ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ಭಾರತ-ಪಾಕ್‌ ಪಂದ್ಯದ ವೇಳೆ ಪಾಂಡ್ಯಗೆ 'ಫ್ಲೈಯಿಂಗ್ ಕಿಸ್' ನೀಡಿದ ಬ್ರಿಟಿಷ್ ಗಾಯಕಿ

ಜಾಸ್ಮಿನ್ ವಾಲಿಯಾ ಇಂಗ್ಲೆಂಡ್‌ನ ಎಸೆಕ್ಸ್‌ನಲ್ಲಿ ಜನಿಸಿದರು. ಇವರ ಕುಟುಂಬಸ್ಥರು ಭಾರತೀಯ ಮೂಲದವರು. ಬ್ರಿಟಿಷ್ ರಿಯಾಲಿಟಿ ಟೆಲಿವಿಷನ್ ಶೋ ‘ದಿ ಓನ್ಲಿ ವೇ ಈಸ್ ಎಸೆಕ್ಸ್’ ಮೂಲಕ ಪ್ರಸಿದ್ಧರಾದರು. ಝಾಕ್ ನೈಟ್ ಜತೆಗಿನ ಅವರ ‘ಬಾಂಬ್ ಡಿಗ್ಗಿ’ ಹಾಡು ಭಾರತದಲ್ಲಿ ಅಪಾರ ಜನಪ್ರಿಯತೆ ಗಳಿಸಿತ್ತು. ಬ್ರಿಟನ್ ಮತ್ತು ಭಾರತ ಎರಡೂ ಕಡೆಗಳಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

VIRAL VIDEO: ಜಾಸ್ಮಿನ್ ವಾಲಿಯಾ ಜತೆ ಹಾರ್ದಿಕ್‌ ಪಾಂಡ್ಯ ಡೇಟಿಂಗ್‌ ಖಚಿತ!

Profile Abhilash BC Feb 24, 2025 1:19 PM

ದುಬೈ: ಟೀಮ್‌ ಇಂಡಿಯಾದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರು ಕಳೆದ ವರ್ಷ ನತಾಸಾ ಸ್ಟಾಂಕೋವಿಕ್‌ಗೆ ವಿಚ್ಛೇದನ ನೀಡಿದ್ದರು. ಆ ಬಳಿಕ ಪಾಂಡ್ಯ, ಬ್ರಿಟಿಷ್ ಗಾಯಕಿ ಮತ್ತು ಟೆಲಿವಿಷನ್ ತಾರೆ ಜಾಸ್ಮಿನ್ ವಾಲಿಯಾ ಜತೆ ಡೇಟಿಂಗ್‌ ನಡೆಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಅಲ್ಲದೆ ಇಬರಿಬ್ಬರು ಗ್ರೀಸ್‌ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ಈ ಜೋಡಿ ಡೇಟಿಂಗ್‌ ನಡೆಸುತ್ತಿರುವುದು ಖಚಿತ ಎನ್ನುವಂತಿದೆ.

ಈ ಜೋಡಿ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನುವುದಕ್ಕೆ ಪುಷ್ಠಿ ನೀಡುವಂತೆ ಭಾನುವಾರ ನಡೆದಿದ್ದ ಭಾರತ ಮತ್ತು ಪಾಕ್‌ ಪಂದ್ಯದ ವೇಳೆ ಜಾಸ್ಮಿನ್ ವಾಲಿಯಾ ಕೂಡ ಕಾಣಿಸಿಕೊಂಡಿದ್ದರು. ಅದರಂತೆ ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಭಾರತ ಪರ ಪಾಂಡ್ಯ ಉತ್ತಮ ಪ್ರದರ್ಶನ ತೋರುತ್ತಿದ್ದ ವೇಳೆ 'ಫ್ಲೈಯಿಂಗ್ ಕಿಸ್' ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



ಯಾರು ಈ ಜಾಸ್ಮಿನ್‌?

ಜಾಸ್ಮಿನ್ ವಾಲಿಯಾ ಇಂಗ್ಲೆಂಡ್‌ನ ಎಸೆಕ್ಸ್‌ನಲ್ಲಿ ಜನಿಸಿದರು. ಇವರ ಕುಟುಂಬಸ್ಥರು ಭಾರತೀಯ ಮೂಲದವರು. ಬ್ರಿಟಿಷ್ ರಿಯಾಲಿಟಿ ಟೆಲಿವಿಷನ್ ಶೋ ‘ದಿ ಓನ್ಲಿ ವೇ ಈಸ್ ಎಸೆಕ್ಸ್’ ಮೂಲಕ ಪ್ರಸಿದ್ಧರಾದರು. ಝಾಕ್ ನೈಟ್ ಜತೆಗಿನ ಅವರ ‘ಬಾಂಬ್ ಡಿಗ್ಗಿ’ ಹಾಡು ಭಾರತದಲ್ಲಿ ಅಪಾರ ಜನಪ್ರಿಯತೆ ಗಳಿಸಿತ್ತು. ಬ್ರಿಟನ್ ಮತ್ತು ಭಾರತ ಎರಡೂ ಕಡೆಗಳಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಇದೇ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಧರಿಸಿದ್ದ ವಾಚ್‌ ಕೂಡ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆಯ ವಸ್ತುವಾಗಿದೆ. ಹೌದು, ಹಾರ್ದಿಕ್ ಪಾಂಡ್ಯ ಧರಿಸಿದ್ದ ಕೈ ವಾಚ್‌ನ ಬೆಲೆ ಕೇಳಿ ಕ್ರೀಡಾಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದೆ. ಪಾಕ್ ವಿರುದ್ಧ ಬೌಲಿಂಗ್ ವೇಳೆ ಹಾರ್ದಿಕ್ ಧರಿಸಿದ್ದ ಕೇಸರಿ ಬಣ್ಣದ ವಾಚ್‌ನ ಬೆಲೆ ಬರೋಬ್ಬರಿ 7 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ರಿಚರ್ಡ್ ಮಿಲ್ಲೆ ಕಂಪನಿಯ ಅರ್‌ಎಂ 27-02 ಟೂರ್‌ಬಿಲ್ಲನ್ ರಾಲ್ ನಡಾಲ್ ಲಿಮಿಟೆಡ್ ಆವೃತ್ತಿಯ ವಾಚ್ ಇದಾಗಿದ್ದು, ಕೇವಲ 50 ವಾಚ್‌ಗಳನ್ನು ಮಾತ್ರ ತಯಾರಿಸಿ ಕಂಪನಿಯೂ ಮಾರಾಟ ನಡೆಸಿದೆ ಎನ್ನಲಾಗಿದೆ. ಇದರಲ್ಲಿ 2 ವಾಚ್‌ಗಳನ್ನು ಪಾಂಡ್ಯ ಬದ್ರರ್ಸ್‌ ಕೊಂಡುಕೊಂಡಿದ್ದಾರೆ.