Yagati Raghu Naadig Column: ಸುನೀತಾ ವಿಲಿಯಮ್ಸ್ ಸ್ವಾಗತಕ್ಕೆ ಮುಹೂರ್ತ ನಿಗದಿ
2024ರ ಜೂನ್ 5ರಂದು ಸುನಿತಾ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲು ಸಜ್ಜಾದಾಗ, ಇದು ಕೇವಲ 8 ದಿನಗಳ ಕಾರ್ಯಾಚರಣೆ ಎಂಬ ಗ್ರಹಿಕೆಯೇ ಅವರಲ್ಲಿ ಕೆನೆಗಟ್ಟಿತ್ತು. ಆದರೆ ತಾಂತ್ರಿಕ ಸಮಸ್ಯೆ ಗಳಿಂದಾಗಿ ಭೂಮಿಗೆ ಮರಳಿಕೆ ಸಾಧ್ಯವಾಗದಿದ್ದಾಗ ಮತ್ತು ದಿನಗಳೆದಂತೆ ಅದು ವಿಳಂಬ ವಾಗುತ್ತಲೇ ಹೋದಾಗ ಸಹಜವಾಗಿ ಅವರ ಕುಟುಂಬಿಕರನ್ನು ಆತಂಕ ಆವರಿಸಿದ್ದುಂಟು


ಯಗಟಿ ರಘು ನಾಡಿಗ್
ಪರೀಕ್ಷಾ ಹಾರಾಟಕ್ಕಾಗಿ 2024ರ ಜೂನ್ ತಿಂಗಳಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ಅಮೆರಕದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಪೂರ್ವ ನಿಗದಿಯಿಂತೆ ಭೂಮಿಗೆ ಮರಳಲಾಗದ ಕಾರಣ ಒಂದಷ್ಟು ಆತಂಕಗಳು ಸೃಷ್ಟಿಯಾ ಗಿದ್ದುಂಟು, ಬಗೆಬಗೆಯ ಸುದ್ದಿಗಳು ಹಬ್ಬಿದ್ದುಂಟು. ಆದರೆ ಇಂಥ ಎಲ್ಲ ಗ್ರಹಿಕೆಗಳನ್ನು ನಿವಾಿಸಿರುವ ಅಮೆರಿಕದ ಬಾಹ್ಯಾಕಾಶ ಸಂಧೋಧನಾ ಸಂಸ್ಥೆಯು (ನಾಸಾ), ಈ ತಿಂಗಳ 16ರಿಂದ ಅವರಿಬ್ಬರೂ ಭೂಮಿಗೆ ಮರಳಲಿದ್ದಾರೆ ಎಂದು ಮಾಹಿತ ನೀಡಿದೆ. ಈ ಬೆಳವಣಿಗೆ ಯ ಸುತ್ತಮುತ್ತಲಿನ ಕಿರುನೋಟ ಇಲ್ಲಿದೆ.
