ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Hair Care: ಕೂದಲಿನ ಆರೋಗ್ಯಕ್ಕೆ ಬೀಟ್ರೂಟ್ ಬಳಸಿ ಈ ರೀತಿ ಹೇರ್ ಪ್ಯಾಕ್ ಮಾಡಿ

ಹೊಳೆಯುವ, ಉದ್ದವಾದ ಮತ್ತು ಆರೋಗ್ಯಕರ ಕೂದಲನ್ನು ಪಡೆಯಲು ಬೀಟ್ರೂಟ್‌ ಬಹಳಷ್ಟು ಉತ್ತಮ. ಹಾಗಾಗಿ ಬೀಟ್ರೂಟ್‌ನ ಹೇರ್ ಪ್ಯಾಕ್ ತಲೆಗೆ ಹಚ್ಚುವ ಮೂಲಕ ಅಥವಾ ದಿನ ನಿತ್ಯದ ಆಹಾರ ದಲ್ಲಿ ಬೀಟ್ರೂಟ್ ಬಳಸುವ ಮೂಲಕ ನಿಮ್ಮ ಕೂದಲನ್ನು ಸೊಂಪಾಗಿ ಬೆಳೆಯುವಂತೆ ಮಾಡಬಹುದು.

ಕೂದಲು ಸೊಂಪಾಗಿ ಬೆಳೆಯಲು ಬೀಟ್ರೂಟ್ ಹೀಗೆ ಬಳಸಿ

beetroot

Profile Pushpa Kumari Mar 2, 2025 7:00 AM

ನವದೆಹಲಿ: ಬೀಟ್ರೂಟ್ ಬಹುಮುಖ್ಯ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ತರಕಾರಿಯಾಗಿದ್ದು, ಇದರ ಸೇವನೆ ದೇಹದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ. ಜತೆಗೆ ಇದು ನಿಮ್ಮ ಕೂದಲಿನ ಆರೋಗ್ಯಕ್ಕೂ ಉತ್ತಮ. ಇದರಲ್ಲಿ‌ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕ ಅಂಶಗಳು ಸಮೃದ್ಧವಾಗಿವೆ. ಬೀಟ್ರೂಟ್ ನಿಮ್ಮ ತಲೆಯ ನೆತ್ತಿ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದೇ ಕಾರಣಕ್ಕೆ ಹೊಳೆಯುವ, ಉದ್ದವಾದ ಮತ್ತು ಆರೋಗ್ಯಕರ ಕೂದಲನ್ನು ಪಡೆಯಲು ಬೀಟ್ರೂಟ್‌ ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು (Hair Care Tips). ಬೀಟ್ರೂಟ್ ಬಳಸಿ ಹೇರ್ ಪ್ಯಾಕ್ ತಲೆಗೆ ಹಚ್ಚುವ ಮೂಲಕ ಅಥವಾ ದಿನ ನಿತ್ಯದ ಆಹಾರದಲ್ಲಿ ಬೀಟ್ರೂಟ್ ಬಳಸುವ ಮೂಲಕ ನಿಮ್ಮ ಕೂದಲನ್ನು ಸೊಂಪಾಗಿ ಬೆಳೆಯುವಂತೆ ಮತ್ತು ಶೈನ್ ಆಗಿ ಇರಿಸುವಂತೆ ಮಾಡಬಹುದು.

ಕೂದಲಿನ ಆರೋಗ್ಯಕ್ಕೆ ಬೀಟ್ರೂಟ್ ಹೇಗೆ ಒಳ್ಳೆಯದು?

