Ram Madhav Column: ವಿವಿಧತೆಯಲ್ಲಿ ಭಾರತದ ಆಧ್ಯಾತ್ಮಿಕ ಏಕತೆಯನ್ನು ಸಾರಿ ಹೇಳಿದ ಮಹಾಕುಂಭಮೇಳ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸುದೀರ್ಘ ಆರು ವಾರಗಳವರೆಗೆ ನಡೆದ ಮಹಾ ಕುಂಭಮೇಳವು ಮುಕ್ತಾಯಗೊಂಡಿದೆ. ಇಷ್ಟಾಗಿಯೂ, ‘ಮಳೆ ನಿಂತ ಮೇಲೂ ಮರದಿಂದ ನೀರು ಹನಿಯುವುದು ನಿಂತಿಲ್ಲ’ ಎಂಬ ಮಾತಿನಂತೆ, ಅಲ್ಲಿ ನೆರೆದಿದ್ದ ಲಕ್ಷಾಂ ತರ ಜನರ ಭಕ್ತಿಯ ಬಗ್ಗೆ ಹಾಗೂ ಅಲ್ಲಿ ರೂಪುಗೊಂಡ ಜನದಟ್ಟಣೆ, ವ್ಯವಸ್ಥೆಗಳು, ನೀರಿನ ಗುಣಮಟ್ಟ ಇತ್ಯಾದಿಗಳ ಕುರಿತಾಗಿ ಒಂದಷ್ಟು ಮಂದಿ ವಿಶ್ಲೇಷಕರು ಈಗಲೂ ಪ್ರತಿಕ್ರಿಯಿಸುತ್ತಲೇ ಇದ್ದಾರೆ.


ಧರ್ಮಕ್ಷೇತ್ರ
ರಾಮ್ ಮಾಧವ್
ಪ್ರತಿ 144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಂಥ ಅಪರೂಪದ ಸಂದರ್ಭ ವನ್ನು ತಪ್ಪಿಸಿಕೊಳ್ಳುವುದಕ್ಕೆ ಬಹುತೇಕರು ಸಿದ್ಧರಿರಲಿಲ್ಲ. ಇಷ್ಟಾಗಿ ಯೂ, ಹವಾನಿ ಯಂತ್ರಿತ ಕೋಣೆಗಳಲ್ಲೋ, ದಂತಗೋಪುರಗಳಲ್ಲೋ ಕುಳಿತಿದ್ದ ಒಂದಷ್ಟು ತಥಾಕಥಿತ ಬುದ್ಧಿಜೀವಿಗಳು ಈ ಕುಂಭಮೇಳವನ್ನು ಟೀಕಿಸಲೆಂದು ಏನಾದರೊಂದು ಮಾರ್ಗವನ್ನು ಹುಡುಕುವುದಕ್ಕೆ ಯತ್ನಿಸಿದ್ದು ನಗೆಯುಕ್ಕಿಸು ವಂತಿತ್ತು! ಹಾಗೆಂದ ಮಾತ್ರಕ್ಕೆ, ಅಲ್ಲಿನ ವ್ಯವಸ್ಥೆಯಲ್ಲಿ ಏನೂ ಲೋಪಗಳೇ ಇರ ಲಿಲ್ಲ ಎಂದು ಹೇಳುತ್ತಿಲ್ಲ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸುದೀರ್ಘ ಆರು ವಾರಗಳವರೆಗೆ ನಡೆದ ಮಹಾ ಕುಂಭಮೇಳವು ಮುಕ್ತಾಯಗೊಂಡಿದೆ. ಇಷ್ಟಾಗಿಯೂ, ‘ಮಳೆ ನಿಂತ ಮೇಲೂ ಮರದಿಂದ ನೀರು ಹನಿಯುವುದು ನಿಂತಿಲ್ಲ’ ಎಂಬ ಮಾತಿನಂತೆ, ಅಲ್ಲಿ ನೆರೆದಿದ್ದ ಲಕ್ಷಾಂ ತರ ಜನರ ಭಕ್ತಿಯ ಬಗ್ಗೆ ಹಾಗೂ ಅಲ್ಲಿ ರೂಪುಗೊಂಡ ಜನದಟ್ಟಣೆ, ವ್ಯವಸ್ಥೆಗಳು, ನೀರಿನ ಗುಣಮಟ್ಟ ಇತ್ಯಾದಿಗಳ ಕುರಿತಾಗಿ ಒಂದಷ್ಟು ಮಂದಿ ವಿಶ್ಲೇಷಕರು ಈಗಲೂ ಪ್ರತಿಕ್ರಿಯಿಸುತ್ತಲೇ ಇದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡ ತಮ್ಮ ಹೃದಯಾಂತರಾಳದ ಭಾವನೆ ಗಳಿಗೆ ಅಕ್ಷರ ರೂಪವನ್ನು ನೀಡಿದ್ದುಂಟು, ಈ ಬೃಹತ್ ಜನ-ಜಮಾವಣೆಯನ್ನು ‘ಏಕತೆಯ ಮಹಾಕುಂಭ’ ಎಂದು ಕರೆದಿದ್ದುಂಟು. ಹಾಗೆ ನೋಡಿದರೆ, ಈ ಮಹಾಕುಂಭಮೇಳಕ್ಕೆ ಭೇಟಿ ನೀಡಿ, ಗಂಗಾ-ಯಮುನಾ-ಸರಸ್ವತಿ ನದಿಗಳು ಸಂಗಮಗೊಂಡು ರೂಪುಗೊಳ್ಳುವ ಈ ಪವಿತ್ರ ನೀರಿನಲ್ಲಿ ಪುಣ್ಯಸ್ನಾನ ಮಾಡಿದಂಥ ಜನರ ನಿಖರ ಸಂಖ್ಯೆಯನ್ನು ಲೆಕ್ಕಿಸುವುದು ನಿಜಕ್ಕೂ ಹರಸಾಹಸದ ಕೆಲಸವೇ.