ಸುನಿತಾ ನಮ್ಮೋರು ಕಣ್ರಿ
ಹೌದು. ಸುನಿತಾ ವಿಲಿಯಮ್ಸ್ ಭಾರತೀಯ ಮೂಲದವರು. ಇವರ ತಂದೆ ಡಾ.ದೀಪಕ್ ಪಾಂಡ್ಯ ಅವರು ಗುಜರಾತ್‌ನಿಂದ ಅಮೆರಿಕಕ್ಕೆ ವಲಸೆ ಹೋಗಿ ಅಲ್ಲಿನ ಒಹಿಯೋ ಪ್ರದೇಶದಲ್ಲಿ ನೆಲೆಸಿದ್ದವರು. 1965ರ ಸೆಪ್ಟೆಂಬರ್ 19ರಂದು ಅಲ್ಲಿ ಜನಿಸಿದ ಸುನಿತಾರಿಗೆ, ನಾಸಾ ಸಂಸ್ಥೆಯಲ್ಲಿ ಗಗನಯಾತ್ರಿಯಾಗುವ ಸೌಭಾಗ್ಯ 1998ರಲ್ಲಿ ದಕ್ಕಿತು. ಈ ಅವಕಾಶ ವನ್ನು ಸಮರ್ಥವಾಗಿ ಬಳಸಿಕೊಂಡು ಹಲವು ಮಹತ್ವದ ಬಾಹ್ಯಾಕಾಶ ಕಾರ್ಯಾ ಚರಣೆಗಳಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಸುನಿತಾ ಅವರದ್ದು. 2006-07ರಲ್ಲಿ ನಡೆದ ಇಂಥ ಮೊದಲ ಕಾರ್ಯಾಚರಣೆಯಲ್ಲಿ, ಬರೋಬ್ಬರಿ 195 ದಿನಗಳವರೆಗೆ ಬ್ಯಾಹ್ಯಾಕಾಶದಲ್ಲಿ ಉಳಿದ ಸಾಧನೆ ಇವರ ಖಾತೆಯಲ್ಲಿ ದಾಖಲಾಗಿದೆ. ‘ಬಾಹ್ಯಾಕಾಶದಲ್ಲಿ ಮ್ಯಾರಥಾನ್ ಓಡಿದ ಮೊದಲ ವ್ಯಕ್ತಿ’ ಎಂಬುದೂ ಇವರ ಕೀರ್ತಿಕಿರೀಟದಲ್ಲಿನ ಮತ್ತೊಂದು ಗರಿ.
ಇದನ್ನೂ ಓದಿ: Yagati Raghu Naadig Column: ಕಲಬೆರಕೆ ದುನಿಯಾ ಇದು...
2024ರ ಜೂನ್ 5ರಂದು ಸುನಿತಾ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲು ಸಜ್ಜಾದಾಗ, ಇದು ಕೇವಲ 8 ದಿನಗಳ ಕಾರ್ಯಾಚರಣೆ ಎಂಬ ಗ್ರಹಿಕೆಯೇ ಅವರಲ್ಲಿ ಕೆನೆಗಟ್ಟಿತ್ತು. ಆದರೆ ತಾಂತ್ರಿಕ ಸಮಸ್ಯೆ ಗಳಿಂದಾಗಿ ಭೂಮಿಗೆ ಮರಳಿಕೆ ಸಾಧ್ಯವಾಗದಿದ್ದಾಗ ಮತ್ತು ದಿನಗಳೆ ದಂತೆ ಅದು ವಿಳಂಬ ವಾಗುತ್ತಲೇ ಹೋದಾಗ ಸಹಜವಾಗಿ ಅವರ ಕುಟುಂಬಿಕರನ್ನು ಆತಂಕ ಆವರಿಸಿದ್ದುಂಟು. ಇಂಥ ಸಂಕಷ್ಟದ ಕ್ಷಣಗಳಲ್ಲೂ ಧೃತಿ ಗೆಡದ ಸುನಿತಾ, “ಇಲ್ಲಿ ಕಳೆಯುತ್ತಿರುವ ಸುದೀರ್ಘ ಸಮಯ ನನ್ನ ವೃತ್ತಿಜೀವನದಲ್ಲಿ ಮರೆಯಲಾಗದಂಥ ಅನು ಭವ ನೀಡಿದೆ. ತಾಂತ್ರಿಕ ಸಮಸ್ಯೆಗಳು ಎದುರಾಗಿರುವುದು ಹೌದಾದರೂ, ಇಷ್ಟೂ ಸಮಯ ದಲ್ಲಿ ನಮ್ಮ ಪಾಲಿನ ಕರ್ತವ್ಯಗಳನ್ನು ನಿರ್ವಹಿಸಿದ ಸಂತಸ ಮತ್ತು ತೃಪ್ತಿ ನಮಗಿದೆ; ಜತೆಗೆ ಕುಟುಂಬದವರನ್ನು ಆದಷ್ಟು ಬೇಗ ಭೇಟಿ ಮಾಡುವ ತವಕವೂ ಉಂಟಾಗಿದೆ" ಎಂಬ ಸಂಯಮದ ಮಾತು ಗಳನ್ನು ಬಾಹ್ಯಾಕಾಶದಿಂದ ರವಾನಿಸಿದ್ದುಂಟು!
