Vishweshwar Bhat Column: ಟಿಪ್ಪಿಂಗ್ ಕುರಿತು ಟಿಪ್ಸ್
ಕೆಲವೊಮ್ಮೆ 500 ರು. ಕೊಟ್ಟು ಎಲ್ಲರೂ ಹಂಚಿಕೊಳ್ಳಿ ಎನ್ನುವ ಸಂದರ್ಭ ಬರುತ್ತದೆ. ಒಂದು ವೇಳೆ ಟಿ ಕೊಡದೇ ಬಂದರೆ ಕ್ಯಾಕರಿಸಿ ಅವರು ನೋಡುತ್ತಾರೆ. ‘ಎಲ್ಲಿ ನಮಗೆ ಶಾಪ ಹಾಕುತ್ತಾ ನೋ?’ ಎಂಬ ಭಯದಿಂದ ಕೆಲವರು ಟಿಪ್ಸ್ ಕೊಟ್ಟು ಬರುತ್ತಾರೆ. ಆದರೆ ಜಪಾನಿನಲ್ಲಿ ಮಾತ್ರ ಟಿಪ್ಸ್ ಎಂಬ ಪದವನ್ನೇ ಕೇಳಲು ಸಾಧ್ಯವಿಲ್ಲ.

ಜಪಾನಿನಲ್ಲಿ ಮಾತ್ರ ಟಿಪ್ಸ್ ಎಂಬ ಪದವನ್ನೇ ಕೇಳಲು ಸಾಧ್ಯವಿಲ್ಲ

ಜಪಾನಿನಲ್ಲಿ ಟ್ಯಾಕ್ಸಿ ಡ್ರೈವರ್ ಅಥವಾ ಹೋಟೆಲ್ ವೇಟರ್ ನಿಮ್ಮ ಮಣಗಾತ್ರದ ಬ್ಯಾಗು ಗಳನ್ನು ಎತ್ತಿಟ್ಟಾಗ, ಅನುಕಂಪದಿಂದ ಅಥವಾ ಆತನ ಶ್ರಮವನ್ನು ಗೌರವಿಸಲು ಟಿಪ್ಟ್ ನೀಡಲು ಮುಂದಾದರೆ, ಒಂದು ಕ್ಷಣ ನಿಮಗೇ ಮುಜುಗರವಾಗುತ್ತದೆ. ಕಾರಣ ಅವರು ಟಿಪ್ಸ್ ಸ್ವೀಕರಿಸುವುದಿಲ್ಲ. ನೀವು ಕೊಟ್ಟಿದ್ದು ಕಡಿಮೆಯಾಯಿತೆಂದು ಅವರು ಅದನ್ನು ನಿರಾಕರಿಸಿ ರಬಹುದು ಎಂದು ಭಾವಿಸಿ, ಇನ್ನೂ ಹೆಚ್ಚಿನ ಹಣಕ್ಕೆ ಪರ್ಸಿಗೆ ಕೈಹಾಕಿದರೆ ನಿಮಗೆ ಮತ್ತ ಷ್ಟು ಮುಜುಗರ ವಾದೀತು. ಕಾರಣ ಅಲ್ಲಿ ನೀವು ಎಷ್ಟೇ ಟಿಪ್ಸ್ ಕೊಟ್ಟರೂ ಸ್ವೀಕರಿಸುವು ದೂ ಇಲ್ಲ, ಕಣ್ಣೆತ್ತಿಯೂ ನೋಡುವುದಿಲ್ಲ.
ಅಷ್ಟಾಗಿಯೂ ನೀವು ಆತನ ಕೈಯೊಳಗಿಟ್ಟರೆ, ನಯವಾಗಿ ನಿರಾಕರಿಸುತ್ತಾರೆ. ನಮ್ಮ ದೇಶ ದಲ್ಲಿ ಹೋಟೆಲ್‌ನಿಂದ ಚೆಕ್ ಔಟ್ ಮಾಡಿ ವಾಹನ ಏರುವಾಗ ಕನಿಷ್ಠ ಐದಾರು ಜನ ಟಿಪ್ಸ್ ಗೆ ಬಕಪಕ್ಷಿಯಂತೆ ಕಾಯುತ್ತಾ ನಿಂತಿರುತ್ತಾರೆ. ಒಬ್ಬರಿಗೆ ಮಾತ್ರ ಟಿಪ್ಸ್ ಕೊಟ್ಟು ಉಳಿ ದವರಿಗೆ ಕೊಡದೇ ಇರಲು ಸಾಧ್ಯವಿಲ್ಲ. ಎಲ್ಲರಿಗೂ ಕೊಡುವುದು ಅನಿವಾರ್ಯ.
ಇದನ್ನೂ ಓದಿ: Veena Bhat Column: ಅತಿ ಪುರಾತನ ಸೈನ್ ಬೋರ್ಡ್ ಇಲ್ಲಿದೆ !
