ಲಿಸ್ಟ್‌ ಆಗಲು ಪ್ರಸ್ತಾವನೆ

Profile Ashok Nayak Mar 4, 2025 11:41 AM

ಮುಂಬೈ ಮೂಲದ ರಿಯಲ್‌ ಎಸ್ಟೇಟ್‌ ಸಂಸ್ಥೆ ಪ್ರಣವ್‌ ಕನ್ಸ್ಟಟ್ರಕ್ಷನ್‌ ಲಿಮಿಟೆಡ್‌ ಆರಂಭಿ ಕ ಸಾರ್ವಜನಿಕ ಷೇರು ಬಿಡುಗಡೆ (ಐಪಿಒ)ಗೆ ಲಗ್ಗೆ ಇಡಲು ಸಜ್ಜಾಗಿದೆ. ಸೆಕ್ಯೂರಿಟಿ ಎಕ್ಸ್‌ ಚೇಂಜ್‌ ಬೋರ್ಡ್ ಆಫ್‌ ಇಂಡಿಯಾ (ಸೆಬಿ)ಗೆ 392 ಕೋಟಿ ರು ಮೊತ್ತದ ಐಪಿಒಗಾಗಿ ಡಿಆರ್‌ಹೆಚ್‌ಪಿ ಸಲ್ಲಿಕೆ ಮಾಡಿದೆ. 10 ರೂ ಷೇರಿನ ಮುಖಬೆಲೆಯಾಗಿದ್ದು ಬಿಡುಗಡೆಯಾಗು ತ್ತಿರುವ 392 ಕೋಟಿ ರು ಮೊತ್ತದಲ್ಲಿ ಹಾಲಿ ಪ್ರಮೋಟರ್‌ ಹಾಗೂ ಹೂಡಿಕೆದಾರರಾದ ಬಯೊಉರ್ಜಾ ಇಂಡಿಯಾ ಇನ್‌ಫ್ರಾ ಪ್ರ್ಯವೇಟ್‌ ಲಿಮಿಟೆಡ್‌ ನ 23,07,472 ರೂ ಮೊತ್ತದ ಇಕ್ವಿಟಿ ಷೇರು ಹಾಗೂ ರವಿ ರಾಮಲಿಂಗಮ್‌ ಅವರ 5,49,397 ಕೋಟಿ ರು ಮೊತ್ತದ ಇಕ್ವಿಟಿ ಆಫರ್‌ ಫಾರ್ ಸೇಲ್‌ ಮೂಲಕ ಮಾರಾಟಗೊಳ್ಳಲಿದೆ.

ಐಪಿಒ ಪೂರ್ವದಲ್ಲಿ 78.40 ಕೋಟಿ ಮೌಲ್ಯದ ಷೇರುಗಳನ್ನು ಖಾಸಗಿ ನಿಯೋಜನೆ ಮೂಲ ಕ ಮಾರಾಟ ಮಾಡುವ ಉದ್ದೇಶ ಹೊಂದಿದೆ. ಬಿಡುಗಡೆಯಾಗುತ್ತಿರುವ ಹೊಸ ಷೇರು ಗಳಲ್ಲಿ ಶೇ.75ರಷ್ಟು ಅರ್ಹ ಸಾಂಸ್ಥಿಕ ಖರೀದಿದಾರರಿಗೆ, ಶೇ.15ರಷ್ಟು ನಾನ್‌ ಇನ್‌ಸ್ಟಿಕ್ಯೂ ಶನಲ್‌ ಹೂಡಿಕೆದಾರರರಿಗೆ (ಎನ್‌ಐಐ) ಹಾಗೂ ಶೇ.10ರಷ್ಟು ರಿಟೇಲ್‌ ಹೂಡಿಕೆದಾರರಿಗೆ ಮೀಸಲಿಡಲಾಗಿದೆ.

ಇದನ್ನೂ ಓದಿ: Reality Check: ಬಂಕ್ ಸಿಬ್ಬಂದಿ ಮೋಸ ಕಂಡು ರಿಯಾಲಿಟಿ ಚೆಕ್ ಮಾಡಿದ ಗ್ರಾಹಕ

ಐಪಿಒ ಮೂಲಕ ಸಂಗ್ರಹಿಸಲಾದ ಹಣದಲ್ಲಿ ಸಂಸ್ಥೆ 223.75 ಕೋಟಿ ರೂ ಹಣವನ್ನು ಸರ್ಕಾರಿ ಹಾಗೂ ಸಾಂವಿಧಾನಿಕ ಅನುಮತಿ ಪಡೆಯಲು, ಹೆಚ್ಚುವರಿ ಎಫ್‌ಎಸ್‌ಐ ಖರೀದಿ, ಪುನರ್‌ನಿರ್ಮಾಣ ಹಾಗೂ ನಿರ್ಮಾಣಹಂತದಲ್ಲಿನ ಕೆಲವು ಯೋಜನೆಗಳಿಗೆ ಸಂಬಂಧಿಸಿ ಪರ್ಯಾಯ ವಸತಿ ಹಾಗೂ ಪರಿಹಾರ ನೀಡಲು, 74 ಕೋಟಿ ರೂ ಹಣವನ್ನು ಸಾಲ ಬಾಕಿ ಪಾವತಿಸಲು ಹಾಗೂ ಭವಿಷ್ಯದ ಯೋಜನೆಗಳಿಗೆ ಬಳಸಲಾಗುತ್ತಿದೆ.