ಒಂದಿಷ್ಟು ಫ್ಲ್ಯಾಷ್ ಬ್ಯಾಕ್
‘ನಾಸಾ’ ಮತ್ತು ‘ಬೋಯಿಂಗ್’ ಸಂಸ್ಥೆಯ ಜಂಟಿ ಸಹಯೋಗದೊಂದಿಗೆ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಖಗೋಳ ವಿಜ್ಞಾನಿ ಬುಚ್ ವಿಲ್ಮೋರ್ 2024ರ ಜೂನ್ 5ರಂದು ಅಂತಾ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಪಯಣಿಸಿದ್ದರು. ಅವರನ್ನು ಅಲ್ಲಿಗೆ ಹೊತ್ತೊಯ್ದಿದ್ದು ‘ಸ್ಟಾರ್‌ಲೈನರ್’ ಬಾಹ್ಯಾಕಾಶ ನೌಕೆ. ನಿಗದಿತ ಕಾರ್ಯ ಸೂಚಿಯಂತೆ ಜೂನ್ 14ರಂದು ಅವರು ಭೂಮಿಗೆ ಮರಳಬೇಕಿತ್ತು. ಆದರೆ ಬಾಹ್ಯಾಕಾಶ ನೌಕೆಯ ಸಜ್ಜಿಕೆಯಲ್ಲಿ ಒಂದಷ್ಟು ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡ ಕಾರಣ ದಿಂದಾಗಿ ಅವರ ಮರಳುವಿಕೆಯೂ ಅನಿವಾರ್ಯವಾಗಿ ಜೂನ್ 26ಕ್ಕೆ ಮುಂದೂಡ ಲ್ಪಟ್ಟಿತು. ನಂತರದಲ್ಲಿ ವಾಪಸಾತಿ ದಿನಾಂಕದ ಬಗ್ಗೆ ಸ್ಪಷ್ಟತೆ ಮೂಡಲಿಲ್ಲ.
ಜತೆಗೆ ತಾಂತ್ರಿಕ ತೊಂದರೆ ಪರಿಹಾರವಾಗದೆ ಬರೋಬ್ಬರಿ 9 ತಿಂಗಳವರೆಗೆ ಈ ಇಬ್ಬರೂ ತ್ರಿಶಂಕುಗಳಂತೆ ಬಾನಂಗಳದಲ್ಲೇ ಸಿಲುಕ ಬೇಕಾಗಿ ಬಂದಿತ್ತು. ಇದು ಒಂದಿಡೀ ಬಾಹ್ಯಾಕಾಶ ವಿಜ್ಞಾನಿ ಸಮುದಾಯದವರ, ಅಭಿಮಾನಿಗಳ ಮತ್ತು ಕುಟುಂಬಿಕರ ತಲ್ಲಣವನ್ನು ಮತ್ತ ಷ್ಟು ತೀವ್ರಗೊಳಿಸಿತ್ತು.
ತಲ್ಲಣ್ಣಕ್ಕಿತ್ತು ಕಾರಣಗಳು...
ಸುನಿತಾ ಮತ್ತು ವಿಲ್ಮೋರ್ ಅವರನ್ನು ಭೂಮಿಗೆ ಮರಳಿ ತರಬೇಕಿದ್ದ ‘ಸ್ಟಾರ್‌ಲೈನರ್’ ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ದೋಷಗಳು ಕಂಡುಬಂದಾಗ, ಕ್ಲುಪ್ತ ಸಮಯದಲ್ಲೇ ಅವನ್ನು ಸರಿಪಡಿಸಬೇಕಾದ ಅನಿವಾರ್ಯತೆ ಮತ್ತು ಒತ್ತಡ ಎದುರಾಗಿತ್ತು. ಸಾಲ ದೆಂಬಂತೆ, ಸುದೀರ್ಘ ಅವಧಿಗೆ ಸಾಕಾಗುವಷ್ಟು ಪ್ರಮಾಣದ ಇಂಧನವೇನೂ ಆ ನೌಕೆ ಯಲ್ಲಿರಲಿಲ್ಲ; ವಿಶೇಷ ಸಂದರ್ಭಗಳಲ್ಲಿ ಅದನ್ನು ಕೆಲ ದಿನಗಳ ಮಟ್ಟಿಗೆ ಹೆಚ್ಚಿಸುವ ಸಾಧ್ಯತೆ ಇದೆಯಾದರೂ, ತಾಂತ್ರಿಕ ದೋಷವೇ ಪರಿಹಾರವಾಗದಿದ್ದಲ್ಲಿ ಇಂಧನ ಖಾಲಿ ಯಾಗುತ್ತಾ ಹೋಗುವ ಮತ್ತು ಗಗನಯಾತ್ರಿಗಳು ಭೂಮಿಗೆ ಮರಳುವುದೇ ಅಸಂಭವ ವಾಗಿಬಿಡುವ ಅಪಾಯವೂ ಇತ್ತು.