ಕೆಲವೊಮ್ಮೆ 500 ರು. ಕೊಟ್ಟು ಎಲ್ಲರೂ ಹಂಚಿಕೊಳ್ಳಿ ಎನ್ನುವ ಸಂದರ್ಭ ಬರುತ್ತದೆ. ಒಂದು ವೇಳೆ ಟಿ ಕೊಡದೇ ಬಂದರೆ ಕ್ಯಾಕರಿಸಿ ಅವರು ನೋಡುತ್ತಾರೆ. ‘ಎಲ್ಲಿ ನಮಗೆ ಶಾಪ ಹಾಕುತ್ತಾನೋ?’ ಎಂಬ ಭಯದಿಂದ ಕೆಲವರು ಟಿಪ್ಸ್ ಕೊಟ್ಟು ಬರುತ್ತಾರೆ. ಆದರೆ ಜಪಾನಿ ನಲ್ಲಿ ಮಾತ್ರ ಟಿಪ್ಸ್ ಎಂಬ ಪದವನ್ನೇ ಕೇಳಲು ಸಾಧ್ಯವಿಲ್ಲ.
ನೀವು ಟಿಪ್ಸ್ ಕೊಟ್ಟರೆ, ಅದೊಂದು ಅವಮಾನ ಎಂದು ಪರಿಗಣಿಸುವಷ್ಟು ಅಲ್ಲಿ ಅದನ್ನು ದ್ವೇಷಿಸುತ್ತಾರೆ. ಹೋಟೆಲಿನಲ್ಲಿ ಬಿಲ್ ಚುಕ್ತಾ ಮಾಡಿ, ಹೊರಡುವಾಗ ಅಪ್ಪಿತಪ್ಪಿ ಟಿಪ್ಸ್ ಇಟ್ಟರೆ, ವೇಟರ್ ಹೊರಬಂದು ಅದನ್ನು ವಾಪಸ್ ಕೊಟ್ಟು ಹೋಗುತ್ತಾನೆ. ಜಪಾನಿನಲ್ಲಿ ಭಾರತೀಯ ಮೂಲದವರ ಅನೇಕ ಹೋಟೆಲುಗಳಿವೆ. ಅಲ್ಲೂ ಯಾರೂ ಟಿಪ್ಸ್ ಮುಟ್ಟು ವುದಿಲ್ಲ.
ಜಪಾನಿನಲ್ಲಿ ಟಿಪ್ಸ್ ಸಂಸ್ಕೃತಿ ಏಕಿಲ್ಲ? ನಾನು ಈ ಪ್ರಶ್ನೆಯನ್ನು ಕನಿಷ್ಠ ಐದಾರು ಮಂದಿಗೆ ಕೇಳಿರಬಹುದು. ಅವರೆಲ್ಲರ ಉತ್ತರ ಹೆಚ್ಚು-ಕಮ್ಮಿ ಒಂದೇ ಆಗಿತ್ತು- ‘ನಾವಿರುವುದೇ ಒಳ್ಳೆಯ ಸೇವೆಗೆ. ಉತ್ತಮ ಸೇವೆ ನೀಡುವುದು ನಮ್ಮ ಧರ್ಮ. ಅದಕ್ಕೆ ಪ್ರತಿಫಲ ಬಯಸು ವುದು ಸರಿಯಲ್ಲ.
ನಾವು ಮಾಡುವ ಕೆಲಸಕ್ಕೆ ಬೇರೆಯವರಿಗೆ ಮೆಚ್ಚುಗೆಯಾದರೆ, ಅವರು ಅದನ್ನು ಮನಸ್ಸು ಬಿಚ್ಚಿ ಹೇಳಲಿ ಅಥವಾ ನಡು ಬಗ್ಗಿಸಿ ನಮಸ್ಕರಿಸಲಿ. ಅದು ಬಿಟ್ಟು ಹಣ ನೀಡುವುದು ಲಂಚಕ್ಕೆ ಸಮಾನ. ಅದು ನಮ್ಮ ಕೆಲಸವನ್ನು ಅಗೌರವಿಸಿದಂತೆ. ಒಮ್ಮೆ ಒಬ್ಬ ಜರ್ಮನ್ ಪ್ರವಾಸಿಗ ಕ್ಯೂಶು ಪ್ರಾಂತ್ಯದ ಬುಟಿಕ್ ಹೋಟೆಲ್‌ನಲ್ಲಿ ತಂಗಿದ್ದ. ಹೋಟೆಲ್‌ನ ಸ್ವಚ್ಛತೆ ಮತ್ತು ಆತಿಥ್ಯ ಅತ್ಯುತ್ತಮವಾಗಿತ್ತು. ಆತ ಹೋಟೆಲ್ ಕ್ಲೀನಿಂಗ್ ಸಿಬ್ಬಂದಿಗೆ ಕೃತಜ್ಞತೆಯ ಸೂಚಕವಾಗಿ 2000 ಯೆನ್ (ಸುಮಾರು 15 ಡಾಲರ್) ಟಿಪ್ಪಿಂಗ್ ನೀಡಲು ನಿರ್ಧರಿಸಿದ.