ಆದರೆ, ಈ ಬಾರಿ ಭಾಗವಹಿಸಿದ ಜನರ ಸಂಖ್ಯೆಯು ನಿಜಕ್ಕೂ ಅಸಾಧಾರಣವಾಗಿತ್ತು ಎಂಬು ದನ್ನು ಅಲ್ಲಗಳೆಯುವಂತಿಲ್ಲ. ಪ್ರಯಾಗ್‌ರಾಜ್‌ನಲ್ಲಿ ಘಟಿಸಿದ ಈ ಮಹಾಕುಂಭ ಮೇಳವು, ಸಾಮಾಜಿಕ ಮಾಧ್ಯಮಗಳಂಥ ‘ಸರ್ವಾಂತರ್ಯಾಮಿ’ಯ ರೆಕ್ಕೆಯು ಅಗಾಧ ವ್ಯಾಪ್ತಿಗೆ ಹರಡಿರುವ ಈ ಕಾಲ ಘಟ್ಟದಲ್ಲಿ ನಡೆದ ಮೊದಲ ಕುಂಭವಾಗಿತ್ತು ಎನ್ನಬೇಕು.
ಇದನ್ನೂ ಓದಿ: Kumbhamela Stampede: ಮಹಾಕುಂಭ ಮೇಳದಲ್ಲಿ ಕಾಲ್ತುಳಿತ-ಸಿಎಂ ಯೋಗಿ ಫಸ್ಟ್ ರಿಯಾಕ್ಷನ್
ಯೂಟ್ಯೂಬ್, ಇನ್‌ಸ್ಟಾಗ್ರಾಂ ಮತ್ತು ‘ಎಕ್ಸ್’ನಂಥ ಜನಪ್ರಿಯ ಸಂವಹನ ಮಾಧ್ಯಮಗಳು ಈ ನಿಟ್ಟಿನಲ್ಲಿ ನೀಡಿದ ಕೊಡುಗೆ ನಿಜಕ್ಕೂ ಅಮೋಘವೇ; ಏಕೆಂದರೆ, ಈ ಅಪರೂಪದ ಕಾರ್ಯಕ್ರಮದ ಭವ್ಯತೆ ಮತ್ತು ಪವಿತ್ರತೆಯ ಬಗ್ಗೆ ಹೆಚ್ಚಿನ ಜನರು ತಿಳಿಯುವಂತಾ ಗುವುದಕ್ಕೆ ಈ ಮಾಧ್ಯಮಗಳು ಪರಿಪೂರ್ಣ ವೇದಿಕೆಗಳಾಗಿದ್ದವು ಮತ್ತು ಈ ಕಾರಣದಿಂದಾ ಗಿಯೇ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಮೇಳದಲ್ಲಿ ಭಾಗವಹಿಸು ವಂತಾಯಿತು ಎಂಬುದರಲ್ಲಿ ಎರಡು ಮಾತಿಲ್ಲ.
ಇಲ್ಲಿನ ಈ ಮಹತ್ತರ ಸಂದರ್ಭದಲ್ಲಿ ಯಾವೊಂದು ಕ್ಷಣವೂ ಕೈತಪ್ಪಿಹೋಗುವುದಕ್ಕೆ/ಕಳೆದುಹೋಗುವುದಕ್ಕೆ ಆಸ್ಪದವೇ ಇರಲಿಲ್ಲ; ಏಕೆಂದರೆ ಜನರು ಪುಣ್ಯಸ್ನಾನ ಮಾಡುತ್ತಿರು ವಾಗಿನ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳು ಹಾಗೂ ಸುದ್ದಿ ವಾಹಿನಿಗಳ ಮೂಲಕ ಕ್ಷಣಮಾತ್ರದಲ್ಲಿ ದೇಶದ ಮೂಲೆಮೂಲೆಯನ್ನು ತಲುಪಿ ಬಿಡು ತ್ತಿದ್ದವು.