ಜತೆಗೆ, ಸುನಿತಾರ ಮರಳುವಿಕೆ ವಿಳಂಬವಾದಾಗ ಸಹಜವಾಗಿ ಎಲ್ಲರಿಗೂ ನೆನಪಾಗಿದ್ದು ಮತ್ತೋರ್ವ ಗಗನಯಾತ್ರಿ ಕಲ್ಪನಾ ಚಾವ್ಲಾ. ಬಾಹ್ಯಾಕಾಶದಲ್ಲಿ ವಿಹರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕಲ್ಪನಾ ಚಾವ್ಲಾ ಅವರು ಭಾರತ ಮೂಲದ ಅಮೆರಿಕನ್ ಗಗನಯಾತ್ರಿ. ಇವರು ಬಾಹ್ಯಾಕಾಶ ಕಾರ್ಯಾಚರಣೆಯನ್ನು ಮುಗಿಸಿ ಕೊಂಡು ತಮ್ಮ 6 ಮಂದಿ ಒಡನಾಡಿಗಳೊಂದಿಗೆ 2003ರ ಫೆಬ್ರವರಿ 1ರಂದು ಭೂಮಿಗೆ ಮರಳು ವಾಗ, ಅವರನ್ನು ಒಯ್ಯುತ್ತಿದ್ದ ಸ್ಪೇಸ್ ಷಟಲ್ ಕೊಲಂಬಿಯಾ ಕಕ್ಷಾಗಾಮಿಯು ಭೂಮಿಯ ವಾತಾವರಣವನ್ನು ಪ್ರವೇಶಿಸುವ ಘಟ್ಟದಲ್ಲಿ ಅಪಘಾತಕ್ಕೀಡಾಗಿ ಅಷ್ಟೂ ಮಂದಿ ಅಸುನೀಗಿದ ದುರಂತ ಎಲ್ಲರ ಮನದಲ್ಲಿನ್ನೂ ಹಸಿಯಾಗಿತ್ತು. ಹೀಗಾಗಿ ಇದೇ ಪರಿಸ್ಥಿತಿ ಸುನಿತಾರಿಗೂ ಒದಗಲಿದೆಯೇ ಎಂದು ಬಹುತೇಕರು ತಲ್ಲಣಿಸುವಂತಾಗಿತ್ತು.
ಇಲ್ಲಿದೆ ನಮ್ಮನೆ, ಅಲ್ಲಿಗೇಕೆ ಸುಮ್ಮನೆ ?