ಬಾಗಿಲ ಹತ್ತಿರ ಹಣವನ್ನು ಇಟ್ಟು ಹೊರಗೆ ಹೋದ. ತನ್ನ ದೈನಂದಿನ ಪ್ರವಾಸ ಮುಗಿಸಿ ಹೋಟೆಲ್‌ಗೆ ಮರಳಿದಾಗ, ಆತನ ಕೋಣೆ ಸ್ವಚ್ಛವಾಗಿತ್ತು. ಆದರೆ ಹಾಸಿಗೆಯ ಮೇಲೆ ಒಂದು ಚಿಕ್ಕ ಚೀಟಿಯೊಂದಿಗೆ ಆತನ ಟಿಪ್ಪಿಂಗ್ ಹಣವೂ ಇತ್ತು. ಚೀಟಿಯಲ್ಲಿದ್ದ ಬರಹ- ‘ನಾವು ಈ ಕೆಲಸವನ್ನು ಶುದ್ಧ ಅಂತಃಕರಣದಿಂದ ಮನಸ್ಸಿಟ್ಟು ಮಾಡುತ್ತೇವೆ. ದಯವಿಟ್ಟು ನಮ್ಮ ಸೇವೆಯನ್ನು ಆನಂದಿಸಿ, ಅನುಭವಿಸಿ.
ಅದಕ್ಕೆ ನಾವು ನಿಮ್ಮಿಂದ ಹಣ ತೆಗೆದುಕೊಳ್ಳುವುದಿಲ್ಲ’. ಇದು ಜಪಾನಿನ ಒಬ್ಬ ಸಾಧಾರಣ ಹೋಟೆಲ್ ಉದ್ಯೋಗಿಯ ಸಹಜ ಪ್ರಾಮಾಣಿಕತೆಯ ಪ್ರತಿರೂಪ! ಒಮ್ಮೆ ಟೋಕಿಯೋದ ಪ್ರಸಿದ್ಧ ಸೂಷಿ ( Sushi) ರೆಸ್ಟೋರೆಂಟ್ ನಲ್ಲಿ, ಒಬ್ಬ ಅಮೆರಿಕನ್ ಪ್ರವಾಸಿಗ ಸಂತೋಷ ದಿಂದ ಟಿಪ್ಸ್ ನೀಡಲು ನಿರ್ಧರಿಸಿದ. ಷೆಫ್ (ಬಾಣಸಿಗ)ಗೆ ತನ್ನ ಸಂತೋಷವನ್ನು ತೋರಿ ಸಲು ಆತ ಐದು ಸಾವಿರ ಯೆನ್ (ಸುಮಾರು 35 ಡಾಲರ್) ನೋಟನ್ನು ಕೊಟ್ಟ.
ಆದರೆ ಷೆಫ್ ಹುಸಿಕೋಪದಿಂದ ಅವನತ್ತ ನೋಡಿದ. ನೋಟನ್ನು ಅವನ ಮುಂದೆಯೇ ಹಿಂತಿರುಗಿಸಿ ಹೇಳಿದ- ‘ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಅದಕ್ಕೆ ನೀವು ಹೆಚ್ಚುವರಿ ಹಣ ನೀಡಬೇಕಾಗಿಲ್ಲ. ನಿಮ್ಮ ಖುಷಿಯೇ ನನ್ನ ಖುಷಿ’. ಅಮೆರಿಕನ್ ಪ್ರವಾಸಿಗ ಅಷ್ಟಕ್ಕೇ ಸುಮ್ಮನಾಗದೇ ‘ಇದನ್ನು ನನ್ನ ಸಂತೋಷಕ್ಕೆ ನೀಡಿದ್ದು. ನೀನು ಸ್ವೀಕ ರಿಸಲೇಬೇಕು’ ಎಂದ. ಅದಕ್ಕೆ ಷೆಫ್, ‘ನಿಮ್ಮ ಖುಷಿಯನ್ನು ಮಾತಿನಲ್ಲಿ ಪ್ರಕಟಪಡಿಸಿದರೆ ಸಾಕು.
ಅದನ್ನು ಹಣದಲ್ಲಿಯೇ ವ್ಯಕ್ತಪಡಿಸುವುದು ಯಾಕೆ?’ ಎಂದು ಕೇಳಿದ. ಆ ಅಮೆರಿಕನ್ ಬೇಸರದಿಂದ ಹಣವನ್ನು ಜೇಬಿಗೆ ಹಾಕಿಕೊಂಡ. ಹಾಗಾದರೆ ಯಾರೂ ಟಿಪ್ಸ್ ಸ್ವೀಕರಿಸು ವುದೇ ಇಲ್ಲವಾ? ಕೆಲವು ಪ್ರವಾಸಿ ಮಾರ್ಗ ದರ್ಶಕರು ( Tour Guides) ಟಿಪ್ಪಿಂಗ್ ಸ್ವೀಕರಿಸ ಬಹುದು. ಆದರೆ ಅದನ್ನು ನೇರವಾಗಿ ಕೊಡುವ ಬದಲು, ಚಿಕ್ಕ ಉಡುಗೊರೆಯ ರೂಪದಲ್ಲಿ ನೀಡುವುದು ಸೂಕ್ತ.