ದೇಶದ ಅನೇಕ ಜನರು ಹೀಗೊಂದು ತೀರ್ಥಯಾತ್ರೆಯನ್ನು ಕೈಗೊಳ್ಳುವುದಕ್ಕೆ ಈ ಅಂಶವೂ ಉತ್ತೇಜಿಸಿತು ಎನ್ನಲಡ್ಡಿಯಿಲ್ಲ. ಹಾಗಾಗಿ ಈ ಬೆಳವಣಿಗೆಯನ್ನು ‘ಒಂದು ಸದವಕಾಶವನ್ನು ತಪ್ಪಿಸಿಕೊಳ್ಳಬಾರದು’ ಎಂಬ ಭಯದ ಭಾವವಾಗಿ ನೋಡುವ ಬದಲು, ಹಿಂದೂಗಳ ಹೃದಯಾಂತರಾಳದಲ್ಲಿ ಆಳವಾಗಿ ಬೇರೂರಿರುವ ಆಧ್ಯಾತ್ಮಿಕ ಹಂಬಲದ ಒಂದು ಪ್ರದ ರ್ಶನವಾಗಿ ಪರಿಗಣಿಸಬೇಕು. ಹಿಂದಿನ ಸಂದರ್ಭಗಳಲ್ಲಿ, ಕುಂಭಮೇಳವು ಅಂತ್ಯವಾಗುವ ಹೊತ್ತಿಗೆ ಭಕ್ತಾದಿಗಳ ಸಂಖ್ಯೆಯಲ್ಲಿ ಇಳಿಕೆಯ ಕಂಡುಬರುತ್ತಿತ್ತು.
ಆದರೆ, ಈ ಬಾರಿ ಕಂಡುಬಂದಿದ್ದು ಇದಕ್ಕೆ ವ್ಯತಿರಿಕ್ತವಾದ ಬೆಳವಣಿಗೆ; ಮಹಾಕುಂಭವು ಇನ್ನೇನು ಸಂಪನ್ನಗೊಳ್ಳುತ್ತಿದೆ ಎನ್ನುವಾಗ ಪ್ರಯಾಗ್‌ರಾಜ್‌ನತ್ತ ಜನಸಾಗರವೇ ಹರಿದು ಬಂದಿದ್ದಕ್ಕೆ ವಿಶ್ವವೇ ಸಾಕ್ಷಿಯಾಗಿದೆ. ಪ್ರತಿ 144 ವರ್ಷಗಳಿಗೊಮ್ಮೆ ಬರುವ ಈ ಅಪರೂಪದ ಸಂದರ್ಭವನ್ನು ತಪ್ಪಿಸಿಕೊಳ್ಳುವುದಕ್ಕೆ ಬಹುತೇಕರು ಸಿದ್ಧರಿರಲಿಲ್ಲ.
ಇಷ್ಟಾಗಿಯೂ, ಹವಾನಿಯಂತ್ರಿತ ಕೋಣೆಗಳಲ್ಲೋ, ದಂತಗೋಪುರಗಳಲ್ಲೋ ಕುಳಿತಿದ್ದ ಒಂದಷ್ಟು ತಥಾಕಥಿತ ಬುದ್ಧಿಜೀವಿಗಳು ಈ ಕುಂಭಮೇಳವನ್ನು ಟೀಕಿಸಲೆಂದು ಏನಾದ ರೊಂದು ಮಾರ್ಗವನ್ನು ಹುಡುಕುವುದಕ್ಕೆ, ನೆಪಗಳನ್ನು ತಡಕುವುದಕ್ಕೆ ಯತ್ನಿಸಿದ್ದು ನಗೆಯುಕ್ಕಿಸುವಂತಿತ್ತು! ಹಾಗೆಂದ ಮಾತ್ರಕ್ಕೆ, ಅಲ್ಲಿನ ವ್ಯವಸ್ಥೆಯಲ್ಲಿ ಏನೂ ಲೋಪಗಳೇ ಇರಲಿಲ್ಲ ಎಂದು ಹೇಳುತ್ತಿಲ್ಲ.
ಕುಂಭಮೇಳ ಪ್ರದೇಶದಲ್ಲಿ ಸಂಭವಿಸಿದ ಎರಡು ದುರಂತಗಳಿಂದಾಗಿ ಸಾಕಷ್ಟು ಸಾವು-ೋವುಗಳಾಗಿದ್ದು ಖರೆ. ಆದರೆ, ಏಕಕಾಲಕ್ಕೆ ಕೋಟ್ಯಂತರ ಜನರು ದಾಂಗುಡಿಯಿಟ್ಟಾಗ ಅವರನ್ನು ನಿರ್ವಹಿಸುವ ಕಾರ್ಯಭಾರವಿದೆಯಲ್ಲಾ ಅದು ಹುಡುಗಾಟದ ಮಾತಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತೊಡಗಿಸಿಕೊಂಡ ಪರಿಯನ್ನು ನಿಜಕ್ಕೂ ಪ್ರಶಂಸಿಸಬೇಕು.