ಸೆಂಟ್ರಲ್‌ ಕ್ಯಾಪಿಟಲ್‌ ಲಿಮಿಟೆಡ್‌ ಮತ್ತು ಪಿಎನ್‌ಬಿ ಇನ್‌ವೆಸ್ಟ್‌ಮೆಂಟ್‌ ಸರ್ವಿಸ್‌ ಲಿಮಿ ಟೆಡ್‌ ಬುಕ್‌ ರನ್ನಿಂಗ್‌ ಲೀಡ್‌ ಮ್ಯಾನೇಜರ್‌ಗಳಾಗಿದ್ದು ಕೆಎಫ್‌ಇನ್‌ ಟೆಕ್ನಾಲಜಿಸ್‌ ಲಿಮಿ ಟೆಡ್‌ ಈ ಆಫರ್‌ನ ರಿಜಿಸ್ಟ್ರಾರ್‌ ಆಗಿದೆ. ಇಕ್ವಿಟಿ ಷೇರುಗಳು ಬಿಎಸ್‌ಇ ಮತ್ತು ಎನ್‌ಎಸ್‌ಇಲಿ ಲಿಸ್ಟ್‌ ಆಗಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಸಂಸ್ಥೆ ಬಗ್ಗೆ ಮಾಹಿತಿ

ಪ್ರಣವ್‌ ಕನ್‌ಸ್ಟ್ರಕ್ಷನ್‌ ಲಿಮಿಟೆಡ್‌ ಬಹುದೊಡ್ಡ ರಿಯಲ್‌ ಎಸ್ಟೇಟ್‌ ಡೆವಲಪರ್‌ ಸಂಸ್ಥೆ ಯಾಗಿದ್ದು ಮುಂಬೈನ ಪಶ್ಚಿಮ ಉಪನಗರಗಳಲ್ಲಿ ಎಮ್‌ಸಿಜಿಎಮ್‌ ಪುನರ್‌ ನಿರ್ಮಾಣ ಯೋಜನೆಗಳಲ್ಲಿ ಮುಂಚೂಣಿಯಲ್ಲಿದೆ. 27 ಯೋಜನೆಗಳಲ್ಲಿ 1503 ಯುನಿಟ್‌ಗಳನ್ನು ಹೊಂದಿದ್ದು ಸಂಸ್ಥೆ ಆರ್ಥಿಕ , ಮಧ್ಯಮ, ಮೇಲ್ಮಧ್ಯಮ ವರ್ಗದ ವಸತಿ ವಿಭಾಗಗಳ ಪುನರ್‌ ನಿರ್ಮಾಣ ಯೋಜನೆಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಈ ಮೂಲಕ ವಿಶ್ವಾಸಾರ್ಹ ಬ್ಯ್ರಾಂಡ್‌ ಆಗಿ ಪ್ರಣವ್‌ ಕನ್‌ಸ್ಟ್ರಕ್ಷನ್‌ ಲಿಮಿಟೆಡ್‌ ಹೊರಹೊಮ್ಮಿದೆ.

21 ವರ್ಷಗಳ ರಿಯಲ್‌ ಎಸ್ಟೇಟ್‌ ಅನುಭವ ಹೊಂದಿರುವ ಪ್ರಣವ್‌ ಕಿರಣ್‌ ಆಶರ್‌ ಹಾಗೂ ಹಣಕಾಸು ಕ್ಷೇಥ್ರದಲ್ಲಿ 16 ವರ್ಷ ಅನುಭವ ಹೊಂದಿರುವ ರವಿ ರಾಮಲಿಂಗಮ್‌ ನಾಯಕ ತ್ವದಲ್ಲಿ ಸಂಸ್ಥೆ 2012ರಿಂದ ಪುನರ್‌ನಿರ್ಮಾಣ ಕ್ಷೇತ್ರದಲ್ಲಿ ಛಾಫು ಮೂಡಿಸುತ್ತಿದೆ. ಡಿಸೆಂಬರ್‌ 31, 2024ರವರೆಗೆ ತೆರಿಗೆ ಒಂಭತ್ತು ತಿಂಗಳ ಅವಧಿಯಲ್ಲಿ ತೆರಿಗೆ ಕಡಿತ ಬಳಿಕ ಏಕೀಕೃತ ಆದಾಯ 430.59 ಕೋಟಿ ರೂ ಇದ್ದು ಏಕೀಕೃತ ಲಾಭ 43.04 ಕೋಟಿ ರೂ ಎಂದು ವರದಿಯಾಗಿದೆ.