ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

AB de Villiers: 4 ವರ್ಷಗಳ ಬಳಿಕ ಕ್ರಿಕೆಟ್‌ಗೆ ಮರಳಲು ಮಿಸ್ಟರ್‌ 360 ಡಿಗ್ರಿ ಸಜ್ಜು!

ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ದಿಗ್ಗಜ ಎಬಿ ಡಿವಿಲಿಯರ್ಸ್‌ ಅವರು ಕ್ರಿಕೆಟ್‌ ಮೈದಾನಕ್ಕೆ ಮರಳಲು ಎದುರು ನೋಡುತ್ತಿದ್ದಾರೆ. ಲೆಜೆಂಡ್ಸ್‌ ವಿಶ್ವ ಚಾಂಪಿಯನ್‌ಷಿಪ್‌ ಕ್ರಿಕೆಟ್‌ ಟೂರ್ನಿಯನ್ನು ಆಡಲು ಎಬಿಡಿ ಎದುರು ನೋಡುತ್ತಿದ್ದಾರೆ. ಅವರು ಗೇಮ್‌ ಚೇಂಜರ್ಸ್‌ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದಾರೆ.

ವಿಶ್ವ ಲೆಜೆಂಡ್ಸ್‌ ಚಾಂಪಿಯನ್‌ಶಿಪ್ ಆಡಲು ಎಬಿ ಡಿ ವಿಲಿಯರ್ಸ್‌ ಸಜ್ಜು!

AB de Villiers set for cricket return in World Championship of Legends

Profile Ramesh Kote Jan 28, 2025 3:26 PM

ನವದೆಹಲಿ: ವಿಶ್ವ ಹಾಗೂ ಭಾರತದಲ್ಲಿ ವಿಶೇಷ ಅಭಿಮಾನಿಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ದಿಗ್ಗಜ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ (AB de Villiers) ಕ್ರಿಕೆಟ್‌ ಮೈದಾನಕ್ಕೆ ಮರಳಲು ಎದುರು ನೋಡುತ್ತಿದ್ದಾರೆ. 40ನೇ ವಯಸ್ಸಿನ ಬ್ಯಾಟ್ಸ್‌ಮನ್‌ ಎರಡನೇ ಅವೃತ್ತಿಯ ವಿಶ್ವ ಲೆಜೆಂಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಗೇಮ್‌ ಚೇಂಜರ್ಸ್‌ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಈ ಟೂರ್ನಿಯು ಜುಲೈ 18 ರಂದು ಆರಂಭವಾಗಲಿದೆ.

2018ರಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಎಬಿ ಡಿವಿಲಿಯರ್ಸ್‌ ಅವರು 2021ರಲ್ಲಿ ಐಪಿಎಲ್‌ ವೃತ್ತಿ ಜೀವನಕ್ಕೂ ನಿವೃತ್ತಿ ಘೋಷಿಸಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು ತಮ್ಮ ಕುಟುಂಬದ ಜೊತೆ ತಮ್ಮ ಅಮೂಲ್ಯವಾದ ಸಮಯವನ್ನು ಕಳೆಯುತ್ತಿದ್ದರು. ಇತ್ತೀಚೆಗೆ ತಮ್ಮ ಮಕ್ಕಳ ಜೊತೆ ಕ್ರಿಕೆಟ್‌ ನೆಟ್ಸ್‌ ಬಂದಿದ್ದ ಎಬಿಡಿ, ತಮ್ಮ ಕಣ್ಣುಗಳು ಆಟಕ್ಕೆ ಸ್ಪಂದಿಸಿದರೆ ಮೈದಾನಕ್ಕೆ ಮರಳುವುದಾಗಿ ತಿಳಿಸಿದ್ದರು. ಅದರಂತೆ ಇದೀಗ ಅವರು ವಿಶ್ವ ಲೆಜೆಂಡ್ಸ್‌ ಚಾಂಪಿಯನ್‌ಷಿಪ್‌ಗೆ ಮರಳಲು ಎದುರು ನೋಡುತ್ತಿದ್ದಾರೆ.

ಎಬಿ ಡಿ ವಿಲಿಯರ್ಸ್‌ ಪ್ರತಿಭೆಗೆ ಆರ್‌ಸಿಬಿ ಸೂಕ್ತ ತಂಡವಲ್ಲ: ಸಂಜಯ್‌ ಮಾಂಜ್ರೇಕರ್ ಅಚ್ಚರಿ ಹೇಳಿಕೆ!

ದಕ್ಷಿಣ ಆಫ್ರಿಕಾ ಗೇಮ್‌ ಚೇಂಜರ್‌ ತಂಡದ ಸ್ಟಾರ್‌ ಆಟಗಾರರ ಜೊತೆ ಎಬಿಡಿ ಸೇರ್ಪಡೆಯಾಗಲಿದ್ದಾರೆ. ಈ ತಂಡದಲ್ಲಿ ಜಾಕ್‌ ಕಾಲಿಸ್‌ಮ ಹರ್ಷಲ್‌ ಗಿಬ್ಸ್‌, ಡೇಲ್‌ ಸ್ಟೇನ್‌ ಹಾಗೂ ಇಮ್ರಾನ್‌ ತಾಹೀರ್‌ ಉದ್ಘಾಟನಾ ಆವೃತ್ತಿಯಲ್ಲಿ ಆಡಿದ್ದರು. ಇದೀಗ ದಕ್ಷಿಣ ಆಫ್ರಿಕಾ ಲೆಜೆಂಡ್ಸ್‌ ತಂಡವನ್ನು ಎಬಿ ಡಿವಿಯರ್ಸ್‌ ಮುನ್ನಡೆಸಲಿದ್ದಾರೆ.

ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ ತಂಡದ ಸಹ ಮಾಲೀಕ ಅಮನ್‌ದೀಪ್‌ ಸಿಂಗ್‌ ಮಾತನಾಡಿ, "ಕ್ರಿಕೆಟ್‌ ದಿಗ್ಗಜರ ಅಸಾಧಾರಣ ಪ್ರತಿಭೆಯನ್ನು ಅನಾವರಣಗೊಳಿಸಲು ವಿಶ್ವ ಲೆಜೆಂಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವುದು ಹೆಮ್ಮೆಯ ವಿಷಯವಾಗಿದೆ. ಎಬಿ ಡಿ ವಿಲಿಯರ್ಸ್‌ ಅವರು ನಾಯಕರಾಗುವ ನಮ್ಮ ತಂಡಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಇವರ ನಾಯಕತ್ವದಲ್ಲಿ ನಮ್ಮ ತಂಡ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ," ಎಂದು ಹೇಳಿದ್ದಾರೆ.‌

IPL 2025: ಆರ್‌ಸಿಬಿಗೆ ನಾಯಕನಾಗಲು ಕೊಹ್ಲಿ ಏಕೈಕ ಆಯ್ಕೆ; ಎಬಿಡಿ

ಎಬಿಡಿ ಅಂತಾರಾಷ್ಟ್ರೀಯ ಅಂಕಿಅಂಶಗಳು

ದಕ್ಷಿಣ ಆಫ್ರಿಕಾದ ಸಾರ್ವಕಾಲಿಕ ಶ್ರೇಷ್ಠ ದಿಗ್ಗಜ ಆಟಗಾರರಲ್ಲಿ ಒಬ್ಬರಾಗಿರುವ ಎಬಿ ಡಿವಿಯರ್ಸ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ವಿಶೇಷ ವೃತ್ತಿ ಜೀವನವನ್ನು ಹೊಂದಿದ್ದಾರೆ. ಅವರು ಆಡಿದ 114 ಟೆಸ್ಟ್‌ ಪಂದ್ಯಗಳಿಂದ 8765 ರನ್‌ಗಳು ಹಾಗೂ 228 ಏಕದಿನ ಪಂದ್ಯಗಳಿಂದ 9577 ರನ್‌ಗಳು ಹಾಗೂ ೭78 ಟಿ20ಐ ಪಂದ್ಯಗಳಿಂದ 1672 ರನ್‌ಗಳನ್ನು ದಾಖಲಿಸಿದ್ದಾರೆ.

ತಮ್ಮ 360 ಡಿಗ್ರಿ ಬ್ಯಾಟಿಂಗ್‌ ಮೂಲಕ ಪಂದ್ಯದ ಯಾವುದೇ ಸನ್ನಿವೇಶದಲ್ಲಿ ತಂಡವನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಅವರು ಕರಗತ ಮಾಡಿಕೊಂಡಿದ್ದರು. ಅದರಲ್ಲಿಯೂ ವಿಶೇಷವಾಗಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಬಹುತೇಕ ಅವಧಿಯನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಅವರು ಸವೆಸಿದ್ದಾರೆ. ಆ ಮೂಲಕ ಐಪಿಎಲ್‌ ಟೂರ್ನಿಯ ಇತಿಹಾಸದ ಅತ್ಯಂತ ಶ್ರೇಷ್ಠ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.



ವಿಶ್ವ ಲೆಜೆಂಡ್ಸ್‌ ಚಾಂಪಿಯನ್‌ಷಿಪ್‌ ಎಂದರೇನು?

ವಿಶ್ವದ ಲೆಜೆಂಡ್ಸ್‌ ಚಾಂಪಿಯನ್‌ಷಿಪ್‌ ಟೂರ್ನಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಸ್ಟಾರ್‌ಗಳು ಆಡುತ್ತಾರೆ. ಜಾಕ್‌ ಕಾಲಿಸ್‌, ಹರ್ಷಲ್‌ ಗಿಬ್ಸ್‌, ಡೇಲ್‌ ಸ್ಟೇನ್‌ ಸೇರಿದಂತೆ ಹಲವು ದಿಗ್ಗಜ ಗೇಮ್‌ ಚೇಂಜರ್ಸ್‌ ದಕ್ಷಿಣ ಆಫ್ರಿಕಾ ತಂಡದಲ್ಲಿದ್ದಾರೆ. ಇದೀಗ ಎಬಿ ಡಿವಿಲಿಯರ್ಸ್‌ ಎರಡನೇ ಆವೃತ್ತಿಯಲ್ಲಿ ಈ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.