ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

James Harrison: ಅಪರೂಪದ ಬ್ಲಡ್‌... 1,111 ಕ್ಕೂ ಹೆಚ್ಚುಬಾರಿ ರಕ್ತದಾನ...ಮಹಾನ್‌ ಚೇತನ ಇದೀಗ ಅಸ್ತಂಗತ!

ತನ್ನ ರಕ್ತದಲ್ಲಿರುವ ಅಪರೂಪದ ಪ್ಲಾಸ್ಮಾವನ್ನು ಒಟ್ಟು ಹೆಚ್ಚು1,111 ಕ್ಕೂ ಬಾರಿ ದಾನ ಮಾಡುವ ಮೂಲಕ ಜಾಗತಿಕವಾಗಿ ಎರಡು ದಶಲಕ್ಷಕ್ಕೂ ಹೆಚ್ಚು ಶಿಶುಗಳ ಜೀವವನ್ನು ಉಳಿಸಿದ "ಮ್ಯಾನ್ ವಿತ್ ದಿ ಗೋಲ್ಡನ್ ಆರ್ಮ್" ಎಂದೂ ಕರೆಯಲ್ಪಡುವ ಆಸ್ಟ್ರೇಲಿಯಾದ ರಕ್ತದಾನಿ ಜೇಮ್ಸ್ ಹ್ಯಾರಿಸನ್(James Harrison) ಇತ್ತೀಚೆಗೆ ನಿಧನರಾಗಿದ್ದಾರೆ. ಅವರ ಸಾವಿನ ಬಳಿಕ ಅವರು ರಕ್ತದಾನ ಮಾಡಿದ ಹಳೆಯ ವಿಡಿಯೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video)ಆಗಿವೆ.

1,111 ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದ ಮಹಾನ್‌ ಚೇತನ ಇನ್ನಿಲ್ಲ!

Profile pavithra Mar 4, 2025 1:51 PM

ಕ್ಯಾನ್ಬೆರ: "ಮ್ಯಾನ್ ವಿತ್ ದಿ ಗೋಲ್ಡನ್ ಆರ್ಮ್" ಎಂದೂ ಕರೆಯಲ್ಪಡುವ ಆಸ್ಟ್ರೇಲಿಯಾದ ರಕ್ತದಾನಿ ಜೇಮ್ಸ್ ಹ್ಯಾರಿಸನ್(James Harrison) ಇನ್ನಿಲ್ಲ. ಅವರು ಇತ್ತೀಚೆಗೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ನರ್ಸಿಂಗ್ ಹೋಂನಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ತಮ್ಮ ಜೀವಿತಾವಧಿಯಲ್ಲಿ, ಅವರು ತಮ್ಮ ಅಪರೂಪದ ರಕ್ತದ ಪ್ಲಾಸ್ಮಾವನ್ನು ದಾನ ಮಾಡುವ ಮೂಲಕ ಜಾಗತಿಕವಾಗಿ ಎರಡು ದಶಲಕ್ಷಕ್ಕೂ ಹೆಚ್ಚು ಶಿಶುಗಳ ಜೀವವನ್ನು ಉಳಿಸಿದ್ದಾರೆ ಎನ್ನಲಾಗಿದೆ. ಅವರ ಸಾವಿನ ಬಳಿಕ ಅವರು ರಕ್ತದಾನ ಮಾಡಿದ ಹಳೆಯ ವಿಡಿಯೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video)ಆಗಿವೆ.

ಕೇವಲ 18 ವರ್ಷ ವಯಸ್ಸಾಗಿದ್ದಾಗ ರಕ್ತದಾನ ಅಭಿಯಾನವನ್ನು ಜೇಮ್ಸ್ ಹ್ಯಾರಿಸನ್ ಶುರುಮಾಡಿದ್ದಾರಂತೆ. ದೇಶದಲ್ಲಿ ರಕ್ತದಾನ ಮಾಡಲು ಗರಿಷ್ಠ ವಯಸ್ಸಿನ ಮಿತಿಯಾದ 81 ವರ್ಷಗಳನ್ನು ತಲುಪುವವರೆಗೂ ತನ್ನ ಈ ಪರೋಪಕಾರಿ ಕಾರ್ಯವನ್ನು ಮುಂದುವರಿಸಿದ್ದಾರೆ. ಅವರು ಒಟ್ಟು 1,111 ಕ್ಕೂ ಹೆಚ್ಚು ಬಾರಿ (1173) ರಕ್ತದಾನ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.