ವಿಟಮಿನ್ ಸಿ: ಬೀಟ್ರೂಟ್ ಅಗತ್ಯ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದ್ದು ಇದರಲ್ಲಿ‌ ವಿಟಮಿನ್ ಸಿ ಹೆಚ್ಚಾಗಿದೆ. ಇದು ಕೂದಲು ಉದುರುವಿಕೆಗೆ ಕಾರಣವಾಗುವ ಸ್ವತಂತ್ರ ರಾಡಿಕಲ್‌ಗಳನ್ನು ಎದುರಿ ಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಕಾಲಜನ್ ಉತ್ಪಾದನೆಗೆ ಸಹಾಯ ಮಾಡಿ ಕೂದಲನ್ನು ಹೆಚ್ಚು ಶೈನ್ ಆಗುವಂತೆ ಮಾಡುತ್ತದೆ.

ಕಬ್ಬಿಣ: ಸರಿಯಾದ ರಕ್ತ ಪರಿಚಲನೆಗೆ ಕಬ್ಬಿಣವು ಅತ್ಯಗತ್ಯವಾಗಿದ್ದು. ಬೀಟ್ರೂಟ್‌ನಲ್ಲಿ ಹೆಚ್ಚು ಕಬ್ಬಿಣ ಸತ್ವ ಇದೆ. ಇದು ನೆತ್ತಿಗೆ ಪೋಷಕಾಂಶಗಳನ್ನು ತಲುಪಿಸಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಫೋಲಿಕ್ ಆಮ್ಲ (ವಿಟಮಿನ್ B9): ಫೋಲಿಕ್ ಆಮ್ಲವು ಕೂದಲಿನ ಪುನರುತ್ಪಾದನೆಯಲ್ಲಿ ಸಹಾಯ ಮಾಡುತ್ತದೆ. ಇದರಿಂದ ಕೂದಲು ದಪ್ಪವಾಗಲು ಮತ್ತು ವೇಗವಾಗಿ ಬೆಳವಣಿಗೆಯಾಗಲು ಉತ್ತೇಜನ ಸಿಗುತ್ತದೆ.

ಪೊಟ್ಯಾಸಿಯಮ್: ಇದು ನೆತ್ತಿಯನ್ನು ಪೋಷಿಸಲು ಮತ್ತು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಕೂದಲನ್ನು ಸ್ಲಿಪ್ಟ್ ಆಗದಂತೆ ತಡೆಯಲು ಸಹಾಯ ಮಾಡುತ್ತದೆ.

ಬೀಟೈನ್ಸ್: ಬೀಟ್ರೂಟ್‌ನಲ್ಲಿ ಬೀಟೈನ್‌ಗಳಿದ್ದು ಇದು ಕೂದಲಿನ ಸಾಫ್ಟ್ ಮತ್ತು ಹೈಡ್ರೇಟ್ ಮಾಡುತ್ತದೆ ಮತ್ತು ನಿಮ್ಮ ಕೂದಲಿಗೆ ನೈಸರ್ಗಿಕ ಹೊಳಪನ್ನು ಮತ್ತು ಮೃದುತ್ವವನ್ನು ನೀಡುತ್ತದೆ.

ಮೆಗ್ನೀಸಿಯಮ್ ಮತ್ತು ಫಾಸ್ಫರಸ್: ಈ ಖನಿಜಗಳು ಕೂದಲಿನ ಬಲ ವನ್ನು ಸುಧಾರಿಸಲು ಮತ್ತು ಅತಿಯಾದ ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಬೀಟ್ರೂಟ್ ಸೇವನೆಯಿಂದ ಕೂದಲಿಗೆ ಸಿಗುವ ಪ್ರಯೋಜನಗಳು

ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ: ಬೀಟ್ರೂಟ್‌ನಲ್ಲಿರುವ ಫೋಲಿಕ್ ಆಮ್ಲ ಮತ್ತು ಕಬ್ಬಿಣದ ಅಂಶವು ನೆತ್ತಿಯ ರಕ್ತ ಪರಿಚಲನೆಯನ್ನು ಉತ್ತೇಜಿಸಲು ಸಹಾಯ ಮಾಡಲಿದ್ದು ಕೂದಲನ್ನು ಮತ್ತಷ್ಟು ಹೊಳೆಯುವಂತೆ ಮಾಡುತ್ತದೆ. ಹಾಗೆಯೇ ಕೂದಲಿನ ಕಿರುಚೀಲಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.