ಭಾರತೀಯ ಮೂಲದ ಜನರು ಭಾರಿ ಸಂಖ್ಯೆಯಲ್ಲಿ ನೆಲೆಯೂರಿರುವ ಹತ್ತು ಹಲವು ದೇಶ ಗಳಿಂದ ಬಂದ ಆಳುಗ ವಲಯದ ಗಣ್ಯರಿಗೆ, ವಿವಿಧ ಕ್ಷೇತ್ರಗಳ ಘಟಾನುಘಟಿಗಳಿಗೆ ಈ ಘಟ್ಟದಲ್ಲಿ ನಮ್ಮವರಿಂದ ಆತಿಥ್ಯ ಸಿಕ್ಕಿತು. ಹೀಗೆ ಬಂದವರ ಪಾಲಿಗೆ ಪ್ರಯಾಗ್‌ರಾಜ್‌ನಲ್ಲಿ ಕಂಡ ದೃಶ್ಯ, ಜನಸಂದಣಿ ಅವರ ಊಹೆಗೂ ಮೀರಿದ್ದಾಗಿತ್ತು. ಹೀಗೆ ಬಂದ ಪ್ರಭಾವಿಗಳ ಪೈಕಿ ಒಬ್ಬರು, “ನನ್ನ ಇಡೀ ದೇಶದ ಜನಸಂಖ್ಯೆಗೆ ಸಮನಾದ ಜನಸಂಖ್ಯೆ ನನ್ನ ಮುಂದೆ ಈಗ ಜಮಾವಣೆಗೊಂಡಿರುವಂತಿದೆ" ಎಂದು ಪ್ರತಿಕ್ರಿಯಿಸಿದ್ದುಂಟು.
ಹೀಗೆ ಅನ್ಯದೇಶಗಳಿಂದ ಬಂದ ಹಲವರಿಗೆ ಪ್ರಯಾಗ್‌ರಾಜ್ ನಲ್ಲಿ ಕಂಡ ದೃಶ್ಯಾವಳಿ ಆಕರ್ಷಕವಾಗಿದ್ದರೆ, ಮತ್ತೆ ಕೆಲವರಿಗೆ ಭಯ ಹುಟ್ಟಿಸಿದ್ದೂ ನಿಜ. ಅಲ್ಲಿ ಆಳುಗರು ಮಾಡಿದ್ದ ವ್ಯವಸ್ಥೆಗಳನ್ನು ಕಣ್ತುಂಬಿಕೊಂಡ ಕೆಲವರು, ನಗರ ನಿರ್ವಹಣೆಗೆ ಸಂಬಂಧಿ ಸಿದ ಪರಿಪೂರ್ಣ ಪಾಠಗಳನ್ನು ಈ ವೇಳೆ ಕಲಿತಿದ್ದುಂಟು. ಬಹುತೇಕರಿಗೆ ಗೊತ್ತಿರುವಂತೆ ಸುಮಾರು 1.4 ದಶಲಕ್ಷ ಜನರಿಂದ ತುಂಬಿರುವ ನಗರ ಪ್ರಯಾಗ್‌ರಾಜ್. ಮಹಾಕುಂಭದ ಘಟ್ಟದಲ್ಲಿ, ವಿಶ್ವದ ವಿವಿಧಡೆಯಿಂದ ಗಂಟೆ ಗಂಟೆಗೂ ಆಗಮಿಸುತ್ತಲೇ ಇದ್ದ ಅಸಂಖ್ಯ ಯಾತ್ರಿಗಳನ್ನು ಮಡಿಲಿಗೆ ಸೇರಿಸಿಕೊಂಡ ನಗರವಿದು.
ಇಷ್ಟಾಗಿಯೂ ಅಲ್ಲಿನ ಪೌರಾಡಳಿತ ವ್ಯವಸ್ಥೆ ಕುಸಿಯಲಿಲ್ಲ. ಮಹಾಕುಂಭ ಕಾರ್ಯ ಕ್ರಮವನ್ನು ಸಮರ್ಥವಾಗಿ ನಿರ್ವಹಿಸಲಾಯಿತು ಎಂಬುದನ್ನು ಇದು ಸಾಬೀತು ಪಡಿಸು ತ್ತದೆ. ಇಷ್ಟಾಗಿಯೂ ಕೆಲವರ ಅಪಸ್ವರ ನಿಲ್ಲಲೇ ಇಲ್ಲ. ಒಬ್ಬ ಅಂಕಣಕಾರರಂತೂ, “ಈ ಕುಂಭಮೇಳವು ಹಿಂದುತ್ವದ ಕ್ರೋಢೀಕರಣವಾಗಿದ್ದರ ಜತೆಗೆ ಅದರ ವಿವಿಧತೆಯ ಚೈತ ನ್ಯವು ನಾಶವಾಗಿದ್ದರ ಸಂಕೇತವೂ ಆಗಿತ್ತು" ಎಂದು ಹಲುಬಿಬಿಟ್ಟಿದ್ದು ಈ ಮಾತಿಗೆ ಸಾಕ್ಷಿ!