ಇದೀಗ ಇವರು ರಕ್ತದಾನ ಮಾಡಿದ್ದ ಹಳೆಯ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅವರ ರಕ್ತದಲ್ಲಿ ಆಂಟಿ-ಡಿ ಎಂಬ ಅಪರೂಪದ ಮತ್ತು ಅಮೂಲ್ಯವಾದ ಪ್ರತಿಕಾಯವಿತ್ತು. ಇದು ಭ್ರೂಣ ಮತ್ತು ನವಜಾತ ಶಿಶುವಿನ ಹಿಮೋಲಿಟಿಕ್ ಕಾಯಿಲೆಯನ್ನು (ಎಚ್‍ಡಿಎಫ್ಎನ್) ತಡೆಗಟ್ಟುವಲ್ಲಿ ಅವಶ್ಯಕವಾಗಿದೆ. ಇದು ಗರ್ಭಿಣಿ ಮಹಿಳೆ ಮತ್ತು ಅವಳ ಹುಟ್ಟಲಿರುವ ಮಗುವಿನ ನಡುವೆ ರಕ್ತದ ಪ್ರಕಾರಗಳು ಹೊಂದಿಕೆಯಾಗದಿದ್ದಾಗ ಉಂಟಾಗುವ ಗಂಭೀರ ಕಾಯಿಲೆಯಾಗಿದೆ.

ಅವರ ರಕ್ತದಲ್ಲಿರುವ ಈ ಅಪರೂಪದ ಅಂಶವು ಅವರನ್ನು ಬಹಳ ಉಪಯುಕ್ತ ದಾನಿಯನ್ನಾಗಿ ಮಾಡಿದೆ. ಹಾಗಾಗಿ ಅವರು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಲಕ್ಷಾಂತರ ಶಿಶುಗಳ ಜೀವಗಳನ್ನು ಉಳಿಸಿದ್ದಾರೆ. ಹ್ಯಾರಿಸನ್ 18 ರಿಂದ 81 ವರ್ಷದೊಳಗೆ 1,111 ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರಂತೆ.

ಹ್ಯಾರಿಸನ್ ಅವರ ಧ್ಯೇಯವನ್ನು ಲೈಫ್ ಬ್ಲಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀಫನ್ ಕಾರ್ನೆಲಿಸ್ಸೆನ್ ಮೆಚ್ಚಿಕೊಂಡಿದ್ದಾರೆ. "ಜೇಮ್ಸ್ ಇತರರಿಗೆ ಮತ್ತು ಶಿಶುಗಳಿಗೆ ರಕ್ತ ನೀಡುವ ಮೂಲಕ ತಮ್ಮ ಸಹಾಯಹಸ್ತವನ್ನು ಚಾಚಿದ್ದಾರೆ. ಅವರು ಒಟ್ಟು 1173 ಬಾರಿ ರಕ್ತದಾನ ಮಾಡಿದ್ದಾರೆ ಮತ್ತು ಅದಕ್ಕೆ ಪ್ರತಿಯಾಗಿ ಅವರು ಏನನ್ನೂ ನಿರೀಕ್ಷಿಸಲಿಲ್ಲ. ಅವರು ಒಬ್ಬ ಕರುಣಾಮಯಿ ಮತ್ತು ಉದಾರ ವ್ಯಕ್ತಿಯಾಗಿದ್ದು, ಜೀವಮಾನವಿಡೀ ರಕ್ತದಾನ ಮಾಡಲು ಬದ್ಧರಾಗಿದ್ದರು . ಇದು ಯಾರು ಮುರಿಯಲು ಸಾಧ್ಯವಾಗದ ದಾಖಲೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Health Tips: ರಕ್ತದಾನ ಮಹಾದಾನ: ಲಾಭಗಳೇನು? ತಪ್ಪುಕಲ್ಪನೆಗಳೇನು?

ಆಸ್ಟ್ರೇಲಿಯಾದಲ್ಲಿ, ಹ್ಯಾರಿಸನ್ ಅವರನ್ನು ಹೀರೋ ಎಂದು ಪರಿಗಣಿಸಲಾಗುತ್ತದೆ. ದೇಶದ ಅತ್ಯುನ್ನತ ಪದಕಗಳಲ್ಲಿ ಒಂದಾದ ‘ಮೆಡಲ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ’ ಸೇರಿದಂತೆ ಅವರು ತಮ್ಮ ಕಾರ್ಯಕ್ಕಾಗಿ ಹಲವು ಪ್ರಶಸ್ತಿಗಳು ಮತ್ತು ಮನ್ನಣೆಗಳನ್ನು ಪಡೆದಿದ್ದಾರೆ.