Viral Video: ಈ ಚಟ್ನಿ ತಿಂದರೆ... ಸ್ವರ್ಗಕ್ಕೆ ಮೂರೇ ಮೂರು ಗೇಣಂತೆ! ಏನಿದು ಹಾಟ್ ಮೊಮೊ ಚಟ್ನಿ!
ಸೋಶಿಯಲ್ ಮೀಡಿಯಾದಲ್ಲಿ ಮೊಮೊ ಚಟ್ನಿಯ ವಿಡಿಯೊಂದು ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಇದರಲ್ಲಿ ನೂರಾರು ಮೆಣಸಿನಕಾಯಿಗಳನ್ನು ಸೇರಿಸಿ ಚಟ್ನಿ ತಯಾರಿಸಿದ್ದಾರಂತೆ. ಇದರಲ್ಲಿ ಎಷ್ಟು ಖಾರವಿದೆ ಎಂದು ಊಹಿಸಿ ನೆಟ್ಟಿಗರು ಕೂಡ ಹೌಹಾರಿದ್ದಾರೆ. ಈ ಚಟ್ನಿ ತಿಂದವರ ಬಾಯಿಯನ್ನು ಸುಡಬಹುದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.


ಕೆಲವು ಜನರಿಗೆ ಖಾರ ತಿನ್ನುವುದೆಂದರೆ ತುಂಬಾ ಇಷ್ಟ. ಹಾಗಾಗಿ ಅವರಿಗೆ ಊಟದಲ್ಲಿ ಎಷ್ಟು ಖಾರ ಇದ್ದರೂ ಖುಷಿನೇ. ಅಂತವರಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಮೊಮೊ ಚಟ್ನಿಯ ವಿಡಿಯೊಂದು ಹರಿದಾಡುತ್ತಿದೆ. ಈ ಚಟ್ನಿಯ ವಿಡಿಯೊ ಮಾತ್ರ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ವಿಡಿಯೊದಲ್ಲಿ ಮೊಮೊ ಚಟ್ನಿಯ ಪಾಕವಿಧಾನವನ್ನು ರೆಕಾರ್ಡ್ ಮಾಡಲಾಗಿದೆ. ಇದರಲ್ಲಿ ಒಂದಲ್ಲ ಎರಡಲ್ಲ ನೂರಾರು ಮೆಣಸಿನಕಾಯಿಗಳನ್ನು ಸೇರಿಸಿ ಚಟ್ನಿ ತಯಾರಿಸಿದ್ದಾರೆ. ಹಾಗಾಗಿ ಇದನ್ನು ನೋಡಿದಾಗಲೇ ಇದರಲ್ಲಿ ಎಷ್ಟು ಖಾರವಿದೆ ಎಂಬುದನ್ನು ತಿಳಿದು ನೆಟ್ಟಿಗರು ಕೂಡ ಶಾಕ್ ಆಗಿದ್ದಾರೆ.
ಇನ್‌ಸ್ಟಾಗ್ರಾಂ ಕಂಟೆಂಟ್ ಕ್ರಿಯೇಟರ್ @foodie_incarnate ಇತ್ತೀಚೆಗೆ ಮೊಮೊ ಔಟ್ಲೆಟ್ ಮಸಾಲೆಯುಕ್ತ ಕೆಂಪು ಚಟ್ನಿಯನ್ನು ಹೇಗೆ ತಯಾರಿಸಿದ್ದಾರೆ ಎಂಬುದರ ಬಗ್ಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮರ್ ಚಟ್ನಿ ತಯಾರಿಕೆಯ ದೃಶ್ಯಗಳನ್ನು ರೆಕಾರ್ಡ್ ಮಾಡಿ, “ಕೆಲವರು ಮೊಮೊಸ್ ತಿನ್ನಲು ಕೆಂಪು ಚಟ್ನಿಯನ್ನು ಇಷ್ಟಪಟ್ಟರೆ, ಇತರರು ಅದನ್ನು ಸಂಪೂರ್ಣವಾಗಿ ದ್ವೇಷಿಸುತ್ತಾರೆ" ಎಂದು ಬರೆದಿದ್ದಾರೆ.