ಪುಣ್ಯನದಿಗಳೆನಿಸಿಕೊಂಡ ನೆಲೆಗಳಲ್ಲಿ ಪವಿತ್ರ ಸ್ನಾನ ಮಾಡುವುದು ಹಿಂದೂ ಧರ್ಮದ ಮುಖ್ಯವಾಹಿನಿಯಲ್ಲಿ, ಅದರ ಒಂದೊಂದು ಶಾಖೆಗಳಲ್ಲೂ ಅನೂಚಾನವಾಗಿ ಬೆಳೆದು ಬಂದಿರುವಂಥ ಸಂಪ್ರದಾಯ ಅಥವಾ ಆಚರಣೆ. ದೇಶ-ವಿದೇಶಗಳ ಜನರು ಪ್ರಯಾಗ್ ರಾಜ್ ನಲ್ಲಿ ಮಾಡಿದ್ದೂ ಅದನ್ನೇ. ಹೀಗಿರುವಾಗ, ಮಹಾಕುಂಭದ ವೇಳೆ ಜರುಗಿದ ಈ ಘಟನಾವಳಿಯನ್ನು ‘ಇದೊಂದು ಪ್ರದರ್ಶನವಾಗಿಬಿಟ್ಟಿತು’ ಎಂದೋ ಅಥವಾ ‘ಯಾರ ದೋ ಮಾತಿಗೆ ಕಟ್ಟುಬಿದ್ದು ಅನಿವಾರ್ಯವಾಗಿ ಮಾಡಬೇಕಾಗಿ ಬಂದ ಕಾರ್ಯ ನಿರ್ವ ಹಣೆ’ ಎಂದೋ ಯಾರಾದರೂ ಬಣ್ಣಿಸಿದರೆ, ಮತ್ತು ಇದನ್ನು ‘ಹಿಂದೂ ಧರ್ಮದ ಸೆಮಿ ಟೈಸೇಷನ್’ ಎಂದು ಆರೋಪಿಸಿದರೆ ಅದು ಅಪ್ರಬುದ್ಧ ನಡೆಯಾಗುತ್ತದೆ, ಅರಿವಿಲ್ಲದವರ ಅಪಾಲಾಪವಾಗುತ್ತದೆ.
ಬಹುತ್ವಕ್ಕೆ ಮತ್ತು ವೈವಿಧ್ಯಕ್ಕೆ ಹೆಸರಾಗಿರುವಂಥದ್ದು ಹಿಂದೂ ಧರ್ಮ. ಇಷ್ಟಾಗಿಯೂ ಈ ಧರ್ಮದಲ್ಲಿ ಏಕತೆಗೆ ಕೊರತೆಯೇನೂ ಇಲ್ಲ; ಏಕತೆಯ ಛಾಯೆಯು ಇದರಲ್ಲಿ ದಟ್ಟವಾಗಿ ಅಂತರ್ಗತವಾಗಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ‘ವಿವಿಧತೆಯಲ್ಲಿ ಏಕತೆ’ ಎಂಬ ಪರಿಕಲ್ಪನೆಯ ಸಾಕಾರರೂಪವೇ ಹಿಂದೂ ಧರ್ಮ.
‘ಸರ್ವಪಂಥ ಸಮಾದರ’ ಅಂದರೆ ಎಲ್ಲಾ ಪೂಜಾ ವಿಧಾನಗಳಿಗೆ ಮತ್ತು ಧಾರ್ಮಿಕ ನಂಬಿಕೆ ಗಳಿಗೆ ಸಮಾನವಾದ ಗೌರವವನ್ನು ನೀಡುವ ಪರಿಕಲ್ಪನೆ ಈ ಧರ್ಮದಲ್ಲಿ ಕೆನೆಗಟ್ಟಿದೆ. ಇಷ್ಟಾಗಿಯೂ ಇದು ಭಗವದ್ಗೀತೆಯಲ್ಲಿ ಭಗವಾನ್ ಶ್ರೀಕೃಷ್ಣನ ದಿವ್ಯವಾಣಿಯ ಮೂಲಕ, ‘ಸರ್ವ ಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ’ (ಎಲ್ಲಾ ಧಾರ್ಮಿಕ ಸಿದ್ಧಾಂತ ಗಳನ್ನು/ಕರ್ತವ್ಯಗಳನ್ನು ಬದಿಗಿಟ್ಟು, ನನ್ನಲ್ಲಿ ಶರಣಾಗಿ ಸಮಾಧಾನವನ್ನು ಕಂಡುಕೊಳ್ಳಿ) ಎಂದು ಕೂಡ ಜನರಿಗೆ ಕರೆನೀಡಿದೆ.