ಬಾಹ್ಯಾಕಾಶ ನಿಲ್ದಾಣಕ್ಕೆ ಸುನಿತಾ ಮತ್ತು ವಿಲ್ಮೋರ್ ತೆರಳಿದ್ದೇಕೆ? ಎಂಬುದು ಬಹುತೇಕ ರನ್ನು ಕಾಡುತ್ತಿರುವ ಪ್ರಶ್ನೆ. ವಿವಿಧ ಕಾರ್ಯಾಚರಣೆಗಳ ನಿಮಿತ್ತ ಬಾಹ್ಯಾಕಾಶಕ್ಕೆ ಸೀಮಿತ ಸಂಖ್ಯೆಯ ಗಗನಯಾತ್ರಿಗಳನ್ನು ಈ ಹಿಂದೆಯೂ ಕಳಿಸಲಾಗಿದೆ, ಕಳಿಸಲಾಗುತ್ತಿದೆ ಮತ್ತು ನಿಗದಿತ ಕಾಲಾವಧಿಯೊಳಗೆ ವಾಪಸ್ ಕರೆಸಿಕೊಳ್ಳಲಾಗುತ್ತಿದೆ. ಆದರೆ ಈ ಚಟುವಟಿಕೆ ನಡೆಯುತ್ತಿದ್ದುದು ರಾಕೆಟ್‌ಗಳ ನೆರವಿನಿಂದ. ಇದರ ಬದಲು ಬಾಹ್ಯಾಕಾಶ ನೌಕೆಯೊಂದ ರಲ್ಲಿ ಸಾಕಷ್ಟು ಜನರು ಅಲ್ಲಿಗೆ ತೆರಳುವಂತಾದರೆ? ಎಂಬ ಚಿಂತನೆ ಮೊಳೆತಾಗ, ನಾಸಾಗೆ ಒತ್ತಾಸೆಯಾಗಿ ನಿಂತಿದ್ದು ಬೋಯಿಂಗ್ ಸಂಸ್ಥೆ. ಇದು ಪ್ರಾಯೋಗಿಕವಾಗಿ ಸಿದ್ಧ ಪಡಿಸಿದ ‘ಸ್ಟಾರ್‌ಲೈನರ್’ ನೌಕೆಯ ಮೂಲಕ ಸಾಕಷ್ಟು ಯಾತ್ರಿಗಳನ್ನು ಭೂಮಿಯಿಂದ ಅಂತಾ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸಿ, ಅಲ್ಲಿ ಕೆಲಕಾಲ ಇರಿಸಿ, ನಂತರ ಭೂಮಿಗೆ ಮರಳಿ ಕರೆತರುವ ರೋಮಾಂಚಕ ಕಾರ್ಯಾಚರಣೆ ಇದಾಗಿತ್ತು. ಅಂದರೆ, ಖಾಸಗಿಯಾಗಿ ಬಾಹ್ಯಾಕಾಶ ಪ್ರಯಾಣ ಮಾಡುವ ಬಯಕೆ ಮತ್ತು ಕುತೂಹಲ ಇರುವವರಿಗಾಗಿ ರೂಪಿಸಲಾದ ಕಾರ್ಯಾಚರಣೆಯಾಗಿತ್ತು.
ಕಲ್ಪನೆಯು ರಮ್ಯವಾಗಿದ್ದರೂ, ಅನುಷ್ಠಾನ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಇದು ಮೊದಲ ಬಾರಿಯ ಕಸರತ್ತು ಆಗಿದ್ದರಿಂದ ಮತ್ತು ಏಕಕಾಲಕ್ಕೆ ಹಲವು ಯಾತ್ರಿ ಗಳನ್ನು ಒಯ್ಯಬೇಕಾಗಿದ್ದರಿಂದ, ನೌಕೆಯು ಹಲವು ಅಗ್ನಿಪರೀಕ್ಷೆಗಳಲ್ಲಿ ಹಾದು ಹೋಗಬೇಕಿತ್ತು. ಹೀಗಾಗಿ ಅದನ್ನು ಅನೇಕ ಪ್ರಯೋಗಗಳಿಗೆ ಒಡ್ಡಲಾಗಿತ್ತು. ಈ ಘಟ್ಟಗಳಲ್ಲಿ ಕಂಡುಬಂದ ನ್ಯೂನತೆಗಳು/ವೈಫಲ್ಯಗಳನ್ನು ತಿದ್ದಿ ತೀಡಲಾಯಿತು. ಎಲ್ಲವೂ ತೃಪ್ತಿಕರ ವಾಗಿದೆ ಎಂದು ಖಾತ್ರಿಯಾದ ಮೇಲಷ್ಟೇ ಸುರಕ್ಷಿತ ಗಗನಯಾನದ ಸ್ಟಾರ್‌ಲೈನರ್ ನೌಕೆ ಸಜ್ಜುಗೊಂಡಿತು. ಅದರ ಪ್ರಯೋಗಾರ್ಥ ಪರೀಕ್ಷೆಗಾಗಿಯೇ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್‌ರನ್ನು ಈ ನೌಕೆಯ ಮೂಲಕ ಬಾಹ್ಯಾಕಾಶ ನಿಲ್ದಾಣಕ್ಕೆ ಕಳಿಸಲಾಗಿತ್ತು.
