ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಶಾಲಾ ಮಕ್ಕಳಿದ್ದ ಬಸ್‌ ಪಲ್ಟಿ... ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ - ವಿಡಿಯೊ ಇಲ್ಲಿದೆ

Viral Video: ಶಾಲಾ ಬಸ್ ಪಲ್ಟಿಯಾಗಿ ಭೀಕರ ಅಪಘಾತ(Accident) ಸಂಭವಿಸಿದ್ದು, ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಹೃದಯ ವಿದ್ರಾವಕ ಘಟನೆ ನಡೆದಿದೆ.

Viral Video: ಶಾಲಾ ಮಕ್ಕಳಿದ್ದ ಬಸ್‌ ಪಲ್ಟಿ... ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ - ವಿಡಿಯೊ ಇಲ್ಲಿದೆ

Profile Sushmitha Jain Jan 2, 2025 3:09 PM
Viral Video, ಕಣ್ಣೂರು : ಶಾಲಾ ಬಸ್ ಪಲ್ಟಿಯಾಗಿ ಭೀಕರ ಅಪಘಾತ(Accident) ಸಂಭವಿಸಿದ್ದು, ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಕೇರಳದ ಕಣ್ಣೂರಿನಲ್ಲಿ(Kannur ) ಈ ದುರ್ಘಟನೆ ನಡೆದಿದ್ದು, ಬಸ್ ಪಲ್ಟಿಯಾಗಿದ್ದ ರಭಸಕ್ಕೆ 5 ನೇ ತರಗತಿ ವಿದ್ಯಾರ್ಥಿನಿ ಅಸುನೀಗಿದ್ದಾಳೆ(Viral Video).
ಕುರುಮತ್ತೂರು ಪಂಚಾಯತದ ಚಿನ್ಮಯ ವಿದ್ಯಾಲಯಕ್ಕೆ ಸೇರಿದ ಬಸ್ ಅಪಘಾತಕ್ಕೀಡಾಗಿದ್ದು, ಶ್ರೀಕಂಠಪುರಂನ ವಳಕ್ಕೈ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಈ ಬಸ್ ಅಲ್ಲಿ 15 ವಿದ್ಯಾರ್ಥಿಗಳಿದ್ದರು ಎಂದು ತಿಳಿದು ಬಂದಿದ್ದು, ಬಸ್ಸು ಹೆದ್ದಾರಿಗೆ ಹೋಗಲು ಇಳಿಜಾರಿನಲ್ಲಿ ಚಲಿಸುತ್ತಿದ್ದಾಗ ನಾಲ್ಕೈದು ಸುತ್ತು ಪಲ್ಟಿಯಾಗಿದೆ. ಬಸ್ಸು ಶಾಲೆ ಮುಗಿದ ನಂತರ ವಿದ್ಯಾರ್ಥಿಗಳನ್ನು ಮನೆಗೆ ಬಿಡಲು ಕರೆದೊಯ್ಯುವಾಗ ಈ ಘಟನೆ ಸಂಭವಿಸಿದ್ದು, ವಿದ್ಯಾರ್ಥಿಯೊಬ್ಬಳು ಸ್ಥಳದಲ್ಲೇ ಬಲಿಯಾಗಿದ್ದಾಳೆ.
https://twitter.com/Premkpala/status/1874488188120768842
ಇನ್ನು ಅಪಘಾತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿನಿಯನ್ನು ನೇದ್ಯ ಎಸ್ ರಾಜೇಶ್ (11) ಗುರುತಿಸಲಾಗಿದ್ದು, ಬಸ್ ನ ಹೊರಕ್ಕೆ ಬಿದ್ದು ಚಕ್ರದ ಅಡಿಗೆ ಸಿಲುಕಿ ಮೃತಪಟ್ಟಿದ್ದಾರೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ಸ್ಥಳೀಯರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ವರದಿಯ ಪ್ರಕಾರ, ಶಾಲಾ ಬಸ್ ಬ್ರೇಕ್ ವೈಫಲ್ಯದಿಂದ ಈ ಅಪಘಾತ ಸಂಭವಿಸಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಲೆ ಹಾಗೂ ಚಾಲಕನ ವಿರುದ್ಧ ದೂರು ದಾಖಲಾಗಿದೆ. ಸದ್ಯ ಅಪಘಾತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎದೆ ಝಲ್ ಎನಿಸುವಂತಿದೆ.
ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರಿಗೆ ಮತ್ತು ಪೊಲೀಸ್‌ ಇಲಾಖೆ ಶ್ರಮಿಸುತ್ತಿದ್ದರೂ ಸಂಚಾರ ನಿಯಮಾವಳಿಗಳನ್ನು ಉಲ್ಲಂ ಸಿ ಚಾಲಕರು ಬೇಜವಾಬ್ದಾರಿಯುತವಾಗಿ ವಾಹನಗಳನ್ನು ಚಲಾಯಿಸುತ್ತಿರುವ ಪರಿಣಾಮ ಅಮಾಯಕರು ಸಮಸ್ಯೆ ಎದುರಿಸುವಂತಾಗಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಚಾಲಕರು ಸಾಕಷ್ಟು ಮುಂಜಾಗ್ರತೆ ವಹಿಸುವುದು ಅತ್ಯವಶ್ಯವಾಗಿದೆ.
ಇನ್ನು ಸೀಮಿತ ವೇಗದಲ್ಲಿಯೇ ಶಾಲಾ ವಾಹನಗಳನ್ನು ಚಲಾಯಿಸಬೇಕೆಂಬ ಉದ್ದೇಶದಿಂದ ಈ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಅಷ್ಟು ಮಾತ್ರವಲ್ಲದೆ ಸಾಧ್ಯವಾದಷ್ಟು ಅನುಭವಿ ಚಾಲಕರನ್ನು ನೇಮಿಸುವಂತೆಯೂ ಸಾರಿಗೆ ಇಲಾಖೆ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗೆ ಸೂಚನೆ ನೀಡುತ್ತಲೇ ಬರುತ್ತಿದೆ. ಇವೆಲ್ಲದರ ಹೊರ ತಾಗಿಯೂ ಇಂತಹ ಅಪಘಾತಗಳು ಸಂಭವಿಸುತ್ತಿರುವುದು ಖೇದನೀಯ.
ಶಾಲಾ ವಾಹನಗಳನ್ನು ಚಲಾಯಿಸುವ ಚಾಲಕರು ಕೂಡ ಇತರ ವಾಹನಗಳಂತೆ ಬೇಕಾಬಿಟ್ಟಿಯಾಗಿ ವಾಹನಗಳನ್ನು ಚಲಾಯಿಸುವ ಚಾಳಿಯಿಂದ ದೂರವುಳಿಯಬೇಕು. ಪುಟ್ಟ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಮತ್ತು ಮರಳಿ ಮನೆಗೆ ಸುರಕ್ಷಿತವಾಗಿ ಕರೆತರುವ ಮಹತ್ತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂಬುದನ್ನು ಮೊದಲು ಈ ಚಾಲಕರು ಅರಿತುಕೊಳ್ಳಬೇಕು.
ಈ ಸುದ್ದಿಯನ್ನು ಓದಿ: Viral Video: ಈ ಊರಿನ ಜನರಿಗೆ ನಾಗರಹಾವಿನ ಪಕೋಡ ಅಂದ್ರೆ ಪಂಚಪ್ರಾಣ ಅಂತೆ! ವಿಡಿಯೊ ನೋಡಿದ್ರೆ ಶಾಕ್‌ ಆಗೋದು ಗ್ಯಾರಂಟಿ
ಸಂಚಾರ ನಿಯಾಮಾವಳಿ ಪಾಲನೆ ವಿಷಯದಲ್ಲಿ ಸಾರಿಗೆ ಮತ್ತು ಪೊಲೀಸ್‌ ಇಲಾಖೆ ಇನ್ನಷ್ಟು ಕಟ್ಟುನಿಟ್ಟಿನ ತಪಾಸಣೆ ಕಾರ್ಯ ನಡೆಸಬೇಕು. ಕಾನೂನು, ನಿಯಮಾವಳಿಗಳು ಕೇವಲ ಕಡತಗಳಿಗೆ ಸೀಮಿತವಾಗದೆ ಪ್ರತಿನಿತ್ಯ ಇವುಗಳ ಪಾಲನೆಯಾಗುವುದನ್ನು ಖಾತರಿಪಡಿಸುವ ಹೊಣೆಗಾರಿಕೆ ಈ ಇಲಾಖೆಗಳ ದ್ದಾಗಿದೆ. ಇದೇ ವೇಳೆ ಶಿಕ್ಷಣ ಸಂಸ್ಥೆಗಳು ಕೂಡ ಶಾಲಾ ವಾಹನಗಳಿಗೆ ಚಾಲಕರನ್ನು ನೇಮಿಸುವಾಗ ಸೂಕ್ತ ಪರಿಶೀಲನೆ ನಡೆಸಬೇಕು.ಬೇಕಾಬಿಟ್ಟಿಯಾಗಿ ಚಾಲಕರನ್ನು ನೇಮಿಸಿಕೊಳ್ಳದೆ ನಿಗದಿತ ಅವಧಿಯ ಅನುಭವವುಳ್ಳ ಮತ್ತು ಚಾಲಕರ ಪೂರ್ವಾಪರಗಳನ್ನು ಪರಿಶೀಲಿಸಿ ನೇಮಕ ಮಾಡಿಕೊಳ್ಳಬೇಕು. ಇವೆಲ್ಲದರತ್ತ ಸಂಬಂಧಿತರು ಲಕ್ಷ್ಯ ಹರಿಸಿದಲ್ಲಿ ಮಾತ್ರವೇ ಮಾನ್ವಿಯಲ್ಲಿ ಸಂಭವಿಸಿದಂತಹ ದುರಂತಗಳನ್ನು ತಪ್ಪಿಸಬಹುದು.