ಇಂಥ ಎರಡೂ ಆಧ್ಯಾತ್ಮಿಕ ತತ್ವಗಳ ಪ್ರಚಾರಕ್ಕೆ-ಪ್ರವರ್ತನೆಗೆ ಕುಂಭಮೇಳದಂಥ ಸಂದರ್ಭಗಳು ವಿನ್ಯಾಸಗೊಳಿಸಲ್ಪಟ್ಟವು ಎಂಬುದನ್ನು ನೆನಪಿನಲ್ಲಿಡಬೇಕು. ಒಟ್ಟಿನಲ್ಲಿ, ಈ ಬಾರಿ ಪ್ರಯಾಗ್‌ರಾಜ್‌ನಲ್ಲಿ ವಿಭಿನ್ನ ಧಾರ್ಮಿಕ ನಂಬಿಕೆಗಳೊಂದಿಗೆ ಗುರುತಿಸಿಕೊಂಡಿ ರುವ ಗುರುಗಳು, ಸಾಧು-ಸಂತರುಗಳ ಭರಪೂರ ಜಮಾವಣೆ ಕಂಡುಬಂತು.
ಈ ದೃಶ್ಯಾವಳಿಯನ್ನು ಕಣ್ತುಂಬಿಕೊಂಡಾಗ, ‘ಹಿಂದೂ ಧರ್ಮದ ಅಥವಾ ಹಿಂದುತ್ವದ ವೈವಿಧ್ಯಕ್ಕೆ ಅಪಾಯವಿದೆ’ ಎಂಬ ಚಿಂತೆಗೆ ಅರ್ಥವಿಲ್ಲ, ಆಧಾರವಿಲ್ಲ ಎಂಬ ನಂಬಿಕೆ ಗಟ್ಟಿಯಾಗಿದ್ದು ನಿಜ. ನಮ್ಮ ಪೂರ್ವಜರೆನಿಸಿದ ಮಹಾನ್ ಋಷಿಗಳು ಕೂಡ ಭಾರತದ ರಾಷ್ಟ್ರೀಯ ಸಮಾಜದ ಆಧ್ಯಾತ್ಮಿಕ ಏಕತೆಗೆ ಒತ್ತುನೀಡಿದ್ದರು.
ರಾಷ್ಟ್ರವೊಂದರಲ್ಲಿ ಹಾಸುಹೊಕ್ಕಾಗಿರಬೇಕಾದ ‘ಸಹಜ ಏಕತೆ’ಯ ಪರಿಕಲ್ಪನೆಯನ್ನು ಪ್ರವರ್ತಿಸುವುದೇ ಇಂಥ ಮೇಳಗಳ ಮತ್ತು ತೀರ್ಥಯಾತ್ರೆಗಳ ಉದ್ದೇಶವಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಹಿಂದೂ ಧರ್ಮವು ಕಂಡ ಮಹೋನ್ನತ ಆಚಾರ್ಯ ರಲ್ಲಿ ಒಬ್ಬರೆನಿಸಿಕೊಂಡ ಶ್ರೀ ಆದಿಶಂಕರರು, ಭಾರತದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದ್ದು ನಿಮಗೆ ಗೊತ್ತಿರುವ ಸಂಗತಿಯೇ; ಶಿವ, ವಿಷ್ಣು, ಶಕ್ತಿ, ಗಣೇಶ, ಸೂರ್ಯ ಹೀಗೆ ಬಗೆಬಗೆಯ ದೇವರುಗಳನ್ನು ಪೂಜಿಸುತ್ತಿದ್ದ/ಆರಾಧಿಸುತ್ತಿದ್ದ ಹಿಂದೂಗಳ ವಿಭಿನ್ನ ಪಂಥಗಳ ನಡುವೆ ‘ಏಕತೆಯ ಮಾದರಿ’ಯೊಂದನ್ನು ಹಾಸುಹೊಕ್ಕಾಗಿಸಲೆಂದು ಶಂಕರರು ಇಟ್ಟ ಹೆಜ್ಜೆಯಾಗಿತ್ತು ಅದು.
ಜೀವಾತ್ಮ ಮತ್ತು ಪರಮಾತ್ಮರು ಎರಡೂ ಒಂದೇ ಎಂಬ ಗ್ರಹಿಕೆಗೆ ಒತ್ತುನೀಡುವ, ದ್ವಂದ್ವ ಕ್ಕೆ ಆಸ್ಪದವಿಲ್ಲದ ತತ್ವಶಾಸ್ತ್ರವಾದ ಅದ್ವೈತ ಸಿದ್ಧಾಂತವನ್ನು ಅವರು ಪ್ರತಿಪಾದಿಸಿ ಪ್ರಚಾರ ಮಾಡಿದರು. ಕುಂಭಮೇಳದ ರೀತಿಯಲ್ಲಿ, ಆದಿಶಂಕರರ ಅದ್ವೈತ ಸಿದ್ಧಾಂತ ಕೂಡ ಹಿಂದೂಗಳ ಧಾರ್ಮಿಕ ಆಚರಣೆಗಳಲ್ಲಿ ಕಾಣಬರುವ ವಿವಿಧತೆಯನ್ನು ನಾಶಪಡಿಸುವ ಯತ್ನವೇನೂ ಆಗಿರಲಿಲ್ಲ.