ಬಂದೇ ಬರುತಾರೆ ಸುನೀತಾ
ಆದರೆ ಆ ತಲ್ಲಣ ಕೊನೆಗೊಳ್ಳುವ ಕಾಲ ಕೊನೆಗೂ ಬಂದಿದೆ. ಈ ತಿಂಗಳ 16ರಂದು ಸುನಿತಾ ಮತ್ತು ವಿಲ್ಮೋರ್ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಸ್ಪಷ್ಟಪಡಿಸಿದೆ. ಲಭ್ಯ ಮಾಹಿತಿಗಳ ಪ್ರಕಾರ ಇವರಿಬ್ಬರನ್ನೂ ಬಾನಂಗಳದಿಂದ ಭುವಿಯಂಗಳಕ್ಕೆ ಹೊತ್ತು ತರಲಿದೆ ಸ್ಪೇಸ್ ಎಕ್ಸ್ ಸಂಸ್ಥೆಯ ‘ಕ್ರ್ಯೂ ಡ್ರ್ಯಾಗನ್’ ಎಂಬ ಬಾಹ್ಯಾಕಾಶ ನೌಕೆ. ಮಾರ್ಚ್ 12ರಂದು ಹೊಸ ತಂಡವು ‘ಕ್ರ್ಯೂ-10’ ಕಾರ್ಯಾಚರಣೆಯ ಅಂಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ ನಂತರ, ಅದೇ ನೌಕೆಯಲ್ಲಿ ಸುನಿತಾ ಮತ್ತು ವಿಲ್ಮೋರ್ ಭೂಮಿಗೆ ಮರಳಲಿದ್ದಾರೆ. ಅವರ ಈ ಮರಳುವಿಕೆಯ ಸಮಯ ಮತ್ತು ಸ್ಥಳವು ಹವಾ ಮಾನದ ಪರಿಸ್ಥಿತಿಗಳನ್ನು ಅವಲಂಬಿಸಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.
ತರಬೇತಿ ನೀಡಲಾಗಿತ್ತು
ಸ್ಟಾರ್‌ಲೈನ್ ನೌಕೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳಬಹುದಾದ ದೋಷಗಳನ್ನು ಅಲ್ಲಿದ್ದು ಕೊಂಡೇ ಸರಿಪಡಿಸುವಂಥ ತರಬೇತಿಯನ್ನು ಸುನಿತಾ ಹಾಗೂ ವಿಲ್ಮೋರ್‌ರಿಗೆ ನೀಡಲಾಗಿತ್ತು. ಮಾತ್ರವಲ್ಲದೆ, ನಾಸಾ-ಬೋಯಿಂಗ್ ಸಂಸ್ಥೆಗಳ ತಂತ್ರಜ್ಞರು, ಸ್ಟಾರ್‌ಲೈನ್ ನೌಕೆಯ ತಯಾರಿಯಲ್ಲಿ ತೊಡಗಿದ್ದ ಪರಿಣತರು ಭೂಮಿಯ ನಿಯಂತ್ರಣ ಕೇಂದ್ರ ದಲ್ಲಿದ್ದು ಕೊಂಡೇ ಅವರೊಂದಿಗೆ ಸಂಪರ್ಕ ಸಾಽಸಿ, ಈ ಸಂಬಂಧ ಸಲಹೆ- ಸೂಚನೆ ನೀಡುತ್ತಿದ್ದದುಂಟು. ಇಷ್ಟಾಗಿಯೂ ನೌಕೆ ಕೈಕೊಟ್ಟಿದ್ದು ವಿಷಾದನೀಯ.