ಕೂದಲು ಉದುರುವುದನ್ನು ತಡೆಯುತ್ತದೆ: ಬೀಟ್ರೂಟ್‌ನಲ್ಲಿರುವ ಕಬ್ಬಿಣ ಮತ್ತು ಪೊಟ್ಯಾಸಿಯಮ್ ಕೂದಲಿನ ಎಳೆಗಳನ್ನು ಬಲ ಪಡಿಸಲು ಸಹಾಯ ಮಾಡುತ್ತದೆ. ಕೂದಲು ಉದುರುವಿಕೆಯನ್ನು ಕಡಿಮೆ ಮಾಡಿ ಕೂದಲು ಒಡೆಯುವುದನ್ನು ಸಹ ತಡೆಯುತ್ತದೆ.

ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ: ಬೀಟ್ರೂಟ್‌ನಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಬೀಟೈನ್‌ಗಳು ಹೊರಪೊರೆಯನ್ನು ಸುಗಮಗೊಳಿಸಿ ಮೃದುವಾದ, ಹೊಳೆಯುವ ಕೂದಲನ್ನು ಉಂಟು ಮಾಡುತ್ತದೆ.

ನೆತ್ತಿಯ ಆರೋಗ್ಯವನ್ನು ಸಮತೋಲನಗೊಳಿಸುತ್ತದೆ: ಬೀಟ್ರೂಟ್ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಇದು ನೆತ್ತಿಯ ಕಿರಿಕಿರಿ ಮತ್ತು ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದೇ ರೀತಿ ನೆತ್ತಿಯ ಆರೋಗ್ಯಕ್ಕೆ ಬಹಳಷ್ಟು ಸಹಕಾರಿಯಾಗಲಿದೆ.

ಇದನ್ನು ಓದಿ: Health Tips: ಕಣ್ತುಂಬ ನಿದ್ದೆ ಮಾಡಬೇಕೇ?: ಕುಂಬಳಬೀಜ ತಿನ್ನಿ

ಬೀಟ್ರೂಟ್ ಹೇರ್ ಮಾಸ್ಕ್ ತಯಾರಿಸುವುದು ಹೇಗೆ?

ಒಂದು ಸಣ್ಣ ಬೀಟ್ರೂಟ್ ಅನ್ನು ತುರಿ ಮಾಡಿ ಅದಕ್ಕೆ1 ಚಮಚ ಆಲಿವ್ ಎಣ್ಣೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಅನ್ವಯಿಸಿ. ಸುಮಾರು 30-40 ನಿಮಿಷಗಳ ಕಾಲ ಹಾಗೇ ಬಿಡಿ. ಆರೋಗ್ಯಕರ, ಹೊಳೆಯುವ ಕೂದಲಿಗೆ ವಾರಕ್ಕೊಮ್ಮೆ ಈ ಹೇರ್ ಮಾಸ್ಕ್ ಅನ್ನು ಬಳಸಿ.

ಬೀಟ್ರೂಟ್ ಸೇವನೆಯೂ ಉತ್ತಮ

ಹೊಳೆಯುವ, ಉದ್ದನೆಯ ಕೂದಲಿಗೆ ಬೀಟ್ರೂಟ್ ಅನ್ನು ಸೇವನೆ ಮಾಡಿದರೂ ಉತ್ತಮ‌. ನೀವು ಬೀಟ್ರೂಟ್ ರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಆರೋಗ್ಯಕ್ಕೂ ಒಳ್ಳೆಯದು. ಅದರ ಜತೆ ಕೂದಲಿನ ಆರೋಗ್ಯಕ್ಕೂ ಸಹಾಯಕ.