ಬೌದ್ಧಮತೀಯರು ಮತ್ತು ಸನಾತನಿಗಳಲ್ಲಿ ಬಳಕೆಯಲ್ಲಿರುವುದೂ ಸೇರಿದಂತೆ, ಬಗೆಬಗೆಯ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳನ್ನು ಸಮನ್ವಯಗೊಳಿಸುವಂಥ ಒಂದು ಚೌಕಟ್ಟನ್ನು ಅವರ ಬೋಧನೆಗಳು ಕಟ್ಟಿಕೊಟ್ಟವು. ಮೊನ್ನಿನ ಪ್ರಯಾಗರಾಜ್ ಕುಂಭ ಮೇಳ ದಲ್ಲಿ ಕಂಡುಬಂದಿದ್ದೂ ಇದೇ ಏಕತೆಯೇ!
ಪ್ರಧಾನಿ ನರೇಂದ್ರ ಮೋದಿಯವರು ಈ ಸಂದರ್ಭವನ್ನು ತಮ್ಮದೇ ವಿಶಿಷ್ಟ ರೀತಿಯಲ್ಲಿ ಬಣ್ಣಿಸಿದ್ದು ಹೀಗೆ: “ಈ ಏಕತೆಯ ಕುಂಭಮೇಳದಲ್ಲಿ, ಪ್ರತಿಯೊಬ್ಬ ಯಾತ್ರಾರ್ಥಿಯೂ- ಅವನು ಬಡವನಿರಲಿ ಅಥವಾ ಶ್ರೀಮಂತನಿರಲಿ, ನಗರಿಗನಿರಲಿ ಅಥವಾ ಹಳ್ಳಿಗನಿರಲಿ, ಭಾರತದವನಾಗಿರಲಿ ಅಥವಾ ವಿದೇಶಿಯಾಗಿರಲಿ, ಪೂರ್ವ-ಪಶ್ಚಿಮ-ಉತ್ತರ-ದಕ್ಷಿಣ ಹೀಗೆ ಪ್ರಪಂಚದ ಯಾವುದೇ ಭೂಭಾಗಕ್ಕೆ ಸೇರಿದವನಾಗಿರಲಿ, ಆತನ ಜಾತಿ-ಮತ-ಸಿದ್ಧಾಂತಗಳು ಯಾವುದೇ ಆಗಿರಲಿ- ಅವರು ಯಾವ ಭೇದಭಾವವಿಲ್ಲದೆ ಒಗ್ಗೂಡಿದರು, ಒಗ್ಗಟ್ಟನ್ನು ಪ್ರದರ್ಶಿಸಿದರು.
ಇದು ಕೋಟ್ಯಂತರ ಜನರಲ್ಲಿ ಆತ್ಮವಿಶ್ವಾಸವನ್ನು ತುಂಬಿದ ‘ಏಕ ಭಾರತ, ಶ್ರೇಷ್ಠ ಭಾರತ’ ಎಂಬ ದೃಷ್ಟಿಕೋನದ ಒಂದು ಸಾಕಾರರೂಪವಾಗಿತ್ತು". ಹಾಗೆ ನೋಡಿದರೆ, ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಲ್ಲಿ ಕೂಡ ಬೃಹತ್ ಧಾರ್ಮಿಕ ಸಭೆ-ಸಮಾವೇಶಗಳು, ಯಾತ್ರೆಗಳನ್ನು ಆಯೋಜಿಸಲಾಗುತ್ತದೆ. ಈ ಪೈಕಿ ಶಿಯಾ ಮುಸ್ಲಿಮರ ಪಾಲಿಗೆ, ಪ್ರವಾದಿ ಮೊಹಮ್ಮದರ ಮೊಮ್ಮಗ ಹಾಗೂ ಮೂರನೇ ಶಿಯಾ ಇಮಾಮ್ ಎನಿಸಿಕೊಂಡಿರುವ ಹುಸೇನ್ ಇಬ್ನ್ ಅಲಿ ಮಂದಿರಕ್ಕೆ ತೆರಳುವ ಬಹುದಿನಾವಽಯ ‘ಅರ್ಬೈನ್ ವಾರ್ಷಿಕ ತೀರ್ಥಯಾತ್ರೆ’ಯು, ಒಂದು ಬೃಹತ್ ಧಾರ್ಮಿಕ ಚಟುವಟಿಕೆ ಎನಿಸಿಕೊಂಡಿದೆ.
