ʼಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರುʼ ಚಿತ್ರದ ʼಜಯಪರಮಹಂಸ ಗುರುಪರಮಹಂಸʼ ಹಾಡು ಬಿಡುಗಡೆ
Samartha Sadguru Sri Sangameshwara Maharajaru Movie: ʼಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರುʼ ಚಲನಚಿತ್ರದ ʼಜಯಪರಮಹಂಸ ಗುರುಪರಮಹಂಸʼ ಎಂಬ ಮೂರನೇ ಲಿರಿಕಲ್ ವಿಡಿಯೋ ಹಾಡು ಬಿಡುಗಡೆಯಾಗಿದೆ. ಈ ಕುರಿತ ವಿವರ ಇಲ್ಲಿದೆ.
ಬೆಂಗಳೂರು: ʼಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರುʼ ಚಲನಚಿತ್ರದ (Samartha Sadguru Sri Sangameshwara Maharajaru Movie) ಮೂರನೇ ಲಿರಿಕಲ್ ವಿಡಿಯೋ ಹಾಡು, ಫೆಬ್ರವರಿ 1ರಂದು ವಿಜಯಪುರ ಜಿಲ್ಲೆಯ ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ಜರುಗುತ್ತಿರುವ ಪಂಚ ಋಷಿಗಳ ಪುಣ್ಯ ಸ್ಮರಣೋತ್ಸವದ ಮಾಘ ಸಪ್ತಾಹದ ಕಾರ್ಯಕ್ರಮದಲ್ಲಿ ಶ್ರೀ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ಹಾಗೂ ಶುಭಹಾರೈಕೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ʼಜಯಪರಮಹಂಸ ಗುರುಪರಮಹಂಸʼ ಲಿರಿಕಲ್ ಹಾಡು ಬಿಡುಗಡೆಯಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ನಿರ್ಮಾಪಕ ಮಾಧವಾನಂದ ವೈ., ನಿರ್ದೇಶಕ ರಾಜರವಿಶಂಕರ್ (ವಿ. ರವಿ), ರವಿನಾರಾಯಣ್, ಸಂಕಲನಕಾರ ಆರ್.ಡಿ. ರವಿ, ಪ್ರಕಾಶ ಕಾಲತಿಪ್ಪಿ, ನಟ ವಿಶ್ವಪ್ರಕಾಶ್ ಮಲಗೊಂಡ, ಮಹಾದೇವ ಮಹಾರಾಜರು ಭೂಕೈಲಾಸ ಮಂದಿರ ನಂದಗಾಂವ, ಹಣಮಂತಪ್ಪ ಮಹಾರಾಜರು ಕಲ್ಮೇಶ್ವರ ಆಶ್ರಮ ಶೇಗುಣಸಿ, ಮುಕುಂದ ಬೆಳಗಲಿ ಬೆಂಗಳೂರು, ಸುಶೀಲ್ ಬೆಳಗಲಿ ಮಾಜಿ ಉಪಾಧ್ಯಕ್ಷರು ಜಿಲ್ಲಾ ಪಂಚಾಯಿತಿ ಬಾಗಲಕೋಟೆ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಾವಿರಾರು ಶ್ರೀಮಠದ ಭಕ್ತರ ಉಪಸ್ಥಿತರಿದ್ದರು.
ಶ್ರೀ ಗಿರಿಮಲ್ಲೇಶ್ವರ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀ ಸದ್ಗುರು ಪ್ರಭುಜೀ ಮಹಾರಾಜರ ಮಾರ್ಗದರ್ಶನದಲ್ಲಿ ʼಮಾಧವಾನಂದ ಯೋ ಶೇಗುಣಸಿʼ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು ʼಜಯಪರಮಹಂಸ ಗುರುಪರಮಹಂಸʼ ... ಗುರುಭಜನೆಯ ಸಾಲುಗಳ ಈ ಹಾಡನ್ನು ಎ.ಟಿ. ರವೀಶ್ ಗಾಯನದ ಜತೆಗೆ ಸಂಗೀತ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | DK Shivakumar: ಪತ್ರಕರ್ತರಿಗೆ ಆದ್ಯತೆ ಮೇರೆಗೆ ನಿವೇಶನ: ಡಿಸಿಎಂ ಡಿಕೆಶಿ ಭರವಸೆ
ಹೊಸ ಪ್ರತಿಭೆ ರವಿ ನಾರಾಯಣ್ ಶ್ರೀಸಂಗಮೇಶ್ವರರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟರಾದ ರಾಮಕೃಷ್ಣ, ವಿಜಯಕಾಶಿ, ವಿನಯಪ್ರಸಾದ್, ಸಂದೀಪ್ ಮಲಾನಿ, ನಾರಾಯಣ ಸ್ವಾಮಿ, ವಿಶ್ವಪ್ರಕಾಶ್ ಟಿ ಮಲಗೊಂಡ, ಭವ್ಯಶ್ರೀ ರೈ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರಾಜಾ ರವಿಶಂಕರ್ (ವಿ ರವಿ) ನಿರ್ದೇಶನ, ಸಿ. ನಾರಾಯಣ್ ಛಾಯಾಗ್ರಹಣ, ಎ.ಟಿ. ರವೀಶ್ ಸಂಗೀತ, ಡಿ. ರವಿ ಸಂಕಲನ, ಕುಮಾರ್ ನೊಣವಿನಕೆರೆ ಪ್ರಸಾದನ ಈ ಚಿತ್ರಕ್ಕಿದೆ.