ವೈರಲ್ ವಿಡಿಯೊದಲ್ಲಿ ಕೆಂಪು ಮೆಣಸಿನಕಾಯಿ ಚಟ್ನಿಯನ್ನು ತಯಾರಿಸುವ ವಿಧಾನವನ್ನು ಸೆರೆಹಿಡಿಯಲಾಗಿದೆ. ಒಣಗಿದ ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ, ಟೊಮೆಟೊ ಕೆಚಪ್ ಮತ್ತು ಟ್ಯಾಂಗಿ ವಿನೆಗರ್‌ನಂತಹ ಪದಾರ್ಥಗಳನ್ನು ಬಳಸಿಕೊಂಡು ಸ್ಪೈಸಿ ಚಟ್ನಿ ತಯಾರಿಸಿದ್ದಾರೆ. ಎಲ್ಲಾ ಪದಾರ್ಥಗಳನ್ನು ಸೇರಿಸಿ ನಯವಾಗಿ ರುಬ್ಬಿದ ಈ ಖಾರವಾದ ಚಟ್ನಿ ಜೊತೆಗೆ ಮೊಮೊಸ್ ತಿಂದರೆ ಸ್ವರ್ಗಕ್ಕೆ ಮೂರೇ ಗೇಣಂತೆ!
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ , ಚಟ್ನಿಯಲ್ಲಿರುವ ಮಸಾಲೆಯನ್ನು ನೋಡಿ ನೆಟ್ಟಿಗರನ್ನು ಶಾಕ್ ಆಗಿದ್ದಾರೆ. ಮೊಮೊಸ್‍ಗಾಗಿ ಸೈಡ್ ಡಿಶ್ ತಯಾರಿಸುವ ಅನೈರ್ಮಲ್ಯ ವಿಧಾನದ ಬಗ್ಗೆ ಕೆಲವರು ಪ್ರಶ್ನೆಗಳನ್ನು ಎತ್ತಿದರೆ, ಇತರರು ಈ ಚಟ್ನಿ ಮಾಡುವಾಗ ಮೆಣಸಿನಕಾಯಿಗಳ ರಾಶಿಯನ್ನು ಬಳಸಲಾಗಿದೆ. ಹೀಗಾಗಿ ಈ ಚಟ್ನಿ ತಿಂದವರ ಬಾಯಿಯನ್ನು ಸುಡಬಹುದು ಎಂದು ಸೂಚಿಸಿ ‘ಫೈಯರ್’ ಎಮೋಜಿಯನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಶಹದಾರಾದ ಫರ್ಶ್ ಬಜಾರ್ ಪ್ರದೇಶದಲ್ಲಿ ಮೊಮೊಸ್ ತಿನ್ನಲು ಹೆಚ್ಚು ರೆಡ್ ಸಾಸ್ ಕೇಳಿದ್ದಕ್ಕೆ ಮೊಮೊಸ್ ಮಾರಾಟಗಾರ 34 ವರ್ಷದ ವ್ಯಕ್ತಿಯ ಮುಖಕ್ಕೆ ಇರಿದ ಘಟನೆ ನಡೆದಿತ್ತು. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಗ್ರಾಹಕ ಸಂದೀಪ್ ಸಂಜೆಯ ವೇಳೆ ರಸ್ತೆಬದಿಯ ಗಾಡಿಯಿಂದ ಮೊಮೊಸ್ ಖರೀದಿಸಲು ಹೋಗಿದ್ದನು. ಮೊಮೊಸ್ ಖರೀದಿಸಿದ ನಂತರ, ಆತ ಅಂಗಡಿ ಮಾಲೀಕ ವಿಕಾಸ್ (22) ಬಳಿ ಹೆಚ್ಚು ರೆಡ್ ಸಾಸ್ ಕೇಳಿದ್ದಾನಂತೆ. ಆದರೆ ಸಾಸ್ ಕಡಿಮೆ ಇದೆ ಎಂದು ವಿಕಾಸ್ ಹೇಳಿದ್ದಾನೆ. ಇದರಿಂದ ಇಬ್ಬರ ನಡುವೆ ವಾಗ್ವಾದ ಶುರುವಾಗಿ ವಿಕಾಸ್ ಸಂದೀಪ್ ಮುಖಕ್ಕೆ ಎರಡು ಬಾರಿ ಇರಿದು ಪರಾರಿಯಾಗಿದ್ದಾನೆ. ಕೊಲೆ ಯತ್ನಕ್ಕಾಗಿ ಎಫ್ಐಆರ್ ದಾಖಲಿಸಲಾಗಿದ್ದು, ವಿಕಾಸ್‍ನನ್ನು ಬಂಧಿಸಲು ಪೊಲೀಸ್ ತಂಡವನ್ನು ರಚಿಸಿ ಕೊನೆಗೆ ಫರ್ಶ್ ಬಜಾರ್ ಪ್ರದೇಶದಲ್ಲಿ ಆತನನ್ನು ಬಂಧಿಸಿದ್ದಾರೆ.