ಇದು ಹುಸೇನ್ ಅವರ ಹುತಾತ್ಮತೆಯನ್ನು ಗುರುತಿಸುವ ಒಂದು ಪರಿಕ್ರಮವಾಗಿದ್ದು, ಇರಾಕ್ ನಲ್ಲಿರುವ ಕರ್ಬಲಾದಲ್ಲಿ ಪ್ರತಿವರ್ಷ ಜರುಗುತ್ತದೆ. ಈ ತೀರ್ಥಯಾತ್ರೆಯಲ್ಲಿ ಏನಿಲ್ಲವೆಂದರೂ 20 ದಶಲಕ್ಷ ಜನರು ಪಾಲ್ಗೊಳ್ಳುತ್ತಾರೆ. ಮುಸ್ಲಿಮರಿಗೆ ಇದರಷ್ಟೇ ಮುಖ್ಯ ವಾಗಿರುವ ಮತ್ತು
ತುಲನಾತ್ಮಕವಾಗಿ ಕೊಂಚ ಚಿಕ್ಕದಿರುವ ತೀರ್ಥಯಾತ್ರೆಯೆಂದರೆ, ಮೆಕ್ಕಾ ಕ್ಷೇತ್ರಕ್ಕೆ ಅವರು ಕೈಗೊಳ್ಳುವ ‘ಹಜ್ ಯಾತ್ರೆ’; ವಿಶ್ವದೆಲ್ಲೆಡೆಯಿಂದ ಸುಮಾರು 3 ರಿಂದ 4 ದಶಲಕ್ಷ ಜನರು ಆ ಪವಿತ್ರ ನಗರಿಗೆ ತೆರಳುವ ಸಂದರ್ಭವಿದು. ಇನ್ನು ಕ್ರೈಸ್ತ ಬಾಂಧವರಲ್ಲೂ ಧಾರ್ಮಿಕ ಸಮಾವೇಶ/ಯಾತ್ರೆಗಳು ನಡೆಯುವುದಿದೆ. ಸ್ಪೇನ್‌ನಲ್ಲಿ ನಡೆಯುವ ‘ಸೆಮನಾ ಸಾಂಟಾ’ ಮತ್ತು ಫಿಲಿಪ್ಪೀನ್ಸ್ ನಲ್ಲಿ ನಡೆಯುವ ‘ಸಿನುಲೋಗ್’ ನಂಥ ಉತ್ಸವಗಳು/ಹಬ್ಬಗಳು ಲಕ್ಷಾಂತರ ಕ್ರೈಸ್ತ ಬಾಂಧವರನ್ನು ಸೆಳೆಯುತ್ತವೆ ಎಂಬುದು ಗಮನಾರ್ಹ.
ಒಟ್ಟಿನಲ್ಲಿ, ಕುಂಭಮೇಳವು ಈ ಎಲ್ಲಾ ಉತ್ಸವಗಳಿಗಿಂತ ನಿಸ್ಸಂದೇಹವಾಗಿ ಸಾಕಷ್ಟು ದೊಡ್ಡದಾಗಿರುವಂಥದ್ದು ಮತ್ತು ಹೆಚ್ಚೆಚ್ಚು ಜನರನ್ನು ಒಳಗೊಳ್ಳುವಂಥದ್ದು. ಮುಖ್ಯ ವಾಗಿ, ಪ್ರಧಾನಿ ಮೋದಿಯವರು ಉಲ್ಲೇಖಿಸಿದಂತೆ, ಅದು ಈಗ ಒಂದು ‘ಜಾಗತಿಕ ಕಾರ್ಯ ಕ್ರಮ’ದ ಸ್ಥಾನಮಾನವನ್ನು ಪಡೆದುಕೊಂಡು ಬಿಟ್ಟಿದೆ. ಇದು ಹತ್ತು ಹಲವು ದೇಶಗಳ ಮತ್ತು ಎಲ್ಲಾ ಧರ್ಮಗಳ ಜನರನ್ನೂ ಆಕರ್ಷಿಸುತ್ತದೆ.
ಹೀಗಾಗಿ, ಮುಂಬರುವ ಕುಂಭಮೇಳಗಳ ನಿರ್ವಹಣೆಯನ್ನು ಒಂದು ರಾಷ್ಟ್ರೀಯ ಸಂಸ್ಥೆಗೆ ಹಸ್ತಾಂತರಿಸುವುದನ್ನು ಪ್ರಧಾನಿಯವರು ಪರಿಗಣಿಸುವುದಕ್ಕೆ ಇದು ಸೂಕ್ತ ಸಮಯ; ಹೀಗೆ ಮಾಡಿದಲ್ಲಿ, ಈ ಮೇಳದ ಜಾಗತಿಕ ಸ್ಥಾನಮಾನವು ಮತ್ತಷ್ಟು ವರ್ಧಿಸುತ್ತದೆ ಹಾಗೂ ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳು ಯಥೋಚಿತ ರೀತಿಯಲ್ಲಿ ಜಾಗತಿಕ ಸಮು ದಾಯದ ಸಮ್ಮುಖದಲ್ಲಿ ಪ್ರದರ್ಶಿಸಲ್ಪಡುವುದಕ್ಕೆ ಅದು ಅನುವುಮಾಡಿಕೊಡುತ್ತದೆ.
(ಲೇಖಕರು ಇಂಡಿಯಾ ಫೌಂಡೇಷನ್‌ನ ಅಧ್ಯಕ್ಷರು ಮತ್ತು ಬಿಜೆಪಿಯ ವಕ್ತಾರರು)